ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಹಾವಾರಿಧಿಯ ತೆರೆಯ ಮಧ್ಯದಲ್ಲಿ ಹುಟ್ಟುವ ಹೊಂದುವ ದಿನಮಣಿಯ ಭೇದದಂತೆ, ತನ್ನ ಚಿತ್ತದ ಅರಿವು ಮರವೆ ಕುರುಹೆಂದು ಪ್ರಮಾಳಿಸದೆ, ಅರಿವೆಂದು ನಿರ್ಧರಿಸದೆ ಎರಡರ ಭೇದದಲ್ಲಿ ಕಂಡು ನಿಂದ ಉಳುಮೆ ಬೆಳಗುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ,
--------------
ಅರಿವಿನ ಮಾರಿತಂದೆ
ಮೂವರ ಹಂಗಿಂದ ಬಂದುದು ಲಿಂಗವಲ್ಲಾ ಎಂದು, ಸರ್ವಭವದಲ್ಲಿ ಬಂದ ಆತ್ಮ ವಸ್ತುವಲ್ಲಾ ಎಂದು, ಮತ್ತಿನ್ನೇನನರಿವಿರಣ್ಣಾ? ಭಾವ ಬಯಲೆಂದಲ್ಲಿ, ಕುರುಹು ಶಿಲೆಯೆಂದಲ್ಲಿ, ಸಿಕ್ಕಿತ್ತು ಮನ ಸಂಕಲ್ಪದಲ್ಲಿ, ಸದಾಶಿವಮೂರ್ತಿಲಿಂಗವನರಿವ ಬಟ್ಟೆಯ ಕಾಣೆ.
--------------
ಅರಿವಿನ ಮಾರಿತಂದೆ
ಮಾಡುವ ಸೇವೆಯನರಿತು ಮಾಡಿಸಿಕೊಂಬುದು ಗುರುಸ್ಥಲ. ನೆಮ್ಮಿದ ನೆಮ್ಮುಗೆಯನರಿತು ಚರಿಸುವುದು ಜಂಗಮಸ್ಥಲ. ಇಂತೀ ಉಭಯದ ಒಡಲನರಿತು ಮಾಡುವುದು ಸದ್ಭಕ್ತಿಸ್ಥಲ. ಆ ಸದ್ಭಕ್ತನಂಗವೆ ಸದಾಶಿವಮೂರ್ತಿಲಿಂಗದ ಒಡಲು.
--------------
ಅರಿವಿನ ಮಾರಿತಂದೆ
ಮಾಡುವಂಗೆ ಅರಿವೆ ಕಾರಣ, ಮಾಡಿಸಿಕೊಂಬವಂಗೆ ಅರಿವೆ ಕಾರಣ, ಸರ್ವಮಯವೆಲ್ಲಕ್ಕು ಅರಿವೆ ಮುಖ್ಯ, ಸದಾಶಿವಮೂರ್ತಿಲಿಂಗಕ್ಕು ಅರಿವೆ ಕಾರಣ.
--------------
ಅರಿವಿನ ಮಾರಿತಂದೆ