ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಈ ಶಿವಷಡಕ್ಷರಮಂತ್ರದಿಂದೆ ಸಾನಂದಋಷಿಯು ನರಕಜೀವಿಗಳನ್ನೆಲ್ಲ ಹರನ ಓಲಗದಲ್ಲಿರಿಸಿದನು ನೋಡಾ. ಈ ಶಿವಷಡಕ್ಷರಮಂತ್ರದಿಂದೆ ತಿರುಜ್ಞಾನಸಂಬಂಧಿಗಳು ಕೂನಪಾಂಡ್ಯನ ವಾದವ ಗೆದ್ದರು ನೋಡಾ. ಈ ಷಡಕ್ಷರಮಂತ್ರದಿಂದೆ ಶಿವಜಾತಯ್ಯನ ಶಿಷ್ಯ ಮಂತ್ರಜಾತಯ್ಯನು ಮಹಾಬಯಲನೈದಿದನು ನೋಡಾ. ಈ ಶಿವಷಡಕ್ಷರಮಂತ್ರದಿಂದೆ ಅಜಗಣ್ಣ ತಂದೆಗಳು ನಿಜಲಿಂಗೈಕ್ಯರಾದರು ನೋಡಾ. ಇಂತಪ್ಪ ಶಿವಷಡಕ್ಷರಮಂತ್ರವನು ಎನ್ನಂತರಂಗದ ಅರುಹಿನ ಮನೆಯಲ್ಲಿ ಬಚ್ಚಿಟ್ಟುಕೊಂಡು ಓಂ ನಮಃಶಿವಾಯ, ಓಂ ನಮಃಶಿವಾಯ, ಓಂ ನಮಃಶಿವಾಯ ಎಂದೆನುತಿರ್ದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಈಡಾ ಪಿಂಗಳೆಯಲ್ಲಿ ತುಂಬಿ ಸೂಸುವ ಹಂಸರೂಪವಾದ ಪ್ರಕೃತಿಪ್ರಾಣವಾಯುವನು ಸೋಹಂಭಾವದಿಂದೆ ವೈಕೃತಪ್ರಾಣನಂ ಮಾಡಿ ಧ್ಯಾನಮೂರ್ತಿಯಲಾದಡೂ ಪ್ರಾಣಾತ್ಮಕವಾದ ಸುನಾದದಲಾದಡೂ ಲಕ್ಷ್ಯಂಗಳಲಾದಡೂ ಮನೋಮಾರುತಂಗಳೊಳಗೂಡಿ ಲಯಿಸುವುದೆ ಲಯಯೋಗ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಈ ಹಠಯೋಗಕ್ಕೆ ನಿಜದಂಗವಾಗಿರ್ಪ ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿಗಳೆಂಬ ಅಷ್ಟಾಂಗಯೋಗದೊಳಗೆ ಮೊದಲು ಯಮಯೋಗದ ಲಕ್ಷಣವೆಂತೆಂದೊಡೆ : ಪರಸ್ತ್ರೀಯರ ಸಂಗವಿರಹಿತವಾಗಿಹುದು. ಪರದ್ರವ್ಯವನಪಹರಿಸದಿಹುದು. ಪರಹಿಂಸೆಯ ಮಾಡದಿಹುದು. ದುಃಖಿತರಿಗೆ ಹಿತವ ಚಿಂತಿಸುವುದು. ಶೋಕಭೀತಿಗಳಿಲ್ಲದಿಹುದು, ಅಲ್ಪಾಹಾರಿಯಾಗಿಹುದು. ಕುಟಿಲತೆಯಿಲ್ಲದಿಹುದು, ಕಾರ್ಪಣ್ಯವಿಲ್ಲದಿಹುದು. ಸತ್ಯವಚನವ ನುಡಿವುದು. ಜಲಸ್ನಾನ ಭಸ್ಮಸ್ನಾನಾದಿಗಳನಾಚರಿಸುವುದು. ಯಮಯೋಗವೆನಿಸುವುದಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಈ ಲಕ್ಷ್ಯತ್ರಯಂಗಳನರಿದ ಯೋಗೀಶ್ವರನು ಮುಂದೆ ಮುದ್ರಾತ್ರಯಂಗಳನರಿಯಬೇಕೆಂತೆನೆ : ಶಿವಧ್ಯಾನದಲ್ಲಿ ಕುಳ್ಳಿರ್ದು ನವದ್ವಾರಂಗಳಂ ಬಲಿವುದೆ ಷಣ್ಮುಖೀಮುದ್ರೆ. ಈ ಷಣ್ಮುಖೀಮುದ್ರೆಯಿಂದೆ ಒಳಗೆ ನಾದಾನುಸಂಧಾನದಲ್ಲಿ ಮನೋಮಾರುತಂಗಳು ನಿಶ್ಚಲಮಾಗಿರ್ಪುದೆ ಖೇಚರೀಮುದ್ರೆ ಎನಿಸುವುದು. ನೇತ್ರಂಗಳ ತುದಿಯ ಸೂಕ್ಷ್ಮರಂಧ್ರವನುಳ್ಳ ಕೃಷ್ಣತಾರಾಮಂಡಲದಮಧ್ಯದಲ್ಲಿ ಶುದ್ಧಚಿತ್ತದಿಂದೆ ನಿಶ್ಚಲಮಾದ ಪರಮಾತ್ಮಜ್ಯೋತಿಸ್ವರೂಪಮಪ್ಪ ದಿವ್ಯಲಿಂಗಮಂ ಕಾಣ್ಬುದೇ ಶಾಂಭವೀಮುದ್ರೆಯೆನಿಸುವುದಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ