ಅಥವಾ
(8) (2) (5) (0) (1) (0) (0) (0) (1) (1) (0) (1) (0) (0) ಅಂ (1) ಅಃ (1) (10) (0) (5) (0) (0) (1) (0) (3) (0) (0) (0) (0) (0) (0) (0) (4) (0) (4) (1) (4) (10) (0) (6) (8) (5) (0) (3) (0) (3) (2) (4) (1) (10) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶುದ್ಧಕರ್ಮವಿಲ್ಲದ ಭಕ್ತಿ, ವರ್ಮವಿಲ್ಲದ ವಿರಕ್ತಿ, ಸದಾಸನ್ನದ್ಧವಿಲ್ಲದ ಪೂಜೆ, ವೃಥಾಹೋಹುದಕ್ಕೆ ಇದೆ ಪಥ. ಅನ್ನ ಉದಕ ಹೆಣ್ಣು ಹೊನ್ನು ಮಣ್ಣನಿತ್ತು ವರ್ಮವ ಮುಟ್ಟದೆ ಸತ್ಕರ್ಮವನರಿಯದೆ ಕುನ್ನಿ ಧ್ಯಾನಿಸಿ ಹೇಯವೆಂದರಿದು ತಲೆಗೊಡಹಿದಲ್ಲಿ ಮರೆದಂತಾಗದೆ, ನಿಜನಿಶ್ಚಯವನರಿದು ಕುರುಹಿಡಬೇಕು, ಸದ್ಯೋಜಾತಲಿಂಗವ.
--------------
ಅವಸರದ ರೇಕಣ್ಣ
ಶಬ್ದ ರೂಪಿನೊಳಗೆ ಅಡಗುವುದ ಬಲ್ಲಡೆ ದ್ವೈತಿ, ಆ ರೂಪು ನಿಃಶಬ್ದಕ್ಕೊಡಲಾಗಿ ಮುಗ್ಧವಾದುದ ಬಲ್ಲಡೆ ಅದ್ವೈತಿ. ಈ ಉಭಯದ ಹೊದ್ದಿಗೆಯ ಹೊದ್ದರೆ ನಿರ್ಧರವಾದಲ್ಲಿ ಸದ್ಯೋಜಾತಲಿಂಗ ಬಟ್ಟಬಯಲು.
--------------
ಅವಸರದ ರೇಕಣ್ಣ
ಶರೀರಕ್ಕೆ ರುಜೆ ಬಂದು ತೊಡಕಿದಲ್ಲಿ ರುಜೆಯ ಭೇದವನರಿತು, ಶರೀರಧರ್ಮವನರಿತು ತನುವಿಗೆ ಚಿಕಿತ್ಸೆ, ಆತ್ಮಂಗೆ ಸುಖರೂಪು ಉಭಯವನರಿದು ಆರೈವ ಕಾರಣ ಪಂಡಿತನಪ್ಪ. ಇಂತೀ ಭೇದದಂತೆ ಗುರುಚಾರಿತ್ರನಾಗಿ, ಶಿವಲಿಂಗಪೂಜಕನಾಗಿ, ಚರಸೇವೆಸನ್ನದ್ಧನಾಗಿ, ಇಂತೀ ಸತ್ಕ್ರೀಗಳಲ್ಲಿ ನಿರ್ಧರವಪ್ಪ ಮಹಾಭಕ್ತನಿಪ್ಪುದೆ ಸದ್ಯೋಜಾತಲಿಂಗದ ಸೆಜ್ಜಾಗೃಹ.
--------------
ಅವಸರದ ರೇಕಣ್ಣ
ಶಿಲೆಯ ಘಟಂಗಳಲ್ಲಿ ಪ್ರಜ್ವಲಿತದ ರ[ವಿ] ಸ್ಥೂಲಕ್ಕೆ ಸ್ಥೂಲವಾಗಿ, ಸೂಕ್ಷ್ಮಕ್ಕೆ ಸೂಕ್ಷ್ಮವಾಗಿ ಇಪ್ಪ ಭೇದದಂತೆ, ಅರಿದು ಕೂಡುವ ಜ್ಞಾನದ ಸತ್ವ ಜಾತಿಕುಲವಾದಡೆ ಸಾಕು, ವಿಜಾತಿಯ ಬೆರಸದೆ. ಸತ್ವಕ್ಕೆ ತಕ್ಕ ಸಾಮಥ್ರ್ಯ ನಡೆ, ಸತ್ವಕ್ಕೆ ತಕ್ಕ ನುಡಿ, ನುಡಿ ಸತ್ವಕ್ಕೆ ತಕ್ಕ ಜ್ಞಾನ, ಜ್ಞಾನಸತ್ವಕ್ಕೆ ತಕ್ಕ ಏಕೀಕರ. ಇಂತೀ ಜ್ಞಾನೋದಯಭೇದ, ಸದ್ಯೋಜಾತಲಿಂಗವ ಭೇದಿಸಿದ ಅಂಗ.
--------------
ಅವಸರದ ರೇಕಣ್ಣ