ಅಥವಾ
(8) (2) (5) (0) (1) (0) (0) (0) (1) (1) (0) (1) (0) (0) ಅಂ (1) ಅಃ (1) (10) (0) (5) (0) (0) (1) (0) (3) (0) (0) (0) (0) (0) (0) (0) (4) (0) (4) (1) (4) (10) (0) (6) (8) (5) (0) (3) (0) (3) (2) (4) (1) (10) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬೆಳಗಿನ ತುದಿಯಲ್ಲಿ ತಮ ಸೇರಿಪ್ಪಂತೆ ಬೆಳಗಿನ ಬುಡವು ತಮದ ಒಡಲೆಂದು ಅರಿತಲ್ಲಿ ಅರಿವು ಮರವೆಯಲ್ಲಿಂದ ಬಂದಿತ್ತೆಂದು ಆರಡಿಗೊಳಲೇತಕ್ಕೆ ? ಈ ದ್ವಂದ್ವವ ತಿಳಿದು ನಿಜವೊಂದರಲ್ಲಿ ನಾಶವಾಗಲಿಕ್ಕೆ ಸದ್ಯೋಜಾತಲಿಂಗವು ತನ್ನಲ್ಲಿ ವಿನಾಶವಪ್ಪನು.
--------------
ಅವಸರದ ರೇಕಣ್ಣ
ಬೆಂಕಿಯ ಬೈಕೆಗೆ ಕಲ್ಲ ಮುಚ್ಚಿದಡೆ ನಲವಿಂದ ಇರಬಲ್ಲುದೆ, ಕಾಷ*ಕಲ್ಲದೆ ? ಬಲು ಶಾಸ್ತ್ರವ ಕಲಿತು ವಾಗ್ವಾದದ ಬಲುಮೆಯಿಂದ ನುಡಿದಡೆ ಸಲೆ ನೆಲೆಯಲ್ಲಿದ್ದವ ಅವರಿಗೊಲವರವಪ್ಪನೆ, ತನ್ನ ನಿಳಯರಿಗಲ್ಲದೆ? ಇಂತೀ ಜಡ ಅಜಡವೆಂಬ ಉಭಯವನರಿದು ಹರಿದು ಕೂಡಬೇಕು, ಸದ್ಯೋಜಾತಲಿಂಗವ.
--------------
ಅವಸರದ ರೇಕಣ್ಣ
ಬ್ರಹ್ಮಾಂಡದಲ್ಲಿ ಪುಟ್ಟಿಹ ಲಕ್ಷಣ ಪಿಂಡಾಂಡದಲ್ಲಿ ಉಂಟೆಂಬರು. ಆ ಬ್ರಹ್ಮಾಂಡಕ್ಕೆ ತ್ರಿಜಾತಿವರ್ಗ, ಚರಸ್ಥಾವರ ಮೂಲಾದಿಭೇದ ಸಪ್ತಸಿಂಧು ಸವಾಲಕ್ಷ ಮುಂತಾದ ಮಹಾಮೇರುವೆ ಅಷ್ಟಾಷಷ್ಟಿ ಗಂಗಾನದಿಗಳು ಮುಂತಾದ ನವಪಾಷಾಣದೊಳಗಾದ ರತಿಸಂಭವ ಮುಂತಾದ ಷಟ್ಕರ್ಮ ಆಚರಣೆ ಮುಂತಾದ ಇಂತೀ ಬ್ರಹ್ಮಾಂಡದೊಳಗಾದ ವಸ್ತುಕ ವರ್ಣಕ ಇವು ಎಲ್ಲವು, ಲಕ್ಷಿಸಿಕೊಂಡು ಪ್ರಮಾಣಾದವು. ಈ ಪಿಂಡಾಂಡಕ್ಕೆ ಬ್ರಹ್ಮಾಂಡವ ಸರಿಗಾಬಲ್ಲಿ ನಾನಾ ವರ್ಣದ ಭೇದಂಗಳೆಲ್ಲವ ವಿಚಾರಿಸಲಿಕ್ಕೆ ಉಂಟು. ಘಟಭೇದದಲಿ ಇಲ್ಲ, ಜ್ಞಾನಭೇದದಲ್ಲಿ ಉಂಟೆಂದು ಕರ್ಮವ ವಿಚಾರಿಸಲಿಕ್ಕೆ ಪೃಥ್ವೀತತ್ವದೊಳಗಾದುದೆಲ್ಲವೂ ವಸ್ತುಕರೂಪು. ಅಪ್ಪುತತ್ವದೊಳಗಾದುದೆಲ್ಲವೂ ವರ್ಣಕರೂಪು. ತೇಜತತ್ವದೊಳಗಾದುದೆಲ್ಲವೂ ದೃಶ್ಯಾಂತರಭಾವ. ವಾಯುತತ್ವದೊಳಗಾದುದೆಲ್ಲವೂ ಖೇಚರಸಂಚಾರಭಾವ. ಆಕಾಶತತ್ವದೊಳಗಾದುದೆಲ್ಲವೂ ಇಂತೀ ಚತುರ್ಗುಣ ಭಾವವನೊಳಗೊಂಡು ಶಬ್ದಗಮ್ಯವಾಗಿ ಮಹದಾಕಾಶವ ಎಯ್ದುತ್ತಿಹುದಾಗಿ. ಇಂತೀ ಅಂಡಪಿಂಡವ ವಿಸ್ತರಿಸಿ ನೋಡಿಹೆನೆಂದಡೆ ಅಗ್ನಿಗೆ ಆಕಾಶದ ಉದ್ದ ಕಾಷ*ವನೊಟ್ಟಿದಡೂ ಅಲ್ಲಿಗೆ ಹೊತ್ತುವದಲ್ಲದೆ ಸಾಕೆಂದು ಒಪ್ಪುವದಿಲ್ಲ. ಇಂತೀ ಭೇದದಂತೆ ಸಕಲವ ನೋಡಿಹೆನೆಂದಡೆ ನಾಲ್ಕು ವೇದ ಒಳಗಾಗಿ ಹದಿನಾರು ಶಾಸ್ತ್ರ ಮುಂತಾಗಿ ಇಪ್ಪತ್ತೆಂಟು ದಿವ್ಯಾಗಮಂಗಳು ಕಡೆಯಾಗಿ ಇಂತಿವರೊಳಗಾದ ಉಪಮನ್ಯು, ಶಾಂಕರಸಂಹಿತೆ, ಚಿಂತನೆ, ಉತ್ತರ ಚಿಂತನೆ, ಪ್ರತ್ಯುತ್ತರ ಚಿಂತನೆ, ಸಂಕಲ್ಪಸಿದ್ಧಿ ಇಂತಿವರೊಳಗೆ ತಿಳಿದೆಹೆನೆಂದಡೆ ಕಲಿಕೆಗೆ ಕಡೆಯಿಲ್ಲ ಅರಿವಿಗೆ ತುದಿ ಮೊದಲಿಲ್ಲ. ಇಂತಿವೆಲ್ಲವ ಕಳೆದುಳಿದು ನಿಲಬಲ್ಲಡೆ ವರ್ಮಸ್ಥಾನ ಶುದ್ಧಾತ್ಮನಾಗಿಪ್ಪ ಭೇದವ ಹಿಡಿದು ಮಾಡುವಲ್ಲಿ ದೃಢಾತ್ಮನಾಗಿ, ಲಿಂಗವನರ್ಚಿಸಿ ಪೂಜಿಸುವಲ್ಲಿ ನೈಷಿ*ಕವಂತನಾಗಿ, ತ್ರಿವಿಧವ ಕುರಿತು ಅರಿದು ಮಾಡುವಲ್ಲಿ ನಿಶ್ಚಯವಂತನಾಗಿ, ಅಶ್ವತ್ಥವೃಕ್ಷದ ಪರ್ಣದ ಅಗ್ರದ ತುದಿಯ ಮೊನೆಯಲ್ಲಿ ಬಿಂದು [ಸಾ]ರಕ್ಕೆ ಮುನ್ನವೆ ಬಿದ್ದಂತೆ ಇಂತೀ ಕರ್ಮಕಾಂಡದಲ್ಲಿದ್ದ ಆತ್ಮನು ಹಾಗಾಯಿತ್ತೆಂಬುದ ಹೀಗರಿದು ಇಂತೀ ಉಭಯದಲ್ಲಿ ಚೋದ್ಯನಾಗಿ ಸದ್ಯೋಜಾತಲಿಂಗವ ಕೂಡಬೇಕು.
--------------
ಅವಸರದ ರೇಕಣ್ಣ
ಬಂಧಿಸಿ ಘಟವ ಬಿಟ್ಟಿಹೆನೆಂದಡೆ ಅಭಿಸಂಧಿಯಲ್ಲಿ ನೋವುದು ಜೀವ. ಕಂದದೆ ಕುಂದದೆ ನಿಜದಲ್ಲಿ ಹೊಂದಿಹೆನೆಂದಡೆ ಸರ್ವೇಂದ್ರಿಯ ಬಂಧುವಿನೊಳಗಿದೆ ಜೀವ. ಒಂದ ಮರೆದು ಒಂದನರಿದು ಮುಂದಣ ಅಡಿಯ ಮೆಟ್ಟಿಹೆನೆಂದಡೆ ಸಂದೇಹದ ಸಂದಣಿಗೊಳಗಿದೆ ಜೀವ. ಗುರುವಿಂದ ಕಂಡೆಹೆನೆಂದಡೆ ಅದು ಧರ್ಮಬೀಜ, ನಾನು ಕರ್ಮಬೀಜ. ಲಿಂಗದಿಂದ ಕಂಡೆಹೆನೆಂದಡೆ ಚತುರ್ವಿಧಫಲ ಭವಬೀಜ. ಜ್ಞಾನದಿಂದ ಕಂಡೆಹೆನೆಂದಡೆ ನಾನು ಸಾವಯ, ಅದು ನಿರವಯ. ಎನಗಿನ್ನೇತರಿಂದ ಕೂಟರಿ ಈ ಭಕ್ತಿಜಗದಾಟದ ಕಾಟ. ನಿನ್ನ ಕೂಟವ ಕೂಡಿಹೆನೆಂಬ ಕೋಟಲೆಯ ಬಿಡಿಸಿ ಎನ್ನಲ್ಲಿ ನೀನು ಅಲೇಖನಾಗು. ಭಿನ್ನಭಾವವಿಲ್ಲದಂತೆ, ಅನ್ಯ ಅನನ್ಯವೆಂಬುದ ನಿನ್ನ ಭಾವದಲ್ಲಿಯೆ ಮರೆಸಿ ನಾನುಗೂಡಿ ನೀನು ಬಟ್ಟಬಯಲು, ಸದ್ಯೋಜಾತಲಿಂಗವೆ.
--------------
ಅವಸರದ ರೇಕಣ್ಣ
ಬೇವಿನ ಮರದಲ್ಲಿ ಕುಳಿತು ಬೆಲ್ಲವ ಮೆದ್ದಡೆ ಕಹಿಯಪ್ಪುದೆ? ಅಂಧಕ ಅಮೃತವನೀಂಟಿದಲ್ಲಿ ಹುಳಿಯಪ್ಪುದೆ? ಪಂಗುಳ ಪಯಣಕ್ಕೆ ಬಟ್ಟೆ[ಯಿ]ಲ್ಲಾ ಎಂದಡೆ ಕೊಂದವರುಂಟೆ ಅವನನು? ಇದು ಕ್ರಿಯಾಶ್ರದ್ಧೆ, ಶುಶ್ರೂಷಾಭಾವ ಸದ್ಯೋಜಾತಲಿಂಗಕ್ಕೆ.
--------------
ಅವಸರದ ರೇಕಣ್ಣ
ಬ್ರಹ್ಮನ ಕಾಲಿನಲ್ಲಿ ಬಂದು, ವಿಷ್ಣುವಿನ ಕೈಯಲ್ಲಿ ಬೆಳೆದು, ರುದ್ರನ ಹಣೆಗಿಚ್ಚಿನಲ್ಲಿ ಬೇವುತ್ತ ನೋವುತ್ತ ಜೀವ ಹೋಗದೆ ನೋವವನಂತೆ, ಈ ಗುಣ ಪ್ರಾಣಲಿಂಗಿಯ ಭೇದ ಸದ್ಯೋಜಾತಲಿಂಗವನರಿವುದಕ್ಕೆ.
--------------
ಅವಸರದ ರೇಕಣ್ಣ