ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹುತ್ತದೊಳಗಳ ಹಾವು ಹದ್ದಿನ ಹೊಟ್ಟೆಯೊಳಗಳ ತತ್ತಿ ನುಂಗಿತ್ತು. ಗಿಡುಗನ ಉಡು ನುಂಗಿ, ಹೊಡೆವವನ ದಡಿ ನುಂಗಿತ್ತು. ಹಾವನು ಹದ್ದಿನ ತತ್ತಿಯ, ಗಿಡುಗನ ಉಡುವ, ಹೊಡೆವವನ ಡೊಣ್ಣೆಯ ಬಾಯಿಲ್ಲದ ಇರುಹೆ ನುಂಗಿತ್ತು ಕಂಡೆ. ಸದಾಶಿವಮೂರ್ತಿಲಿಂಗವು ಬಚ್ಚಬಯವಾಯಿತ್ತು.
--------------
ಅರಿವಿನ ಮಾರಿತಂದೆ
ಹಾವು ಹುಲಿ ಕಳ್ಳರ ಭಯವೆಂದು ಹೇಳಿದವರ ಮೇಲೆ ನೋವುಂಟೆ? ನೋವಾದಡಾಗಲಿ, ಇದರಿಂದ ಎನಗೆ ಕೇಡಿಲ್ಲ. ಕಂಡು ಸುಮ್ಮನಿದ್ದಡೆ, ಆ ಗುರುವಿನ ಸುಖದುಃಖ ಎನ್ನದಾಗಿ, ಸಮಯಕ್ಕಂಜಿದಡೆ ಎನ್ನ ಮಾಡುವ ಮಾಟ ಎನ್ನ ಕೇಡು, ಎನ್ನ ಅರಿವು ಮರವೆಯಲ್ಲಿದ್ದಡೆ, ಭವದುಃಖಕ್ಕೆ ಬೀಜ. ಎನ್ನ ಕೈಯಲ್ಲಿ ಎನ್ನಂಗವ ತೊಳೆಯಬೇಕಲ್ಲದೆ ಅನ್ಯರಿಗೆ ಹೇಳಲೇಕಯ್ಯಾ? ಇಂತೀ ಮೂರರೊದಗ ನಾ ಮಾಡಿ ಹಾನಿಯ ಪಡೆವುದಕ್ಕೇನು? ಅಂದಿಗೇನಾದಡಾಗಲಿ ಇಂದಿಗೆ ಶುದ್ಧ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಹುಲ್ಲು ಕೆಂಡವ ಮುಟ್ಟಿ ಹೊತ್ತದ ಪರಿಯ ನೋಡಾ, ಹಸಿದ ಸರ್ಪನ ಹೆಡೆಯ ನೆಳಲಲ್ಲಿ ಮಂಡುಕ ನಿಂದ ತೆರನ ನೋಡಾ. ಜೀವ ಪರಮನಲ್ಲಿ ಬಂದುನಿಂದು ಒಂದಾಗದ ಸಂದೇಹವ ನೋಡಾ, ಇಂತೀ ಸಂದನರಿದಲ್ಲದೆ ಅಂಗ-ಲಿಂಗ ಪ್ರಾಣ-ಪರಮವೊಂದಾಗಲಿಲ್ಲ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಹಸಿದ ಹಾವಿನ ಹೆಡೆಯಲ್ಲಿ ಇಲಿ ಬಿಲನ ತೋಡುತ್ತದೆ. ಹೆಡೆಯಲ್ಲಿ ಹೆಬ್ಬಿಲ, ಕಣ್ಣಿನ ಓಹರಿಯಲ್ಲಿ ಹುಲ್ಲಿನ ಹಾಸಿಕೆಯ ಶಯನದ ಮನೆ, ಮೂಗಿನ ವಾಸದಲ್ಲಿ ತಪ್ಪು ದಾರಿ, ಬಾಲದ ತುದಿಯಲ್ಲಿ ಹುಡುಪ. ಹಾವ ಹಿಡಿದಲ್ಲಿಯೇ ಸಿಕ್ಕಿತ್ತು. ಸದಾಶಿವಮೂರ್ತಿಲಿಂಗವನರಿದಲ್ಲಿ ಚಿತ್ತ ನಿಂದಿತ್ತು.
--------------
ಅರಿವಿನ ಮಾರಿತಂದೆ
ಹೃದಯದಲ್ಲಿ ತೋರುವ ಅರಿವು ತನ್ಮಯವಾಗಿ, ಇದಿರಿಟ್ಟ ಭಾವಕ್ಕೆ ನೆಲೆಗೊಂಡು, ಭಾವ ತುಂಬಿ ಕಂಗಳ ಮಧ್ಯದಲ್ಲಿ ಹಿಂಗದೆ ನಿಶ್ಚೈಸಿ, ಅನಿಮಿಷನಂಗದಂತೆ, ಕೂರ್ಮನ ಸ್ನೇಹದಂತೆ, ಅಂಬು ಅಂಬುಜದಂತೆ, ಉಭಯ ಸಂಗದಲ್ಲಿ ನಿಸ್ಸಂಗನ ಬೆಳಗು ತೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಹರಿವ ಹಾವು ಕೊಂಬಿನ ಕೋಡಗ ಸಂಧಿಸಿ, ಒಂದಕ್ಕೊಂದಂಜಿ ನಿಂದೈದಾವೆ. ಕೋಡಗ ನೋಡಲಮ್ಮದು, ಹಾವು ಹೋಗಲಮ್ಮದು. ಎರಡು ನಿಂದು ಜೋಗಿಗೆ ಲೇಸಾಯಿತ್ತು. ಸದಾಶಿವಮೂರ್ತಿಲಿಂಗವನರಿತು.
--------------
ಅರಿವಿನ ಮಾರಿತಂದೆ
ಹೊಲದೊಳಗಳ ಹುಲ್ಲೆ, ಗವಿಯೊಳಗಳ ಹುಲಿ, ಕೊಂಬಿನ ಮೇಲಣ ಕೋಡಗ, ಅಂಬರದಲಾಡುವ ಹಾವು, ನಾಲ್ಕರ ಅತಿಮಥನ ಬಿಟ್ಟು ಒಂದೆ ಗೂಡಿನಲ್ಲಿ ಅಡಗಿದವು. ಆ ಚತುಷ್ಟಯದ ಅಂಗದ ಭೇದವನರಿತಲ್ಲಿ ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಹಾವಿನ ಹುತ್ತದಲ್ಲಿ ಹದ್ದು ತತ್ತಿಯನಿಕ್ಕಿ, ಹಾವು ಹಸಿದು ತತ್ತಿಯ ಮುಟ್ಟದು ನೋಡಾ. ಹಾವಿನ ವಿವರ, ಹದ್ದಿನ ಭೇದ, ತತ್ತಿಯ ಗುಣ ಆವುದೆಂದರಿತಲ್ಲಿ, ಜೀವ ಪರಮ ಸ್ವಯಜ್ಞಾನ ಭೇದವನರಿಯಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಹಭೋಜನ ಮಾಡುವ ಸಾಧನೆವಂತರು ಕೇಳಿರೊ: ಲಿಂಗ ಕರ್ತೃವಾಗಿ ನೀ ಭೃತ್ಯನಾಗಿದ್ದಲ್ಲಿ ಲಿಂಗ ಅಮಲ, ನೀ ಮಲದೇಹಿ, ನಿನಗೆ ಪ್ರಪಂಚು, ಲಿಂಗವು ನಿಃಪ್ರಪಂಚು, ನೀ ಅಂಗ, ಲಿಂಗವು ನಿರಂಗ. ಲಿಂಗಕ್ಕೂ ನಿನಗೂ ಸಹಭೋಜನವೆಂತುಟಯ್ಯಾ? ಜಾಗ್ರದಲ್ಲಿ ತೋರಿ, ಸ್ವಪ್ನದಲ್ಲಿ ಕಂಡುದ ಲಿಂಗಕ್ಕೆ ಸಹಭೋಜನವ ಮಾಡುವ ಪರಿಯಿನ್ನೆಂತೊ? ಸಾಕು ಕುಟಿಲದ ಊಟ, ಸದಾಶಿವಮೂರ್ತಿಲಿಂಗವು ಮುಟ್ಟದ ಅರ್ಪಿತ.
--------------
ಅರಿವಿನ ಮಾರಿತಂದೆ
ಹುತ್ತದೊಳಗಳ ಉಡು, ಹೊಳೆಯೊಳಗಳ ಮೊಸಳೆಯ ನುಂಗಿತ್ತು. ನುಂಗಿ ಹೋಹಾಗ ಅಂಗನೆಯೆಂಬ ಹೆಂಗೂಸು ಆ ಉಡುವ ಕಂಡು, ತಾ ಹೊತ್ತಿದ್ದ ಕೊಡನ ಕೂಡಿ ಮಂಡೆಯ ಮೇಲೆ ಇರಿಸಲಾಗಿ, ತಾ ಸತ್ತು, ಕೊಡನೊಡೆದು, ಉಡುವಡಗಿತ್ತು. ಹಿಡಿಯಲಿಲ್ಲ, ಬಿಡಲಿಲ್ಲ, ಬೇರೊಂದಡಿಯಿಡಲಿಲ್ಲ, ಸದಾಶಿವಮೂರ್ತಿಲಿಂಗವನರಿತಲ್ಲಿ.
--------------
ಅರಿವಿನ ಮಾರಿತಂದೆ
ಹುಲಿ ಹುತ್ತವ ಹೊಕ್ಕು ಹಾವಾದ ಭೇದವನಾರು ಬಲ್ಲರು? ಹಾವು ಹುತ್ತವ ಬಿಟ್ಟು ಹದ್ದಾದ ಭೇದವನಾರು ಬಲ್ಲರು? ಹುಲಿ ಹಾವು ಹದ್ದು ಕೂಡಿ ಕುಲವ ಹೊರಗಿಟ್ಟು ಒಳಗಾದ ಭೇದವನಾರು ಬಲ್ಲರು? ಇಂತೀ ಸ್ಥೂಲ ಸೂಕ್ಷ್ಮ ಕಾರಣತ್ರಯ ಕೂಡಿ ತತ್ವದಲ್ಲಿ ನಿಂದು, ಬಚ್ಚಬಯಲಾಯಿತ್ತು ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಹರಿವ ಸಕಟಿಂಗೆ ಕಡೆಗೀಲು ಕಡೆಯಾದಲ್ಲಿ ಆ ಗಾಲಿ ಅಡಿಯಿಡಬಲ್ಲುದೆ? ಕುರುಹಿನ ಮೂರ್ತಿಯಲ್ಲಿ ಅರಿವು ಒಡಗೂಡದಿರೆ ಆ ಜ್ಞಾನ ಹಿಂದ ಮರೆದು ಮುಂದಕ್ಕಡಿಯಿಡಲಿಲ್ಲ. ತಡಿಯಲ್ಲಿ ನಿಂದು ಮಡುವಿನಲ್ಲಿದ್ದ ಹರುಗೋಲಕ್ಕೆ ಅಡಿಯಿಟ್ಟು ಅದುವೊಡಗೂಡಿ ಎಯ್ದುವಂತೆ ಕುರುಹಿನ ತಡಿ, ಮರವೆಯ ಮಡು, ಮಾಡುವ ವರ್ತಕ ಹರುಗೋಲಾಗಿ, ಅರಿಕೆ ಅಂಬಿಗನಾಗಿ ಸಂಸಾರ ಸಾಗರವ ದಾಂಟಿ, ಆ ತಡಿಯ ಮರೆಯಲದೆ ನಿಜನೆಮ್ಮುಗೆಯ ಕಳೆಬೆಳಗು ಬೆಳಗುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಹರಿವ ಹಾವಿಂಗೆ ಕಾಲ ಕೊಟ್ಟು, ಉರಿವ ಕಿಚ್ಚಿಗೆ ಕಯ್ಯನಿಕ್ಕಿ, ಅರಿವ ಆಯುಧಕ್ಕೆ ಕೊರಳ ಕೊಟ್ಟು, ಮತ್ತೆಂತೊ, ಅರುಹಿರಿಯರಾದಿರಿರಿ ಮುಂದಕ್ಕಾತನನರಿಯಬಲ್ಲಡೆ, ಹರಿವ ಚಿತ್ತವ ನಿಲಿಸಿ ಕುದಿವ ಆಸೆಯ ಕೆಡಿಸಿ, ಸರ್ವವ್ಯಾಪಾರವೆಂಬ ಗೊತ್ತಿಗೆ ಚಿತ್ತವನಿಕ್ಕದೆ ನಿಶ್ಚಯನಾಗಿ ನಿಂದುದು ಆತನಿರವೆ ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಹಾಲು ಬತ್ತಿದ ಹಸುವಿಂಗೆ ಕರುವ ಬಿಟ್ಟಡೆ ಒದೆಯುವುದಲ್ಲದೆ ಉಣಲೀಸುವುದೆ? ಅರಿವು ನಷ್ಟವಾದವ ಕ್ರೀಯ ಬಲ್ಲನೆ? ಕ್ರೀಯೆಂಬುದೆ ಹಸು, ಅರಿವೆಂಬುದೆ ಹಾಲು, ಬಯಕೆಯೆಂಬುದೆ ಕರು. ಇಂತೀ ತ್ರಿವಿಧವನರಿದಲ್ಲಿ ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಹುವ್ವಿನ ಮೇರಳ ತುಂಬಿ ಹುವ್ವ ತಿಂದು ಗಂಧವನುಳುಹಿತ್ತು. ಉಳುಹಿದ ಗಂಧ ತುಂಬಿಯ ತಿಂದು, ತುಂಬಿ ಗಂಧವೊಂದೆಯಾಯಿತ್ತು. ಅದು ನಿರಂಗದರವು, ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ