ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಚ್ಚಿದಾನಂದ ಸದ್‍ಗುರು ತೋರಿದರೆ ಕಂಡೆನಯ್ಯಾ ಸತ್ಯಸದಾಚಾರವ. ಸಚ್ಚಿದಾನಂದ ಸದ್‍ಗುರು ತೋರಿದರೆ ಕಂಡೆನಯ್ಯಾ ಭಕ್ತಿ ಜಾÕನ ವೈರಾಗ್ಯವ. ಸಚ್ಚಿದಾನಂದ ಸದ್‍ಗುರು ತೋರಿದರೆ ಕಂಡೆನಯ್ಯ ನಿತ್ಯಲಿಂಗಾಂಗಸಂಗಸಮರಸವ. ಸಚ್ಚಿದಾನಂದ ಸದ್‍ಗುರು ತೋರಿಸಿದರೆ ಕಂಡೆನಯ್ಯಾ ಅಖಂಡೇಶ್ವರಾ ನಿಮ್ಮ ಶ್ರೀಚರಣಕಮಲವ.
--------------
ಷಣ್ಮುಖಸ್ವಾಮಿ
ಸದ್ಗುರುಕಾರುಣ್ಯವ ಪಡೆದು ಲಿಂಗಾಂಗಸಮರಸವುಳ್ಳ ವೀರಶೈವ ಭಕ್ತ ಮಹೇಶ್ವರರೆನಿಸಿಕೊಂಡ ಬಳಿಕ ತಮ್ಮಂಗದ ಮೇಲಣ ಲಿಂಗವು ಷಟ್‍ಸ್ಥಾನಂಗಳಲ್ಲಿ ಬ್ಥಿನ್ನವಾದಡೆ ಆ ಲಿಂಗದಲ್ಲಿ ತಮ್ಮ ಪ್ರಾಣವ ಬಿಡಬೇಕಲ್ಲದೆ, ಮರಳಿ ಆ ಬ್ಥಿನ್ನವಾದ ಲಿಂಗವ ಧರಿಸಲಾಗದು. ಅದೇನು ಕಾರಣವೆಂದಡೆ : ತಾನು ಸಾಯಲಾರದೆ ಜೀವದಾಸೆಯಿಂದೆ ಆ ಬ್ಥಿನ್ನವಾದ ಲಿಂಗವ ಧರಿಸಿದಡೆ ಮುಂದೆ ಸೂರ್ಯಚಂದ್ರರುಳ್ಳನ್ನಕ್ಕರ ನರಕಸಮುದ್ರದಲ್ಲಿ ಬಿದ್ದು ಮುಳುಗಾಡುವ ಪ್ರಾಪ್ತಿಯುಂಟಾದ ಕಾರಣ, ಇದಕ್ಕೆ ಸಾಕ್ಷಿ : ``ಶಿರೋ ಯೋನಿರ್ಗೋಮುಖಂ ಚ ಮಧ್ಯಂ ವೃತ್ತಂ ಚ ಪೀಠಕಂ | ಷಟ್‍ಸ್ಥಾನೇ ಛಿದ್ರಯೋಗೇ ತು ತಲ್ಲಿಂಗಂ ನೈವ ಧಾರಯೇತ್ | ತಥಾಪಿ ಧಾರಣಾತ್ ಯೋಗೀ ರೌರವಂ ನರಕಂ ವ್ರಜೇತ್ ||'' -ಸೂP್ಷ್ಞ್ಮ ಗಮ. ಇಂತಪ್ಪ ನರಕಜೀವಿಗಳ ಎನ್ನತ್ತ ತೋರದಿರಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸರ್ವಾಚಾರಸಂಪತ್ತನರಿದಲ್ಲದೆ ನಿರವಯಲಪದವ ಕಾಣಬಾರದು ನೋಡಾ ಆರಿಗೆಯು. ಸರ್ವಾಚಾರಸಂಪತ್ತು ಎಂತೆನಲು, ಷಡ್‍ಭೂತಂಗಳಲ್ಲಿ ಷಡ್ವಿಧ ಮಂತ್ರಂಗಳ ನೆಲೆಗೊಳಿಸಿ, ಆ ಷಡ್ವಿಧ ಮಂತ್ರಂಗಳನೆ ಷಡ್ವಿಧಚಕ್ರಂಗಳೆಂದು ತಿಳಿದು, ಆ ಷಡ್ವಿಧ ಚಕ್ರಂಗಳಿಗೆ ಷಡ್ವಿಧ ಅದ್ಥಿದೈವಂಗಳನೆ ಷಡ್ವಿಧ ಅಂಗವೆಂದಾಧಾರಗೊಳಿಸಿ, ಆ ಷಡ್ವಿಧ ಅಂಗಕ್ಕೆ ಷಡ್ವಿಧ ಕರಣಂಗಳನೆ ಷಡ್ವಿಧ ಹಸ್ತಂಗಳೆಂದು ಅರಿದಳವಡಿಸಿಕೊಂಡು, ಆ ಷಡ್ವಿಧ ಹಸ್ತಂಗಳಿಗೆ ಷಡ್ವಿಧ ಲಿಂಗಂಗಳನಳವಡಿಸಿಕೊಂಡು, ಆ ಷಡ್ವಿಧ ಲಿಂಗಕ್ಕೆ ಷಡ್ವಿಧೇಂದ್ರಿಯಂಗಳನೆ ಷಡ್ವಿಧ ಪದಾರ್ಥಂಗಳೆಂದರಿದು, ಆ ಷಡ್ವಿಧ ಪದಾರ್ಥಂಗಳನು ಷಡ್ವಿಧ ಭಕ್ತಿಯಿಂದೆ ಷಡ್ವಿಧ ಲಿಂಗಮುಖಂಗಳಿಗೆ ಸಮರ್ಪಿಸಲು, ಒಳಹೊರಗೆಲ್ಲ ಆ ಷಡ್ವಿಧ ಲಿಂಗದ ಬೆಳಗು ತುಂಬಿ ತೊಳಗಿ ಬೆಳಗುತಿರ್ಪುದು ನೋಡಾ. ಎಡೆದೆರಹಿಲ್ಲದೆ ಆ ಷಡ್ವಿಧ ಲಿಂಗದ ಬೆಳಗಿನೊಳಗೆ ತನ್ನ ಷಡ್ವಿಧಾಂಗದ ಕಳೆಗಳನೆಲ್ಲವನಡಗಿಸಿ, ತಾನೆಂಬ ಕುರುಹುದೋರದಿರ್ದಡೆ ಅದೇ ಸರ್ವಾಚಾರಸಂಪತ್ತು ನೋಡಾ. ಇಂತಪ್ಪ ಸರ್ವಾಚಾರಸಂಪತ್ತು ನಿಮ್ಮ ಪೂರ್ಣ ಒಲುಮೆಯ ಶರಣರಿಗಲ್ಲದೆ ಉಳಿದವರಿಗಳವಡದಯ್ಯಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಸೋಹಂ ಎಂದಡೆ ಅಂತರಂಗದ ಗರ್ವ; ಶಿವೋಹಂ ಎಂದಡೆ ಬಹಿರಂಗದ ಅಹಂಕಾರ ; ಈ ಉಭಯವನಳಿದು ದಾಸೋಹಂ ಎಂದಡೆ ಪರಮಪದವು. ಇದು ಕಾರಣ, ಎನಗೆ ದಾಸೋಹಂ ಭಾವವನೆ ಕರುಣಿಸಿ ಬದುಕಿಸಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸಾಕುಮಾಡದು ಭವಬಂಧನಂಗಳ, ನೂಕಿಬಿಡದು ಸಕಲಸಂಸಾರವ, ಬೇಕೆಂದೆಳಸುವುದು ವಿಷಯಭೋಗಕ್ಕೆ, ಶಿವಶಿವಾ, ಈ ಕಾಕುಮನಕ್ಕೆ ಏನುಮಾಡಲಿ ? ಹರಹರಾ, ಈ ಕಳ್ಳಮನಕ್ಕೆ ಎಂತುಮಾಡಲಿ ? ಅಖಂಡೇಶ್ವರಾ, ನಿಮ್ಮ ಕೃಪಾವಲೋಕನದಿಂದ ನೋಡಿ ಪಾಲಿಪುದಯ್ಯ ಎನ್ನ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಷಣ್ಮುಖಸ್ವಾಮಿ
ಸಕಲೇಂದ್ರಿಯಂಗಳ ಪ್ರಪಂಚು ನಾಸ್ತಿಯಾಗಿರಬಲ್ಲಡೆ ಕಕ್ಷದಲ್ಲಿ ಧರಿಸುವುದಯ್ಯಾ ಶಿವಲಿಂಗವ. ಕಾಂಚನಕ್ಕೆ ಕೈಯಾನದಿರ್ದಡೆ ಕರಸ್ಥಲದಲ್ಲಿ ಧರಿಸುವುದಯ್ಯ ಶಿವಲಿಂಗವ. ಪರಸ್ತ್ರೀಯರ ಅಪ್ಪುಗೆ ಇಲ್ಲದಿರ್ದಡೆ ಉರಸ್ಥಲದಲ್ಲಿ ಧರಿಸುವುದಯ್ಯ ಶಿವಲಿಂಗವ. ಎಂದೆಂದೂ ಹುಸಿಯನಾಡದಿರ್ದಡೆ ಜಿಹ್ವಾಪೀಠದಲ್ಲಿ ಧರಿಸುವುದಯ್ಯ ಶಿವಲಿಂಗವ. ಅನ್ನಪಾನಂಗಳಿಗೆ ಬಾಯ್ದೆರೆಯದಿರ್ದಡೆ ಅಮಳೋಕ್ಯದಲ್ಲಿ ಧರಿಸುವುದಯ್ಯ ಶಿವಲಿಂಗವ. ಅನ್ಯರಾಜರಿಗೆ ತಲೆವಾಗದಿರ್ದಡೆ ಉತ್ತಮಾಂಗದಲ್ಲಿ ಧರಿಸುವುದಯ್ಯ ಶಿವಲಿಂಗವ. ಇಂತೀ ಷಡ್‍ವಿಧಾಚಾರ ನೆಲೆಗೊಂಡು ಷಡ್‍ವಿಧ ಸ್ಥಾನದಲ್ಲಿ ಶಿವಲಿಂಗವ ಧರಿಸಬಲ್ಲಡೆ, ಭಕ್ತನೆಂಬೆನು, ಮಹೇಶ್ವರನೆಂಬೆನು, ಪ್ರಸಾದಿಯೆಂಬೆನು, ಪ್ರಾಣಲಿಂಗಿಯೆಂಬೆನು, ಶರಣನೆಂಬೆನು, ಐಕ್ಯನೆಂಬೆನು. ಇಂತೀ ಭೇದವನರಿಯದೆ ಲಿಂಗವ ಧರಿಸಿದಡೆ ಮಡಿಲಲ್ಲಿ ಕಲ್ಲ ಕಟ್ಟಿಕೊಂಡು ಕಡಲ ಬಿದ್ದಂತಾಯಿತ್ತು ಕಾಣಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸಿರಿ ಬಂದೊದಗಿತ್ತೆಂದು ಹಿರಿದಾಗಿ ಹಿಗ್ಗಬೇಡ. ಸಿರಿಯೆಂಬುದು ಕನಸಿನಪರಿಯಂತೆ ಕಂಡೆಯಾ ಎಲೆ ಮರಳು ಮಾನವಾ. ಇದನರಿತು ನಂಬಿ ಶ್ರೀ ಮಹಾದೇವನ ಪೂಜಿಸಿದರೆ ಸ್ಥಿರವಾದ ಪದವನೀವ ನಮ್ಮ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ಸಕಲವೇದಶಾಸ್ತ್ರಾಗಮ ಪುರಾಣಂಗಳೆಲ್ಲ ಶಿವಮಂತ್ರದಲ್ಲಿ ಜನಿಸಿದುವಯ್ಯ. ಸಕಲತತ್ವಶಕ್ತಿಮೂರ್ತಿಗಳೆಲ್ಲ ಶಿವಮಂತ್ರದಲ್ಲಿ ಜನಿಸಿದುವಯ್ಯ. ಸಕಲಭುವನ ಬ್ರಹ್ಮಾಂಡ ಸಚರಾಚರಂಗಳೆಲ್ಲ ಶಿವಮಂತ್ರದಲ್ಲಿಯೇ ಜನಿಸಿದುವಯ್ಯ. ವೃಕ್ಷಬೀಜನ್ಯಾಯದಂತೆ ಸಕಲವಿಸ್ತಾರವನೊಳಗೊಂಡಿರ್ಪ ಪರಮ ಶಿವಮಂತ್ರವ ನೆನೆನೆನೆದು ಎನ್ನ ಮನದ ಮುಂದಣ ಮರವೆಯ ಹರಿದು ಭವಸಾಗರವ ದಾಂಟಿದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸದ್‍ಭಕ್ತರೇ ಎನ್ನ ತಂದೆ ತಾಯಿಗಳಯ್ಯ. ಸದ್‍ಭಕ್ತರೇ ಎನ್ನ ಬಂಧು ಬಳಗವಯ್ಯ. ಸದ್‍ಭಕ್ತರೇ ತಮ್ಮ ಒಕ್ಕುಮಿಕ್ಕುದನಿಕ್ಕಿ ಸಲಹಿದರಾಗಿ ಅಖಂಡೇಶ್ವರಾ, ನಾ ನಿಮ್ಮ ಕಡೆಯ ಬಾಗಿಲ ಕಾಯ್ವುದಕೆ ಯೋಗ್ಯನಾದೆನಯ್ಯ.
--------------
ಷಣ್ಮುಖಸ್ವಾಮಿ
ಸಟೆಯನಾಡದಾತ ಭಕ್ತ. ಕುಟಿಲ ಕುಹಕವ ಮರೆದಾತ ಭಕ್ತ. ನಿಟಿಲಾಕ್ಷನ ಧ್ಯಾನದಲ್ಲಿ ಇದ್ದಾತ ಭಕ್ತ. ನಮ್ಮ ಅಖಂಡೇಶ್ವರನ ಭಕ್ತಿಭಾವದಲ್ಲಿದ್ದಾತನೇ ಸದ್ಭಕ್ತ ನೋಡಾ.
--------------
ಷಣ್ಮುಖಸ್ವಾಮಿ
ಸ್ನೇಹ ಸಮರಸ ಮೋಹವಿರಬೇಕು ಗುರುವಿನಲ್ಲಿ. ಸ್ನೇಹ ಸಮರಸ ಮೋಹವಿರಬೇಕು ಲಿಂಗದಲ್ಲಿ. ಸ್ನೇಹ ಸಮರಸ ಮೋಹವಿರಬೇಕು ಜಂಗಮದಲ್ಲಿ. ಸ್ನೇಹ ಸಮರಸ ಮೋಹವಿರಬೇಕು ಪಾದೋದಕ ಪ್ರಸಾದದಲ್ಲಿ. ಸ್ನೇಹ ಸಮರಸ ಮೋಹವಿರಬೇಕು ಶರಣಜನ ಶಿವಭಕ್ತರಲ್ಲಿ. ಇಂತಿವರಲ್ಲಿ ಸ್ನೇಹಸಮರಸ ಮೋಹವನುಳ್ಳ ಸದ್‍ಭಕ್ತರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸಾವಯವ ನಿರವಯವನಲ್ಲ ನೋಡಾ ಲಿಂಗೈಕ್ಯನು. ಗಮನಿಯಲ್ಲ ನಿರ್ಗಮನಿಯಲ್ಲ ನೋಡಾ ಲಿಂಗೈಕ್ಯನು. ಸುಮನಸಾರಾಯ ಸುಜ್ಞಾನಭರಿತನು ನೋಡಾ ಲಿಂಗೈಕ್ಯನು. ಅಮಲಬ್ರಹ್ಮದ ಕೂಟದ ಅಚಲಿತ ಅಭೇದ್ಯನು ನೋಡಾ ಲಿಂಗೈಕ್ಯನು. ಅದ್ವಯಭಾವ ಅಗಣಿತ ಮಹಿಮನು ನೋಡಾ ಅಖಂಡೇಶ್ವರಾ ನಿಮ್ಮ ನಿಜಲಿಂಗೈಕ್ಯನು.
--------------
ಷಣ್ಮುಖಸ್ವಾಮಿ
ಸಕಲ ಸಾಧನಂಗಳಿಲ್ಲದೆ ಬಹುಪ್ರಯಾಸವಿಲ್ಲದೆ ಅತಿ ಸುಲಭದಲ್ಲಿಯೆ ಜೀವನ್ಮುಕ್ತಿಯನೀವ ಅಮನಸ್ಕಯೋಗವೆಂತೆನೆ : ಅಂತರಂಗದ ಮನಮಂ ನೆನೆಯದಂತೆ ಮುದ್ರಿಸಿ ನಿರ್ಲಕ್ಷ್ಯದೊಳ್ನಿಲುವುದೆ ಅಮನಸ್ಕರಾಜಯೋಗ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸುಖ ಬಂದಲ್ಲಿ ನಿಮ್ಮ ಹಾಡಿಹರಸುವೆನಯ್ಯ. ದುಃಖ ಬಂದಲ್ಲಿ ನಿಮ್ಮ ಕೋಪಿಸಿ ಬಯ್ವೆನಯ್ಯ. ಅದೇನು ಕಾರಣವೆಂದೊಡೆ : ಎನ್ನ ಸುಖದುಃಖಂಗಳಿಗೆ ನೀವೆ ಆಧಾರವಾದ ಕಾರಣ, ನಿಮ್ಮನೆ ಹಾಡುವೆನಯ್ಯ; ನಿಮ್ಮನೆ ಹೊಗಳುವೆನಯ್ಯ. ನಿಮ್ಮ ಮುಂದೆ ಎನ್ನ ಒಡಲ ಕಡು ದುಃಖವನೀಡಾಡುವೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣ ಅಖಂಡವೆಂಬ ಆರು ಲಕ್ಷಣಯುಕ್ತವಾದ ಮಹಾಲಿಂಗವೇ ಪತಿ, ನಾನೇ ಶರಣಸತಿ ಎಂಬ ದೃಢಬುದ್ಧಿ ನಿಶ್ಚಲವಾಗಿರಬೇಕು. ಮತ್ತೆ ತಾನೇ ಸರ್ವಾಧಾರ ಪರಮಸ್ವತಂತ್ರನು ಎಂಬ ಭಾವ ಇಂಬುಗೊಂಡಿರಬೇಕು. ಅಂಗಭೋಗೋಪಭೋಗಂಗಳೆಲ್ಲ ಹಿಂದುಳಿದಿರಬೇಕು. ಲಿಂಗಭೋಗೋಪಭೋಗಂಗಳೆಲ್ಲ ಮುಂದುಗೊಂಡಿರ್ಪಾತನೆ ಶರಣ ನೋಡಾ ! ಅದೆಂತೆಂದೊಡೆ : ``ಪತಿರ್ಲಿಂಗಂ ಸತೀಚಾಹಂ ಹೃದಿಯುಕ್ತಃ ಸ್ವಯಂ ಪ್ರಭುಃ | ಪಂಚೇಂದ್ರಿಯ ಸುಖಂ ನಾಸ್ತಿ ಶರಣಸ್ಥಲಮುತ್ತಮಮ್ ||'' ಎಂದುದಾಗಿ, ಇಂತಪ್ಪ ಮಹಾಶರಣರ ಸಂಗದಲ್ಲಿರಿಸಿ ಸಲಹಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸತ್ಯಸದಾಚಾರಿಯಯ್ಯಾ ನಿಮ್ಮ ಶರಣ . ನಿತ್ಯನಿರುಪಮನಯ್ಯಾ ನಿಮ್ಮ ಶರಣ . ಭಕ್ತಿಭಾವಕನಯ್ಯಾ ನಿಮ್ಮ ಶರಣ . ಯುಕ್ತಿವಿಚಾರನಯ್ಯಾ ನಿಮ್ಮ ಶರಣ . ಮುಕ್ತಿಮೂಲಿಗನಯ್ಯಾ ನಿಮ್ಮ ಶರಣ . ಅಖಂಡೇಶ್ವರಾ, ನಿಮ್ಮ ಶರಣನ ಘನವ ನೀವೇ ಬಲ್ಲಿರಲ್ಲದೆ ಲೋಕದ ಕುನ್ನಿಮಾನವರೆತ್ತ ಬಲ್ಲರಯ್ಯಾ .
--------------
ಷಣ್ಮುಖಸ್ವಾಮಿ
ಸಕಲ ವ್ಯಾಪಾರವ ಬಿಟ್ಟು ನಿಮಗೆ ನಾನು ಮರುಳಾಗಿರ್ಪೆನಯ್ಯಾ. ಸಕಲ ವ್ಯಾಪಾರವ ಬಿಟ್ಟು ನನಗೆ ನೀವು ಮರುಳಾಗಿರ್ಪಿರಯ್ಯಾ ನಿಮಿಷ ನಿಮಿಷಾರ್ಧ ನಾ ನಿಮ್ಮನಗಲದಿರ್ಪೆನಯ್ಯಾ. ನೀವೆನ್ನ ನಿಮಿಷ ನಿಮಿಷಾರ್ಧವಗಲದಿರ್ಪಿರಯ್ಯಾ. ಚಿನ್ನ ಬಣ್ಣದಂತೆ ನಾವಿಬ್ಬರು ಕೂಡಿ ಎಂದೆಂದಿಗೂ ಅಗಲದಂತಿರ್ಪೆವಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸಕಲ ಗಣಂಗಳು ತಮ್ಮ ವಚನಾನುಭಾವವೆಂಬ ಪರಮಾಮೃತವನು ಎನ್ನ ಕರ್ಣವೆಂಬ ಕುರುಹ ಕಟ್ಟಿ ಎರಕವೆರೆಯಲು, ಅದು ಮನದಲ್ಲಿ ಮೂರ್ತಿಯಾಗಿ ಒಳಗೆ ಪ್ರಾಣಲಿಂಗವಾಯಿತ್ತು ; ಹೊರಗೆ ಇಷ್ಟಲಿಂಗವಾಯಿತ್ತು. ಎನ್ನೊಳಹೊರಗೆ ಭರಿತವಾದ ಅಖಂಡೇಶ್ವರನೆಂಬ ಪರಶಿವನು ನುಡಿಸಿದಂತೆ ನುಡಿದೆನಲ್ಲದೆ ಎನ್ನ ಮನಕ್ಕೆಬಂದಂತೆ ನುಡಿಯಲಿಲ್ಲ ಕೇಳಿರೆ.
--------------
ಷಣ್ಮುಖಸ್ವಾಮಿ
ಸಿರಿವಂತರೆಂದು ಹೇಳುವವರ ದರಿದ್ರಕ್ಕೆ ಒಳಗುಮಾಡಿ ಕಾಡಿತ್ತು ನೋಡಾ ನಿಮ್ಮ ಮಾಯೆ. ನಿಃಕಾಮಿಗಳೆಂದು ಹೇಳುವವರ ಕಾಮದಕತ್ತಲೆಯಲ್ಲಿ ಕೆಡಹಿ ಕಾಡಿತ್ತು ನೋಡಾ ನಿಮ್ಮ ಮಾಯೆ. ಪುರುಷನ ಕಣ್ಣ ಮುಂದೆ ಸ್ತ್ರೀಯಾಗಿ ಸುಳಿದಾಡಿ ಕಾಡಿತ್ತು ನೋಡಾ ನಿಮ್ಮ ಮಾಯೆ. ಸ್ತ್ರೀಯ ಕಣ್ಣಮುಂದೆ ಪುರುಷನಾಗಿ ಸುಳಿದು ಕಾಡಿತ್ತು ನೋಡಾ ನಿಮ್ಮ ಮಾಯೆ. ಸತ್ಯವಂತರೆಂದು ಹೇಳುವವರ ಅಸತ್ಯಕ್ಕೆ ಒಳಗು ಮಾಡಿ ಕಾಡಿತ್ತು ನೋಡಾ ನಿಮ್ಮ ಮಾಯೆ. ಹಿರಿಯರೆಂದು ಹೇಳುವವರ ಕಿರಿಯತನಕ್ಕೆ ಒಳಗು ಮಾಡಿ ಕಾಡಿತ್ತು ನೋಡಾ ನಿಮ್ಮ ಮಾಯೆ. ನಿತ್ಯವೆಂದು ಹೇಳುವವರ ಅನಿತ್ಯಕ್ಕೆ ಒಳಗು ಮಾಡಿ ಕಾಡಿತ್ತು ನೋಡಾ ನಿಮ್ಮ ಮಾಯೆ. ಇಂತೀ ಜಗವೆಲ್ಲವ ನುಂಗಿ ಜಾಳಿಸುತಿರ್ಪ ನಿಮ್ಮ ಮಾಯದೇಳಿಗೆಯ ಗೆಲುವಡೆ ಆರಳವಲ್ಲ ಅಖಂಡೇಶ್ವರಾ, ನೀವು ಕರುಣೆಹುಟ್ಟಿ ಒಲಿಯದನ್ನಕ್ಕ.
--------------
ಷಣ್ಮುಖಸ್ವಾಮಿ
ಸತ್ಯಾಸತ್ಯವೆಂದು ವಿವರಿಸಿ ತಿಳಿದು ಅಸತ್ಯವ ಕಳೆದು ಸತ್ಯವ ಸಾಧಿಸಬಲ್ಲಡೆ ಘನಲಿಂಗದೇವರೆಂಬೆನು. ನಿತ್ಯಾನಿತ್ಯವೆಂದು ವಿವರಿಸಿ ತಿಳಿದು ಅನಿತ್ಯವ ಕಳೆದು ನಿತ್ಯವ ಹಿಡಿಯಬಲ್ಲಡೆ ಘನಲಿಂಗದೇವರೆಂಬೆನು. ಪುಣ್ಯಪಾಪವೆಂದು ವಿವರಿಸಿ ತಿಳಿದು ಪಾಪವ ಕಳೆದು ಪುಣ್ಯವ ಗ್ರಹಿಸಬಲ್ಲಡೆ ಘನಲಿಂಗದೇವರೆಂಬೆನು. ಧರ್ಮಕರ್ಮವೆಂದು ವಿವರಿಸಿ ತಿಳಿದು ಕರ್ಮವ ಕಳೆದು ಧರ್ಮವ ಬಿಡದಿರಬಲ್ಲಡೆ ಘನಲಿಂಗದೇವರೆಂಬೆನು. ಆಚಾರ ಅನಾಚಾರವೆಂದು ವಿವರಿಸಿ ತಿಳಿದು ಅನಾಚಾರವ ಕಳೆದು ಆಚಾರಸಂಪನ್ನನಾಗಬಲ್ಲಡೆ ಘನಲಿಂಗದೇವರೆಂಬೆನು. ಇಂತೀ ಉಭಯದ ನ್ಯಾಯವನರಿಯದೆ ಸಟೆಯನೆ ದಿಟವ ಮಾಡಿ ದಿಟವನೆ ಸಟೆಯಮಾಡಿ ಘಟವ ಹೊರೆವ ಕುಟಿಲ ಕುಹಕರ ತುಟಿಯತನಕ ಮೂಗಕೊಯ್ದು ಕಟವಾಯ ಸೀಳಿ ಕನ್ನಡಿಯ ತೋರಿ ಕಷ್ಟಜನ್ಮದಲ್ಲಿ ಹುಟ್ಟಿಸದೆ ಬಿಡುವನೆ ನಮ್ಮ ಅಖಂಡೇಶ್ವರ ?
--------------
ಷಣ್ಮುಖಸ್ವಾಮಿ
ಸತ್ತು ಹುಟ್ಟುವನಲ್ಲ ನೋಡಾ ಮಹೇಶ್ವರನು. ಹುಟ್ಟಿ ಸಾವವನಲ್ಲ ನೋಡಾ ಮಹೇಶ್ವರನು. ಇಹಲೋಕದ ಭೋಗವ ಬಯಸುವನಲ್ಲ ನೋಡಾ ಮಹೇಶ್ವರನು. ಪರಲೋಕದ ಮೋಕ್ಷವ ಬಯಸುವನಲ್ಲ ನೋಡಾ ಮಹೇಶ್ವರನು. ಇಹಪರವ ಹೊದ್ದದ ಧೀರನು. ಹಿಂದುಮುಂದೆಂಬ ದ್ವಂದ್ವಕರ್ಮಂಗಳ ಮೀರಿದ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸಕಲಮೂರ್ತಿಯಾಗಿ ಇಷ್ಟಲಿಂಗವಾಯಿತ್ತು. ನಿಷ್ಕಲಮೂರ್ತಿಯಾಗಿ ಪ್ರಾಣಲಿಂಗವಾಯಿತ್ತು. ಕೇವಲ ನಿರವಯಮೂರ್ತಿಯಾಗಿ ಭಾವಲಿಂಗವಾಯಿತ್ತು. ಸಕಲಮೂರ್ತಿಗೆ ಕ್ರಿಯೆ, ನಿಷ್ಕಲಮೂರ್ತಿಗೆ ಜ್ಞಾನ, ಕೇವಲ ನಿರವಯಮೂರ್ತಿಗೆ ಆನಂದ, ಸ್ಥೂಲವೇ ಕಾಯ, ಸೂಕ್ಷ್ಮವೇ ಪ್ರಾಣ, ಕಾರಣವೇ ವಸ್ತು. ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯವೆಂಬವು ಸೂಕ್ಷ್ಮದ ಷಡ್ವಿಧಲಿಂಗವು. ಇವಕ್ಕೆ `ಓಂ ನಮಃಶಿವಾಯ' ಎಂಬುದೇ ತೃಪ್ತಿ. ಸಂತೋಷವೇ ಕಾರಣ, ಮಹಾಕಾರಣವೇ ಪರಿಣಾಮ. ತೂರ್ಯಾತೀತವಾಗಿ ಸರ್ವಕೇಳಿಕೆಯಂ ಕೇಳಿ ನಿಜಾನಂದವಾಗಿಹುದು. ವಿರಾಟವೇ ಸುನಾದವಾಗಿ ಹೊರಬಿದ್ದು ನುಡಿದು ಭೇರಿನಾದದಂತೆ ಆಕಾಶಧ್ವನಿಯಂತೆ ತನಗೆ ತಾನೇ ಕೇಳುವುದು. ಹಿರಣ್ಯಗರ್ಭಬಿಂದುವಿನ ಮನೆಯಲ್ಲಿ ಗಾಳಿಪಟಕ್ಕೆ ಬೇರಬಿರಿಕೆಯ ಕಟ್ಟಿ ನುಡಿಸುವ ತೆರದಂತೆ ತೇಜವಾಗಿ ಶಂಖದ ಧ್ವನಿಯಂತೆ ತೋರುತಿರ್ಪ ಸುನಾದಕ್ಕೆ ಎರಡಂಗುಲದ ಮೇಲೆ ತೇಜವಿಹುದು. ಅದು ತುಂಬಿದ ಹುಣ್ಣಿಮೆಯ ಬೆಳದಿಂಗಳಂತೆ, ಚಂದ್ರಜ್ಯೋತಿಯ ಪ್ರಭೆಯಂತೆ, ಹೂಬಿಸಿಲಿನಂತೆ ತೋರುತಿರ್ಪುದು. ಕಳೆಯ ಮನೆಯಲ್ಲಿ ಎರಡಂಗುಲ ಪ್ರಮಾಣ. ಮೂಲಪ್ರಕೃತಿ ಮೂಗಿನಮೇಲೆ ಭ್ರೂಮಧ್ಯ ಪ್ರಣವದಲ್ಲಿ ಓಂಕಾರಧ್ವನಿಯ ಝೇಂಕಾರದಂತೆ, ಘಂಟೆಯ ಬಾರಿಸಿದಂತೆ, ತಟತಟನೆ ಹಾರಿ ಅದು ಭ್ರೂಮಧ್ಯಸ್ಥಾನದಲ್ಲಿ ತೋರುವುದು. ನಾದವೇ ಶಬ್ದ, ನಿಃಶಬ್ದವೇ ಬಿಂದುಮಯ. ನಾದದೊಳಗಿರ್ದ ನಾದವೇ ಓಂಕಾರ. ಚಿಜ್ಜ್ಯೋತಿಯ ಪ್ರಕಾಶ ಭ್ರೂಮಧ್ಯದ ಪಣೆಯ ಮೇಲೆ ಎರಡಂಗುಲದಲ್ಲಿ ಕಾಣಿಸುತ್ತಿಹುದು. ಅದು ಮನದಿಂದೆ ಕಂಡಿತೋ ಕಣ್ಣಿನಿಂದ ಕಂಡಿತೋ ಎಂದಡೆ, ನೆನಹು ಎಂಬ ಅಂತಃಕರಣ ಓಂ ನಮಃಶಿವಾಯ ಎಂಬ ಪ್ರಣವಜ್ಯೋತಿಯ ತೋರಿತ್ತು. ಚಿತ್ತದ ತೋರಿಕೆ ಅರವತ್ತಾರುಕೋಟಿ ಪ್ರಣವಜ್ಯೋತಿಯ ಕಿರಣದಲ್ಲಿ ತೇರಿನ ಬದಿಯ ಬಿರಿಸಿನೋಪಾದಿಯ ನೆನಹು ಮಾತ್ರಕ್ಕೆ ತೋರುತ್ತಿಹುದು. ಹೊರದೃಷ್ಟಿಯ ಒಳಗಿಟ್ಟು, ಒಳದೃಷ್ಟಿಯ ಹೊರಗಿಟ್ಟು ಪರಿಪೂರ್ಣವಾಗಲು, ಒಳಹೊರಗೆ ನೋಡುವ ಶಿವಶರಣರ ಮನ ಭಾವಕ್ಕೆ ಆನಂದವೇ ತೋರುತ್ತಿಹುದು. ದಿನಕರನ ಕಾಂತಿ, ಮಧ್ಯಾಹ್ನದ ಬಿಸಿಲು, ಅಂತರಂಗದ ಛಾಯೆಯಂತೆ, ನಿರ್ಮಲವಾದ ದರ್ಪಣದ ಪ್ರತಿಬಿಂಬದಂತೆ, ತನ್ನ ರೂಪಂಗಳ ತಾನೆ ನೋಡಿದಾತನು ಜೀವನ್ಮುಕ್ತನು. ಆತ ಭವದಬಳ್ಳಿಯ ಹರಿದು ನಿತ್ಯಾನಂದ ನಿರ್ಮಳ ನಿರಾವರಣ ನಿಜ ಚಿನ್ಮಯನಾಗಿಹನು. ಇನ್ನು `ಓಂ ನಮಃಶಿವಾಯ' ಎಂಬ ಊಧ್ರ್ವಪ್ರಣವ. ಅಳ್ಳನೆತ್ತಿಯ ಸ್ಥಾನದಲ್ಲಿ ಅರುಹಿನ ಮನೆಯುಂಟು. ಅದಕ್ಕೆ ತಟಿಮಂತ್ರ. ಅಂತರಂಗದ ಬಾಯಲ್ಲಿ ಎಡಬಲವು ಎರಡು ಕರ್ಣದ್ವಾರಂಗಳಲ್ಲಿ ನುಡಿಯ ಕೇಳಿದಡೆ ಸುನಾದವಾಯಿತ್ತು. ಅದು ದಶನಾದಂಗಳಿಂದೆ ಶರಧಿ ನಿರ್ಝರ ಮೇಘ ಮುರಜ ಭೇರಿ ಕಹಳೆ ಘಂಟೆ ಶಂಖ ವೀಣೆ ಭ್ರಮರನಾದಂಗಳೆಂಬ ದಶನಾದಂಗಳನು ಗುರುಮುಖದಿಂದರಿತು ಹಗಲಿರುಳು ಆ ದಶನಾದಂಗಳೊಳಗಾದ ಸುನಾದವನು ಎಡೆದೆರಹಿಲ್ಲದೆ ಲಾಲಿಸಿ ಕೇಳುವುದು ಶಿವಯೋಗೀಶ್ವರರು. ಅದು ಪ್ರಸಾದಲಿಂಗಸ್ಥಲ, ವಿಶುದ್ಧಿಯ ಮನೆ ; ಶರಣಸ್ಥಲ. ಆ ಸ್ಥಲದಲ್ಲಿ ನಾದವ ಕೇಳಿದವರಿಗೆ ಜಾಗ್ರ ಸ್ವಪ್ನ ಸುಷುಪ್ತಿಗಳೆಂಬ ಮೂರವಸ್ಥೆಗಳು, ತನುತ್ರಯಂಗಳು ತೂರ್ಯದಲ್ಲಿ ಹರಿದುಹೋಗುವವು. ಸುನಾದದಲ್ಲಿ ಮನಸ್ಸಿಟ್ಟಡೆ ಓಂ ನಮಃಶಿವಾಯ ಎಂಬ ಪ್ರಣವನಾದವ ಕೇಳಿದವರಿಗೆ ಸ್ವಪ್ನವು ಎಂದಿಗೂ ತೋರದು. ಇರುಹೆ ಸುಳಿದಡೆ ಎಚ್ಚರಿಕೆ, ದಿಗಿಲುಭುಗಿಲೆಂದಡೆ ನೀನಾರೆಲಾ ಎಂದು ಮಾತನಾಡಿಸಿಬಿಡುವನು. ಆ ಪ್ರಣವಘೋಷ ಸತ್ತೆನೆಂಬಂತೆ ದಿವಸ ಹನ್ನೆರಡು ತಾಸಿನೊಳಗೆ ತನುವ ಬಿಡುವ ಸಮಯದಲ್ಲಿ, ಆ ಘೋಷ ನಿರ್ಘೋಷವಾಗಿ ನಾದ ನುಡಿಯದು. ಅದು ಲಕ್ಷವಿಟ್ಟು ನೋಡಿದಡೆ ತೋರುವುದು. ಅಂಗುಲ ಪ್ರಮಾಣವಾಗಿ ವಸ್ತುವು ಅಂಗುಷ್ಟಕ್ಕೆ ಬರುವುದು. ವೃಕ್ಷವನೇರಿದ ಸರ್ಪನಂತೆ ಬ್ರಹ್ಮರಂಧ್ರದ ಕೊನೆಗೇರುವುದು. ಹೆದ್ದುಂಬಿಯ ಕೊಳವಿಯೋಪಾದಿಯಲ್ಲಿ ವಸ್ತುವು ಅಳ್ಳಿನೆತ್ತಿಯ ಸ್ಥಾನದಲ್ಲಿ ಏರಿ ಹೋಗುವುದು. ಈ ಮನೆಯ ಶಿವಶರಣ ಬಲ್ಲ. ಇದು ಹನ್ನೆರಡು ತಾಸು ಪುರಸತ್ತಿಗೆಯ ಹೇಳಿದ ಅರುಹು. ಇಂತಪ್ಪ ವಸ್ತುವಿನ ನಿಲುಕಡೆಯ ಬಲ್ಲ ಶರಣನು. ತನ್ನವಸಾನಕಾಲದ ಎಚ್ಚರಿಕೆಯನರಿದು, ಗೋವು ಮಲಗುವಷ್ಟು ಧರಣಿಯ ಸಾರಣಿಯ ಮಾಡುವುದು. ಗೋಮಯ ಗೋಮೂತ್ರ ಗೋಕ್ಷೀರ ಗೋದಧಿ ಗೋಘೃತ ಗೋರೋಚನ ಎಂಬ ಷಡುಸಮ್ಮಾರ್ಜನೆಯ ಮಾಡುವುದು. ಶಿವಜಂಗಮದ ಧೂಳಪಾದಾರ್ಚನೆಯ ಉದಕಮಂ ನೀಡಿ ಸಮ್ಮಾರ್ಜನೆಯ ಮಾಡುವುದು. ರಂಗವಲ್ಲಿಯ ತುಂಬುವುದು, ಭಸ್ಮವ ತಳೆವುದು. ಪಾದೋದಕ ಪ್ರಸಾದಮಂ ಸಲಿಸಿ, ಶಿವಗಣಂಗಳಿಗೆ ವಂದನೆಯ ಮಾಡಿ, ಆ ಸಮ್ಮಾರ್ಜನೆಯ ಮಾಡಿದ ಗದ್ಗುಗೆಯ ಮೇಲೆ ಮುಹೂರ್ತವ ಮಾಡಿ, `ಓಂ ನಮಃಶಿವಾಯ' ಎಂಬ ಪ್ರಣವಸ್ಮರಣೆಯ ಮಾಡುವುದು. ಹಸ್ತದಲ್ಲಿ ಇಷ್ಟಲಿಂಗವ ಹಿಡಿದುಕೊಂಡು ಇರವಂತಿಗೆ ಸೇವಂತಿಗೆ ಮೊಲ್ಲೆ ಮಲ್ಲಿಗೆ ಜಾಜಿ ಕರವೀರ ಸುರಹೊನ್ನೆ ಸಂಪಿಗೆ ಮರುಗ ಪಚ್ಚೆ ದವನ ಬಿಲ್ವಪತ್ರೆ ಮೊದಲಾದ ಸಮಸ್ತ ಪುಷ್ಪ ಪತ್ರೆಗಳ ಧರಿಸಿ, ಆ ಶಿವಲಿಂಗವನು ಮನವೊಲಿದು ಕಂಗಳ ತುಂಬಿ ನೋಡುತ್ತ, ದೇವಭಕ್ತರು ಬಂದಡೆ ಶರಣಾರ್ಥಿ ಎಂದು, ಮಜ್ಜನವ ನೀಡಿಸಿ, ವಿಭೂತಿಯ ಧರಿಸಿ, ಪುಷ್ಪಪತ್ರೆಗಳ ಧರಿಸಿ ಎಂದು ಅವರ ಪಾದವಿಡಿದು, ಶರಣಾರ್ಥಿ ಸ್ವಾಮಿಗಳಿಗೆ ಎಂದು ಹೇಳಿ, ಶಿವಾರ್ಪಣವ ಮಾಡಿ ಎಂದು ಬಿನ್ನಹವ ಮಾಡುವುದು. ಮದುವೆ ಮಾಂಗಲ್ಯ ಅರ್ತಿ ಉತ್ಸಾಹ ಶಿಶುವಿನ ಹೆಸರಿಡುವ ಹಾಗೆ ಹರುಷ ಪರುಷ ಧೈರ್ಯವೇ ಭೂಷಣವಾಗಿ ನಿರೋಧಂಗಳ ಮಾಡದೆ ``ಓಂ ನಮಃಶಿವಾಯ' ಎಂಬ ಮಂತ್ರ ಭೋರ್ಗರೆಯೆ ನಿರ್ಮಲ ನೈಷಿ*ಕದಿಂದೆ ಶಿವಜಂಗಮದ ಪಾದವನು ಮಸ್ತಕದ ಮೇಲೆ ಇಡಿಸುವುದು. ಹಿತವಂತರಾದವರು ವೀರಶೈವ ಪರಮವಚನಂಗಳಂ ಕೇಳಿಸುವುದು. ಎಡಬಲದಲ್ಲಿರ್ದ ಸಕಲ ಭಕ್ತರು ಮಹೇಶ್ವರರು `ಓಂ ನಮಃಶಿವಾಯ' ಎಂಬ ಶಿವಮಂತ್ರವನ್ನು ಆ ಶರಣನ ಕರ್ಣಂಗಳಲ್ಲಿ ಉಚ್ಚರಿಸುವುದು. ಈ ಹಡಗದ ಹಗ್ಗವ ಮತ್ತೊಂದು ಹಡಗಕ್ಕೆ ಹಾಕಿ ಬಿಗಿದಡೆ, ಹಡಗಕ್ಕೆ ಹಡಗ ಕೂಡಿ, ಸಮುದ್ರದ ತೆರೆಯೋಪಾದಿಯಲ್ಲಿ ಹಡಗವ ಬಿಟ್ಟು ಪ್ರತಿಹಡಗದೊಳಗೆ ಮೂರ್ತವ ಮಾಡಿದಂತೆ, ಮಂತ್ರಮಂತ್ರವು ಸಂಬಂಧವಾಗಿ, ಉರಿ ಕರ್ಪುರ ಕೊಂಡಂತಾಯಿತ್ತು ಶರಣನ ದೇಹಪ್ರಾಣವು. ಇದು ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ಅತಿ ರಹಸ್ಯ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸತ್ತು ಹೋಗುವರೆಲ್ಲ ಸ್ವರ್ಗಪದಸ್ಥರೆ ? ಅಲ್ಲಲ್ಲ. ಕೈದುವ ಪಿಡಿವರೆಲ್ಲ ಮಹಾಕಲಿಗಳೆ ? ಅಲ್ಲಲ್ಲ. ಲಿಂಗವ ಧರಿಸುವರೆಲ್ಲ ಲಿಂಗಪ್ರಾಣಿಗಳೆ ? ಅಲ್ಲಲ್ಲ. ಅದೇನು ಕಾರಣವೆಂದಡೆ : ಕಪಿಯ ಕೈಯಲ್ಲಿ ರತ್ನವ ಕೊಟ್ಟಡೆ ಅದು ಹಣ್ಣೆಂದು ಕಡಿದು ನೋಡಿ ಕಲ್ಲೆಂದು ಬಿಸುಟುವುದಲ್ಲದೆ, ಆ ರತ್ನದ ದಿವ್ಯಬೆಳಗನರಿವುದೆ ಅಯ್ಯಾ ? ಇಂತೀ ದೃಷ್ಟದಂತೆ ಮಡ್ಡಜೀವಿಗಳ ಕೈಯಲ್ಲಿ ದೊಡ್ಡಲಿಂಗವಿರ್ದಡೇನು ? ಆ ಲಿಂಗದಲ್ಲಿ ಮಹಾಘನ ಪರಮಕಲೆಯನರಿಯದ ಬಳಿಕ ಅದು ಒಡ್ಡುಗಲ್ಲಿನಂತೆ ಕಂಡೆಯಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಸತ್ಯವಚನವ ನುಡಿವಾತನೇ ಸದ್‍ಭಕ್ತನು. ಸದಾಚಾರದಲ್ಲಿ ನಡೆವಾತನೇ ಸದ್‍ಭಕ್ತನು. ತಥ್ಯ ಮಿಥ್ಯ ರಾಗದ್ವೇಷವನಳಿದಾತನೇ ಸದ್‍ಭಕ್ತನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸಕಲ ವಿಸ್ತಾರದ ರೂಪು ನಿಮ್ಮೊಳಗಿರ್ಪುದು : ನೀವೆನ್ನ ಮನದಲ್ಲಿ ಅಡಗಿರ್ಪಿರಿ. ಅದೆಂತೆಂದೊಡೆ : ಕರಿ ಕಣ್ಣಾಲಿಯೊಳಗಡಗಿದಂತೆ, ನೀವು ಭಕ್ತಜನಮನೋವಲ್ಲಭನಾದ ಕಾರಣ ಎನ್ನ ಮನದ ಕೊನೆಯಮೊನೆಯಲ್ಲಿ ಅಡಗಿರ್ದಿರಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ

ಇನ್ನಷ್ಟು ...