ಓಂಕಾರವೆಂಬ ಮರಕ್ಕೆ ಷಟ್‍ಕೃತಿಯೆಂಬ ಶಾಖೆ ಪಸರಿಸಿ,
ಷಡಕ್ಷರಗಳೆಂಬ ತಳಿರು ಕೊನರಿ,
ಷಟ್‍ಸ್ಥಲಗಳೆಂಬ ಕುಸುಮಂಗಳಾಗಿ,
ಷಡುಲಿಂಗಂಗಳೆಂಬ ಮೋಕ್ಷದ ಮಧುರಫಲಂಗಳ
ತಳೆದಿರ್ಪುದು ನೋಡಾ !
ಇದನು ನಾನು ಶ್ರುತಿಗುರುವಚನಸ್ವಾನುಭಾವಂಗಳಿಂದರಿದು
ಓಂಕಾರವೆಂಬ ವೃಕ್ಷವನೇರಿ `ಓಂ ನಮಃಶಿವಾಯ'
`ಓಂ ನಮಃಶಿವಾಯ' `ಓ ನಮಃಶಿವಾಯ' ಎಂದು
ಆ ಷಡುಲಿಂಗಂಗಳೆಂಬ ಮೋಕ್ಷದ ಮಧುರಫಲಂಗಳನು
ಸವಿದು ನಿತ್ಯತೃಪ್ತನಾದೆನಯ್ಯ ಅಖಂಡೇಶ್ವರಾ.