ಅಥವಾ
(8) (2) (5) (0) (1) (0) (0) (0) (1) (1) (0) (1) (0) (0) ಅಂ (1) ಅಃ (1) (10) (0) (5) (0) (0) (1) (0) (3) (0) (0) (0) (0) (0) (0) (0) (4) (0) (4) (1) (4) (10) (0) (6) (8) (5) (0) (3) (0) (3) (2) (4) (1) (10) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪೂರ್ವದಿಂದ ಉತ್ತರಕ್ಕೆ ಬಂದ ಸೂರ್ಯನು ಅಸ್ತಮಯವಾಯಿತ್ತೆಂದು ಜಾಹ್ಯಗೆ ಒಡಲಾಗಿ, ಮತ್ತಾ ವರುಣಪ್ರದಕ್ಷಿಣದಿಂದ ಬಂದು ಪೂರ್ವದಲ್ಲಿ ಹುಟ್ಟಲಿಕ್ಕೆ ನಿನ್ನಿಂಗೆ ಇಂದಿಂಗೆಯೆಂಬುದು ಒಂದೊ ಎರಡೊ ? ಅಂದಿಗೆ ಜಾÕನ, ಇಂದಿಗೆ ಮರವೆ, ಎಂಬುದು ಒಂದೊ ಎರಡೊ ? ಅದು ಘಟದ ಪ್ರವೇಶದಿಂದ. ಪೂರ್ವ ಉತ್ತರಕ್ಕೆ ಬಂದಾತ್ಮನನರಿದು ಉಭಯವ ತಿಳಿದು ಸಂದು ನಾಶನವಾದಲ್ಲಿ ಸದ್ಯೋಜಾತಲಿಂಗವು ವಿನಾಶವಾದ.
--------------
ಅವಸರದ ರೇಕಣ್ಣ
ಪರುಷ ಲೋಹವ ಸೋಂಕಿದಲ್ಲಿ ಆ ಗುಣವಳಿದು ಹೇಮವಾಯಿತ್ತಲ್ಲದೆ, ಪುನರಪಿ ಶುದ್ಧಾತ್ಮವಾದುದಿಲ್ಲ. ಗುರು ಲಿಂಗವೆಂದು ಕೊಟ್ಟಡೆ ಅಂಗದಲ್ಲಿ ಬಂಧವಾಯಿತ್ತಲ್ಲದೆ, ಸರ್ವಾಂಗ ಆತ್ಮನಲ್ಲಿ ಲೀಯವಾದುದಿಲ್ಲ. ಇಂತಿದು ಕಾರಣದಲ್ಲಿ, ಕೆಂಡದ ಮೇಲೆ ಕಟ್ಟಿಗೆಯ ಹಾಕಿದಡೆ ಪೊತ್ತುವುದಲ್ಲದೆ, ನಂದಿದ ಪ್ರಕಾಶಕ್ಕೆ ಅರಳೆಯ ತಂದಿರಿಸಿದಡೆ ಹೊತ್ತಿದುದುಂಟೆ? ಇದು ಕಾರಣ, ಸಂಸಾರಪಾಶದಲ್ಲಿ ಬಿದ್ದ ಗುರು ಇಂತೀ ಗುರುಸ್ಥಲನಿರ್ವಾಹಸಂಪಾದನೆ, ಸದ್ಯೋಜಾತಲಿಂಗಕ್ಕೆ.
--------------
ಅವಸರದ ರೇಕಣ್ಣ
ಪೃಥ್ವಿಯ ವಂಶಿಕದಲ್ಲಿ ಆತ್ಮನು ಬಂದಿರಲಿಕ್ಕಾಗಿ ಗುಣಗಂಬ್ಥೀರದಲ್ಲಿ ಇದ್ದಿತೆಂಬರು. ಅಪ್ಪುವಿನಂಶಿಕದಲ್ಲಿ ಆತ್ಮನು ಬಂದಿರಲಿಕ್ಕಾಗಿ ಸರ್ವಸಾರಮಯವಾಗಿದ್ದಿತ್ತೆಂಬರು. ತೇಜದಂಶಿಕದಲ್ಲಿ ಆತ್ಮ ಬಂದಿರಲಿಕ್ಕಾಗಿ ಸರ್ವದೀಪ್ತವಾಗಿದ್ದಿತ್ತೆಂಬರು. ವಾಯುವಿನಂಶಿಕದಲ್ಲಿ ಆತ್ಮನು ಬಂದಿರಲಿಕ್ಕಾಗಿ ಸರ್ವಸಂಚಲಮಯವಾಗಿದ್ದಿತ್ತೆಂಬರು. ಆಕಾಶದಂಶದಲ್ಲಿ ಆತ್ಮನು ಬಂದಿರಲಿಕ್ಕಾಗಿ ಇಂತೀ ಐದು ಭೇದದಲ್ಲಿ ದಶವಾಯುವ ಕಲ್ಪಿಸಿಕೊಂಡು, ಹೆಸರ ರೂಹಿಟ್ಟು ಅಸುನಾಥನ ಒಡಗೂಡಬೇಕೆಂಬಲ್ಲಿ ಇದು ಸಂದಿಲ್ಲದ ಸಂಶಯ. ನಾನಾರು ಇದೇನೆಂಬುದು ಏಕೀಕರಿಸಿದಲ್ಲಿ ಸರ್ವೇಂದ್ರಿಯ ನಾಶನ, ಸದ್ಯೋಜಾತಲಿಂಗವನರಿವುದು ವಿನಾಶನ.
--------------
ಅವಸರದ ರೇಕಣ್ಣ
ಪಿಂಡದ ಸರ್ವಾಂಗದಲ್ಲಿ ಆತ್ಮನು ವೇಧಿಸಿ ಇದ್ದಿಹಿತ್ತೆಂಬರು. ಕರ ಚರಣ ಕರ್ಣ ನಾಸಿಕ ನಯನ ಇವನರಿದು ಕಳೆದಲ್ಲಿ ಆತ್ಮ ಘಟದಲ್ಲಿದ್ದಿತ್ತು. ಶಿರಚ್ಛೇದನವಾದಲ್ಲಿ ಆತ್ಮ ಎಲ್ಲಿ ಅಡಗಿತ್ತು ? ಇದನರಿತು ಆತ್ಮ ಪೂರ್ಣನೊ, ಪರಿಪೂರ್ಣನೊ ಎಂಬುದ ತಿಳಿದು ನಿಶ್ಚಯದಲ್ಲಿ ನಿಂದುದು ಪಿಂಡಜ್ಞಾನಸಂಬಂಧ. ಇದು ಸದ್ಯೋಜಾತಲಿಂಗವ ಕೂಡುವ ಕೂಟ.
--------------
ಅವಸರದ ರೇಕಣ್ಣ
ಪೃಥ್ವಿಯಲ್ಲಿ ಅಪ್ಪು ಕೂಡಲಿಕ್ಕೆ ಅಗ್ನಿ ಕೂಡಿ ನಾಲ್ಕು ಭೇದವಾಗಿಪ್ಪುದು. ಆ ಅಗ್ನಿಯಲ್ಲಿ ವಾಯು ಕೂಡಿ ಏಳು ಭೇದವಾಗಿಪ್ಪುದು. ಆ ವಾಯುವಿನಲ್ಲಿ ಆಕಾಶ ಕೂಡಿ ಹದಿನಾರು ಭೇದವಾಗಿಪ್ಪುದು. ಇಂತೀ ಪೃಥ್ವಿಯ ಭೇದ, ಅಪ್ಪುವಿನ ಸರ್ವಸಾರ, ಅಗ್ನಿಗೆ ತನ್ಮಯ ಜಿಹ್ವೆ, ವಾಯುವಿಗೆ ಸರ್ವಗಂಧ, ಆಕಾಶಕ್ಕೆ ಆವರಣ ಅಲಕ್ಷ, ಇಂತೀ ಪಂಚೀಕರಣಂಗಳ ವಿಭಾಗಿಸಿ ಸೂತ್ರವಿಟ್ಟು ಒಂದರಿಂದ ಹಲವು ಲೆಕ್ಕವ ಸಂದಣಿಸುವಂತೆ, ಲೆಕ್ಕವ ಹಲವ ಕಂಡು ಒಂದರಿಂದ ವಿಭಾಗಿಸಿದರೆಂಬುದನರಿದು ತಾಯ ಗರ್ಭದ ಶಿಶು ಭಿನ್ನವಾದಂತೆ ಸುಖದುಃಖವ ವಿಚಾರಿಸಬೇಕು. ಸದ್ಯೋಜಾತಲಿಂಗವೆಂದರಿವನ್ನಕ್ಕ ಉಭಯವ ವಿಚಾರಿಸಬೇಕು
--------------
ಅವಸರದ ರೇಕಣ್ಣ
ಪರುಷರಸ ನಿರ್ಧರವಾದಲ್ಲಿ ಹೇಮವ ವೇಧಿಸಿ, ಹೇಮವಳಿದು ಪರುಷ ತಾನಾಗಬಲ್ಲಡೆ ಅದು ಪರುಷರಸಿದ್ಧಿ. ಗುರು ಮುಟ್ಟಿದ ಶಿಷ್ಯ ಗುರುವಾಗಬಲ್ಲಡೆ, ಲಿಂಗ ಮುಟ್ಟಿದ ಆತ್ಮ ಲಿಂಗವಾಗಬಲ್ಲಡೆ, ಆ ಅರಿವು ಅರಿವ ಭೇದಿಸಿದಂತೆ, ದೃಗ್ದೈಶ್ಯಕ್ಕೆ ಒಡಲು ಏಕವಾಗಿ ಕಾಬಂತೆ. ಆ ಗುಣ ಸದ್ಯೋಜಾತಲಿಂಗವ ಕೂಡಿದ ಭೇದ.
--------------
ಅವಸರದ ರೇಕಣ್ಣ
ಪರುಷರಸ ಲೋಹವ ವೇಧಿಸಬಲ್ಲುದಲ್ಲದೆ ಹೇಮವ ವೇಧಿಸಬಲ್ಲುದೆರಿ ಅದು ಲೋಹಕ್ಕೆ ಅರಸಲ್ಲದೆ ಹೇಮಕ್ಕೆ ಅರಸಲ್ಲ. ಇಂತೀ ಉಭಯಸ್ಥಲ. ಅಂಗ ಲಿಂಗವಾಗಬಲ್ಲಡೆ, ಲಿಂಗ ಅಂಗವ ಗ್ರಹಿಸಬಲ್ಲಡೆ ಅದು ಸದ್ಯೋಜಾತಲಿಂಗದ ಕೂಟ.
--------------
ಅವಸರದ ರೇಕಣ್ಣ
ಪ್ರಮೇಯ-ಅಪ್ರಮೇಯ, ಸುರಾಳ-ನಿರಾಳ, ಶೂನ್ಯ-ನಿಃಶೂನ್ಯ, ವಿರಳ-ಅವಿರಳ, ಅಂಜನ-ನಿರಂಜನ, ಭಾವ-ನಿರ್ಭಾವ, ಮಹಾಮಹಪ್ರಕಾಶ-ದಿವ್ಯದಿವ್ಯತೇಜಪ್ರಕಾಶ, ಇಂತೀ ಉಭಯಸಂಪರ್ಕಸಂಯೋಗಿಯಾಗಿ, ತ್ರಿವಿಧಾತ್ಮಕೂಟಸ್ಥನಾಗಿ ನಿನ್ನಾಟ ಬಟ್ಟಬಯಲಲಿ ದೃಷ್ಟವಾಯಿತ್ತು. ಸದ್ಯೋಜಾತಲಿಂಗವೆಂಬ ಭಾವ ಶಬ್ದಮುಗ್ಧವಾಯಿತ್ತೆನಲಿಲ್ಲ.
--------------
ಅವಸರದ ರೇಕಣ್ಣ
ಪೃಥ್ವಿಯ ಗುಣ ಸೋಂಕಿದಲ್ಲಿ ಅದಾವ ಭೇದದಿಂದ ಅರ್ಪಿತ ? ಅಪ್ಪುವಿನ ಗುಣ ಆವರ್ಚಿಸಿದಲ್ಲಿ ಅದಾವ ಭೇದದಿಂದ ಅರ್ಪಿತ ? ತೇಜದ ಗುಣದಿಂದ ಪ್ರಕಾಶ ಅದಾವ ಭೇದದಿಂದ ಅರ್ಪಿತ ? ವಾಯುವಿನ ಸುಗುಣ ದುರ್ಗುಣದ ಸುಳುಹಿನ ಸಂಚಾರದ ಭೇದ ಅದಾವ ನಿಶ್ಚಯದಿಂದ ಅರ್ಪಿತ ? ಆಕಾಶದ ಗಮ್ಯದ ಒಳಗಾದ ಸರ್ವನಾದಮಯ-ಪರಿಪೂರ್ಣತ್ವ ತೆರಹಿಲ್ಲದ ತನ್ಮಯ ಅದಾವ ಲಿಂಗಕ್ಕರ್ಪಿತ ? ಇಂತೀ ಪಂಚೀರಕರಣಂಗಳಲ್ಲಿ ಭೇದಕ್ರಮದಿಂದ ಅರ್ಪಿಸಬೇಕು. ಸದ್ಯೋಜಾತಲಿಂಗದ ಅರ್ಪಿತದ ಮುಖವನರಿತು ಕೊಡಬೇಕು
--------------
ಅವಸರದ ರೇಕಣ್ಣ
ಪೃಥ್ವೀತತ್ವಕ್ಕೆ ಅಪ್ಪುತತ್ವ ಸಂಘಟ್ಟವಾಗಿ ಆಕಾಶತತ್ವ ಬೆರಸಲಿಕ್ಕಾಗಿ ಘಟರೂಪು. ಆ ಘಟರೂಪಿನಲ್ಲಿ ವಾಯುತತ್ವ ಕೂಡಲಿಕ್ಕೆ ಆತ್ಮರೂಪು. ಈ ನಾಲ್ಕರ ಮಧ್ಯದಲ್ಲಿ ತೇಜತತ್ವ ರೂಪವಾಗಲಿಕ್ಕೆ ಪಂಚಭೂತಿಕ ಘಟವಾಯಿತ್ತು. ಕಠಿಣಭೇದವೆಲ್ಲವು ಪೃಥ್ವಿಯ ವಂಶಿಕ, ಸಾರಭೇದವೆಲ್ಲವು ಅಪ್ಪುವಿನ ವಂಶಿಕ, ಜ್ವಾಲೆ ವಂಶಿಕವೆಲ್ಲವು ತೇಜವಂಶಿಕ, ವಾಯು ವಂಶಿಕವೆಲ್ಲವು ಆತ್ಮವಂಶಿಕ, ನಾದವಂಶಿಕವೆಲ್ಲವು ಮಹದಾಕಾಶದ ಒಳಗು. ಇಂತೀ ಪಿಂಡಭೇದಂಗಳ ಹಲವು ತೆರನನರಿತು ಪಂಚೀಕರಣದ ನಾನಾ ಸಂಚುಗಳ ಸಂಧಿಸಿ ಮುಮುಕ್ಷುವಾಗಿ ಕೂಡಬೇಕು ಸದ್ಯೋಜಾತಲಿಂಗವ.
--------------
ಅವಸರದ ರೇಕಣ್ಣ