ಅಥವಾ
(8) (2) (5) (0) (1) (0) (0) (0) (1) (1) (0) (1) (0) (0) ಅಂ (1) ಅಃ (1) (10) (0) (5) (0) (0) (1) (0) (3) (0) (0) (0) (0) (0) (0) (0) (4) (0) (4) (1) (4) (10) (0) (6) (8) (5) (0) (3) (0) (3) (2) (4) (1) (10) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆತ್ಮಕ್ಕೂ ಘಟಕ್ಕೂ ಶರಸಂಧಾನದಿಂದ ಆತ್ಮ ಬ್ರಹ್ಮರಂಧ್ರಕ್ಕೆ ಎಯ್ದುವುದಕ್ಕೆ ಮುನ್ನವೆ ಶಿರಚ್ಛೇದನವಾಗಲಿಕ್ಕೆ ಆ ಹಾಹೆ ಆತ್ಮ ಬಯಲ ಕೂಡುವುದನ್ನಕ್ಕ ಅದುವಭೇದ. ಇಂತೀ ಭೇದ. ಜೀವದ ಆಗುಚೇಗೆಯನರಿದು ಷಡಾಧಾರ ಮುಂತಾದ ದಶವಾಯುವ ಕಂಡು, ನವದ್ವಾರವ ಭೇದಿಸಿ, ಷೋಡಶ ಕಳೆಯಲ್ಲಿ ಮಗ್ನನಾಗಿ ನಿಂದಲ್ಲಿ, ತ್ರಿವಿಧಾತ್ಮದೊಳಗಾದ, ಪಂಚಭೂತಿಕದೊಳಗಾದ, ಪಂಚವಿಂಶತಿತತ್ವದೊಳಗಾದ, ಕ್ರೀ ನಿಃಕ್ರೀ ಧರ್ಮಂಗಳಲ್ಲಿ ಅರಿದೆ ಮರದೆನೆಂಬುದ ಸಾಧನೆಗೊಂಡು, ಪಿಂಡದಲ್ಲಿ ಅರಿದುನಿಂದುದು ಪಿಂಡಜ್ಞಾನ. ಆ ಜ್ಞಾನದಲ್ಲಿ ಸೂಕ್ಷ್ಮಾಂಗನಾಗಿ ಕಾರಣವ ಕೂಡಿಕೊಂಡು ಆ ಕಾರಣವಾದುದು ಜ್ಞಾನಪಿಂಡದ ಭೇದ. ಇಂತೀ ಪಿಂಡಜ್ಞಾನ ಜ್ಞಾನಪಿಂಡದ ಕೂಟ ಸದ್ಯೋಜಾತಲಿಂಗದ ನಿರುತದಾಟ.
--------------
ಅವಸರದ ರೇಕಣ್ಣ
ಆವ ವಾಯು ಎತ್ತಿದಲ್ಲಿ ಆ ದಳಗೂಡಿ ಆತ್ಮ ಆಡುತಿಪ್ಪುದೆಂಬರು. ಶರೀರದಲ್ಲಿ ಎಂಟುಕೋಟಿ ರೋಮ, ಮುನ್ನೂರರುವತ್ತು ನಾಡಿ, ಒಂದು ನಾಡಿಗೆ ಮೂರು ಭೇದ, ಮೂರು ಭೇದಕ್ಕೆ ಐದು ಗುಣ. ಇಂತಿವನರಿದು ಇರಬೇಕೆಂಬಲ್ಲಿ ಇಂತೀ ಶರೀರಕ್ಕೆ ಕರಣ ನಾಲ್ಕರಿಂದ, ಮದವೆಂಟರಿಂದ, ವ್ಯಸನವೇಳರಿಂದ, ಅರಿವರ್ಗದಿಂದ, ಐದು ಇಂದ್ರಿಯದಿಂದ, ಹದಿನಾರು ಕಳೆಯಿಂದ, ಮೂರು ವಿಷಯದಿಂದ, ತ್ರಿವಿಧ ಆತ್ಮಗಳಿಂದ, ತ್ರಿಶಕ್ತಿಭೇದದಿಂದ. ಇಂತೀ ವಿವರಂಗಳೆಲ್ಲವ ತಿಳಿದು ಏಕಮುಖವ ಮಾಡಿ ವರ್ಣಕ ವಸ್ತುಕ ಉಭಯವನೊಡಗೂಡಿ ವಸ್ತುವ ಕೂಡಬೇಕೆಂಬನ್ನಕ್ಕ ಈ ದೇಹ ಸಂಜೀ[ವಿನಿ]ಯೆರಿ ಶಿಲೆಯ ಸುರೇಖೆಯೆ ? ತ್ರಿವಿಧಕ್ಕೆ ಅಳಿವಿಲ್ಲದ ಘಟವೆ? ಇಂತಿವೆಲ್ಲವು ಕಥೆ ಕಾವ್ಯದ ವಿಶ್ವಮಯವಪ್ಪ ಕೀಲಿಗೆ ಕೀಲಿನ ಭಿತ್ತಿ. ಇವ ಮರೆದು ಅರಿದವನ ಯುಕ್ತಿ, ತರುವಿನ ಬೂರದ ಹೊರೆಯಲ್ಲಿ ಹೊತ್ತಿದ ಪಾವಕ ಮುಟ್ಟುವುದಕ್ಕೆ ಮುನ್ನವೆ ಗ್ರಹಿಸುವಂತೆ, ಹೇರುಂಡದ ಘಟ ಫಲವ ಗ್ರಹಿಸಿ ಫಲ ಪಕ್ವಕ್ಕೆ ಬಂದಲ್ಲಿ ಭಿನ್ನವಾಗುತಲೆ ಬಿಣ್ಣುವ ತೆರೆದಂತೆ. ಇಂತೀ ಶರೀರ ಘಟಂಗಳಲ್ಲಿ ಅನುಭವಿಸುವ ಆತ್ಮ ಜಡವೆಂದರಿದು ಒಡೆದಲ್ಲಿಯೇ ನಿಜಾತ್ಮವಸ್ತುವನೊಡಗೂಡಬೇಕು ಸದ್ಯೋಜಾತಲಿಂಗದಲ್ಲಿ.
--------------
ಅವಸರದ ರೇಕಣ್ಣ