ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇರುಹೆ ಅಂಜದೆ ಮದ ಸೊಕ್ಕಿದ ಐದಾನೆಯ ತನ್ನ ಕಡೆಗಾಲಿನಲ್ಲಿ ಕಟ್ಟಿ ಸದಮದದಲ್ಲಿ ಎಳೆವುತ್ತದೆ. ಆನೆಯ ಕೊಂಬು ಮುರಿದು, ಸುಂಡಿಲುಡುಗಿ, ಮದ ಸೋರಿ, ಗಜಘಟವಳಿದು ಹೋಯಿತ್ತು. ಇರುಹಿನ ಕಾಲು ಐಗಜವ ಕೊಂದು, ಮೂರು ಹುಲಿಯ ಮುರಿದು, ನನಗಿನ್ನಾರೂ ಅಡಹಿಲ್ಲಾಯೆಂದು ಹೋಯಿತ್ತು, ಸದಾಶಿವಮೂರ್ತಿಲಿಂಗದಲ್ಲಿಗೆ ಎಯ್ದಿತ್ತು.
--------------
ಅರಿವಿನ ಮಾರಿತಂದೆ
ಇಷ್ಟಲಿಂಗ ಪ್ರಾಣಲಿಂಗವೆಂದು ಬೇರೊಂದು ಕಟ್ಟಳೆಯ ಮಾಡಬಹುದೆ ಅಯ್ಯಾ? ಬೀಜವೊಡೆದು ಮೊಳೆ ತಲೆದೋರುವಂತೆ, ಬೀಜಕ್ಕೂ ಅಂಕುರಕ್ಕೂ ಭಿನ್ನವುಂಟೆ ಅಯ್ಯಾ? ಇಷ್ಟದ ಕುರುಹಿನಲ್ಲಿ ಚಿತ್ತ ನಿಂದು ಮಿಕ್ಕ ಗುಣಂಗಳನರಿಯಬೇಕು. ಇದೆ ನಿಶ್ಚಯ ಸದಾಶಿವಮೂರ್ತಿಲಿಂಗವು ತಾನಾಗಿ.
--------------
ಅರಿವಿನ ಮಾರಿತಂದೆ
ಇರು[ಹೆ] ಕಡೆ ಎಂಭತ್ತನಾಲ್ಕು ಲಕ್ಷ ಜೀವ ಅವು ಹುಟ್ಟುವಾಗಲೆ ಸುಖದುಃಖ ಭೋಗಂಗಳ ಕೊಂಡು ಹುಟ್ಟಿದವು. ಇದು ತಪ್ಪದ ದೃಷ್ಟ. ಅರುಹಿರಿಯರೆಲ್ಲರು ಮರೆಯಬೇಡಿ. ಅರಿವಿನ ಹೊನಲ ನೋಡಿಕೊಳ್ಳಿ. ವೇಷಕ್ಕೆ ತಪ್ಪದಂತಾಡಿ ಹೋಗಿ, ಪುರುಷ ಸತ್ತಡೆ ಸತಿ ಮುಂಡೆತನದಂತೆನಿಸಲಾರೆ, ಕಳ್ಳನ ಹೆಂಡತಿಯಂತೆ ತಲ್ಲಳಿಸಲಾರೆ. ನಿಮ್ಮ ಅರಿವಿನ ಹಾನಿ ಎನ್ನ ಇಹಪರದ ಕೇಡು. ಈ ಪದಕ್ಕೆ ನೋಯಬೇಡ, ನೊಂದಡೆ ಸದಾಶಿವಮೂರ್ತಿಲಿಂಗಕ್ಕೆ ಹೊರಗು
--------------
ಅರಿವಿನ ಮಾರಿತಂದೆ
ಇನ್ನೇವೆ ? ನಾ ತಂದ ಬೆಂಕಿಯಲ್ಲಿ ಸರ್ವಾಂಗವಿಷದ ಚೇಳು ಬಿದ್ದು ಬೇವುತ್ತಿದೆ. ಹಿಡಿದು ತೆಗೆದೆಹೆನೆಂದಡೆ ಉರಿ ತಾಗಿದ ಚೇಳು ಎನ್ನ ಹೊಯ್ದಿತ್ತು. ಸತ್ತಿತ್ತೆಂಬ ನೋವು ಬಿಡದು, ಎನಗೆ ವಿಷ ತಾಗಿತ್ತೆಂಬ ಆಸೆ ಬಿಡದು. ಬಿಟ್ಟಡೆ ಸಮಯಕ್ಕೆ ದೂರ, ಹಿಡಿದಡೆ ಜ್ಞಾನಕ್ಕೆ ದೂರ, ಉಭಯದ ಬೇನೆಯಲ್ಲಿ ಬೇವುದು ಸದಾಶಿವಮೂರ್ತಿಲಿಂಗಕ್ಕೆ ದೂರ.
--------------
ಅರಿವಿನ ಮಾರಿತಂದೆ