ಅ[ರೆ]ಪು :
ಅರೆಯುವಿಕೆ, ಸಣ್ಣಮಾಡುವಿಕೆ
ಅಂಕ :
ಸೈನಿಕ, ಯೋಧ
ಅಂಕ :
ಸೈನಿಕ, ಯೋಧ
ಅಂಕ :
ಯುದ್ಧ, ಯುದ್ಧಭೂಮಿ, ಕುರಹು
ಅಂಕಕಾರ :
ಹೆಸರಾಂತ ವೀರ
ಅಂಕಣಿ :
ಚಕಾಪು
ಅಕಲ್ಪಿತ :
ಅಕಸ್ಮಾತ್ತಾದ, ಸಹಜವಾದ, ಕಲ್ಪಿತವಲ್ಲದ
ಅಕಳಂಕ :
ದೋಷರಹಿತ, ಶುಭ್ರ, ಶಿವ
ಅಂಕುರ :
ಚಿಗುರು
ಅಂಕುರ :
ಮೊಳಕೆ
ಅಂಕುಶ :
ಈಟಿ
ಅಕುಳ :
ಚಿಂತೆ
ಅಂಕೆಯಾಗು :
ಅಂಕಿತದಲಿಅಸು, ತಾಳು
ಅಂಕೋಲೆ :
ಒಂದು ಜಾತಿಯ ಮರ
ಅಕ್ಕಜ :
ಆಶ್ಚರ್ಯ
ಅಕ್ಕರು ಅಳ್ಕರು :
ಪ್ರೀತಿ
ಅಕ್ಕವೆ :
ಜೀರ್ಣ, ಪ್ರಯೋಜನ
ಅಕ್ಕಾಡು :
ಆಳ್ಕಾಡು, ಕಂಪನಗೊಳ್ಳು
ಅಕ್ಕಾಡು :
ಚೆಲ್ಲು&ಔಇಟig;, ಹೊರಸೂಸು
ಅಕ್ಕಿತ್ತೆ :
ಕಂಪನಗೊಂಡಿತ್ತೆ
ಅಕ್ಕು :
ಒಗ್ಗು, ಆಗು ಜೀರ್ಣವಾಗು
ಅಕ್ಕುಲಜ :
ಕುಲಹೀನ, ಕುಲಜರಲ್ಲದವರು
ಅಕ್ಕೆ :
ದುಃಖ, ಸ್ಥಿತಿ
ಅಕ್ಕೊತ್ತು :
ಬಲವಾಗಿ ತಳ್ಳು
ಅಕ್ಷಮಣಿ :
ಜಪಮಣಿ
ಅಕ್ಷರತ್ರಯ :
ತತ್ ತ್ವಂ ಅಸಿ, ತತ್ವಮಸಿ
ಅಕ್ಷಿ :
ಕಣ್ಣು
ಅಖಂಡಿತವಾಗು :
ಹೆಚ್ಚಾಗು, ಬೆಳೆ
ಅಂಗ :
ಶರೀರ, ದೇಹ
ಅಂಗಗೊಳಿಸು :
ಅಳವಡಿಸಿಕೊಳ್ಳು
ಅಂಗಜ :
ಮನ್ಮಥ, ಕಾಮ
ಅಂಗಜನ ಪಡೆ (ಬೆ) :
ನಾನಾವಿಧ ಕರಣಂಗಳು
ಅಂಗಜಾಹವ :
ಕಾಮಕೇಳಿ !
ಅಗಡ :
ಒರಟು, ಎಟ್ಟಿ, ಹಂಗು (?), ನಿಂದೆ
ಅಗಡಿ :
ಅಗಡ, ಕೆಟ್ಟ ಕೆಲಸ
ಅಗಡುತನ :
ತುಂಟತನ, ಕ್ರೂರತನ
ಅಗಡೆತ್ತು :
ಮೊಂಡ ಎತ್ತು
ಅಗಣಿತ :
ಎಣಿಕೆಗೆಬಾರದ, ಅಸಂಖ್ಯ
ಅಂಗತ :
ಅಂಗಸ್ಥ, ಅಳವಟ್ಟ
ಅಂಗತ್ರಯ :
ಇಷ್ಟಂಗ, ಪ್ರಾಣಂಗ, ಭಾವಲಿಂಗ
ಅಂಗದ ಧರೆ (ಬೆ) :
ತನುವೆಂಬ ಭೂಮಿ
ಅಂಗನೆ :
ಹೆಣ್ಣು
ಅಂಗನೆ (ಬೆ) :
ಶಾಂತಿಯೆಂಬ ಪರಾಶಕ್ತಿ
ಅಗಮ್ಯ :
ತಿಳಿಯಲು ಬಾರದ, ನಿಲುಕದ, ಅರಿತಕ್ಕೆಬಾರದ, ಶಿವ, ಸುಲಭವಾಗಿ ಸಿಗದ,ದೊಡ್ಡಸ್ತನದ ಸೊಬಗು
ಅಗಲು :
ನೈವೇದ್ಯ, ಎಡೆ, ಹರಡು, ಊಟದ ತಾಟು
ಅಂಗವಣಿ :
ಧೈರ್ಯ
ಅಂಗವಿಲ್ಲದ ಅಂಗನೆ (ಬೆ) :
ಅಕಾಯ ರೂಪಿಣಿಯಾದ ಪರಾಶಕ್ತಿ
ಅಂಗವಿಸು :
ಕೈಕೊಳ್ಳು, ಅಳವಡಿಸು, ಹೊಂದಿಸು, ಬಯಸು, ಇಚ್ಛಿಸು, ಕೂಡು, ಬೆರೆ, ಸಂಧಿಸು, ಇಷ್ಟಪಡು, ಸಮ್ಮತಿಸು
ಅಂಗವಿಸು (ಅಂಗೈಸು) :
ಹಿಡಿ, ಸ್ವಾಧೀನ ಪಡಿಸಿಕೊ
ಅಂಗಸೋಂಕು :
ಶರೀರದ ಮೇಲೆ ಲಿಂಗ ಧರಿಸುವುದು, ಇಷ್ಟಲಿಂಗಧಾರಣೆ
ಅಂಗಳ :
ಅಂಗುಳ, ಗಂಟಲು
ಅಗಳ :
ಕೋಟೆಯ ಸುತ್ತಲಿನ ಕಂದಕ
ಅಗಳು :
ಕೋಟೆಯ ಸುತ್ತಲಿನ ಕಂದಕ
ಅಗಳುವ :
ಕೆರೆಯ ಮಣ್ಣನ್ನು ಎತ್ತುವ, ಅಗೆಯುವ
ಅಂಗಾಚಾರ :
ಅಶುದ್ಧ ಬದುಕು
ಅಗಿ :
ತಿನ್ನು
ಅಗಿನ :
ಅಗ್ನಿ, ಬೆಂಕಿ
ಅಂಗುಲಿ :
ಬೆರಳು
ಅಂಗುಷ್ಠ :
ಹೆಬ್ಬೆರಳು
ಅಗುಸೆ :
ಊರ ಮಹಾದ್ವಾರ/ಹೆಬ್ಬಾಗಿಲು
ಅಗುಳಿಸು :
ತಗ್ಗು ತೋಡಿಸು
ಅಗೆ :
ಸಸಿ
ಅಂಗೈಯಮಾಲೆ (ಬೆ) :
ಕರಸ್ಥಲದ ಇಷ್ಟಲಿಂಗ
ಅಂಗೈಸು :
ಸ್ವೀಕರಿಸು, ಆಶ್ರಯಿಸು, ಜೊತೆಸೇರು
ಅಗೋಚರ :
ಕಾಣದ
ಅಗ್ಗ :
(ಸಂ. ಅರ್ಘ) ಶ್ರೇಷ್ಠ
ಅಗ್ಗಣಿ :
ಪೂಜೆಗಾಗಿ ತಂದ ನೀರು
ಅಗ್ಗವಣಿ :
ಪವಿತ್ರ ನೀರು
ಅಗ್ಗವಣಿ :
ಪೂಜೆಯ ನೀರು
ಅಗ್ಗಿಣಿ :
ಅಗ್ಗವಣಿ
ಅಗ್ಗೊಂಬ :
ಅಗ್ರಶಾಖೆ
ಅಗ್ಘಣಿ :
ಲಿಂಗೋದಕ, ಪವಿತ್ರವಾದ ನೀರು
ಅಗ್ಘಣಿ (ಅಗ್ಘವಣಿ, ಅಗ್ಗಣಿ) :
ಕಾಲು ತೊಳೆಯಲು ಕೊಡುವ ನೀರು
ಅಗ್ಘವಣಿ :
ಪವಿತ್ರ ಜಲ/ನೀರು
ಅಗ್ನಿ (ಬೆ) :
1.ಹೃದಯದಲ್ಲಿಹುದುಗಿದ ಜ್ಞಾನಾಗ್ನಿ, 2. ಸ್ವಾನುಭಾವ ಪ್ರಭೆ, 3. ತನುಗುಣಸಂಬಂಧಿಯಾದ ದೇಹ, 4. ಆತ್ಮ
ಅಗ್ನಿಮುಖ (ಬೆ) :
ಕುಂಡಲಾಗ್ನಿ
ಅಗ್ನಿಯ ಒಡಲು (ಬೆ) :
ಅಗ್ನಿಅಂಶವಾದ ದೇಹ
ಅಗ್ನಿಯ ಕಿವಿ ಮೂಗು (ಬೆ) :
ಅಗ್ನಿಯ ಅಂಶದಿಂದಾದ ದುರಭಿಮಾನ ಮತ್ತು ಅಹಂಕೃತಿ
ಅಗ್ನಿಸ್ತಂಭ :
ಬೆಂಕಿಯನ್ನು ನಂದಿಸುವ ಮಂತ್ರಶಕ್ತಿ
ಅಗ್ನಿಸ್ತಂಭನ :
ಬೆಂಕಿ ಸುಡದಂತೆ ಮಾಡುವ ವಿದ್ಯೆ
ಅಗ್ರ :
ತುದಿ, ಹಿರಿಯ, ಮೇಲೆ
ಅಗ್ರೋದಕ :
ಮೀಸಲುನೀರು, ಮಂತ್ರೋದಕ
ಅಘ :
ಪಾಪ
ಅಘಟಿತ ಘಟಿತ :
ಉಂಟಾಗದುದನ್ನು ಉಂಟುಮಾಡುವವ
ಅಘಬಂಧ :
ಪಾಪದಿಂದ ಕಟ್ಟಲ್ಪಟ್ಟ
ಅಘಭರಿತ :
ಪಾಪದಿಂದ ತುಂಬಿದ
ಅಘವಿಧ್ವಂಸನ :
ಪಾಪವಿನಾಶನ
ಅಘಹರ :
ಪಾಪಹರ, ಶಿವ, ಪಾಪನಾಶಕ
ಅಘಹರನ ದೃಷ್ಟಿ (ಬೆ) :
ಸುಜ್ಞಾನಚಕ್ಷು
ಅಘೋರ :
ಅತ್ಯಂತ ಭಯಂಕರ
ಅಂಘ್ರಿ :
ಪಾದ
ಅಂಘ್ರಿಸಲಿಲ :
ಪಾದೋದಕ
ಅಘ್ರ್ಯಪಾದ್ಯ :
ಅತಿಥಿಗಳ ಪಾದ ತೊಳೆದು ಸತ್ಕರಿಸುವುದು
ಅಂಚಟಿ :
ಹಳೆಯ ಬಟ್ಟೆ, ಹಚ್ಚಡ
ಅಚ್ಚನೆ (ಸಂ, ಅರ್ಚನೆ) :
ಪೂಜೆ
ಅಚ್ಚನೆಯಾಡು :
ಪೂಜಿಸು
ಅಚ್ಚಿ :
ಕಣ್ಣು
ಅಚ್ಚಿಗ :
ಶ್ರಮ
ಅಚ್ಚಿಗ :
ವ್ಯಥೆ, ಕಳವಳ, ದುಃಖ, ಸಂಕಟ
ಅಚ್ಚಿಗಬಡು :
ಆಶ್ಚರ್ಯಪಡು