ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಿಂಗ ಹೊರತೆಯಾಗಿ, ವಿಭೂತಿ ರುದ್ರಾಕ್ಷಿಯ ಕೊಟ್ಟು, ಗುರುವಾಗಬಹುದೆ ಅಯ್ಯಾ? ಬೀಜವಿಲ್ಲದೆ ಅಂಕುರವಾಗಬಲ್ಲುದೆ? ಗಂಡನಿಲ್ಲದ ಮುಂಡೆಗೆ ಗರ್ಭನಿಂದಡೆ ಅವಳಾರಿಗೆ ಯೋಗ್ಯ? ಉಭಯವು ಕೇಡಾಯಿತ್ತು. ಇದನರಿತು ಮಾಡಿ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಲಿಂಗಕ್ಕೆ ಸಹಭೋಜನವಾದಲ್ಲಿ ಕೂರ್ಮನ ಶಿಶುವಿನ ಸ್ನೇಹದಂತಿರಬೇಕು, ಅಯಸ್ಕಾಂತದ ಶಿಲೆ ಲೋಹದಂತಿರಬೇಕು, ಶಶಿಶಿಲೆಯಂತೆ ಒಸರುವ ಅರ್ಪಿತ, ಕೂಡುವ ಕೂಟ. ಭ್ರಮರ ಚಂಪಕದಂತೆ ಒಡಗೂಡಿ ಲಿಂಗವ ಎಡೆ ತೆರಪಿಲ್ಲದ ಸಹಭೋಜನಕ್ಕೆ ಕೊಡುವಾತನ ಅಡಿಗೆ ಕಡೆ ನಡು ಮೊದಲಿಲ್ಲದೆರಗುವೆ. ಆತ ಸದಾಶಿವಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಲಿಂಗಕ್ಕೆ ಜಂಗಮಪ್ರಸಾದವ ಕೊಡುವಲ್ಲಿ ಹೆಣ್ಣು ಹೊನ್ನು ಮಣ್ಣಿನ ಹಂಗಿಲ್ಲದಂತಿರಬೇಕು. ಗುರುವಿಂಗೆ ತನುವ ಸವೆದು ಮಾಡುವಲ್ಲಿ ಕೇಣಸರ ಆತ್ಮತೇಜವಿಲ್ಲದಿರಬೇಕು. ಲಿಂಗಕ್ಕೆ ಮನವ ಮುಟ್ಟಿಸುವಾಗ ಸರ್ವಮಯದಾಸೆಯ ಪಾಶ ತಲೆದೋರದಿರಬೇಕು. ಇಂತೀ ನಿಶ್ಚಯವನರಿತವಂಗೆ ಸದಾಶಿವಮೂರ್ತಿಲಿಂಗದಂಗವೆ ಆಶ್ರಯ.
--------------
ಅರಿವಿನ ಮಾರಿತಂದೆ
ಲಿಂಗಕ್ಕೆ ಅರ್ಪಿತವ ಮಾಡುವಲ್ಲಿ ಸಕಲಪದಾರ್ಥದ ಗುಣ ವಿವರನರಿದು, ತನ್ನಯ ಕ್ಷುಧೆಯ ಮರೆದು, ಲಿಂಗದ ಆಪ್ಯಾಯನದ ಮುಖವಾಗಿ, ರೂಪುರುಚಿಯಿಂದ, ಅರ್ಪಿತಭೇದಮುಖದಿಂದ ನಿಶ್ಚಯವಾಗಿ ನಿಂದುದು, ಲಿಂಗಭರಿತಾರ್ಪಣ, ಸದಾಶಿವಮೂರ್ತಿಲಿಂಗಕ್ಕೆ ಭಾವವಳಿದ ಭರಿತಾರ್ಪಣ.
--------------
ಅರಿವಿನ ಮಾರಿತಂದೆ