ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒಂದು ಶರೀರ ನಾನಾ ಲಾಗ ಕಲಿತು, ಆಡುವ ಭೇದ ಬೇರಾದಂತೆ, ಆಡುವವ ತಾನೊಬ್ಬನೆಯಾಗಿ, ಆದುದ ಕಂಡು ಅನ್ಯರ ಕೇಳಲೇಕೆ? ಇದಿರಿಗೆ ಹೇಳಲೇಕೆ? ವಸ್ತುವಾಟ ಒಂದು, ವರ್ತನ ಬೇರೆ, ಉಭಯವೂ ತಾನೆ ಸದಾಶಿವಮೂರ್ತಿಲಿಂಗದ ಅಂಗ.
--------------
ಅರಿವಿನ ಮಾರಿತಂದೆ
ಒಂದಂಗಕ್ಕೆ ಮೂರು ಯುಕ್ತಿ ಬ್ಥಿನ್ನವಾದಂತೆ, ಬ್ಥಿನ್ನವೊಂದಂಗದಲ್ಲಿ ಕೂಡಿ ಚಕ್ಷುವಿನಲ್ಲಿ ಕಂಡು ನಡೆವಂತೆ, ಅದೆಂತೆಂದಡೆ: ನಡೆವ ಚರಣ ಗುರುಮಾರ್ಗವಾಗಿ, ಕೊಡುವ ಕರ ಚರಮಾರ್ಗವಾಗಿ, ಕೊಂಬ ಜಿಹ್ವೆ ಲಿಂಗದ ಒಡಲಾಗಿ, ನೋಡುವ ಚಕ್ಷು ತ್ರಿವಿಧವ ಕೂಡಿದ ಪರಮಪ್ರಕಾಶವಾಗಿ, ಇಂತಿವನೊಡಗೂಡಿ ಕಾಬ ಸದ್ಭಕ್ತನಂಗ ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಒಂದನಹುದು ಒಂದನಲ್ಲಾ ಎಂಬುದಕ್ಕೆ ಎಲ್ಲಕ್ಕೂ ಸಂದೇಹ ಪದವಾದಿಹಿತು. ನಿಂದ ನಿಂದ ಸ್ಥಲಕ್ಕೆ ಕುಂದಿಲ್ಲದೆ ಸಂದಿಲ್ಲದೆ, ಸದಾಶಿವಮೂರ್ತಿಲಿಂಗವನರಿಯಬೇಕು.
--------------
ಅರಿವಿನ ಮಾರಿತಂದೆ
ಒಂದು ಹರಿವ ಹಾವು, ಒಂದು ದನಿ ಸರಕ್ಕೆ ನಿಂದ ಹಾವು, ಒಂದು ಉರಿವ ಹಾವು. ಮೂವರ ನಡುವೆ ನಿಂದು ಆಡುವ ಕೋಡಗದಿರವು ಎಂತೆಂದಡೆ: ಹರಿವ ಹಾವ ಮೆಟ್ಟಿ, ನಿಂದ ಹಾವ ಕೈಯ್ಯಲ್ಲಿ ಹಿಡಿದು, ಉರಿವ ಹಾವ ಬಾಯಲ್ಲಿ ಕಚ್ಚಿ ಆಡುತ್ತಿರಲಾಗಿ, ಕೋಡಗನೊಡೆಯ ಬಂದು ನೋಡಿ, ಕೋಲ ಹಿಡಿದು ಕುಟ್ಟೆ, ಮೂರು ಹಾವ ಬಿಟ್ಟು, ಕುಟ್ಟಿದ ಕೋಲ ನುಂಗಿತ್ತು. ಆ ಕೋಲು ಕೋಡಗದ ಒಡಲೊಳಗೊಡೆದು ಕೋಡಗ ಸತ್ತಿತ್ತು. ದಡಿ ಒಡೆಯನ ನುಂಗಿ ಒಡೆಯನಡಗಿ, ಸದಾಶಿವಮೂರ್ತಿಲಿಂಗವ ಒಡಗೂಡಿ ಬಚ್ಚಬಯಲಾಯಿತ್ತು.
--------------
ಅರಿವಿನ ಮಾರಿತಂದೆ
ಒಡೆಯ ನೋಡುತ್ತಿದ್ದಲ್ಲಿ ಅಸುವಿನಾಸೆಯಿಲ್ಲದೆ ಅವಸರಕ್ಕೊದಗಬೇಕು. ಭಕ್ತನಾದಲ್ಲಿ ತಾ ಮಾಡುವ ಕೃತ್ಯಕ್ಕೆ ನಿಶ್ಚಯನಾಗಿರಬೇಕು. ಬಂಟಂಗಾ ಗುಣ ಭಕ್ತಂಗೀ ಗುಣ. ಇದು ಸತ್ಯವೆಂದು ಅರಿತು ಸದಾಶಿವಮೂರ್ತಿಲಿಂಗವನರಿಯಬೇಕು.
--------------
ಅರಿವಿನ ಮಾರಿತಂದೆ
ಒಂದಾಸೆಯ ಕುರಿತು ಸರ್ವಮಾತಿಂಗೆ ಒಡಲಾಯಿತ್ತು, ಒಂದಾಸೆ ಅರತು ನಿಂದಡೆ ಈಶಮೂರ್ತಿ ತಾನಾಗಿಪ್ಪ. ಇಂತೀ ಉಭಯದ ಆಸೆಯಲ್ಲಿ ಘಾಸಿಯಾಗುತ್ತ, ಮಾತಿನ ಮಾಲೆ ಬೇಡ. ಆಸೆಯ ಪಾಶವ ಹರಿದು ಈಷಣತ್ರಯವ ಕಿತ್ತು, ನಿರ್ಜಾತನಾಗಿದ್ದಲ್ಲಿ ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ