ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆದಿ ಮಧ್ಯ ಅವಸಾನವರಿಯಬೇಕೆಂಬರು, ಆದಿಯಲ್ಲಿ ನಿಂದು, ಮಧ್ಯದಲ್ಲಿ ಕಂಡು, ಅವಸಾನದಲ್ಲಿ ಅರಿದು ಇರಬೇಕೆಂಬರು. ಅರಿವುದು ಒಂದೊ ಮೂರೊ ಎಂದಲ್ಲಿ ನಿಂದಿತ್ತು. ನಿಂದುದ ಕಳೆದು ಸಂದ ಹರಿ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಆ ದುರ್ಗದಲ್ಲಿದ್ದ ದೊರೆಗಳ ವಿರೋಧವನರಿದು, ಇದೆ ದುರ್ಗಕ್ಕೆ ಸಾಧ್ಯ ವೇಳೆಯೆಂಬುದನರಿತು, ಮಾಯಾಮಲಂ ನಾಸ್ತಿಯೆಂಬ ಮನ್ನೆಯ ಕಾಳಗವ ಹಿಡಿದು, ದುರ್ಗವ ಮುತ್ತಿ, ಕೈಯೊಳಗಾದರು ಮೂವರು ದೊರೆಗಳು. ನರಪತಿಯ ಅಂಡವ ಕಿತ್ತು, ಸುರಪತಿಯ ಕೈಯ್ಯ ಕಡಿದು, ಸಿರಿವುರಿಯೊಡೆಯನ ಕಣ್ಣ ಕಳೆದು, ಅರಿಗಳಿಲ್ಲಾ ಎಂದು ಅಭಿಮುಖವ ನಷ್ಟವ ಮಾಡಿ, ಊಧ್ರ್ವಮುಖವಾದ ಮಾಯಾಕೋಳಾಹಳಮಲಂ ನಾಸ್ತಿ, ಮನೆಯ ಭಾವರಹಿತ, ಅನುಪಮಭರಿತ ಸದಾಶಿವಮೂರ್ತಿಗಳಿಲ್ಲದೆ ನಿರಾಳವಾಯಿತ್ತು.
--------------
ಅರಿವಿನ ಮಾರಿತಂದೆ
ಆಕಾಶದಲ್ಲಿ ತೋರುವ ಮೋಡದ ಮುಗಿಲಿನಂತೆ, ಶಶಾಂಕನ ಕಾಬ ಅಂಬುಧಿಯಂತೆ, ವಿಷಧರನ ಕಾಬ ವಿಷಜದಂತೆ ಹೆಚ್ಚುಗೆಯಾಗಿ ಆತ್ಮಭೇದದಲ್ಲಿ ಕುರುಹಿಟ್ಟುದ ಕಂಡು ಮನವುಣ್ಮಿ ತನುಕರಗಿ ನಿಶ್ಚಯ ನಿಜತತ್ತ್ವದಲ್ಲಿ ಬೆಳಗುತ್ತದೆ ಸದಾಶಿವಮೂರ್ತಿಲಿಂಗದಲ್ಲಿ,
--------------
ಅರಿವಿನ ಮಾರಿತಂದೆ
ಆತ್ಮ ಘಟಮಧ್ಯದಲ್ಲಿ ನಿಂದು, ಕೈಯ್ಯಲ್ಲಿ ಮುಟ್ಟಿ, ಕಿವಿಯಲ್ಲಿ ಕೇಳಿ, ನಾಸಿಕದಲ್ಲಿ ವಾಸಿಸಿ, ಕಣ್ಣಿನಲ್ಲಿ ನೋಡಿ, ಬಾಯಲ್ಲಿ ಉಂಬಂತೆ, ಪಂಚೇಂದ್ರಿಯಕ್ಕೆ ತತ್ತಾಗಿ ಹಂಚಿಕೊಂಡಿಹುದು ಒಂದೆ ಆತ್ಮ. ಅವರವರ ಮುಖಂಗಳಿಂದ ಗುಣವನರಿವನ್ನಕ್ಕ, ಇಷ್ಟದ ಮರೆಯಲ್ಲಿ ಚಿತ್ತ ನಿಂದು, ವಸ್ತುನಾಮವಾಗಬೇಕು. ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಆತ್ಮಗುಣ ವಿವರದ ಪರಿಯೆಂತುಟೆಂದಡೆ: ತರುವಿನ ಪರಿಭೇದದಂತೆ, ಮರ ಬಲಿದು ಋತುಕಾಲಕ್ಕೆ ಪಲ್ಲವದ ಮಧ್ಯದಲ್ಲಿ, ಹೂ ಮಿಡಿ ಬಲಿದು ರಸನಿಂದು ಫಳವಾದಂತೆ ಆತ್ಮನ ವಿವೇಕ ಸ್ವಸ್ಥದಲ್ಲಿ ನಿಂದು ತನ್ನಿರವ ತಾ ವಿಚಾರಿಸಿ, ಮಹವನೊಡಗೂಡಿ, ಮಲತ್ರಯ ದೂರವಾಗಿ, ಚಿಚ್ಛಕ್ತಿಯ ಹೃದಯದಲ್ಲಿ ಚಿದ್ಘನ ಬಲಿದು ಸ್ವರೂಪವಾಗಿ ನಿಂದು, ಆತ್ಮನ ಅಳಿವನರಿದು ಅಧ್ಯಾತ್ಮಯೋಗಸಂಬಂಧ, ಸದಾಶಿವಮೂರ್ತಿಲಿಂಗವನರಿದುದು.
--------------
ಅರಿವಿನ ಮಾರಿತಂದೆ
ಆತ್ಮ ವಸ್ತುವೆಂದು ಅರಿತಲ್ಲಿ ಆತ್ಮನ ಅಳಿವ ಉಳಿವನರಿತು, ತಾನಿದಿರಿಟ್ಟು ಕಾಬುದಕ್ಕೆ ದೃಷ್ಟವರತು ಸರ್ವಸಂಪದನಾಗಿ, ಮಿಥ್ಯ ತಥ್ಯ ತಲೆದೋರದೆ ಹಿಂದೆ ಬಂದ ಸಂದೇಹವನರಿತು, ತಾ ನಿಂದ ನೆಲೆಯ ನೆಮ್ಮುಗೆಯ ಕಂಡು ಮುಂದಕ್ಕೆ ಬಹ ಸುಖದುಃಖವ ಇಂದೆ ಕಂಡು ಸಂದೇಹವಳಿದು ಸದಾ ಅಮಲಿನನಾಗಿ, ಮತ್ತೆ ಮುಂದಕ್ಕೊಂದುಂಟೆಂದು ಕಲ್ಪನೆಯ ಸಂಕಲ್ಪ ಹರಿದು ನಿಂದು, ಮತ್ತೊಂದರಲ್ಲಿ ನಿಂದು ಅಳಿಯಬೇಕು. ಅಳಿವ ಕಾಯವುಳ್ಳನ್ನಕ್ಕ ಅರಿವಿಂಗೆ ಕುರುಹು ಇರಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಆಗಮಂಗಳ ಶೋಧಿಸಿ ಮಾತಿನ ನೀತಿಯ ಹೇಳುವರೆಲ್ಲರು ಹಿರಿಯರೆ? ಖ್ಯಾತಿಯ ಘಟಧರ್ಮಕ್ಕೆ ಮಾಡುವರೆಲ್ಲರು ಭಕ್ತರೆ? ವೇಷವ ಬಿಟ್ಟು ಮೈವಾಸನವನೊಲ್ಲದೆ ವೇಷದಲ್ಲಿ ತಿರುಗುವ ವಿರಕ್ತರೆಂದು ಮತ್ತೆ, ಭವಪಾಶದಲ್ಲಿ ಬೀಳುತ್ತಿಹ ಪಾಷಂಡಿಗಳಿಗೇಕೆ ಸತ್ಪಥನೀತಿ? ಇಂತೀ ತ್ರಿವಿಧವ ನೇತಿಗಳೆದಲ್ಲದೆ ಸದಾಶಿವಮೂರ್ತಿಲಿಂಗವನರಿಯಬಾರದು.
--------------
ಅರಿವಿನ ಮಾರಿತಂದೆ
ಆದಿಯೆಂಬ ಅಂತರಾದಿಯಲ್ಲಿ ಅನಾದಿಯ ವಸ್ತುವನರಿತು, ಆದಿಯ ಬ್ರಹ್ಮಂಗೆ ಕೊಟ್ಟು, ಅಂತರಾದಿಯ ವಿಷ್ಣುವಿಂಗೆ ಕೊಟ್ಟು, ಅನಾದಿಯ ರುದ್ರನ ಗೊತ್ತ ಮಾಡಿ, ಗೊತ್ತನರಿದವರಲ್ಲಿ ಇಚ್ಛೆಗೆ ತಪ್ಪದೆ ಬೆಚ್ಚಂತಿರಬೇಕು. ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಆಚಾರವೆಂಬ ಭಕ್ತ ಘಟವಾಗಿ, ಅರಿವೆಂಬ ಮೂರ್ತಿಜಂಗಮ ಪ್ರಾಣವಾಗಿ, ಉಭಯವು ಕೂಡಿ ಕಾಯಜೀವನಾಗಿ ನಡೆವಂತೆ, ಆಚಾರಕ್ಕೊಡಲಾಗಿ, ಅರಿವಿಂಗೆ ಆಶ್‍ಯವಾಗಿ, ಈ ಉಭಯಗೂಡಿಪ್ಪ ಅಂಗವು ಸದಾಶಿವಮೂರ್ತಿಲಿಂಗವು ತಾನಾಗಿ.
--------------
ಅರಿವಿನ ಮಾರಿತಂದೆ
ಆಡಿನ ಮೊಲೆವಾಲ ಕೋಡಗವುಂಡು, ಹಾಲ ಸಿಹಿ ತಲೆಗೇರಿ, ಬಂದವರ ಏಡುಸುತ್ತ, ನಿಂದವರ ಕಚ್ಚುತ್ತ ಹಿಂಗದು ನೋಡಾ, ಕೋಡಗದಂದ. ಕೋಡಗವ ತಿಂದು ಆಡುವನೆ ಆರೂಢವಸ್ತು, ಸದಾಶಿವಮೂರ್ತಿಲಿಂಗಕ್ಕೆ ಎರವಿಲ್ಲದಂಗ.
--------------
ಅರಿವಿನ ಮಾರಿತಂದೆ