ಅಥವಾ
(8) (2) (5) (0) (1) (0) (0) (0) (1) (1) (0) (1) (0) (0) ಅಂ (1) ಅಃ (1) (10) (0) (5) (0) (0) (1) (0) (3) (0) (0) (0) (0) (0) (0) (0) (4) (0) (4) (1) (4) (10) (0) (6) (8) (5) (0) (3) (0) (3) (2) (4) (1) (10) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುಭಕ್ತ ಗುರುವಿಲ್ಲದೆ ಶಿಷ್ಯನಾಗಿ, ಲಿಂಗಭಕ್ತ ಲಿಂಗವಿಲ್ಲದೆ ಲಿಂಗವಂತನಾಗಿ, ಜಂಗಮಭಕ್ತ ಜಂಗಮವಿಲ್ಲದೆ ಜಂಗಮಕ್ಕಿಕ್ಕಿ ಮುಕ್ತನಾದ. ಇಂತೀ ಮೂವರ ಮುದ್ದು ಎನಗೆ ಸತ್ತುಹೋಯಿತ್ತಲ್ಲಾ ಎಂದು, ಬಿಕ್ಕದೆ ಕಣ್ಣನೀರಿಲ್ಲದೆ ಒಂದೆ ಸ್ವರದಲ್ಲಿ ಅಳುತ್ತಿದ್ದ ಸದ್ಯೋಜಾತಲಿಂಗ ಕೇಳಬೇಕೆಂದು.
--------------
ಅವಸರದ ರೇಕಣ್ಣ
ಗಂಡಭೇರುಂಡನ ಪಕ್ಷಿಯಂತೆ ಆವ ಬಾಯಲ್ಲಿ ಆಹಾರವ ಕೊಂಡಡೂಘಟವೊಂದರಲ್ಲಿ ಆತ್ಮಸುಖವನೆಯ್ದುವಂತೆ, ಪಿಂಡದಿಂದ ಜ್ಞಾನವನರಿದಡೂ, ಜ್ಞಾನದಿಂದ ಪಿಂಡ ಇಪ್ಪುದಾದ ಕಾರಣ ಜ್ಞಾನದಿಂದ ಪಿಂಡವನರಿದಡೂ, ಉಭಯಮುಖ ಗೊತ್ತು ಒಂದಾಗಿ ವಿಷ್ಟಿಸುವ ಪೃಷ*ದಂತೆ ಅರಿವುದು ನಾನಾಮುಖ ಬಿಡುವುದು ಒಂದೆ ತೆರನಾದ ಕಾರಣ, ಚಿತ್ರವಿಚಿತ್ರಂಗಳನರಿವ ನಯನ ಮುಚ್ಚಿದಲ್ಲಿ ಒಂದೆ ದೃಷ್ಟ ಸದ್ಯೋಜಾತಲಿಂಗವನರಿವುದಕ್ಕೆ.
--------------
ಅವಸರದ ರೇಕಣ್ಣ
ಗೂಡಿನೊಳಗಿದ್ದು ಕಾಲ ವೇಳೆಯನರಿದು ಕೂಗುವ ಕುಕ್ಕುಟ ತಾ ಸಾವುದ ಬಲ್ಲುದೆ? ತನ್ನ ಶಿರವನರಿದು ಶಿರ ಬೇರೆ ಅಂಗ ಬೇರಾದಲ್ಲಿ, ಆ ಅಂಗ ಪುಟನೆಗೆವಲ್ಲಿ ಆತ್ಮಸಂಗವೆಲ್ಲಿದ್ದಿತ್ತು? ಶಿರಚ್ಛೇದವಾದಲ್ಲಿ ಮತ್ತಾವ ಘಟಕ್ಕೂ ಶಿರಬಂಧವಾಗಲಿಕ್ಕೆ ಆ ಘಟ ಚೇತನವಡಗಿ ಅಲ್ಲಿಯೆ ಮೃತವಾಗಿಪ್ಪುದು. ಇಂತೀ ಘಟ-ಆತ್ಮನ ಉಭಯದ ಭೇದವ ಬಲ್ಲಡೆ ಪಿಂಡಜ್ಞಾನಸಂಬಂಧಿ, ಸದ್ಯೋಜಾತಲಿಂಗವ ಬಲ್ಲವ.
--------------
ಅವಸರದ ರೇಕಣ್ಣ
ಗುರುವಿಂಗೆ ಲಿಂಗ ಬಂದು ಗುರುವಾದುದನರಿದು ಮತ್ತರಿಯದೆ ಕೊಟ್ಟನಲ್ಲಾ, ಶಿಷ್ಯನೆಂದು ಆ ಲಿಂಗವ. ಗುರುವಾರೆಂಬುದನರಿಯದ ನಾ ಶಿಷ್ಯನೆಂದು ಕಟ್ಟಿದೆನಲ್ಲಾ ಆ ಲಿಂಗವ. ಆವ ಬೀಜವ ಬಿತ್ತಿದಡೂ ಆ ಬೀಜವಪ್ಪುದಲ್ಲದೆ ಬೇರೊಂದಪ್ಪುದೆ? ಜ್ಯೋತಿ ಜ್ಯೋತಿಯ ಮುಟ್ಟಿದಂತೆ ಇದಿರೆಡೆಯಿಲ್ಲದೆ ಗುರುಕರಜಾತನ ಮಾಡಬೇಕು. ನಾನು ಕರ್ತು, ಅವನು ಭೃತ್ಯನೆಂದಲ್ಲಿ ಗುರುವಾದನಲ್ಲದೆ, ಅಘಹರ ಶ್ರೀಗುರುವಾದುದಿಲ್ಲ. ಜ್ಞಾನದೀಕ್ಷೆ ಸಂಬಂಧ ಸದ್ಯೋಜಾತಲಿಂಗಕ್ಕೆ.
--------------
ಅವಸರದ ರೇಕಣ್ಣ
ಗುರುವೆಂಬುದ ಪ್ರಮಾಣಿಸಿದ ಶಿಷ್ಯನಾದಡೆ ತನ್ನಯ ಉಭಯದ ಗುರುವ ತಿಂದು ತೇಗಬೇಕು. ಲಿಂಗ ಭಕ್ತನಾದಡೆ ಅಂಗ ಲಿಂಗವೆಂಬ ಉಭಯವನೊಡೆದು ಉಭಯದ ಸಂದಿಯಲ್ಲಿ ಸಿಕ್ಕದೆ ನಿಜಲಿಂಗವಂತನಾಗಬೇಕು. ಜಂಗಮ ಅಳಿದು ವಿರಕ್ತನಾಗಬಲ್ಲಡೆ ಆ ಗುರು, ಆ ಶಿಷ್ಯ, ಆ ಲಿಂಗ, ಆ ಭಕ್ತನ, ಈ ಜಂಗಮ, ಈ ವಿರಕ್ತನ ಕೊಂದು ತಿಂದು ಅಂಗ ನಿರಂಗವಾಗಬಲ್ಲಡೆ ಸದ್ಭಾವಸಂಗಿ, ಷಟ್ಸ್ಥಲಬ್ರಹ್ಮಿ. ಸರ್ವಾರ್ಪಣ ಅಂತಸ್ಥಲೇಪ, ತದ್ಭಾವ ನಾಶ. ಈ ಸಂದನಳಿದಲ್ಲಿ ಸದ್ಯೋಜಾತಲಿಂಗದಲ್ಲಿ ವಿನಾಶವಾದ ನಿರ್ಲೇಪ
--------------
ಅವಸರದ ರೇಕಣ್ಣ