ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ರಾಜಯೋಗದಲ್ಲಿ ನಿಶ್ಚಿಂತನಾದ ಯೋಗೀಶ್ವರನ ಸಹಜವರ್ತನಧರ್ಮವೆಂತೆನೆ : ಅರ್ಧಾವಲೋಚನವೆನಿಸುವ ಅರೆಮುಗಿದ ನೇತ್ರವುಳ್ಳಾತನಾಗಿ, ಸಕಲ ಸಂಶಯಂಗಳ ಬಿಟ್ಟ ಮನವುಳ್ಳಾತನಾಗಿ, ಮತ್ತಾ ಮನವು ಸುಷುಪ್ತಿಯಲ್ಲಿ ಮರೆಯದಂತೆ ಜಾಗ್ರದಲ್ಲಿ ಕೆದರದಂತೆ ನಿಶ್ಚಲಮಂ ಮಾಡಿ, ಭ್ರೂಮಧ್ಯಲಕ್ಷ್ಯದಲ್ಲಿರಲದೇ ಉನ್ಮನಿಯ ಸ್ವರೂಪವು. ಅದೇ ಪರಮಪದವು; ಅದೇ ಜ್ಞಾನವು; ಅದೇ ಮೋಕ್ಷವು; ಅದೇ ಪರಮರಹಸ್ಯಮಾದ ಶಿವಯೋಗವು. ಅದರಿಂದೆ ಅನ್ಯಮಾದ ಅರ್ಥಮಂ ಪೇಳ್ವ ಗ್ರಂಥವಿಸ್ತಾರವೆಲ್ಲವು ವ್ಯರ್ಥಮಪ್ಪುದಾಗಿ ಈ ಉನ್ಮನಿಯ ಸಾಧಿಸುವಾತನೆ ಜೀವನ್ಮುಕ್ತ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ರುದ್ರಾಕ್ಷಿಯೆಂದೊಡೆ ಸಾಕ್ಷಾತ್ ಪರಶಿವನು ತಾನೇ ನೋಡಾ. ಅಗ್ರಜನಾಗಲಿ ಅಂತ್ಯಜನಾಗಲಿ, ಮೂರ್ಖನಾಗಲಿ ಪಂಡಿತನಾಗಲಿ, ಸುಗುಣಿಯಾಗಲಿ ದುರ್ಗುಣಿಯಾಗಲಿ ಆವನಾದಡೇನು ? ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೆ ಆತ ಇಹಲೋಕದಲ್ಲಿಯೂ ರುದ್ರನೆನಿಸುವನು ; ಪರಲೋಕದಲ್ಲಿಯೂ ರುದ್ರನೆನಿಸುವನು. ಅದೆಂತೆಂದೊಡೆ :ಶಿವಧರ್ಮೇ- ``ರುದ್ರಾಕ್ಷಾಣಿ ಸ್ವಯಂ ರುದ್ರೋ ಭವೇತ್ ರುದ್ರಾಕ್ಷಧಾರಕಂ | ರುದ್ರಾಕ್ಷಂ ಧಾರಯೇತ್ ತಸ್ಮಾದಿಹ ರುದ್ರಃ ಪರತ್ರ ಚ || ಬ್ರಾಹ್ಮಣೋ ವಾಪಿ ಚಾಂಡಾಲೋ ದುರ್ಗುಣಃ ಸುಗುಣೋಪಿ ವಾ | ತಸ್ಮಾತ್ ರುದ್ರಾಕ್ಷಕಂಠೇನ ದೇಹಾಂತೇ ತು ಶಿವಂ ವ್ರಜೇತ್ ||'' ಎಂದುದಾಗಿ, ಇದು ಕಾರಣ ರುದ್ರಾಕ್ಷಿಯ ಮಹಿಮೆಯನು ಹೇಳುವಡೆ ವೇದಶಾಸ್ತ್ರ ಪುರಾಣಗಳಿಗೆ ಅಗೋಚರವಾಗಿಪ್ಪುದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ರಾಜಯೋಗಾನುಸಂಧಾನದಿಂದೆ ಕಾಣಿಸುವ ವಿಚಿತ್ರ ಪ್ರಭಾಮಂಡಲಕ್ಕೆ ದಿವ್ಯಾನಂದ ನಿಧಿನಿಕ್ಷೇಪಭೂಮಿಯಪ್ಪ ಪರಮ ಹೃದಯವೆನಿಸುವ ಲೋಚನಂಗಳೆ ಮುಖ್ಯವಾಗಿರ್ಪುವು. ಆ ಲೋಚನಂಗಳ ಮಧ್ಯದಲ್ಲಿ ಅಭೇದ್ಯ ಪರವಸ್ತುವನರಿವುದೆ ತಾರಕಯೋಗ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ