ಅಥವಾ
(8) (2) (5) (0) (1) (0) (0) (0) (1) (1) (0) (1) (0) (0) ಅಂ (1) ಅಃ (1) (10) (0) (5) (0) (0) (1) (0) (3) (0) (0) (0) (0) (0) (0) (0) (4) (0) (4) (1) (4) (10) (0) (6) (8) (5) (0) (3) (0) (3) (2) (4) (1) (10) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಷ್ಟಲಿಂಗಕ್ಕೆ ದೃಷ್ಟಾರ್ಪಿತ, ಪ್ರಾಣಲಿಂಗಕ್ಕೆ [.....ಅರ್ಪಿತ] ಜ್ಞಾನಲಿಂಗಕ್ಕೆ ಪರಮಪರಿಣಾಮವೆ ಅರ್ಪಿತ. ಇಂತೀ ತ್ರಿವಿಧಾರ್ಪಣದಲ್ಲಿ ಸುಚಿತ್ತನಾಗಿರಬೇಕು, ಸದ್ಯೋಜಾತಲಿಂಗವನರಿವುದಕ್ಕೆ.
--------------
ಅವಸರದ ರೇಕಣ್ಣ
ಇಂದ್ರಿಯಂಗಳಲ್ಲಿ ಲಿಂಗವು ಅರ್ಪಿತವ ಸಂದ್ಥಿಸಿಕೊಂಡು ಉಂ[ಬು]ದೆಂಬ ತ್ರಿಭಂಗಿ ಗ್ರಹಿತವ ನೋಡಾ. ಇಂದ್ರಿಯಂಗಳ ಮುಖದಲ್ಲಿ ಲಿಂಗವು ಬಂದು ಉಂಬಾಗ ಇಂದ್ರಿಯವೆ ಲಿಂಗಕ್ಕೆ ಬೀಜವೆ? ಅದು ಗರಿಗೋಲಿನ ಮೊನೆಯಂತೆ, ಲಿಂಗದಿಂದ ಸರ್ವೇಂದ್ರಿಯ ನಿಶ್ಚಯ. ಇದು ಲಿಂಗವ್ಯವಧಾನಿಯ ಅಂಗ, ಸದ್ಯೋಜಾತಲಿಂಗದ ಸಂಗ.
--------------
ಅವಸರದ ರೇಕಣ್ಣ
ಇಂದ್ರ ಕಪಾಲ, ಅಗ್ನಿ ನಯನ, ಯಮ ಬಾಯಿ, ನೈಋತ್ಯ ಕರ, ವರುಣ ಹೃತ್ಕಮಲ, ವಾಯವ್ಯ ನಾಬ್ಥಿ, ಕುಬೇರ ಗುಹ್ಯ, ಈಶಾನ ಜಂಘೆ, ಇಂತೀ ಅಷ್ಟತನುಮೂರ್ತಿ ರೋಹವಾಹ ಪ್ರಮಾಣು. ಅವರೋಹವಾಗಿ ಮುಮುಕ್ಷುವಾಗಿ ಅಷ್ಟತನುವಿನಲ್ಲಿ ಆತ್ಮನು ನಿಶ್ಚಯವಾದುದನರಿದು ಸದ್ಯೋಜಾತಲಿಂಗವ ಹೊರೆಯಿಲ್ಲದೆ ಕೂಡಬೇಕು.
--------------
ಅವಸರದ ರೇಕಣ್ಣ
ಇಂತೀ ವರ್ಮಭೇದಂಗಳ ಸ್ಥಲವಿವರಂಗಳ, ತತ್ವಭೇದಂಗಳ ನಿರೀಕ್ಷಿಸಿ ನೋಡಿಹೆನೆಂದಡೆ, ಭೇದಕ್ಕೆ ವಿಭೇದವಾಗಿ ಕಾಬ ಹೊರೆಗೆ ಕಟ್ಟಣೆಯಿಲ್ಲ. ಹಿಡಿವಲ್ಲಿ ಅಡಿಯ ಕಂಡು, ಬಿಡುವಲ್ಲಿ ಬೇರ ಕಿತ್ತು, ಬಿಡುಮುಡಿಯನರಿದಲ್ಲಿ ಉಭಯಕಕ್ಷೆಯೆ ಲೋಪ ಸದ್ಯೋಜಾತಲಿಂಗವನರಿದಲ್ಲಿ.
--------------
ಅವಸರದ ರೇಕಣ್ಣ
ಇಂತೀ ಭೇದಂಗಳಲ್ಲಿ ಅರ್ಪಿಸಿಕೊಂಬ ವಸ್ತು ಗುರುಲಿಂಗಕ್ಕೆ ಒಡಲಾಗಿ, ಆದಿಯಾಗಿಪ್ಪ ಶಿವಲಿಂಗವನರಿತು, ಶಿವಲಿಂಗಕ್ಕಾದಿಯಾಗಿಪ್ಪ ಚರಲಿಂಗವನರಿತು, ಆ ಚರಲಿಂಗಕ್ಕಾಗಿಯಪ್ಪ ಪ್ರಸಾದಲಿಂಗವನರಿತು, ಪ್ರಸಾದಲಿಂಗಕ್ಕಾದಿಯಾಗಿಪ್ಪ ಮಹಾಲಿಂಗವನರಿತು, ಆ ಮಹಾಲಿಂಗ ಮಹದೊಡಗೂಡುವ ಬೆಳಗಿನ ಕಳೆಯನರಿತು ಸದ್ಯೋಜಾತಲಿಂಗದ ಜಿಹ್ವೆಯನರತಿವಂಗಲ್ಲದೆ ಅರ್ಪಿಸಬಾರದು.
--------------
ಅವಸರದ ರೇಕಣ್ಣ