ಅಥವಾ
(8) (2) (5) (0) (1) (0) (0) (0) (1) (1) (0) (1) (0) (0) ಅಂ (1) ಅಃ (1) (10) (0) (5) (0) (0) (1) (0) (3) (0) (0) (0) (0) (0) (0) (0) (4) (0) (4) (1) (4) (10) (0) (6) (8) (5) (0) (3) (0) (3) (2) (4) (1) (10) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಿಂಗವನರಿದು ಮುಟ್ಟಬೇಕೆಂಬಲ್ಲಿ ಅರಿವುದು ಲಿಂಗಕ್ಕೆ ಹೊರಗೆ ? ಲಿಂಗದಿಂದ ಅರಿದ ಅರಿವು ತಾನಾಗಿ ಬೇರೆ ದ್ವೈತವೆನಲಿಲ್ಲ, ಅದ್ವೈತವೆನಲಿಲ್ಲ. ಅದು ತರುವಿನ ತಿಗುಡಿನ ಸಾರದಂತೆ, ಆ ತರುವಿನ ಒಡಗೂಡಿಯೆ ಸುಖದುಃಖವ ಅನುಭವಿಸುವಂತೆ, ಅರಿದು ಅರ್ಪಿಸುವ ಕ್ರೀ ಸದ್ಯೋಜಾತಲಿಂಗದಲ್ಲಿ ಲೇಪ.
--------------
ಅವಸರದ ರೇಕಣ್ಣ
ಲಿಂಗಪ್ರಾಣ ಪ್ರಾಣಲಿಂಗ ಎಂಬ ಉಭಯದ ಮಧ್ಯದಲ್ಲಿ ನಿಂದು ಅರಿದರಿಹಿಸಿಕೊಂಬ ಪರಿಯಿನ್ನೆಂತೊ? ಅದು ತತ್ತಿಯೊಳಗಿದ್ದ ಶುಕ್ಲಶೋಣಿತದಂತೆ. ಆ ತತ್ತಿಯ ಭಿತ್ತಿಯ ಮರೆಯಲ್ಲಿ ಪಕ್ಷಿಯ ಸ್ಪರ್ಶನದಿಂದ ಬಲಿದು, ಭಿತ್ತಿ ಒಡೆದು ಪಕ್ಷಿ ತದ್ರೂಪಾಗಿ ರಟ್ಟೆ ಬಲಿವನ್ನಕ್ಕ, ಇಂತಪ್ಪಠಾವಿನಲ್ಲಿದ್ದು ತಾಯಿಯಿತ್ತ ಕುಟುಕ ಕೊಂಡು ಆ ಘಟ ಬಲಿದು, ರಟ್ಟೆಯ ಲಕ್ಷಣ ಯುಕ್ತಿಗೊಂಡು ಚರಿಸಿದ ಭೇದ ಪಿಂಡಜ್ಞಾನಸಂಬಂಧ. ಆ ಗುಣ ಅಭಿಮುಖವಾಗಿ ಚರಿಸಲಿಕ್ಕೆ ಜ್ಞಾನಪಿಂಡಸಂಬಂಧ. ಇಂತು ಪಿಂಡಜ್ಞಾನ ಜ್ಞಾನಪಿಂಡ ಉಭಯಲೇಪ ಸದ್ಯೋಜಾತಲಿಂಗದಲ್ಲಿ.
--------------
ಅವಸರದ ರೇಕಣ್ಣ
ಲಿಂಗವೆ ಅಂಗವಾದ ಮತ್ತೆ ಮುಟ್ಟಿಸಿಕೊಂಬುವರಿನ್ನಾರು? ಲಿಂಗವೆ ಪ್ರಾಣವಾದ ಮತ್ತೆ ಅರ್ಪಿಸಿಕೊಂಬುವರಿನ್ನಾರು? ಅಂಗ ಲಿಂಗವೆಂದಡೆ ತನು ಪ್ರಾಪ್ತಿಗೆ ಒಳಗು. ಮನ ಲಿಂಗವೆಂದಡೆ ಅದು ಭವಕ್ಕೆ ಬೀಜ. ಈ ಉಭಯದ ಅಳಿವುಳಿವ ತಿಳಿದು, ಅಂಗ ಮನಸ್ಸು ಒಂದುಗೂಡಿ, ಪುಂಜವ ಬೆಗಡಿಸುವ ವಜ್ರದ ಮೊನೆಯಂತೆ ಲಿಂಗದ ಭೇದಗೂಡಿಯೆ ಅಂಗ ನಿರಿಯಾಣವಾದಲ್ಲಿದ ಅದು ಲಿಂಗಾಂಗಿಯ ಸ್ಥಲ ಸದ್ಯೋಜಾತಲಿಂಗಕ್ಕೆ.
--------------
ಅವಸರದ ರೇಕಣ್ಣ