ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಚಿತ್ತದಲ್ಲಿ ನೆನೆದ ಲೆಕ್ಕವ ಇದಿರಿಟ್ಟು ಬರೆದಲ್ಲದೆ ಅರಿಯಬಾರದು. ಅರಿವು ಘನದಲ್ಲಿ ನಿಂದೆನೆಂದಡೆ ದೃಷ್ಟವಾದ ಲಿಂಗದಲ್ಲಿ ನಿಂದಲ್ಲದೆ ಕಾಣಬಾರದು. ಹೀಗಲ್ಲದೆ, ಆಧ್ಯಾತ್ಮದಲ್ಲಿ ಹೊದ್ದಿನೋಡಿ ಕಂಡೆನೆಂಬ ಬದ್ಧರ ಮಾತ ಹೊದ್ದದಿರಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಚಕ್ಷುಮಯನಾಗಿ, ಚಕ್ಷುರೂಪನಾಗಿ, ಚಕ್ಷುವಿಮುಕ್ಷನಾಗಿ, ವಿಮುಕ್ಷ ಸುಕ್ಷೇತ್ರವಾಗಿ, ವಾಸಮಧ್ಯದಲ್ಲಿ ಆ ಮೂರ್ತಿಯ ಬೆಳಗು ತೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಚಿತ್ತ ನೆನೆದು ವಸ್ತುವೆಂದು ಪ್ರಮಾಳಿಸುವಲ್ಲಿ ವಸ್ತುವಿಗೂ ಚಿತ್ತಕ್ಕೂ ಬಿಟ್ಟಿಹಠಾವಾವುದಯ್ಯಾ? ಉರಿಕಾಷ*ದ ಇರವಿನಂತೆ, ಒಡಲಿಂಗೆ ಎಡೆಯಿಲ್ಲ. ಸದಾಶಿವಮೂರ್ತಿಲಿಂಗಕ್ಕೆ ಉಭಯ ನಾಮವಿಲ್ಲ.
--------------
ಅರಿವಿನ ಮಾರಿತಂದೆ