ಅಥವಾ
(8) (2) (5) (0) (1) (0) (0) (0) (1) (1) (0) (1) (0) (0) ಅಂ (1) ಅಃ (1) (10) (0) (5) (0) (0) (1) (0) (3) (0) (0) (0) (0) (0) (0) (0) (4) (0) (4) (1) (4) (10) (0) (6) (8) (5) (0) (3) (0) (3) (2) (4) (1) (10) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಿಹ್ವೆ ಅಮೃತಾನ್ನವಾದಡೆ ಇದಿರಿಟ್ಟುಕೊಳ್ಳಲೇತಕ್ಕೆ? ನೋಡುವ ಅರ್ಪಿತ ದ್ರವ್ಯಂಗಳೆಲ್ಲವೂ ಲಿಂಗಾರ್ಪಿತವಾದ ಮತ್ತೆ ಅರ್ಪಿತ ಆರಲ್ಲಿ ಮುಟ್ಟಿಹುದು ಹೇಳಾ? ದೃಷ್ಟಕ್ಕೆ ದೃಷ್ಟವ ಕೊಟ್ಟು, ತೃಪ್ತಿಯ ಆತ್ಮಂಗಿತ್ತು ಆತ್ಮನಲ್ಲಿದ್ದ ಅರ್ಪಿತವಾರಿಗೆಂದರಿಯಬೇಕು, ಸದ್ಯೋಜಾತಲಿಂಗವ ಇದಿರಿಟ್ಟ ತೆರದಲ್ಲಿ.
--------------
ಅವಸರದ ರೇಕಣ್ಣ
ಜೀವ ಆತ್ಮನನರಿಯಬೇಕೆಂಬರು, ಆತ್ಮ ಪರಮಾತ್ಮನನರಿಯಬೇಕೆಂಬರು. ಇಂತೀ ಆತ್ಮಭೇದವನರಿವುದಕ್ಕೆ ಪದರದ ಹೊರೆಯೆ? ಅಟ್ಟಣೆಯ ಸಂದೆ ? ಅರಿದಲ್ಲಿ ಪರಮ, ಮರೆದಲ್ಲಿ ಜೀವನೆಂಬುದು. ಆ ಉಭಯವ ಸಂಪಾದಿಸುವುದು ಅರಿವೊ? ಮರವೆಯೊ? ಬಯಲ ಮರೆಮಾಡಿ ತೆರೆಗಟ್ಟಲಿಕ್ಕೆ ಅವರೊಳಗಾದ ದೃಷ್ಟವ ಕಾಬುದು, ತೆರೆಯ ತೆಗೆಯಲಿಕ್ಕೆ ಬಯಲ ಕಾಬುದು. ದೃಕ್ಕಿಂಗೆ ದೃಶ್ಯ ಒಂದೊ ಎರಡೊ ಎಂಬುದ ತಿಳಿದಲ್ಲಿ ಸದ್ಯೋಜಾತಲಿಂಗದ ಕೂಟ.
--------------
ಅವಸರದ ರೇಕಣ್ಣ
ಜಾತಿರತ್ನವ ಸುಟ್ಟಡೆ ಪ್ರಭೆ ಪ್ರಜ್ವಲಿಸುವುದಲ್ಲದೆ, ವಿಜಾತಿಯ ರತ್ನ ಬೆಂಕಿಯಲ್ಲಿ ಬೆಂದಡೆ ಹೊರೆಗಳೆದು, ಪ್ರಭೆಯ ತೆರೆ ನಿಂದು, ತಾ ಜಜ್ಜರಿಯಾಗಿ ನಷ್ಟವಾಗುತಿಪ್ಪುದು. ನಡೆ ನುಡಿ ಶುದ್ಧಾತ್ಮಂಗೆ ಆಗುಚೇಗೆ ಸೋಂಕಿದಲ್ಲಿ, ವಂದನೆ ನಿಂದೆ ಬಂದಲ್ಲಿ, ತನುವಿನ ಪ್ರಾಪ್ತಿ ಸಂಭವಿಸಿದಲ್ಲಿ, ಲಿಂಗವಲ್ಲದೆ ಪೆರತೊಂದನರಿಯ. ಆತ್ಮತೇಜಿಗೆ, ಅಹಂಕಾರಿಗೆ, ದುರ್ವಿಕಾರವಿಷಯಾಂಗಿಗೆ, ಒಂದು ವ್ರತವ ಯತಿಯೆಂದು ಹಿಡಿದು ಮತ್ತೊಂದು ವ್ರತದ ತ್ರಿವಿಧಮಲವೆಂದು ಬಿಟ್ಟು ಮತ್ತೊಬ್ಬ ದಾತೃ ಇತ್ತೆಹೆನೆಂದಲ್ಲಿ ಭಕ್ಷಿಸಿ, ತ್ರಿವಿಧವ ಹಿಡಿದು ಮತ್ತನಪ್ಪವಂಗೆ ವಿರಕ್ತಿ ಎತ್ತಣ ಸುದ್ದಿ? ಇಂತೀ ಉಭಯಸ್ಥಲಭೇದವನರಿದಾಚರಿಸಬೇಕು, ಸದ್ಯೋಜಾತಲಿಂಗವನರಿವುದಕ್ಕೆ.
--------------
ಅವಸರದ ರೇಕಣ್ಣ