ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶ್ರೀಶೈಲದ ಮಧ್ಯದಲ್ಲಿ ಒಂದು ಪರುಷರಸದ ಬಾವಿ ಹುಟ್ಟಿತ್ತು, ಆ ಬಾವಿಯೊಳಗೆ ಕಬ್ಬುನದ ಅದಿರು ಹುಟ್ಟಿ ಸಿದ್ಧರಸವ ನುಂಗಿತ್ತು. ಇದ್ದವನ ಸುದ್ದಿಯ ಸತ್ತವ ಹೇಳಿ, ಕಾಣದವ ಕೇಳಿ ಹೋದ, ಸದಾಶಿವಮೂರ್ತಿಲಿಂಗ ಬಚ್ಚಬರಿಯ ಬಯಲು.
--------------
ಅರಿವಿನ ಮಾರಿತಂದೆ
ಶೈವಕ್ಕೆ ಕೈಲಾಸ, ವೈಷ್ಣವಕ್ಕೆ ವೈಕುಂಠ, ಚೌದ್ಧಂಗೆ ಮೋಕ್ಷಗಾಮಿನಿಯೆಂಬ ಗೊತ್ತುಗಳು ಬೇರಾದಲ್ಲಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಬೇರಾದುದಿಲ್ಲ. ಸುವರ್ಣ ಒಂದು ಆಭರಣ ಹಲವಾದಂತೆ. ಪರಬ್ರಹ್ಮವಸ್ತುವೊಂದೆಂಬುದಕ್ಕೆ ಇದೆ ದೃಷ್ಟ. ಮತ್ತಿದಿರು ದೈವವುಂಟೆಂದು ಗದಿಯಬೇಡ. ನೆರೆ ನಂಬಿ, ಸದಾಶಿವಮೂರ್ತಿಲಿಂಗವಲ್ಲದಿಲ್ಲಾಯೆಂದೆ.
--------------
ಅರಿವಿನ ಮಾರಿತಂದೆ
ಶಿವ ಭಕ್ತನಾಗಿ ಮುಂದೆ ಬಂದು ಮಂದಿರವ ಕಟ್ಟಿದ, ಶಿವ ಜಂಗಮವಾಗಿ ಕರ್ತುರೂಪ ತಾಳಿ ಹಿಂದುಳಿದು ಬಂದ, ಉಭಯವು ಒಂದಾಗಿ ಜಗಹಿತಾರ್ಥವಾಗಿ ಬಂದ ಅಂದ, ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಶಶಿಕಾಂತದ ಶಿಲೆ ಒಸರುವಂತೆ, ಕುಸುಮ ಋತುಕಾಲಕ್ಕೆ ದೆಸೆಗೆ ಪಸರಿಸುವಂತೆ, ಅಂಗ ಸಂಬಂಧಕ್ಕೆ, ಆತ್ಮನ ಅರಿವಿಂಗೆ, ಮಾಡುವ ತತ್ಕಾಲಕ್ಕೆ, ಆ ಭಾವದಲ್ಲಿ ಭಾವಿಸಿ ನಾನೆಂಬುದನಳಿದು ನೀನೆಂಬುದಕೆಠಾವಿಲ್ಲದೆ, ಆ ಭಾವವೆ ಬೆಳಗುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಶೇಷ ಲಂಪಟಕೆಯ್ದುವ ಮುಖದಂತಿರಬೇಕು, ವ್ಯಾಘ್ರನ ಗತಿ ನಖದಂತಿರಬೇಕು, ಪುಳಿಂದನ ಚಿತ್ತದ ಗೊತ್ತಿನಂತಿರಬೇಕು. ಹಿಡಿವಲ್ಲಿ ಬಿಡುವಲ್ಲಿ ವಾಯುವಿನ ತೆರಪಿನಿಂದ ಕಡೆಯಾಗದೆ, ಅರಿಯಬೇಕು ಸದಾಶಿವಮೂರ್ತಿಲಿಂಗವ.
--------------
ಅರಿವಿನ ಮಾರಿತಂದೆ
ಶರೀರವ ಕುರಿತಲ್ಲಿ ಸಾಧಕಾಂಗವ ನುಡಿಯಬೇಕು. ಆತ್ಮನ ಕುರಿತಲ್ಲಿ ಚಿದ್ಘನದಲ್ಲಿ ನಿಂದು ಒದಗಿ ಅಡಗಿರುವಠಾವ ನುಡಿಯಬೇಕು. ಇಂತೀ ಉಭಯದಿರವ ತಾನರಿತು ಅಂಗಕ್ಕೆ ಶಿಲೆ, ಆತ್ಮಂಗೆ ಓಗರವಾದಂತೆ, ಲೌಕಿಕಕ್ಕೆ ಆಚರಣೆ ಪರಮಾರ್ಥಕ್ಕೆ ಪರಂಜ್ಯೋತಿ ಪ್ರಕಾಶವಾಗಿರಬೇಕು, ಸದಾಶಿವಮೂರ್ತಿಲಿಂಗಕ್ಕೆ ಅಂಗವಾಗಿ ನಿರಂಗಕ್ಕೆ ಸಂಗವನೆಯ್ದಬೇಕು.
--------------
ಅರಿವಿನ ಮಾರಿತಂದೆ
ಶಕ್ತಿರೂಪು ವಿಷ್ಣುವಿನ ಅವತಾರವಾಯಿತ್ತು. ಅಸ್ಥಿಮಯ ರುದ್ರನ ವಂಶೀಭೂತವಾಯಿತ್ತು. ಆತ್ಮಮಯ ವಸ್ತ್ರಸಂಬಂಧವಾದಲ್ಲಿ ಮಾಯೆಯ ಮರೆದು ಕಲ್ಪಿತವ ಹರಿದು ಏಕಮಯವಾಗಿ, ಖಂಡನಪತ್ರದಲ್ಲಿ ತೋರುವ ಚಂಡಿಕಾಕಿರಣದಂತೆ. ಒಂದು ಹಲವಾದ ವಸ್ತುವನರಿತಲ್ಲಿ ಹಿಂಗಿತು ಮಲ ಈಚೆಯಲ್ಲಿ, ಆ ಮಲದ ಆಚೆಯಲ್ಲಿ ನಿಂದು ನೋಡಲಾಗಿ, ಸದಾಶಿವಮೂರ್ತಿಲಿಂಗದ ಕಳೆ ಕಾಣಬಂದಿತ್ತು.
--------------
ಅರಿವಿನ ಮಾರಿತಂದೆ
ಶೈವವಾದ, ತತ್ತ್ವವಾದ, ಮಾಯಾವಾದ ಇಂತೀ ವಾದಂಗಳಲ್ಲಿ ಹೋರುವಾಗ ವೇದ ಹೇಳುತ್ತದೆ : ಓಂ ಎಂಬಲ್ಲಿ ಎರಡಳಿದು ಒಂದೇ ಉಳಿಯಿತ್ತು. ಕೆಲವಸ್ತು ದೇವಂಗೆ ಸರಿಯೆಂದಡೆ ಅದು ನಿಮ್ಮ ಒಲುಮೆಯ ಒಲವರವೈಸಲ್ಲದೆ ಬಲುಹಿನ ಮಾತು ಬೇಡ. ಕಾಲಾಂತಕನ ಕರದಲ್ಲಿ ಕಪಾಲವದೆ, ಪಾದಯುಗಳದಲ್ಲಿ ಅಕ್ಷಿಯದೆ. ಮಿಕ್ಕಾದ ಅರಿಕುಲ ದೈವಂಗಳ ಶಿರಮಾಲೆಯಲ್ಲಿ ಸಿಕ್ಕಿ ಅದೆ. ಮತ್ತಿನ್ನು ಒರಲಲೇಕೆ? ಸದಾಶಿವಮೂರ್ತಿಲಿಂಗವಲ್ಲದಿಲ್ಲಾ ಎಂದೆ.
--------------
ಅರಿವಿನ ಮಾರಿತಂದೆ
ಶರೀರಘಟಕ್ಕೆ ಶಿಲೆಮೂರ್ತಿ ವಸ್ತುವಾಯಿತ್ತು, ಆತ್ಮಘಟಕ್ಕೆ ಅರಿವುಮೂರ್ತಿ ವಸ್ತುವಾಯಿತ್ತು. ನೇಮಘಟ ನಿತ್ಯಲಿಂಗವನರಿತು, ನಿತ್ಯಲಿಂಗ ಅನಿತ್ಯಲಿಂಗವನರಿತು, ಅನಿತ್ಯ ಚಿತ್ಪ್ರಕಾಶವನೆಯ್ದಿ ಅದರ ಮರೆಯಲ್ಲಿ ಕುಡಿವೆಳಗು ತೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಶಿವನಿಂದಲುದಯಿಸಿತ್ತು ವಿಶ್ವ, ವಿಶ್ವದಿಂದಲುದಯಿಸಿತ್ತು ಸಂಸಾರ, ಸಂಸಾರದಿಂದಲುದಯಿಸಿತ್ತಜ್ಞಾನ, ಅಜ್ಞಾನದಿಂದಲುದಯಿಸಿತ್ತು ಮರವೆ, ಮರವೆಯಿಂದಲುದಯಿಸಿತ್ತು ಆಸೆ, ಆಸೆಯಿಂದಲುದಯಿಸಿತ್ತು ರೋಷ, ರೋಷದಿಂದಲುದಯಿಸಿತ್ತು ದುಃಖ, ದುಃಖದಿಂದ ಮೂರೂ ಲೋಕವೆಲ್ಲವು ಮೂರ್ಛೆಯಾಗಿ ಭವಬಂಧನಕ್ಕೊಳಗಾದರು, ಅಲ್ಲಿ ನಮ್ಮ ಸದಾಶಿವಮೂರ್ತಿಲಿಂಗವನರಿಯದ ಕಾರಣ.
--------------
ಅರಿವಿನ ಮಾರಿತಂದೆ
ಶರೀರ ದಹನ ಮುಖವೆಲ್ಲವು ರುದ್ರತತ್ವ ಆಧೀನವಾಗಿಹುದು. ಶರೀರಮುಖ ಸಮಾಧಿ ಆಧೀನವಾಗಿಹುದೆಲ್ಲವು ವಿಷ್ಣುಪಕ್ಷವಾಗಿಹವು. ಇಂತೀ ಉಭಯ ಲಯವನರಿತಲ್ಲಿ ಪೂರ್ವಕಕ್ಷೆಯಾಗಿಹುದು. ಇಂತೀ ಭೇದಂಗಳನರಿತು ಹೊರಗಾಗಿ ನಿಂದಲ್ಲಿ ಸದಾಶಿವಮೂರ್ತಿಲಿಂಗದ ಅರಿವು ಒಳಗಾಗಿಹುದು.
--------------
ಅರಿವಿನ ಮಾರಿತಂದೆ
ಶಿರಪಾದದೊಳಗಾದ ಅಂಗದ ಸುಖದುಃಖವ ಆತ್ಮನರಿವಂತೆ, ಅರಿವೇ ಕುರುಹಾಗಿ ನಿಂದಲ್ಲಿ ಆ ಉಭಯದ ಅಳಿವುಳಿವನರಿಯಬೇಕು. ಆ ಭೇದವನರಿದಲ್ಲಿ ಆ ಅರಿವಿನ ಕುರುಹು ಚಿದ್ಘನದಲ್ಲಿ ನೆಲೆನಿಂದು ಉಳಿದ ಬೆಳಗು ಕಳೆದೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಶರೀರದಲ್ಲಿ ಷಡಾಧಾರಚಕ್ರವುಂಟೆಂಬರು. ಆಧಾರವೊಂದರಿಂದ ಆದುದನರಿಯದೆ ಆರುಂಟೆಂದು ಬೇರೆ ಕಲ್ಪಿಸಬಹುದೆ? ಅದಕ್ಕೆ ದೃಷ್ಟ: ಹುತ್ತದ ಬಾಯಿ ಹಲವಾದಡೆ ಒಡಲೊಂದೆ ಘಟಭೇದ. ಆಧಾರ ನಾನೆಂಬುದನರಿತಲ್ಲಿ ಷಡಾಧಾರ ನಿಂದಿತ್ತು. ಅದು ತನ್ನಯ ಚಿತ್ತದ ಭೇದವಲ್ಲದೆ ವಸ್ತುವನರಿವ ಭೇದವಲ್ಲ. ಹಲವು ಓಹರಿಯಲ್ಲಿ ತಿಳಿದು ನೋಡುವ ಒಬ್ಬನೆ ಮನೆಯೊಡೆಯ. ಆ ಹೊಲಬನರಿತಲ್ಲಿಯೆ ನಿಂದುದು, ಸದಾಶಿವಮೂರ್ತಿಲಿಂಗದ ಅಂಗ.
--------------
ಅರಿವಿನ ಮಾರಿತಂದೆ