ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉನ್ಮನಿಯ ಮಂಟಪದಲ್ಲಿ ಉಮೆಯಾಣ್ಮನ ಉಗ್ಗಡಣೆಯ ನೋಡಾ ! ಪರಿಪರಿಯ ಗಣಂಗಳು ತರತರದಲ್ಲಿ ನೆರೆದು ನಿಂದು ಉಘೇ ಉಘೇ ಎನುತಿರ್ಪರು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಉಪಾಧಿಯನಳಿದು, ನಿರುಪಾಧಿಯ ತಿಳಿದು, ಸಹಜಮಾಟದಲ್ಲಿ ಸುಳಿದು, ಜಾತಿಸೂತಕ ಪ್ರೇತಸೂತಕ ಜನನಸೂತಕ ಉಚ್ಚಿಷ್ಟಸೂತಕ ರಜಸ್ಸೂತಕವೆಂಬ ಪಂಚಸೂತಕಂಗಳ ಕಳೆದು, ಸದಾಚಾರ ಲಿಂಗಾಚಾರ ಶಿವಾಚಾರ ಗಣಾಚಾರ ಭೃತ್ಯಾಚಾರವೆಂಬ ಪಂಚಾಚಾರಂಗಳಳವಟ್ಟು ಪಂಚಭೂತಂಗಳ ಪರಿಹರಿಸಿ, ಪಂಚಪ್ರಾಣವಾಯುಗಳ ಸಂಚಲಗುಣವಳಿದು ಪಂಚೇಂದ್ರಿಯಂಗಳಲ್ಲಿ ಪಂಚಲಿಂಗಂಗಳ ಪ್ರತಿಷಿ*ಸಿ, ಪಂಚಬ್ರಹ್ಮದ ಮೂಲವನರಿದು, ಮೂಲೋಕದೊಡೆಯನಲ್ಲಿ ಮನವಡಗಿರ್ಪ ಮಹಾಶರಣರ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಉತ್ತರಗಿರಿಯ ಚಿತ್ರಮಂಟಪದೊಳಗೆ ರತ್ನದ ತೋರಣದ ಪರಿಯ ನೋಡಾ ! ಮುತ್ತಿನ ಗದ್ದುಗೆಯ ಮೇಲೆ ಛತ್ತೀಸಕೋಟಿ ಚಂದ್ರಸೂರ್ಯರ ಬೆಳಗನೊಳಕೊಂಡ ನಿತ್ಯಪರಿಪೂರ್ಣವಸ್ತುವ ಕೂಡಬಲ್ಲಾತನೆ ಕರ್ತೃ ಶಿವ ತಾನೆ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ