ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎಲ್ಲವು ಲಿಂಗಕ್ಕೆ ಸಲ್ವುದೆಂಬುದನದು, ಸಂಕಲ್ಪಸೂತಕವಳಿದು. ಬಂದ ಪದಾರ್ಥವ ಲಿಂಗಭಾಜನದಲ್ಲಿ ಸಹಭೋಜನವ ಮಾಡುವುದು ಲಿಂಗಭರಿತಾರ್ಪಣ. ಲಿಂಗಕ್ಕೂ ತನಗೂ ಬ್ಥಿನ್ನಭಾವವಿಲ್ಲದೆ ಲಿಂಗದೊಳಗೆ ಸಲೆ ಸಂದು ಒಂದಾಗಿ ಕೂಡಿದುದು ಶರಣಭರಿತಾರ್ಪಣ, ಸದಾಶಿವಮೂರ್ತಿಲಿಂಗಕ್ಕೆ ತೃಪ್ತಿ.
--------------
ಅರಿವಿನ ಮಾರಿತಂದೆ
ಎನ್ನ ಮಡದಿ ಹಾಲ ಕಾಸುವಾಗ, ಹಾಲಿನ ಕುಡಿಕೆಯಲ್ಲಿ ಹಾವು ಬಿದ್ದು ಸತ್ತಿತ್ತು. ಮಡದಿಯ ಬಿಡಬಾರದು, ಹಾಲ ಚೆಲ್ಲಬಾರದು. ಹಾವಿನ ವಿಷ ಹಾಲಿನಲ್ಲಿ ಸೋರಿತ್ತು, ಇದಕಿನ್ನಾವುದು ತೆರ? ಕ್ರೀಯ ಬಿಡಬಾರದು, ಅರಿವಿಂಗೆ ಆಶ್ರಯ ಬೇಕು. ಅರಿವನರಿದೆಹೆನೆಂದಡೆ ಪ್ರಪಂಚಕ್ಕೆ ಒಡಲಾಯಿತ್ತು. ಹುಲಿ ಬಾವಿ ಹಾವಿನ ಎಡೆಯಲ್ಲಿ ಸಿಕ್ಕಿದ ತೆರ ಎನಗಾಯಿತ್ತು. ಈ ಸಂದೇಹವ ಬಿಡಿಸು, ಸದಾಶಿವಮೂರ್ತಿಲಿಂಗವೆ, ನಿನ್ನ ಧರ್ಮ.
--------------
ಅರಿವಿನ ಮಾರಿತಂದೆ
ಎನಗೆ ಗುರುವಾಗಬೇಡ ಹೆಣ್ಣು ಹೊನ್ನು ಮಣ್ಣಿನ ಆಸೆ ಉಳ್ಳನ್ನಕ್ಕ, ಎನಗೆ ಲಿಂಗವಾಗಬೇಡ ಶಕ್ತಿಸಂಪರ್ಕವುಳ್ಳನ್ನಕ್ಕ, ಎನಗೆ ಜಂಗಮವಾಗಬೇಡ ಕಂಡಕಂಡವರ ಮಂದಿರದಲ್ಲಿ ಹೊಕ್ಕು ಅಶನ ವಿಷಯಕ್ಕಾಗಿ ಹುಸಿವೇಷವ ತೊಟ್ಟು ಗಸಣಿಗೊಳಬೇಡ, ಎಂದು ಹೇಳಿದ ಮಾತಿಗೆ ನೊಂದ ನೋವು, ನಿಮ್ಮ ದೇವತ್ವದ ಹಾನಿ ಎನ್ನ ಸಜ್ಜನದ ಕೇಡು. ಎನ್ನ ಹೊದ್ದಡೆ ಮಾಣೆ, ಇದ್ದುದ ಹೇಳಿದೆ, ನೊಂದಡೆ ನೋಯೆ, ಸದಾಶಿವಮೂರ್ತಿಲಿಂಗವೆ ನಿನ್ನ ನಾ ಹಿಂಗದ ತೊಡಕು.
--------------
ಅರಿವಿನ ಮಾರಿತಂದೆ
ಎರಳೆಯ ಕೊಂಬಿನ ನುಲಿಯ ಬಳಸಿನಲ್ಲಿ ಅರುಹಿರಿಯರೆಲ್ಲರು ಬಳಸಿ ಆಡುತ್ತೈಧಾರೆ. ಎರಳೆ ಸತ್ತು ಕೋಡಳಿದು ಕೊಂಬಿನ ನುಲುಹು ನೇರಿತವಾಗಿ, ಬಳಸುವ ಅರು ಹಿರಿಯರೆಲ್ಲರು ಒಬ್ಬುಳಿತವಾಗಿ ಸುಳುಹು ನಿಂದಾಗವೆ, ಸದಾಶಿವಮೂರ್ತಿಲಿಂಗದ ಅಂಗದಲ್ಲಿ ಲೀಯವಾಯಿತ್ತು.
--------------
ಅರಿವಿನ ಮಾರಿತಂದೆ
ಎನಗೆ ಭರಿತಾರ್ಪಣವೆಂದು ಹೇಳಿದಾಗವೆ, ಲಿಂಗಕ್ಕೊ? ನಿನಗೊ? ಎಂಬುದ ನಿನ್ನ ನೀನರಿ, ಅನ್ಯರ ಕೈಯಿಂದ ಹೇಳಿಸಿ ಚೆನ್ನಾಗಿ ಇಕ್ಕಿಸಿಕೊಂಡು ಉಂಬುದು ಲಿಂಗಕ್ಕೊ? ನಿನಗೊ? ಎಂಬುದು ನಿನ್ನ ನೀನರಿ ಸಂದುದನೆ ಪರಿಣಾಮಿಸಿ ಬಾರದುದಕ್ಕೆ ಸಂದೇಹವಿಲ್ಲದೆ ಸಂದನಳಿದುದು ಭರಿತಾರ್ಪಣ, ಸದಾಶಿವಮೂರ್ತಿಲಿಂಗಕ್ಕೆ ತೃಪ್ತಿ.
--------------
ಅರಿವಿನ ಮಾರಿತಂದೆ