ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ದರ್ಪಣದ ಒಪ್ಪ ಅತ್ತರೆ ಅತ್ತು, ನಕ್ಕರೆ ನಕ್ಕು ತಾನಾಡಿದಂತೆ ಆಡುವುದು. ಅದು ಒಂದೊ ಎರಡೊ ಎಂಬುದನರಿತಲ್ಲಿ ಸದಾಶಿವಮೂರ್ತಿಲಿಂಗವೊಂದೆ.
--------------
ಅರಿವಿನ ಮಾರಿತಂದೆ
ದಿನದಿನಕ್ಕೆ ಫಲರಸ ಬಲಿವಂತೆ ಮಾಡುವ ಕ್ರೀ ಸನ್ನದ್ಧನಾಗಿ, ಅರಿವ ಅರಿವು ಫಲರಸ ಬಲಿದು ಫಳವಾದಂತೆ ಕ್ರೀ ಜ್ಞಾನದಲ್ಲಿ ನಿಂದು, ಜ್ಞಾನ ಕ್ರೀಯನವಗವಿಸಿದಲ್ಲಿ, ಉಭಯನಾಮ ನಷ್ಟವಾಯಿತ್ತು, ಸದಾಶಿವಮೂರ್ತಿಲಿಂಗವನರಿತಲ್ಲಿ.
--------------
ಅರಿವಿನ ಮಾರಿತಂದೆ
ದತ್ತೂರದ ಬಿತ್ತಿನಲ್ಲಿ ಕಲ್ಪತರು ಹುಟ್ಟಿ, ಕಲ್ಪತರುವಿನ ಅಗ್ರದಲ್ಲಿ ಇಟ್ಟೆಯ ಹಣ್ಣಾಯಿತ್ತು. ಇಟ್ಟೆಯ ಹಣ್ಣು ತೊಟ್ಟುಬಿಟ್ಟು ಬಿದ್ದಲ್ಲಿ ಅಮೃತಮಯವಾಯಿತ್ತು, ಸದಾಶಿವಮೂರ್ತಿಲಿಂಗವನರಿತಲ್ಲಿ.
--------------
ಅರಿವಿನ ಮಾರಿತಂದೆ
ದಾತ ಗುಣ ವರ್ತಕ ಮಾಟ, ಅರಿವ ಗುಣ ವಿಚಾರ ಮಾಟ. ಇಂತೀ ದ್ವಯವನರಿತು, ಕ್ರೀಗೆ ಪದವಾಗಿ ಅರಿವಿಂಗೆ ಆಶ್ರಯವಾಗಿ ಮಾಡುವ ಭಕ್ತನ ಅಂಗ ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ದೀಕ್ಷಾಗುರುವಾದಲ್ಲಿ ತ್ರಿವಿಧದ ಆಸೆಯಿಲ್ಲದಿರಬೇಕು. ಶಿಕ್ಷಾಗುರುವಾದಲ್ಲಿ ಅರಿಗಳಿಗಂಜದೆ ಪ್ರಾಣತ್ಯಾಗನಿಶ್ಚಯನಾಗಿರಬೇಕು. ಮೋಕ್ಷಗುರುವಾದಲ್ಲಿ ಸರ್ವದೋಷ ಸರ್ವೇಂದ್ರಿಯ ನಾಶನಾಗಿರಬೇಕು. ಇಂತೀ ಮೂರು ಮೀರಿ ಬೇರೊಂದರಲ್ಲಿ ನಿಂದು ತ್ಯಾಗಾಂಗ ಭೋಗಾಂಗ ಯೋಗಾಂಗ ತ್ರಿವಿಧಲೇಪವಾಗಿ ನಿಂದುದು ನಿಜಗುರುಸ್ಥಲ. ಆ ಗುರುವಿನ ಕೈಯ ಅನುಜ್ಞೆ ಪರಂಜ್ಯೋತಿ ಪ್ರಕಾಶ. ಅದು ನಿರವಯತತ್ವ, ಸದಾಶಿವಮೂರ್ತಿಲಿಂಗವು ತಾನೇ.
--------------
ಅರಿವಿನ ಮಾರಿತಂದೆ
ದಿವರಾತ್ರಿ ಕೂಡಿ ದಿನ ಲೆಕ್ಕಕ್ಕೆ ಸಂದಂತೆ, ಭಕ್ತಜಂಗಮದ ಯೋಗ ಸಂಭವವಾಗಿ ವಸ್ತುವ ಮುಟ್ಟಿದಲ್ಲಿ, ಕರ್ತೃ ಭೃತ್ಯ ಸಂಬಂಧವಡಗಿತ್ತು ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ