ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಲದೊಳಗಳ ಮತ್ಸ್ಯದ ನೆಲೆಯ, ಮುಗಿಲೊಳಗಳ ಮಿಂಚಿನ ನೆಲೆಯ, ವಾರಿಯ ಸರಲೆಕ್ಕವ ಭೇದಿಸಬಹುದೆ? ಆ ತೆರದಲ್ಲಿ ನಿಂದಾತ್ಮನ ಒದಗನರಿವ ಭೇದವೆಂತುಟಯ್ಯಾ? ವಾಯು ಬಯಲಲ್ಲಿ ಅಡಗಿ ಆವಠಾವಿನಲ್ಲಿ ಬೀಸಿದಡೆ ಕಲೆದೋರುವಂತೆ, ಆತ್ಮನ ಭೇದವ ಭೇದಿಸುವ ಪರಿ ತನ್ನನರಿತಲ್ಲದಾಗದು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಜಗದ ವರ್ತಕದ ಇರವು ಎಂತೆಂದಡೆ: ಶೈವ ನೇಮಸ್ಥ ಎರಡೆ ಭೇದ. ದಿವಾರಾತ್ರಿ ಉಭಯ ಕೂಡಿ ದಿನ ಲೆಕ್ಕಕ್ಕೆ ಬಂದಂತೆ, ಶಕ್ತಿ ಸಾಕಾರವಾಗಿ, ನಿಶ್ಶಕ್ತಿ ವಸ್ತುರೂಪಾಗಿ, ಉಭಯವು ಕೂಡಿ ಘಟ ನಡೆವಂತೆ ನಡೆವುದು ಜಗ ಸಂಬಂಧ, ಭಯಕ್ಕೆ ಹೊರಗಾದುದು, ಸದಾಶಿವಮೂರ್ತಿಲಿಂಗದ ಭಾವಸಂಬಂಧ.
--------------
ಅರಿವಿನ ಮಾರಿತಂದೆ
ಜೀವಜ್ಞಾನ ಭಾವಜ್ಞಾನ ಯುಕ್ತಿಜ್ಞಾನ ಚಿತ್ತಜ್ಞಾನ ಶಕ್ತಿಜ್ಞಾನ ಪರಶಕ್ತಿಜ್ಞಾನ ಪರಮಜ್ಞಾನ ಪ್ರಕಾಶಜ್ಞಾನ ಪ್ರಜ್ವಲಿತಜ್ಞಾನ ಪ್ರಭಾವಜ್ಞಾನ ತೇಜೋಮಯಜ್ಞಾನ ಪರಂಜ್ಯೋತಿಜ್ಞಾನ ದಿವ್ಯಜ್ಞಾನ ಸರ್ವಮಯ ಸಂಪೂರ್ಣಂಗಳಲ್ಲಿ ತೋರುತ್ತಿಹ ತೋರಿಕೆ, ಆಕಾಶಮಂಡಲದಲ್ಲಿ ತೋರುವ [ಅ]ರುಣನ ಕಿರಣ, ಸರ್ವಜೀವಜ್ಞಾನ ಪರಿಪೂರ್ಣ ದೃಷ್ಟಿಯಾಗಿ ಕಾಬ ತೆರದಂತೆ, ಎನ್ನ ಪಿಂಡಮಂಡಲದಲ್ಲಿ ದಿವ್ಯತೇಜೋವರುಣ ಕಿರಣಮಯವಾಗಿ, ಒಂದರಲ್ಲಿ ನಿಂದು ಕಾಬುದು ಹಲವಾದಂತೆ, ಎನ್ನ ಮನದ ಮಂದಿರದಲ್ಲಿ ನಿಂದವ ನೀನೊಬ್ಬ ವಿಶ್ವರೂಪಾದೆಯಲ್ಲಾ! ಭೇದಕ್ಕೆ ಅಭೇದ್ಯನಾದೆಯಲ್ಲಾ! ನಿನ್ನನೇನೆಂಬುದಕ್ಕೆಡೆದೆರಪಿಲ್ಲ. ಭಾಗೀರಥಿಯಂತೆ ಆರು ನಿಂದಡೂ ಪ್ರಮಾಳಾದೆಯಲ್ಲಾ! ಎನ್ನ ಮನಕ್ಕೆ ಕಟ್ಟಾಗಿ ನಿಂದೆಯಲ್ಲಾ ಸದಾಶಿವಮೂರ್ತಿಲಿಂಗವೇ!
--------------
ಅರಿವಿನ ಮಾರಿತಂದೆ
ಜೇನುತುಪ್ಪವ ಹೊತ್ತು ಮಾರುವವಳ ಮಡಕೆಯ ಮೇಲೆ ಮೂರು ತುಂಬಿ ಕುಳಿತೈಧಾವೆ. ಒಂದು ತುಂಬಿ ಇದ್ದಿತ್ತು, ಒಂದು ತುಂಬಿ ಹಾರಿತ್ತು, ಒಂದು ತುಂಬಿ ಸತ್ತಿತ್ತು. ಮೂರು ತುಂಬಿ ಅಂದವ ಕಂಡುದಿಲ್ಲ. ಮಡಕೆ ಒಡೆಯಿತ್ತು, ತುಪ್ಪವೊಕ್ಕಿತ್ತು, ಹೊತ್ತವ[ಳು] ಸತ್ತ[ಳು]. ಇದೇನು ಕೃತ್ರಿಮವೆಂದು ಕೇಳುವ ಬನ್ನಿ, ಸದಾಶಿವಮೂರ್ತಿಲಿಂಗವ.
--------------
ಅರಿವಿನ ಮಾರಿತಂದೆ
ಜಂಗಮಲಿಂಗವಾದಲ್ಲಿ ಜಂಗುಳಿಗಳ ಬಾಗಿಲ ಕಾಯದಿರಬೇಕು. ಒಡೆಯನ ಓಲಗವ ಬಂಟ ಕಾಯಬೇಕಲ್ಲದೆ, ಬಂಟನ ನಿಳಯವ ಒಡೆಯ ಕಾಯಬಲ್ಲನೆ? ಇಂತಿವನರಿದು ರಾಜಮಂದಿರದಲ್ಲಿ ಗೃಹಸ್ಥ ಆಶ್ರಮದಲ್ಲಿ ವೇಳೆಯನರಿದು ಭುಂಜಿಸಿಹೆನೆಂಬ ದರಿಸಿನ ಜಂಗುಳಿಗೆ ಜಂಗಮಸ್ಥಲವಿಲ್ಲಾ ಎಂದೆ. ಸದಾಶಿವಮೂರ್ತಿಲಿಂಗವು ಅವರಂಗಕ್ಕೆ ಮುನ್ನವೆ ಇಲ್ಲಾ ಎಂದೆ.
--------------
ಅರಿವಿನ ಮಾರಿತಂದೆ