ಅಥವಾ
(8) (2) (5) (0) (1) (0) (0) (0) (1) (1) (0) (1) (0) (0) ಅಂ (1) ಅಃ (1) (10) (0) (5) (0) (0) (1) (0) (3) (0) (0) (0) (0) (0) (0) (0) (4) (0) (4) (1) (4) (10) (0) (6) (8) (5) (0) (3) (0) (3) (2) (4) (1) (10) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತತ್ವಂಗಳ ಹೊತ್ತು ವಿಸ್ತರಿಸಿ ಸ್ಥಲಂಗಳನಾಧರಿಸಿ ನಾನಾ ಭೇದಂಗಳಲ್ಲಿ ಹೊಕ್ಕು ವೇಧಿಸಿಹೆನೆಂದಡೂ, ಕಾಯ ಕರ್ಮವ ಅನುಭವಿಸುವುದ ಕಂಡು, ಜೀವ ನಾನಾ ಭವಂಗಳಲ್ಲಿ ಬರುತ್ತಿಹುದ ನೋಡಿ, ಇನ್ನಾವುದ ಶ್ರುತದಲ್ಲಿ ಕೇಳಲೇತಕ್ಕೆ ? ಇನ್ನಾವುದ ಇದಿರಿಟ್ಟು ದೃಷ್ಟವ ನೋಡಲೇತಕ್ಕೆ ? ಇನ್ನಾವ ಮನುವಿಂದ ಅನುಮಾನವನರಿಯಲೇತಕ್ಕೆ ? ಹಿಡಿದುದ ಬಿಡದೆ ಬಿಟ್ಟುದ ಹಿಡಿಯದೆ ಉಭಯದ ಒಳಗು ನಿರಿಯಾಣವಾದಲ್ಲಿ ತಾ ನಾಶನ ಸದ್ಯೋಜಾತಲಿಂಗವು ವಿನಾಶನ.
--------------
ಅವಸರದ ರೇಕಣ್ಣ
ತನ್ನನರಿದು ಇದಿರನರಿಯಬೇಕೆಂಬುದು ಪ್ರಮಾಣು. ಇದಿರ ಗುಣವನರಿತು ತನ್ನ ಗುಣವನರಿದು ಸಂಪಾದಿಸುವುದು ಅಪ್ರಮಾಣು. ತನ್ನ ಗುಣವನರಿದು ನಡೆವವರೆಲ್ಲರನು ಕಾಣಬಹುದು. ಇದಿರ ಗುಣವನರಿತು ತನ್ನ ಗುಣವ ಸಂಬಂಧಿಸಿ ನಡೆವರೆಲ್ಲರನೂ ಕಾಣಬಾರದು. ಅದು ನುಡಿದು ನುಡಿಯಿಸಿಕೊಂಬ ಪ್ರತಿಶಬ್ದದಂತೆ. ತನ್ನ ಗುಣವೇ ತನಗೆ ತಥ್ಯ, ತನ್ನ ಗುಣವೇ ತನಗೆ ಮಿಥ್ಯ. ಇದಿರ ಗುಣವ ತಾನರಿದು ನಿಲಬಲ್ಲಡೆ ತನಗೆ ತಥ್ಯವೂ ಇಲ್ಲ ಮಿಥ್ಯವೂ ಇಲ್ಲ. ಇದು ದ್ವೈತಾದ್ವೈತದ ಭೇದ, ಸದ್ಯೋಜಾತಲಿಂಗಕ್ಕೆ ಉಭಯಸ್ಥಲ ನಾಶವಿನಾಶ.
--------------
ಅವಸರದ ರೇಕಣ್ಣ
ತ್ರಿಗುಣಾತ್ಮನೆಂದು, ಪಂಚಭೂತಿಕಾತ್ಮನೆಂದು, ಅಷ್ಟತನುಮೂರ್ತಿಯಾತ್ಮನೆಂದು ಇಂತಿವರೊಳಗಾದ ಮರ್ಕಟ ವಿಹಂಗ ಪಿಪೀಲಿಕ ಜ್ಞಾನಂಗಳೆಂದು, ತ್ರಿಶಕ್ತಿಯೊಳಗಾದ ನಾನಾ ಶಕ್ತಿಭೇದಂಗಳೆಂದು, ಇಂದ್ರಿಯ ಐದರಲ್ಲಿ ಒದಗಿದ ನಾನಾ ಇಂದ್ರಿಯಂಗಳೆಂದು, ಷಡುವರ್ಣದೊಳಗಾದ ನಾನಾ ವರ್ಣಂಗಳೆಂದು, ಸಪ್ತಧಾತುವಿನೊಳಗಾದ ನಾನಾ ಧಾತುಗಳೆಂದು, ಅಷ್ಟಮದಂಗಳೊಳಗಾದ ನಾನಾ ಮದಂಗಳೆಂದು, ಇಂತೀ ನಾನಾ ವರ್ತನಂಗಳನರಿವ ಚಿತ್ತದ ಗೊತ್ತದಾವುದು ? ಒಂದು ಗಿಡುವಿನಲ್ಲಿ ಹುಟ್ಟಿದ ಮುಳ್ಳ ಒಂದೊಂದ ಮುರಿದು ಸುಡಲೇತಕ್ಕೆ ? ಬುಡವ ಕಡಿದು ಒಡಗೂಡಿ ಸುಡಲಿಕ್ಕೆ ವಿಶ್ವಮಯ ಮೊನೆ ನಷ್ಟ. ಇದು ಪಿಂಡಜ್ಞಾನ, ಶುದ್ಧಜ್ಞಾನೋದಯಭೇದ, ಸದ್ಯೋಜಾತಲಿಂಗವ ಕೂಡುವ ಕೂಟ.
--------------
ಅವಸರದ ರೇಕಣ್ಣ
ತಡೆ ದಾಡಾಬಂಧನಗಳಿಂದ ಹೋಗ[ದ], ಹಲುದಾಗದ ಸರ್ಪನಂತೆ, ಕ್ರಿಯಾಧರ್ಮಂಗಳಲ್ಲಿ ಆವರ್ಚಿಸಿ ಕಟ್ಟಿಗೆ ತಪ್ಪದಿಪ್ಪುದು ಸದ್ಭಕ್ತಿಸ್ಥಲ. ಆ ಭಕ್ತನ ಹೃತ್ಕಮಲಮಧ್ಯದಲ್ಲಿ ನಿಂದು ತ್ರಿವಿಧ ಮಲತ್ರಯವ ನಿವಾರಿಸಿ, ಆಗು ಚೇಗೆಯ ಮರೆದು, ವಂದನೆ ನಿಂದೆಗೆ ಮೈಗೊಡದೆ, ಕುಸುಮ-ಗಂಧದಂತೆ, ರ[ವಿ]-ಶಿಲೆಯಂತೆ, ಸವಿ-ಸಾರದಂತೆ ತಲೆದೋರದೆ ನಿಂದುದು ವಿರಕ್ತವೇಷ. ಅದು ಕಾಯ-ಜೀವದಂತೆ, ಜ್ಞಾತೃ-ಜ್ಞೇಯಭೇದದಂತೆ, ಪೂಜಕ-ಪೂಜೆಗೈತ ಉಭಯದ ಭೇದ ಐಕ್ಯ, ಸದ್ಯೋಜಾತಲಿಂಗದಲ್ಲಿ.
--------------
ಅವಸರದ ರೇಕಣ್ಣ