ಅಥವಾ
(8) (2) (5) (0) (1) (0) (0) (0) (1) (1) (0) (1) (0) (0) ಅಂ (1) ಅಃ (1) (10) (0) (5) (0) (0) (1) (0) (3) (0) (0) (0) (0) (0) (0) (0) (4) (0) (4) (1) (4) (10) (0) (6) (8) (5) (0) (3) (0) (3) (2) (4) (1) (10) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನೀತಿಭಕ್ತಿ ಕ್ರಿಯಾಭಕ್ತಿ ಭಾವಭಕ್ತಿ ಸದ್ಭಾವಭಕ್ತಿ ಜ್ಞಾನಭಕ್ತಿ ಇಂತೀ ಭಕ್ತಿಯ ವಿವರ: ನೀತಿಭಕ್ತಿಗೆ ಸರ್ವಗುಣಪ್ರೀತಿವಂತನಾಗಿ, ಕ್ರಿಯಾಭಕ್ತಿಗೆ ಬಿಡುಮುಡಿ ಉಭಯವನರಿದು, ಭಾವಭಕ್ತಿಗೆ ಸಂಕಲ್ಪವಿಕಲ್ಪ ದೋಷವ ಕಂಡು ಸದ್ಭಾವಭಕ್ತಿಗೆ ಮನ ವಚನ ಕಾಯ ತ್ರಿಕರಣವನರಿದು, ಜ್ಞಾನಭಕ್ತಿಗೆ ಜ್ಞಾತೃ ಜ್ಞಾನ ಜ್ಞೇಯ ಮುಂತಾದ ಮರ್ಕಟ ವಿಹಂಗ ಪಿಪೀಲಿಕ ಸಂಚಿತ ಪ್ರಾರಬ್ಧ ಆಗಾಮಿಗಳೆಂಬ ತೆರನ ತಿಳಿದು, ವಿಷ ಚರಣಾಂಗುಲದಲ್ಲಿ ವೇದ್ಥಿಸಿ, ಕಪಾಲದಲ್ಲಿ ನಿಂದು ಅಂಗ ಮೂರ್ಛೆಗೊಂಡಂತೆ, ಇಂತೀ ಭಕ್ತಿಸ್ಥಲದ ವಿವರ. ಹೆಚ್ಚು ಕುಂದನರಿದು ಕೊಡುವಲ್ಲಿ ಕೊಂಬಲ್ಲಿ ತಟ್ಟುವಲ್ಲಿ ಮುಟ್ಟುವಲ್ಲಿ, ತಾಗುವಲ್ಲಿ ಸೋಂಕುವಲ್ಲಿ ನಾನಾಗುಣಂಗಳಲ್ಲಿ ವಿವರವನರಿತು ವರ್ಮಜ್ಞನಾಗಿಪ್ಪ ಭಕ್ತನಂಗ, ಆ ಸುಖದ ಸಂಗ ಸದ್ಯೋಜಾತಲಿಂಗದ ನಿರಂಗ.
--------------
ಅವಸರದ ರೇಕಣ್ಣ
ನೋಡುವ ಕಣ್ಣ ಕನ್ನಡಿ ನುಂಗಿದ ಮತ್ತೆ ನೋಡಿ ನೋಡಿಸಿಕೊಂಬವರಿನ್ನಾರು ಹೇಳಾ. ಉಂಬ ಬಾಯಿ ಆಡುವ ಮಡಕೆಯಾದಲ್ಲಿ ಬಡಿಸುವರಿನ್ನಾರು ಹೇಳಾ. ನಿಮ್ಮೊಳಗಾದಲ್ಲಿ ಪೂಜಿಸುವರಿನ್ನಾರು ಹೇಳಾ. ನೀನೆನ್ನೊಳಗಾದಲ್ಲಿ ನಾನಿದಿರಿಟ್ಟು ಮುಟ್ಟುವಠಾವ ತೋರಾ. ನಾ ನಿನ್ನವನಾಗಿ ಇತ್ತ, ನೀನು ಎನ್ನವನಾಗಿ ಅತ್ತ, ನನಗೂ ನಿನಗೂ ಮಮತೆ ಬಿಡದಾಗಿ ನಾನು ನೀನು ತತ್ತು ಗೊತ್ತಿನ ಲಕ್ಷಿತರು. ಇದು ಭಕ್ತಿ ವಿಶ್ವಾಸ ಭೇದ, ಸದ್ಯೋಜಾತಲಿಂಗವ ಕೂಡಬೇಕಾದ ಕಾರಣ.
--------------
ಅವಸರದ ರೇಕಣ್ಣ
ನಾನಾ ಮೂಲಿಕೆ ಪಾಷಾಣಂಗಳಲ್ಲಿ ಪರುಷರಸಸಿದ್ಧಿಯಾದುದಿಲ್ಲವೆ? ನಾನಾ ವರ್ತನ ಸ್ಥಲಕುಳಂಗಳನರಿದಲ್ಲಿ ನಿಜವಸ್ತುವಿನ ನಿಜವನರಿತು ಪೂಜಿಸುವಲ್ಲಿ ಕಟ್ಟುಗೊತ್ತಿಗೆ ಬಾರನೆ? ಇದಕ್ಕೆ ದೃಷ್ಟಿ ನಿಮಿತ್ತ ಶಕುನಂಗಳು, ತಿಥಿವಾರಗಳು, ನಕ್ಷತ್ರಗ್ರಹಬಲಂಗಳು ನಂಬುಗೆಯಿಂದ ವಿಶ್ವಾಸದ ಬಲೋತ್ತರದಿಂದ ಸಂಕಲ್ಪಸಿದ್ಧಿಯಾಯಿತ್ತು. ಇದು ವಿಶ್ವಾಸ ಭೇದ, ಭಕ್ತಿಯ ಶ್ರದ್ಧೆ, ಸದ್ಯೋಜಾತಲಿಂಗದ ಹೆಚ್ಚುಗೆಯ ಸಂಗ.
--------------
ಅವಸರದ ರೇಕಣ್ಣ
ನವನೀತವ ಅರೆದು ಸಣ್ಣಿಸಬೇಕೆಂದಡೆ, ಅದು ಉಭಯ ಪಾಷಾಣದ ಮಧ್ಯದಲ್ಲಿ ಜ್ವಾಲೆಯ ಡಾವರಕ್ಕೆ ಕರಗುವದಲ್ಲದೆ ಅ[ರೆ]ಪುನಿಂದುಂಟೆ? ನೆರೆ ಅರಿದು ಹರಿದವನಲಿ ಪರಿಭ್ರಮಣವ ವಿಚಾರಿಸಲಿಕ್ಕೆ ಆ ವಿಚಾರದಲ್ಲಿಯೆ ಲೋಪವಾಯಿತ್ತು, ಸದ್ಯೋಜಾತಲಿಂಗದಲ್ಲಿ
--------------
ಅವಸರದ ರೇಕಣ್ಣ