ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇನ್ನು ತಾರಕಯೋಗದ ಲಕ್ಷಣಮಂ ಪೇಳ್ವೆನೆಂತೆನೆ : ಮಂತ್ರಯೋಗ ಲಯಯೋಗ ಹಠಯೋಗಕ್ಕೆ ಉತ್ತರೋತ್ತರ ವಿಶಿಷ್ಟವಾದ ರಾಜಯೋಗವೇ ಸಾಂಖ್ಯಯೋಗವೆಂದು ತಾರಕಯೋಗವೆಂದು ಅಮನಸ್ಕಯೋಗವೆಂದು ಮೂರು ಪ್ರಕಾರವಾಗಿರ್ಪುದು. ಆ ಮೂರರೊಳಗೆ ಮೊದಲು ಸಾಂಖ್ಯಯೋಗವೇ ತತ್ವಜಾÕನರೂಪವಪ್ಪುದರಿಂದೆ, ಆ ತತ್ವಂಗಳೆಂತೆನೆ : ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚತತ್ವಂಗಳಿಂದೆ ಜನಿತಮಾದ ವಾಗಾದಿ ಕರ್ಮೇಂದ್ರಿಯಂಗಳೈದು, ಶಬ್ದಾದಿ ವಿಷಯಂಗಳೈದು, ಶ್ರೋತ್ರಾದಿ ಜಾÕನೇಂದ್ರಿಯಂಗಳೈದು, ಪ್ರಾಣಾದಿ ವಾಯುಗಳೈದು, ಜೀವನಗೂಡಿ ಮಾನಸಾದಿ ಅಂತಃಕರಣಂಗಳೈದು, ಇಂತೀ ಪಂಚವಿಂಶತಿ ತತ್ವಂಗಳು ನಾನಲ್ಲ, ಅವು ನನ್ನವಲ್ಲವೆಂದು ವಿಭಾಗಿಸಿ ಕಳೆದು, ಪರಾತ್ಪರವಾದ ಪರಶಿವಬ್ರಹ್ಮವೆ ನಾನೆಂದು ತಿಳಿವುದೇ ಸಾಂಖ್ಯಯೋಗ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇದಿರ ಹಳಿದು ತನ್ನ ಬಣ್ಣಿಸುವನ್ನಕ್ಕರ ಶಿವಜಾÕನಿ ಎಂತಪ್ಪನಯ್ಯಾ ? ಹಮ್ಮು ಬಿಮ್ಮು ಹೆಮ್ಮೆ ಹಿರಿತನವುಳ್ಳನ್ನಕ್ಕರ ಶಿವಜಾÕನಿ ಎಂತಪ್ಪನಯ್ಯಾ ? ಉದಮದ ಗರ್ವ ಅಹಂಕಾರ ಮಮಕಾರವುಳ್ಳನ್ನಕ್ಕರ ಶಿವಜಾÕನಿ ಎಂತಪ್ಪನಯ್ಯಾ ? ಆಸೆ ಆಮಿಷ ಕ್ಲೇಶ ತಾಮಸವುಳ್ಳನ್ನಕ್ಕರ ಶಿವಜಾÕನಿ ಎಂತಪ್ಪನಯ್ಯಾ ? ಇಂತೀ ಗುಣಂಗಳುಳ್ಳನ್ನಕ್ಕರ ಶಿವಾನುಭಾವಿಯೆಂತಪ್ಪನಯ್ಯಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಇನ್ನು ತಾರಕಯೋಗದ ಲಕ್ಷಣವೆಂತೆನೆ: ವೇದ ಶಾಸ್ತ್ರಾಗಮ ಪುರಾಣ ಕವಿತ್ವಗಳೆಂಬ ನುಡಿಗಳಿಂದೆ ವಾಚಾಳಕರಾದವರಿಗೆ ತಾರಕಬ್ರಹ್ಮವು ಸಾಕ್ಷಾತ್ಕಾರವಾಗದು. ಬ್ರಹ್ಮಚಾರಿ ಗೃಹಸ್ಥ ವಾನಪ್ರಸ್ಥ ಯತಿಗಳೆಂಬ ಚತುರಾಶ್ರಮಗರ್ವಿತರಿಗೆ ತಾರಕಬ್ರಹ್ಮವು ಸಾಕ್ಷಾತ್ಕಾರವಾಗದು. ಜಾÕನಖಾಂಡಿ ಕರ್ಮಖಾಂಡಿಗಳೆಂಬ ವೇದಾಂತಿ ಸಿದ್ಧಾಂತಿಗಳಿಗೆ ತಾರಕಬ್ರಹ್ಮವು ಸಾಕ್ಷಾತ್ಕಾರವಾಗದು. ಶ್ರೀ ಗುರುಕಟಾಕ್ಷದಿಂದಲ್ಲದೆ ತಾರಕಬ್ರಹ್ಮವು ಆರಾರಿಗೂ ಸಾಕ್ಷಾತ್ಕಾರವಾಗದಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನು ಸಮಾದ್ಥಿಯೋಗವೆಂತೆಂದೊಡೆ : ಸುಖದುಃಖ ಪುಣ್ಯಪಾಪ ಪೂಜಾಪೂಜಂಗಳು ಸಂಕಲ್ಪವಿಕಲ್ಪಂಗಳೇನೂ ತೋರದೆ, ತಾನೆಂಬ ಅಹಂಭಾವವಳಿದು ಅಖಂಡಪರಿಪೂರ್ಣಮಾದ ಪರಬ್ರಹ್ಮದಲ್ಲಿ ಕೂಡಿದ ಸಮರಸಭಾವವೇ ಸಮಾದ್ಥಿಯಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇಮ್ಮನ ಭಕ್ತಂಗೆ ಕರ್ಮದ ವಿದ್ಥಿ ಕಾಡುತ್ತಿರ್ಪುದು ನೋಡಾ ! ಆ ಇಮ್ಮನವಳಿದು ಒಮ್ಮನವಾಗಿ ನಿಮ್ಮ ನರಿತರೆ ಕರ್ಮದವಿದ್ಥಿ ಬಿಟ್ಟೋಡಿತ್ತು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇಷ್ಟಲಿಂಗ ಪ್ರಾಣಲಿಂಗ ಒಂದೆಯೆಂದರಿಯದೆ ಬ್ಥಿನ್ನವಿಟ್ಟು ನುಡಿವ ಭ್ರಾಂತರ ಮಾತ ಕೇಳಲಾಗದು. ಅದೇನು ಕಾರಣವೆಂದೊಡೆ : ತಿಳಿದುಪ್ಪ ಗಟ್ಟಿಗೊಂಡು ಹೆರೆದುಪ್ಪವಾದಂತೆ, ನಿರಾಕಾರ ಪರಬ್ರಹ್ಮವ ಸಾಕಾರಗೊಳಿಸಿ, ಶ್ರೀಗುರುಸ್ವಾಮಿ ಕರುಣಿಸಿ ಕರಸ್ಥಲಕ್ಕೆ ಇಷ್ಟಲಿಂಗವೆನಿಸಿ ಕೊಟ್ಟಬಳಿಕ, ಆ ಲಿಂಗದಲ್ಲಿ ನಿಷ್ಠೆ ಬಲಿಯಲು ಬಾಹ್ಯ ಕರಣಂಗಳು ತರಹರವಾಗಿ, ಆ ಲಿಂಗದ ಚಿತ್‍ಕಳೆ ದೃಷ್ಟಿಸೂತ್ರದಿಂದೆ ತನ್ನ ಅಂತರಂಗಕ್ಕೆ ವೇದ್ಥಿಸಿ ಪ್ರಾಣಲಿಂಗವೆನಿಸುವುದು. ಸ್ಫಟಿಕದ ಘಟದಲ್ಲಿರಿಸಿದ ಜ್ಯೋತಿಯಂತೆ ಒಳಹೊರಗೆ ತೋರುತಿರ್ಪುದು ಒಂದೇ ಲಿಂಗವೆಂದರಿಯದೆ, ಭ್ರಾಂತಿಜ್ಞಾನದಿಂದೆ ಅಂತರಂಗದಲ್ಲಿ ಬೇರೆ ಪ್ರಾಣಲಿಂಗವುಂಟೆಂದು ಇಷ್ಟಲಿಂಗದಲ್ಲಿ ಅವಿಶ್ವಾಸಮಾಡುವ ಭ್ರಷ್ಟಭವಿಗಳ ಮುಖವ ನೋಡಲಾಗದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನು ಹಠಯೋಗಕ್ಕೆ ಸಾಧನಮಾದ ಬಂಧತ್ರಯಂಗಳ ಭೇದವೆಂತೆಂದೊಡೆ : ವಾಮಪಾದದ ಹಿಮ್ಮಡದಿಂ ಯೋನಿಸ್ಥಾನವನೊತ್ತಿ ಬಲಪಾದಮಂ ನೀಡಿ, ಎರಡು ಹಸ್ತಗಳಿಂದೆ ಅಂಗುಷ್ಠಮಂ ಪಿಡಿದು, ಕಂಠಸ್ಥಾನದಲ್ಲಿ ಚುಬುಕವನಿರಿಸಿ, ವಾಯುಧಾರಣಮಂ ಮಾಡುವುದೆ ಜಾಲಂಧರಬಂಧವೆನಿಸುವುದು. ವಾಮಪಾದದ ಹಿಮ್ಮಡದಿಂದಾಧಾರವನೊತ್ತಿ , ಎಡದ ತೊಡೆಯ ಮೇಲೆ ಬಲದ ಪಾದವನಿರಿಸಿ ವಾಯುಪೂರಣಮಂ ಮಾಡಿ, ಜಾಲಂಧರಮಂ ಬಂದ್ಥಿಸುವುದೆ ಮಹಾಬಂಧವೆನಿಸುವುದು. ನಾಬ್ಥಿಯ ಊಧ್ರ್ವ ಅಧೋಭಾಗಂಗಳನು ಬಲಾತ್ಕಾರದಿಂ ಬಂದ್ಥಿಪುದೆ ಉಡ್ಯಾಣಬಂಧವೆನಿಸುವುದು. ಈ ಬಂಧತ್ರಯಂಗಳಿಂದೆ ಛೇದನ ಚಾಲನ ದೋಹನಾದಿ ಕ್ರೀಯಂಗಳಿಂದೆ ಪೆಚ್ಚಿರ್ದ ಜಿಹ್ವೆಯನು ಭ್ರೂಮಧ್ಯಸ್ಥಾನಕ್ಕೇರಿಸಿ ಸ್ಥಿರದೃಷ್ಟಿಯಾಗಿಹುದೇ ಹಠಯೋಗ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇಷ್ಟಲಿಂಗಕ್ಕೆ ತನುವೆ ಭಾಜನ. ಪ್ರಾಣಲಿಂಗಕ್ಕೆ ಮನವೆ ಭಾಜನ. ಭಾವಲಿಂಗಕ್ಕೆ ಜೀವವೆ ಭಾಜನವೆಂದರಿಯದ ಮರುಳು ಮಾನವರಿಗೆ ಭವಬಂಧನ ಪ್ರಾಪ್ತಿಯಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನು ಪ್ರಾಣಾಯಾಮದ ಲಕ್ಷಣವೆಂತೆಂದೊಡೆ : ಪ್ರಾಕೃತಪ್ರಾಣಾಯಾಮವೆಂದು, ವೈಕೃತಪ್ರಾಣಾಯಾಮವೆಂದು, ಆ ಎರಡರಿಂ ಪೊರತಾದ ಕೇವಲ ಕುಂಭಕವೆಂದು, ಮೂರು ಪ್ರಕಾರವಾಗಿರ್ಪುದದೆಂತೆನೆ : ದಿನವೊಂದಕ್ಕೆ ಇಪ್ಪತ್ತೊಂದು ಸಾವಿರದ ಆರುನೂರು ಹಂಸ ಹಂಸವೆಂದುಚ್ಚರಿಸುವ ಅಹಂಕಾರಾತ್ಮಕವಾದ ಜೀವಜಪವೇ ಪ್ರಾಕೃತ ಪ್ರಾಣಾಯಾಮವೆನಿಸುವುದು. ಮತ್ತಾ ಜೀವಜಪವನು ಗೂರೂಪದೇಶದಿಂದೆ ಲೋಪವಮಾಡಿ ಸೋಹಂ ಸೋಹಂ ಎಂಬ ಮಂತ್ರಸಂಸ್ಕಾರದಿಂದುಚ್ಚರಿಸುವುದೆ ವೈಕೃತಪ್ರಾಣಾಯಾಮವೆನಿಸುವುದು. ಆ ವೈಕೃತಪ್ರಾಣಾಯಾಮವೆ ಇನ್ನೊಂದು ಪ್ರಕಾರವಾಗಿ ಪೇಳಲ್ಪಡುವುದದೆಂತೆನೆ : ಕನಿಷ್ಠೆ ಅನಾಮಿಕೆಗಳಿಂದೆ ಈಡನಾಡಿಯಂ ಬಲಿದು, ಪಿಂಗಳನಾಡಿಯಿಂದೆ ದೇಹಾಂತರ್ಗತ ವಾಯುಮಂ ಅಕಾರೋಚ್ಚರಣದಿಂ ಪನ್ನೆರಡು ಮಾತ್ರೆ ರಚಿಸಿ, ಮತ್ತೆ ಪಿಂಗಳನಾಡಿಯಂ ಅಂಗುಷ್ಠದಿಂ ಬಲಿದು, ಈಡಾನಾಡಿಯಿಂದೆ ಪನ್ನೆರಡು ಮಾತ್ರೆ ಉಕಾರೋಚ್ಚರಣದಿಂ ಪೂರಿಸಿ, ನಾಬ್ಥಿ ಹೃದಯ ಕಂಠವೆಂಬ ತ್ರಿಸ್ಥಾನದೊಳೊಂದರಲ್ಲಿ ಪನ್ನೆರಡು ಮಾತ್ರೆ ಮಕಾರೋಚ್ಚರಣದಿಂ ತುಂಬಿಪುದೆ ಕನಿಷ್ಠಪ್ರಾಣಾಯಾಮವೆನಿಸುವುದು. ಅದೆಂತೆಂದೊಡೆ : ಶೀಘ್ರವಲ್ಲದೆ ವಿಳಂಬವಲ್ಲದೆ ಜಾನುಪ್ರದಕ್ಷಿಣಮಂ ಮಾಡಿ, ಅಂಗುಲಿಸ್ಫೋಟನಮಂ ಮಾಡಿದರೆ ಒಂದು ಮಾತ್ರೆ ಎನಿಸುವುದು. ಇಂತಹ ಮಾತ್ರೆ ಪನ್ನೆರಡು ಆದರೆ ಕನಿಷ್ಠವೆನಿಸುವುದು. ಮತ್ತಾ ಮಾತ್ರೆ ಇಪ್ಪತ್ತು ನಾಲ್ಕಾದರೆ ಮಧ್ಯಮವೆನಿಸುವುದು. ಬಳಿಕಾ ಮಾತ್ರೆ ಮೂವತ್ತಾರಾದರೆ ಉತ್ತಮವೆನಿಸುವುದು. ಇಂತೀ ಮೂವತ್ತಾರು ಮಾತ್ರೆಗಳು ಮಂತ್ರ ಸ್ಮರಣೆ ಧ್ಯಾನ ಸಹಿತಮಾಗಿ ಮಾಳ್ಪುದೆ ಪ್ರಾಣಾಯಾಮದಲ್ಲಿ ಉತ್ತಮ ಪ್ರಾಣಾಯಾಮವೆನಿಸುವುದು. ಇನ್ನು ಕೇವಲ ಕುಂಭಕವೆಂತೆನೆ : ವಾಮಭಾಗದ ಈಡಾನಾಡಿಯೇ ಚಂದ್ರನಾಡಿಯೆಂದು ಯಮುನಾನದಿ ಎಂದು ಪೇಳಲ್ಪಡುವುದು. ದಕ್ಷಿಣಭಾಗದ ಪಿಂಗಳನಾಡಿಯೇ ಸೂರ್ಯನಾಡಿಯೆಂದು ಗಂಗಾನದಿಯೆಂದು ಪೇಳಲ್ಪಡುವುದು. ಸುಷುಮ್ನೆಯೆಂಬ ಮಧ್ಯನಾಡಿಯೇ ಅಗ್ನಿಯೆಂದು ಸರಸ್ವತಿನದಿಯೆಂದು ಪೇಳಲ್ಪಡುವುದಾಗಿ, ಆ ನದಿತ್ರಯಂಗಳ ಸಂಬಂಧದಿಂ ತ್ರಿವೇಣಿಯೆಂಬ ಯೋಗಸ್ಥಲಕೆ ತ್ರಿಕೂಟವೆಂದು, ಮಧ್ಯಹೃದಯವೆಂದು, ಕಾಶಿಕ್ಷೇತ್ರವೆಂದು, ಕೂರ್ಚವೆಂದು ಆಜ್ಞಾಚಕ್ರವೆಂದು, ಪರ್ಯಾಯ ನಾಮಂಗಳನುಳ್ಳ ಶಿವಧ್ಯಾನಕ್ಕೆ ರಹಸ್ಯವಾದ ಭ್ರೂಮಧ್ಯಸ್ಥಾನದಲ್ಲಿ ಮನೋಮಾರುತಂಗಳನೈದಿಸಿ ಯೋಗಮಂ ಸಾದ್ಥಿಸಲ್ತಕ್ಕುದೇ ಪ್ರಾಣಾಯಾಮಾಭ್ಯಾಸ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನು ಪ್ರತ್ಯಾಹಾರದ ಭೇದವೆಂತೆನೆ : ಯೋಗಾಭ್ಯಾಸವ ಮಾಡುವಲ್ಲಿ ಆಲಸ್ಯವಾದ ಮಂದಸ್ವರೂಪವಾದ ಅತಿ ಉಷ್ಣವಾದ ಅತಿ ಶೀತಲವಾದ ಅತಿ ಕಟುವಾದ ಅತಿ ಆಮ್ಲವಾದ ಅಪವಿತ್ರವಾದ ಅನ್ನಪಾನಂಗಳಂ ಬಿಟ್ಟು, ಯೋಗೀಶ್ವರರಿಗೆ ಸ್ವೀಕರಿಸಲು ಯೋಗ್ಯವಾದ ಗೋದುವೆ ಶಾಲಿ ಜವೆ ಹೆಸರು ಹಾಲು ತುಪ್ಪ ಜೇನುತುಪ್ಪ ಮುಂತಾದ ಪವಿತ್ರ ಅನ್ನಪಾನಂಗಳು ಬಹು ಬಹುಳವಲ್ಲದೆ, ಬಹು ಸೂಕ್ಷ್ಮವಲ್ಲದೆ, ಸುಪ್ರಮಾಣದಲ್ಲಿ ಸ್ವೀಕರಿಸುವುದೆ ಪ್ರತ್ಯಾಹಾರವೆನಿಸುವುದು. ಅಂತುಮಲ್ಲದೆ ಬಾಹ್ಯಾರ್ಥಂಗಳಲ್ಲಿ ಎರಗುವ ಚಿತ್ತಮಂ ಹೃದಯಾಕಾಶದಲ್ಲಿ ನಿಲಿಸುವುದೆ ಪ್ರತ್ಯಾಹಾರವು. ಮತ್ತೆ ಹೃದಯಸ್ಥಾನದಿಂ ಚಲಿಸುವ ಮನಮಂ ಮರಳಿ ಮರಳಿ ಅಲ್ಲಿಯೇ ಸ್ಥಾಪಿಸುವುದೇ ಪ್ರತ್ಯಾಹಾರವಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇಕ್ಕಿದೆನು ಮುಂಡಿಗೆಯ ದೇವರದೇವನೆಂದು. ಇಕ್ಕಿದೆನು ಮುಂಡಿಗೆಯ ದೇವಶಿಖಾಮಣಿಯೆಂದು. ಇಕ್ಕಿದೆನು ಮುಂಡಿಗೆಯ ದೇವದೇವೇಶ್ವರನೆಂದು. ಇಕ್ಕಿದೆನು ಮುಂಡಿಗೆಯ ಭಾವಜವೈರಿಯೆಂದು. ಇಕ್ಕಿದೆನು ಮುಂಡಿಗೆಯ ಭಾಳಲೋಚನನೆಂದು. ಇಕ್ಕಿದೆನು ಮುಂಡಿಗೆಯ ಜಗದವಲ್ಲಭನೆಂದು ಇಕ್ಕಿದೆನು ಮುಂಡಿಗೆಯ ಜಂಗುಳಿದೈವದ ಗಂಡ ಅಖಂಡೇಶ್ವರನೆಂದು.
--------------
ಷಣ್ಮುಖಸ್ವಾಮಿ
ಇಷ್ಟಲಿಂಗದ ನಿಜವನರಿಯದೆ ಪ್ರಾಣಲಿಂಗದ ಮಾತನುಡಿವ ನೀತಿಹೀನರ ನಾನೇನೆಂಬೆನಯ್ಯ ? ಹೆತ್ತ ತಂದೆಯನರಿಯದೆ ಮುತ್ತ್ಯಾನ ಪ್ರತಾಪವ ಹೇಳುವ ಕತ್ತೆ ಮೂಳರನೇನೆಂಬೆನಯ್ಯ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಇಷ್ಟಲಿಂಗದಲ್ಲಿ ತನುವನಡಗಿಸಿ, ಪ್ರಾಣಲಿಂಗದಲ್ಲಿ ಮನವನಡಗಿಸಿ, ಭಾವಲಿಂಗದಲ್ಲಿ ಜೀವನನಿಕ್ಷೇಪಿಸಿ, ಆ ಇಷ್ಟ ಪ್ರಾಣ ಭಾವಲಿಂಗವು ಒಂದಾದ ಮಹಾಘನ ಪರಬ್ರಹ್ಮದಲ್ಲಿ ತಾನೆಂಬ ನೆನಹಡಗಿ, ದ್ವಂದ್ವಕರ್ಮಂಗಳ ನೀಗಿ, ಆ ಪರಿಪೂರ್ಣ ಪರಬ್ರಹ್ಮವೆ ತಾನಾದುದು ಮಹಾಶೀಲವಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇಂದ್ರಚಂದ್ರರು ಪ್ರಳಯವಾಗಿ ಹೋದಡು ಶರಣನೇನೆಂದರಿಯನು. ಹರಿವಿರಿಂಚಿಗಳು ಪ್ರಳಯವಾಗಿ ಹೋದಡು ಶರಣನೇನೆಂದರಿಯನು. ದೇವ ದಾನವ ಮಾನವರು ಪ್ರಳಯವಾಗಿ ಹೋದಡು ಶರಣನೇನೆಂದರಿಯನು. ಮನುಮುನಿಗಳು ಪ್ರಳಯವಾಗಿ ಹೋದಡು ಶರಣನೇನೆಂದರಿಯನು. ಪಂಚತತ್ತ್ವ ಬ್ರಹ್ಮಾಂಡಕೋಟಿಗಳು ಪ್ರಳಯವಾಗಿ ಹೋದಡು ಅಖಂಡೇಶ್ವರಾ, ನಿಮ್ಮ ಶರಣನೇನೆಂದರಿಯನಯ್ಯಾ.
--------------
ಷಣ್ಮುಖಸ್ವಾಮಿ
ಇನ್ನು ಧಾರಣಯೋಗದ ಲಕ್ಷಣವೆಂತೆನೆ : ಸಂಕಲ್ಪ ವಿಕಲ್ಪಾತ್ಮಕವಾದ ಮನಸ್ಸು ಕಾಕಾಕ್ಷಿಯಂತೆ ಬಾಹ್ಯಾಭ್ಯಂತರಗಳಿಗೆ ತಾನೇ ಕಾರಣವಪ್ಪುದರಿಂದೆ ಆ ಮನಮಂ ಮುದ್ರಾಕರಣಬಂಧಂಗಳಿಂದಂತರ್ಮುಖಮಂ ಮಾಡಿ, ಅನವಚ್ಛಿನ್ನ ತೈಲಧಾರೆಯಂತೆ ಶಿವಧ್ಯಾನಮಂ ಮಾಡುತಿರಲು ಆ ಧ್ಯಾನಾಕಾರದಿಂ ಕರಿಗೊಂಡ ವಸ್ತುವಿನೊಳು ಆ ಮನವು ನಿಶ್ಚಲಮಾಗಲದೇ ಧಾರಣಯೋಗ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನು ಆಸನದ ಭೇದವೆಂತೆಂದೊಡೆ: ಒಂದು ಹಿಮ್ಮಡದಿಂ ಯೋನಿಸ್ಥಾನವನೊತ್ತಿ , ಮತ್ತೊಂದು ಹಿಮ್ಮಡಮಂ ಮೇಢ್ರದ ಮೇಲಿರಿಸಿ, ಏಕಚಿತ್ತನಾಗಿ ಋಜುಕಾಯನಾಗಿ, ಭ್ರೂಮಧ್ಯದಲ್ಲಿ ದೃಷ್ಟಿಯುಳ್ಳಾತನಾಗಿಹುದೇ ಸಿದ್ಧಾಸನವೆನಿಸುವುದು. ಎರಡು ತೊಡೆಗಳ ಮೇಲೆ ಎರಡು ಪಾದಂಗಳ ಮೇಲುಮುಖವಾಗಿರಿಸಿ, ಎರಡು ಕರತಳಂಗಳನು ನಡುವೆ ಮೇಲುಮುಖವಾಗಿರಿಸಿ, ರಾಜದಂತಗಳನಡುವೆ ರಸನಾಗ್ರವನಿಟ್ಟು, ನಾಸಾಗ್ರದೃಷ್ಟಿಯಿಂದಿಹುದೆ ಪದ್ಮಾಸನವೆನಿಸುವುದು. ಎರಡು ತೊಡೆ ಕಿರಿದೊಡೆಗಳ ಸಂದಿಗಳಲ್ಲಿ ಎರಡು ಪಾದಂಗಳನಿರಿಸಿ, ಋಜುಕಾಯನಾಗಿಹುದೇ ಸ್ವಸ್ತಿಕಾಸನವೆನಿಸುವುದು. ಮೇಢ್ರದ ಮೇಲೆ ಎಡದ ಹಿಮ್ಮಡವನಿರಿಸಿ, ಅದರ ಮೇಲೆ ಬಲದ ಹಿಮ್ಮಡವನಿರಿಸಿ, ಋಜುಕಾಯನಾಗಿಹುದೆ ಮುಕ್ತಾಸನವೆನಿಸುವುದು. ಬಲದ ಹಿಮ್ಮಡಮಂ ಎಡದ ಪೊರವಾರಿನೊಳಿಟ್ಟು ಎಡದ ಹಿಮ್ಮಡಮಂ ಬಲದ ಪೊರವಾರಿನೊಳಿಟ್ಟು ಜಾನುಗಳೆರಡನು ಗೋಮುಖಾಕಾರಮಂ ಮಾಳ್ಪುದೇ ಗೋಮುಖಾಸನವೆನಿಸುವುದು. ಈ ಸಕಲ ಆಸನಗಳಿಂದೆ ಯೋಗಮಂ ಸಾಧಿಸುವುದೇ ಆಸನಯೋಗ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇಕ್ಕಿದೆನು ಮುಂಡಿಗೆಯ ಹರಿಕುಲದ ವಿಪ್ರರು ಬೆಕ್ಕನೆ ಬೆರಗಾಗುವಂತೆ. ಇಕ್ಕಿದೆನು ಮುಂಡಿಗೆಯ ಸೊಕ್ಕಿದ ರಕ್ಕಸರ ಸಂಹರಿಸಿದ ಶಿವನೇ ಅಧಿಕನೆಂದು. ಇಕ್ಕಿದೆನು ಮುಂಡಿಗೆಯ ಹರಿಯಜಸುರಾಸುರರೆಲ್ಲ ಹರನ ಆಳುಗಳೆಂದು. ಇಕ್ಕಿದೆನು ಮುಂಡಿಗೆಯ ದಿಕ್ಕು ದಿಕ್ಕಿನೊಳಗೆ ಅಖಂಡೇಶ್ವರನೆಂಬ ಮುಕ್ಕಣ್ಣ ಪರಶಿವನೆ ಘನ ಘನವೆಂದು.
--------------
ಷಣ್ಮುಖಸ್ವಾಮಿ
ಇಷ್ಟಲಿಂಗವಾಗಿ ಎನ್ನ ಸ್ಥೂಲತನುವಿಗೆ ಅರಸನಾಗಿಪ್ಪನಯ್ಯಾ ಬಸವಣ್ಣನು. ಪ್ರಾಣಲಿಂಗವಾಗಿ ಎನ್ನ ಸೂಕ್ಷ್ಮತನುವಿಗೆ ಅರಸನಾಗಿಪ್ಪನಯ್ಯಾ ಚೆನ್ನಬಸವಣ್ಣನು. ಭಾವಲಿಂಗವಾಗಿ ಎನ್ನ ಕಾರಣತನುವಿಗೆ ಅರಸನಾಗಿಪ್ಪನಯ್ಯಾ ಪ್ರಭುರಾಯನು. ಇದು ಕಾರಣ, ಎನಗೆ ರಾಜಯೋಗದ ಮನ್ನೆಯವು ದೊರಕಿತಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇಂದು ನಾಳೆಯೆಂಬ ಮಂದಬುದ್ಧಿಗೆ ಸಂದುಗೊಡದಿರಣ್ಣಾ. ಅನಿತ್ಯಕಾಲವನರಿದು ಶ್ರೀ ಮಹಾದೇವನ ಪೂಜಿಸಿರಣ್ಣಾ. ನೀರುಗುಳ್ಳೆಯಂತೆ ತೋರಿ ಅಡಗುವ ಅನಿತ್ಯಶರೀರದ ಭೋಗವು ನಿತ್ಯವೆಂದು ನಚ್ಚಿ ಹೊತ್ತುಗಳೆದು ವ್ಯರ್ಥವಾಗಿ ಸತ್ತುಹೋಗದಿರಣ್ಣಾ. ಕರ್ತೃ ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನಂಗಳ ಸವೆಸಿ ನಿತ್ಯಪದವ ಸಾಧಿಸಿರಣ್ಣ ನಮ್ಮ ಅಖಂಡೇಶ್ವರಲಿಂಗದಲ್ಲಿ.
--------------
ಷಣ್ಮುಖಸ್ವಾಮಿ
ಇದಿರಿನಲ್ಲಿ ಜಂಗಮವು ಬರುವುದು ಕಂಡು ಸದರನಿಳಿದು ನಡೆದು ಹೋಗಿ, ಚರಣಕ್ಕೆರಗುವುದೆ ಉತ್ತಮಭಕ್ತಿ ಎನಿಸಿತ್ತು. ಇದ್ದ ಸ್ಥಾನದಲ್ಲಿಯೇ ಎದ್ದು ನಿಲ್ಲುವುದೆ ಮಧ್ಯಮಭಕ್ತಿ ಎನಿಸಿತ್ತು. ಕುಳಿತಲ್ಲಿಯೇ ಕರಮುಗಿಯುವುದೆ ಕನಿಷ*ಭಕ್ತಿಯೆನಿಸಿತ್ತು. ಈ ಮೂರುತೆರದ ಭಕ್ತಿಯಿಲ್ಲದೆ ಗರ್ವದಿಂದ ಬೆರತುಕೊಂಡು ಕುಳಿತರೆ ಮುಂದೆ ಹಿರಿಯ ಶೂಲದ ಮೇಲೆ ಕುಳ್ಳಿರಿಸುವನು ನೋಡಾ ನಮ್ಮ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ಇಂದಿನ ಇರುಳಿನಲ್ಲಿ ನಲ್ಲನು ಚಲ್ಲವಾಡುತ ಬಂದು ಮೆಲ್ಲನೆ ಎನ್ನ ಕೈವಿಡಿದನವ್ವಾ. ಅಲ್ಲಿ ಉಟ್ಟ ಸೀರೆಯ ನಿರಿಗಳು ಸಡಲಿ ಬಿದ್ದುವವ್ವಾ. ತೊಟ್ಟ ರವಕೆಯ ಗಂಟು ಬಿಚ್ಚಿ ಕಡೆಗಾದುವವ್ವಾ. ಅಖಂಡೇಶ್ವರನೆಂಬ ನಲ್ಲನು ಎನ್ನ ಬಿಗಿಯಪ್ಪಿ ತಕ್ಕೆ ೈಸಿಕೊಂಡು ಕೂಡಿದ ಸುಖವ ಇದಿರಿಟ್ಟು ಹೇಳಲಾರೆನವ್ವಾ.
--------------
ಷಣ್ಮುಖಸ್ವಾಮಿ
ಇಷ್ಟಲಿಂಗದಲ್ಲಿ ನೈಷೆ* ಬಲಿಯರು. ಪ್ರಾಣಲಿಂಗದಲ್ಲಿ ಪ್ರತಿಷೆ*ಯನರಿಯರು. ಬರಿದೆ ಇಷ್ಟಲಿಂಗಸಂಬಂಧವ ಪ್ರಾಣಲಿಂಗದ ನಿರ್ದೇಶವ ಬಲ್ಲೆವೆಂಬ ಭ್ರಷ್ಟರನೇನೆಂಬೆನಯ್ಯ ಅಖಂಡೇಶ್ವರಾ !
--------------
ಷಣ್ಮುಖಸ್ವಾಮಿ
ಇನ್ನು ಯೋಗೀಶ್ವರರ ಧ್ಯಾನಯೋಗಕ್ಕೆ ಸ್ಥಾನಂಗಳಾವುವೆನೆ : ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯ ಭ್ರೂಮಧ್ಯಾದಿ ಸ್ಥಾನಂಗಳಲ್ಲಿ ಬಂಧಮುದ್ರೆಗಳಿಂದೆ ಧ್ಯಾನಮಂ ಮಾಳ್ಪುದೆಂತೆನೆ : ಆಧಾರಚಕ್ರಗಳ ನಾಲ್ಕೆಸಳಮಧ್ಯದಲ್ಲಿ ಇಷ್ಟಾರ್ಥಮಂ ಕೊಡುವ ಸುವರ್ಣ ಕಾಂತಿಯನುಳ್ಳ ಆಧಾರಶಕ್ತಿಯಂ ಧ್ಯಾನಿಸುವುದು. ಸ್ವಾಧಿಷಾ*ನಚಕ್ರ ಆರೆಸಳಮಧ್ಯದಲ್ಲಿ ಸಕಲವರ್ಣದಿಂ ಲಿಂಗಸ್ವರೂಪನಾದ ಶಿವನಂ ಧ್ಯಾನಿಸುವುದು. ಮಣಿಪೂರಕಚಕ್ರ ಹತ್ತೆಸಳಮಧ್ಯದಲ್ಲಿ ಸುಪ್ತ ಸರ್ಪಾಕಾರದ ಮಿಂಚಿಗೆ ಸಮಾನದೀಪ್ತಿಯುಳ್ಳ ಸಕಲಸಿದ್ಧಿಗಳಂ ಕೊಡುವ ಕುಂಡಲಿಶಕ್ತಿಯಂ ಧ್ಯಾನಿಸುವುದು. ಅನಾಹತಚಕ್ರ ಹನ್ನೆರಡೆಸಳಮಧ್ಯದಲ್ಲಿ ಜ್ಯೋತಿರ್ಮಯಲಿಂಗಮಂ ಧ್ಯಾನಿಸುವುದು. ವಿಶುದ್ಧಿಚಕ್ರ ಷೋಡಶದಳಮಧ್ಯದಲ್ಲಿ ಸುಸ್ಥಿರಮಾದ ಆನಂದರೂಪಿಣಿಯಾದ ಸುಷುಮ್ನೆಯಂ ಧ್ಯಾನಿಸುವುದು. ಆಜ್ಞಾಚಕ್ರ ದ್ವಿದಳಮಧ್ಯದಲ್ಲಿ ವಾಕ್ಸಿದ್ಧಿಯಂ ಕೊಡುವ ದೀಪದ ಜ್ವಾಲೆಗೆ ಸಮಾನವಾದ ಜ್ಞಾನನೇತ್ರವೆನಿಸುವ ಶುದ್ಧಪ್ರಸಾದಜ್ಯೋತಿಯಂ ಧ್ಯಾನಿಸುವುದೇ ಧ್ಯಾನಯೋಗ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇಷ್ಟಲಿಂಗಕ್ಕೆ ರೂಪುಪದಾರ್ಥವನರ್ಪಿಸಿ, ಆ ಇಷ್ಟಲಿಂಗದಮುಖದಲ್ಲಿಯೇ ರೂಪುಪ್ರಸಾದವ ಪಡೆಯಬಲ್ಲಡೆ ಶಿವಪ್ರಸಾದಿಯೆಂಬೆನು. ಪ್ರಾಣಲಿಂಗಕ್ಕೆ ರುಚಿಪದಾರ್ಥವನರ್ಪಿಸಿ, ಆ ಪ್ರಾಣಲಿಂಗದಮುಖದಲ್ಲಿಯೇ ರುಚಿಪ್ರಸಾದವ ಪಡೆಯಬಲ್ಲಡೆ ಶಿವಪ್ರಸಾದಿಯೆಂಬೆನು. ಭಾವಲಿಂಗಕ್ಕೆ ತೃಪ್ತಿಪದಾರ್ಥವನರ್ಪಿಸಿ, ಆ ಭಾವಲಿಂಗದಮುಖದಲ್ಲಿಯೇ ತೃಪ್ತಿಪ್ರಸಾದವ ಪಡೆಯಬಲ್ಲಡೆ ಶಿವಪ್ರಸಾದಿಯೆಂಬೆನು. ಇಂತೀ ಭೇದವನರಿಯದೆ ಒಡಲಕಕ್ಕುತಲೆಗೆ ಒಗುಮಿಗೆ ಒಟ್ಟಿಸಿಕೊಂಡು ಬಾಯಿಗೆ ಬಂದಂತೆ ತಿಂದು ತನು ಕೊಡಹಿ, ಮನ ಹೇಸಿ, ರಣಭೂತನಂತೆ ಕಂಡಕಂಡತ್ತ ಚೆಲ್ಲುವ ದಿಂಡೆಯ ಮೂಳ ಬಂಡ ಹೊಲೆಯರಿಗೆ ಶಿವಪ್ರಸಾದದ ಒಲುಮೆಯೆಲ್ಲಿಯದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ