ಅಥವಾ
(8) (2) (5) (0) (1) (0) (0) (0) (1) (1) (0) (1) (0) (0) ಅಂ (1) ಅಃ (1) (10) (0) (5) (0) (0) (1) (0) (3) (0) (0) (0) (0) (0) (0) (0) (4) (0) (4) (1) (4) (10) (0) (6) (8) (5) (0) (3) (0) (3) (2) (4) (1) (10) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮೊನೆಯಿಲ್ಲ[ದೆ] ಮುಂಡವ ಹಿಡಿದು ಇರಿದಲ್ಲಿ ಗಾಯಕ್ಕೆ ಕುರುಹುಂಟೆ? ದೇವಪದನಿಷೆ*ಯಿಲ್ಲದಲ್ಲಿ ಅರ್ಚಿಸಿ ಪೂಜಿಸಲಿಕ್ಕೆ ದೃಷ್ಟವುಂಟೆ? ಇದು ಕಾರಣದಲ್ಲಿ ಕ್ಷುಧೆಗೆ ಅನ್ನ, ಸಮಯಕ್ಕೆ ಕ್ಷಮೆ, ನೆರೆ ಅರಿದವರಲ್ಲಿ ಹೊರೆಯಿಲ್ಲದ ಕೂಟ, ಭಕ್ತಿ ಜ್ಞಾನ ಉಭಯಸ್ಥಲಲೇಪ ಸದ್ಯೋಜಾತಲಿಂಗಕ್ಕೆ.
--------------
ಅವಸರದ ರೇಕಣ್ಣ
ಮಧುರ ಚೂರ್ಣಕ್ಕೆ ಕಠಿಣದ ಪದರ ಉಂಟೆ? ವಿಶ್ವಾಸದಲ್ಲಿ ಪೂಜಿಸುವಾತಂಗೆ ಉತ್ತಮ ಕನಿಷ* ಮಧ್ಯಮವೆಂದು ಲಕ್ಷಿಸಲುಂಟೆ? ಮಾಹೇಶ್ವರ ಅರ್ಚನೆಯ ಮಾಡುವಲ್ಲಿ ಮಹಾದೇವ ತಪ್ಪದೆಯಿಪ್ಪ, ಇದು ಭಕ್ತಿವಿಶ್ವಾಸಸ್ಥಲ ಸದ್ಯೋಜಾತಲಿಂಗಕ್ಕೆ.
--------------
ಅವಸರದ ರೇಕಣ್ಣ
ಮುಟ್ಟುವುದು ತಟ್ಟುವುದು ಸೋಂಕುವುದು ಸುಳಿವುದು ಲಿಂಗ ಮುಂತೆಂಬಲ್ಲಿ ಅಂಗ ಹಿಂಚೆಂಬಲ್ಲಿ, ಮುಂದುಹಿಂದಣ ಉಭಯವನರಿವುದಕ್ಕೆ ಸಂದೇಹಾಸ್ಪದವಾದಲ್ಲಿ ಅದು ಅನರ್ಪಿತಭೇದ ಸದ್ಯೋಜಾತಲಿಂಗಕ್ಕೆ.
--------------
ಅವಸರದ ರೇಕಣ್ಣ
ಮರನನೇರದೆ ಹಣ್ಣು ಕೊಯ್ಯಬಹುದೆ? ಕುಸುಮವಿಲ್ಲದೆ ಗಂಧವ ಮುಡಿಯಬಹುದೆ? ಉಪದೃಷ್ಟವಿಲ್ಲದೆ ನಿಜದೃಷ್ಟವ ಕಾಣಬಹುದೆ? ಕ್ರೀಶ್ರದ್ಧೆಯಿಲ್ಲದೆ ತ್ರಿವಿಧಕರ್ತೃ ತನಗೆ ಸಾಧ್ಯವಪ್ಪುದೆ? ಇದು ಕಾರಣ ಗುರುವಿನಲ್ಲಿ ಸದ್ಭಾವ, ಲಿಂಗದಲ್ಲಿ ಮೂರ್ತಿಧ್ಯಾನ, ಜಂಗಮದಲ್ಲಿ ತ್ರಿವಿಧಮಲದೂರಸ್ಥನಾಗಿಪ್ಪುದು, ಸದ್ಭಕ್ತನಂಗ, ಚಿದ್ಘನವಸ್ತುವಿನ ಸಂಗ, ಸದ್ಯೋಜಾತಲಿಂಗಕ್ಕೆ ಸುಸಂಗ.
--------------
ಅವಸರದ ರೇಕಣ್ಣ
ಮುಟ್ಟಿದಲ್ಲಿ ಬ್ರಹ್ಮನ ಕೊಂದು, ಅರ್ಪಿತದಲ್ಲಿ ವಿಷ್ಣುವ ಕೊಂದು, ತೃಪ್ತಿಯಲ್ಲಿ ರುದ್ರನ ಕೊಂದು, ಇಂತೀ ತ್ರಿವಿಧ ಭೇದ ಸತ್ತು ತಾನುಳಿದ ಭೇದವ ಕಂಡುನಿಂದ ನಿಜಲಿಂಗಪ್ರಾಣ ಸದ್ಯೋಜಾತಲಿಂಗದಲ್ಲಿ.
--------------
ಅವಸರದ ರೇಕಣ್ಣ