ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉಪಾಧಿ ಉಳ್ಳನ್ನಕ್ಕ ಗುರುವಲ್ಲ, ವೇಷವ ಹೊತ್ತು ಬಾಗಿಲ ಕಾಯುವನ್ನಕ್ಕ ಜಂಗಮವಲ್ಲ, ಶಕ್ತಿಸಮೇತವುಳ್ಳನ್ನಕ್ಕ ಲಿಂಗವಸ್ತುವಲ್ಲ. ಅದೆಂತೆಂದಡೆ: ಏತರಲ್ಲಿದ್ದಡೂ ಅಹಿಶರೀರವ ಬಲಿದು ತದ್ರೂಪ ಹಾಕಿದಂತಿರಬೇಕು. ಇದು ಅರಿವಿನ ಒಡಲು, ಸದಾಶಿವಮೂರ್ತಿಲಿಂಗದ ಇರವು.
--------------
ಅರಿವಿನ ಮಾರಿತಂದೆ
ಉಪ್ಪಿನ ನೀರು ಹೆಪ್ಪ ಬಲಿದು ಘಟ್ಟಿಯಾದಂತೆ ಮತ್ತೆ ಅಪ್ಪುವ ಬೆರಸಿ ತನ್ನಂಗ ತಪ್ಪದಂತೆ, ಸಕಲ ಶಾಕಂಗಳಲ್ಲಿ ತನ್ನಯ ಇರವ ತೋರಿ ಕುರುಹಿಂಗೆ ಬಾರದಂತೆ ವಸ್ತು ಅಂಗದಲ್ಲಿ ತನ್ಮಯವಾಗಿ ವೇಧಿಸಿ ಉಭಯ ನಾಮವಳಿದು, ಸದಾಶಿವಮೂರ್ತಿಲಿಂಗದಲ್ಲಿ ಕೂಟಸ್ಥವಾಗಿರಬೇಕು.
--------------
ಅರಿವಿನ ಮಾರಿತಂದೆ
ಉದಕ ನಿಂದಲ್ಲಿ ಪ್ರತಿಬಿಂಬ ನಿಶ್ಚಯವಾಯಿತ್ತು. ಆ ಜಲ ಸಂಚಾರದಿಂದ ಕದಲೆ ಮತ್ತೆ ಪ್ರತಿರೂಪಿಂಗೆ ಎಡೆಯುಂಟೆ? ಚಿತ್ತ ಸಂಚಾರಿಸುವಲ್ಲಿ ಕುರುಹಿನ ಗೊತ್ತಿಗೆ ಒಡೆತನವುಂಟೆ? ಇಂತೀ ಉಭಯದ ಸಕೀಲ ನಿಂದು, ಕಳೆ ಬೆಳಗುತ್ತದೆ ಸದಾಶಿವಮೂರ್ತಿಲಿಂಗದಲ್ಲಿ
--------------
ಅರಿವಿನ ಮಾರಿತಂದೆ
ಉತ್ಪತ್ಯಕ್ಕೆ ಬ್ರಹ್ಮಂಗೆ ಸೃಷ್ಟಿಯ ಕೊಟ್ಟು, ಸ್ಥಿತಿಗೆ ವಿಷ್ಣುವಿಂಗೆ ಅವತಾರಲಕ್ಷ್ಮಿಯ ಕೊಟ್ಟು, ಲಯಕ್ಕೆ ರುದ್ರಂಗೆ ಉರಿಗಣ್ಣು, ಹತಕ್ಕೆ ಕರದಲ್ಲಿ ಕಂಡೆಹವ ಕೊಟ್ಟು, ತ್ರೈಮೂರ್ತಿಗೆ ನಿನ್ನ ವರ ಶಕ್ತಿಯನಿತ್ತು, ನೀ ತ್ರಿವಿಧ ನಾಸ್ತಿಯಾದೆಯಲ್ಲಾ. ಅನಾದಿಶಕ್ತಿಯ ಭಾವವನೊಡೆದು ಸದಾಶಿವಮೂರ್ತಿಲಿಂಗ ನೀನಾದೆಯಲ್ಲಾ.
--------------
ಅರಿವಿನ ಮಾರಿತಂದೆ
ಉರಿಯ ಮಡುವಿನಲ್ಲಿ ಒಂದು ಜಲದ ಕುಸುಮ ಹುಟ್ಟಿ, ಹರಿಹರbಜಿಡಿಹ್ಮಾದಿಗಳಿಗೆ ವಶವಲ್ಲ ನೋಡಾ. ಕುಸುಮದ ಎಸಳಿನ ಕೂಟಸ್ಥಲದಲ್ಲಿ ಕಪ್ಪು, ನಡುಮಧ್ಯದಲ್ಲಿ ತಮ ಕಪೋತವರ್ಣ, ಅದರ ತುದಿಯಲ್ಲಿ ನಾನಾ ವರ್ಣದ ಛಾಯೆ ಕೂಡಿ ಅಳಿವುತ್ತಿಹುದು. ಆ ಹೂವ ಒಂದೆ ಭೇದದಲ್ಲಿ ಕಿತ್ತು ಸದಾಶಿವಲಿಂಗದ ಪಾದದಲ್ಲಿರಿಸಲಾಗಿ, ಪದಕ್ಕೆ ಹೊರಗೆಂದು ಮಕುಟದ ಮೇಲೇರಿತ್ತು. ಇದು ಬಲ್ಲವರಾರು ಚೋದ್ಯವ ಹೇಳಿರಣ್ಣಾ!
--------------
ಅರಿವಿನ ಮಾರಿತಂದೆ
ಉಂಟು ಇಲ್ಲಾ ಎಂಬುದನರಿತು ನುಡಿವುದು ಕ್ರೀಯೊ? ನಿಃಕ್ರೀಯೊ? ಇವೆಲ್ಲವನರಿತು ನುಡಿವುದು ಘಟದೊಳಗಳ ಮಾತಲ್ಲದೆ ಅದು ಮಾಯಾವಾದದ ಇರವು. ಭಾವ ಕಾಯವಲ್ಲಿ ಸಿಕ್ಕಿ ಸಕಲವನೊಡಗೂಡಿ ಭೋಗಂಗಳನುಣುತ ನಾನಲ್ಲ ಎಂಬ ಮಾಯಾವಾದಿಗಳ ಮಾತು, ಕನ್ನದ ಬಾಯಲ್ಲಿ ಸಿಕ್ಕಿದ ಕಳ್ಳನ ಬಾಯಾಲಿನಂತೆ ಬಲ್ಲವರು ಮೆಚ್ಚುವರೆ? ಶರೀರವುಳ್ಳನ್ನಕ್ಕ ಇಷ್ಟಪ್ರಾಣ ಮುಕ್ತನಾಗಬೇಕು. ಇದೆ ನಿಶ್ಚಯ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಉರಿಯ ಸಿರಿಯ ನಡುವೆ ಒಂದು ಸರೋವರದಲ್ಲಿ ನರಿ ತಿರುಗಾಡುತ್ತದೆ. ಬಾಲ ಉಡುವಿನಂದ, ನಡು ಬಳ್ಳುವಿನ ಚೊಲ್ಲೆಹದಂದ, ತಲೆ ಕೋಡಗದಂದ. ರೂಪು ನರಿಯಾಗಿ, ಆತ್ಮ ಕುಕ್ಕುರನಾಗಿ ಏತಕ್ಕೂ ಸಿಕ್ಕದೆ ಸರೋವರದಲ್ಲಿ ಹರಿದಾಡುತ್ತದೆ. ಅದು ಸದಾಶಿವಮೂರ್ತಿಲಿಂಗವನರಿದವರಿಗಲ್ಲದೆ ಸಿಕ್ಕದು ಜೀವ.
--------------
ಅರಿವಿನ ಮಾರಿತಂದೆ
ಉರಿಯಂಗವೆಲ್ಲ ಅಪೋಷನಕ್ಕೊಡಲು, ಒಡಲುಗೊಂಡವರೆಲ್ಲರು ಅಪೇಕ್ಷೆಗೆ ಮೊದಲು. ಇಂತೀ ಬಿಡುಮುಡಿಯ ಬಲ್ಲವರಾರೊ? ತನುಧರ್ಮವನರಿತು ಚರಿಸಬಲ್ಲಡೆ ಜಂಗಮ, ಮನಧರ್ಮವನರಿತು ಅಡಗಬಲ್ಲಡೆ ಗುರುಮೂರ್ತಿ. ಇಂತೀ ಉಭಯದ ಭೇದವ ವೇದಿಸಬಲ್ಲಡೆ ಸದ್ಭಕ್ತ ಇಂತೀ ತ್ರಿವಿಧಭಾವ ಚಿನ್ನ ಬಣ್ಣ ವಾಸನೆಯಂತೆ, ಸದಾಶಿವಮೂರ್ತಿಲಿಂಗವು ತಾನೆ
--------------
ಅರಿವಿನ ಮಾರಿತಂದೆ
ಉಂಟೆಂಬ ದೃಢ, ಇಲ್ಲಾ ಎಂಬ ಸಂದೇಹ ತಾನಲ್ಲಿಯೇ ತೋರಿ ಅಳಿವುತ್ತಿಪ್ಪ ಭೇದವನರಿತಾಗ ಮಲತ್ರಯ ನಾಸ್ತಿ, ಸದಾಶಿವಮೂರ್ತಿಲಿಂಗವನರಿತುದು.
--------------
ಅರಿವಿನ ಮಾರಿತಂದೆ
ಉಭಯಚಕ್ಷು ಗುರುಚರವಾದಲ್ಲಿ ಹಿಡಿವ ಬಿಡುವ ಕರ ಸದ್ಭಕ್ತ. ವರ್ತನ ಶುದ್ಧವಾದಲ್ಲಿ ಕಣ್ಣಿನಲ್ಲಿ ಕಸ ಹೊಕ್ಕಡೆ ಕರ ಆರೈದು ಕಸನ ತೆಗೆವಡೆ ದೋಷವುಂಟೆ? ಕಾಯ ಜೀವ ಉಭಯವು ಕೂಡಿದಲ್ಲಿ ಒಂದಕ್ಕೊಂದು ಪ್ರಳಯವಿಲ್ಲ. ಒಂದಳಿದು ಒಂದುಳಿದಲ್ಲಿ ಉಭಯದ ಕೇಡು. ಇಂತೀ ಅಭಿಸಂಧಿಯಲ್ಲಿ ಸಂದೇಹದಲ್ಲಿ ಹೊಂದಬೇಡ. ಸದಾಶಿವಮೂರ್ತಿಲಿಂಗ ನೊಂದಡೂ ನೋಯಲಿ, ಅರಿವಿನ ಮಾರನ ಅಂಗ ಹಿಂಗದ ಭಾವ.
--------------
ಅರಿವಿನ ಮಾರಿತಂದೆ