ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಯೋಗಿ ಜೋಗಿ ಶ್ರಾವಕ ಸನ್ಯಾಸಿ ಪಾಶುಪತಿ ಕಾಳಾಮುಖಿ ಆರು ಭೇದ ಮೂರರಲ್ಲಿ ಅಡಗಿ ಎರಡು ಅಳಿವಿಂಗೆ ಒಳಗಾಯಿತ್ತು. ಒಂದು ನಿಂದು ಸಮಯ ರೂಪಾಯಿತ್ತು. ಸಮಯಕ್ಕೆ ಹೊರಗಾದುದು, ಸದಾಶಿವಮೂರ್ತಿಲಿಂಗಕ್ಕೆ ಶಕ್ತಿನಾಮವಿಲ್ಲ.
--------------
ಅರಿವಿನ ಮಾರಿತಂದೆ
ಯೋಗದಲ್ಲಿ ಕಾಬುದು ಶರೀರಕ್ಕೆ ಹೊರಗು. ಕರ್ಮದಲ್ಲಿ ಕಾಬುದು ಸಂಕಲ್ಪಕ್ಕೆ ಹೊರಗು. ಬಟ್ಟಬಯಲಲ್ಲಿ ಕಾಬುದು ಲಕ್ಷಕ್ಕೆ ಹೊರಗು ಉಭಯದ ಸಂದನಳಿದು ನಿಂದಲ್ಲಿ ಸದಾಶಿವಮೂರ್ತಿಲಿಂಗಕ್ಕೆ ಒಳಗು.
--------------
ಅರಿವಿನ ಮಾರಿತಂದೆ
ಯತಿಗುಣದ್ವೇಷ, ಸಮಯಗುಣದ್ವೇಷ, ಆಚಾರಗುಣದ್ವೇಷ, ಸಕಲಶಾಸ್ತ್ರಯುಕ್ತಿಗುಣದ್ವೇಷ, ಸಮತೆಗುಣ ಶಾಂತಿಯಲ್ಲಿ ನಿಂದು ವಿರಕ್ತಿದ್ವೇಷ. ಇಂತೀ ದ್ವೇಷನಾಮನಷ್ಟವಾಗಿ ಸ್ವಯಂಭುವಾಗಿ ನಿಂದುದು, ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಯೋನಿಜನಾಗಿ ದಶ ಅವತಾರಕ್ಕೆ ಒಳಗಾದಲ್ಲಿ ದೇವಪದ ಹಿಂಗಿತ್ತು. ನಾಭಿ ಅಂಬುಜದಲ್ಲಿ ಹುಟ್ಟಿ ಪಿತಭವಕ್ಕೆ ಬಾಹಾಗ ಸುತಂಗೆ ಸುಖವಿಲ್ಲವಾಗಿ ಬ್ರಹ್ಮಪದ ನಿಂದಿತ್ತು. ಸಂಹಾರಕಾರಣನಾಗಿ ಕಪಾಲಶೂಲನಾಟ್ಯಾಡಂಬರನಾಗಿ ಇದ್ದುದರಿಂದ, ಈಶ್ವರಪದ ನಿಂದು ರ್ರಪದವಾಯಿತ್ತು. ಇಂತೀ ತ್ರಿವಿಧವನರಿದು ತೊಲಗಿ ನಿಂದಲ್ಲಿ ಸದಾಶಿವಮೂರ್ತಿಲಿಂಗದ ನೆಲೆಯಾಯಿತ್ತು.
--------------
ಅರಿವಿನ ಮಾರಿತಂದೆ
ಯೋಗಿ ಪಾಶುಪತಿ ಕಾಳಾಮುಖಿ ಈ ಮೂರು ಶೈವಪಕ್ಷವಾಗಿಹವು. ಜೋಗಿ ತ್ರಿದಂಡಿ ಭೌದ್ಧ ಈ ಮೂರು ವಿಷ್ಣುಪಕ್ಷವಾಗಿಹುದು. ಇಂತೀ ಆರು ಅವತಾರಕ್ಕೆ ಸಂಬಂಧವಾಗಿಹವು. ಆರರಿಂದ ಮೀರಿದ ದರ್ಶನಕ್ಕೆ ತೋರಲಿಲ್ಲದ ಸುವಸ್ತು ತಾನಾಗಿ, ರೂಪಿಂಗೆಡೆಯಿಲ್ಲ ಸದಾಶಿವಮೂರ್ತಿಲಿಂಗವು ತಾನಾಗಿ.
--------------
ಅರಿವಿನ ಮಾರಿತಂದೆ