ಅಥವಾ
(8) (4) (5) (0) (3) (0) (0) (0) (4) (1) (0) (0) (0) (0) ಅಂ (2) ಅಃ (2) (16) (0) (7) (1) (0) (2) (0) (5) (0) (0) (0) (0) (0) (0) (0) (14) (0) (7) (0) (15) (8) (1) (7) (2) (9) (1) (0) (0) (2) (7) (4) (0) (13) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹಾವ ಹೊತ್ತುಕೊಂಡು ಹೋಗುತ್ತ ಹಾವಾಡಿಗ ನಡೆಯಲ್ಲಿ ಹಾವ ಕಂಡು ಮರಳುವ ಗಾವಿಲತನವ ನೋಡಾ! ತನ್ನಿಂದನ್ಯವೆಂದಡೆ ಬ್ಥಿನ್ನ ವ್ಯತಿಕರವಾಯಿತ್ತು. ತನ್ನ ಪರಮಾರ್ಥ ತನ್ನಲ್ಲಿ ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗ ಮಾಯಾಮರ್ಕಟ, ಜಡವೆ!
--------------
ಚಂದಿಮರಸ
ಹಂದಿ ಹೈನವಲ್ಲ! ಸಂಸಾರಿ ಜಂಗಮವಲ್ಲ ಸಂಸಾರಿ ಜ್ಞಾನಿಗೂ ನಿರಾಭಾರಿ ಹೆಡ್ಡತನಕ್ಕೂ ಸರಿಯೆನ್ನಬಹುದೆ? ಸಿಮ್ಮಲಿಗೆಯ ಚೆನ್ನರಾಮಾ!
--------------
ಚಂದಿಮರಸ
ಹೆಡತಲೆಯ ಮಾತ ಬಲ್ಲಡೆ ಪ್ರಸಾದಿ. ನಡುನೆತ್ತಿಯ ಮರ್ಮವನರಿದಡೆ ಪ್ರಸಾದಿ. ಕಂಗಳ ಮೊಲೆ ಕೂರ್ಮನ ಆಪ್ಯಾಯನವ ಬಲ್ಲಡೆ ಪ್ರಸಾದಿ. ಅಂಗೇಂದ್ರಿಯವನೊಂದು ಮುಖವ ಮಾಡಬಲ್ಲಡೆ ಪ್ರಸಾದಿ. ನಿರಂಜನ ಜಂಗಮನನಾರೋಗಿಸಬಲ್ಲಡೆ ಪ್ರಸಾದಿ. ನಿರಾಲಂಬ ಪ್ರಣವಮನುಚ್ಚರಿಸಬಲ್ಲಡೆ ಪ್ರಸಾದಿ. ಹ್ರೀಂ ಶಕ್ತ್ಯಾರೂಢನಾದ ಚರಪಾದಾಂಬುವ ಹ್ರೈಂಶಕ್ತಿ ಬದ್ಧನಾದ ಲಿಂಗಕ್ಕೆ ಶಾಂತಿಯ ಮಾಡಬಲ್ಲಡೆ ಪ್ರಸಾದಿ. ಆಧಾರ ಬ್ರಹ್ಮದೊಳಗೆ ಅಡಗಿದ ಅಕ್ಷರವ ನೋಡಿ ಓದಬಲ್ಲಡೆ ಪ್ರಸಾದಿ. ಭಾವವ ಕ್ರೀಯಲ್ಲಿ ತಂದು ಭಾವದಲ್ಲಿ ನೆಲೆಗೊಳಿಸಬಲ್ಲಡೆ ಪ್ರಸಾದಿ. ಒಳಹೊರಗೆಂಬ ಭಾವಗೆಟ್ಟು ಸುಳುಹಿನ ಪ್ರಸಾದದ ಕಳೆವೆಳಗ ನುಂಗಿದ ಲಿಂಗಕ್ಕೆ ಅರ್ಪಿಸಿ ಸುಖಿಸಬಲ್ಲಡೆ ಪ್ರಸಾದಿ. ಸ್ಥಾವರವ ಜಂಗಮದೊಳಡಗಿಸಿ ಜಂಗಮವ ಸ್ಥಾವರವ ಮಾಡಬಲ್ಲಡೆ ಪ್ರಸಾದಿ. ಇದು ಕಾರಣ ನಿಜಗುಣನೆಂಬ ಮಹಾಜಂಗಮ ನಿಜಾನಂದವೆಂಬ ಒಕ್ಕುಮಿಕ್ಕ ಘನಪ್ರಸಾದವ ಕೊಟ್ಟನಾಗಿ ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವೆನ್ನ ಹಿಂಗದಾಲಿಂಗಿಸಿದನಾಗಿ ಪ್ರಸಾದಿಯಾದೆ.
--------------
ಚಂದಿಮರಸ
ಹುಸಿಯ ವ್ಯಾಧನು ನಿಜದಿಂದ ಕ್ಷತ್ರಿಯನೆಂದು ಬೋಧಿಸಲು ಬೋಧೆ ದೊರಕೊಂಬುದಲ್ಲದೆ ಎಲೆ ಕ್ಷತ್ರಿಯ ನೀ ವ್ಯಾಧನೆಂದು ಬೋಧಿಸಲು ಬೋಧೆ ದೊರಕೊಂಬುದೆ ಹೇಳಾ! ಜೀವ ಭೋಕ್ತೃ ನಿಜ ಪರಮನೆಂದೆನ್ನದೆ ಪರಮನೆ ಹುಸಿ ಜೀವನೆ ದಿಟವೆಂದು ಬೋಧಿಸಲು ಬೋಧೆ ದೊರಕೊಳ್ಳದು ನೋಡಾ! ಜ್ಞಾತೃ ಜ್ಞಾನ ಜ್ಞೇಯಾದಿ ಜ್ಞಪ್ತಿ ಸುಖ ಪರಿಪೂರ್ಣನಲ್ಲ ``ಕೋಯಮಾತ್ಮಾನಾನೃತೋಸ್ತಿ ಯಸ್ಮಿನ್ನೇಕಮೇವಾ ದ್ವಿತೀಯಂ ತತ್ವಮಸಿ' ಎಂದುದು ವೇದ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಹಿರಿದಪ್ಪ ಮಾಯೆಯನೆಂತು ಕೆಡಿಸುವೆನೆಂದು ಬೆಂಬೀಳದಿರು ಮರುಳೆ! ಮಾಯೆ ದಿಟಕ್ಕಿಲ್ಲ; ಇಲ್ಲದುದನೆಂತು ಕೆಡಿಸುವಿರೊ? ತನ್ನನರಿದಡೆ ಸಾಕು. ಅರಿದೆನರಿಯೆನೆಂಬುದು ಮಾಯೆ. ಈ ಮಾಯೆ ನಿನಗಿಲ್ಲ, ಚಿನ್ಮಯ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಹುಲ್ಲ ಮನುಷ್ಯನ ಕಂಡು ಹುಲ್ಲೆ ತಾ ಬೆದರುವಂತೆ ಇಲ್ಲದ ಶಂಕೆಯನುಂಟೆಂಬನ್ನಕ್ಕ ಅದಲ್ಲಿಯೇ ರೂಪಾಯಿತ್ತು. ಹೇಡಿಗಳನೇಡಿಸ ಕಾಡಿತ್ತು ಸಿಮ್ಮಲಿಗೆಯ ಚೆನ್ನರಾಮನೆಂಬ ಭಾವದ ಗಸಣಿ.
--------------
ಚಂದಿಮರಸ
ಹತ್ತರ ಹಸುಗೆಯಲಚ್ಚಾದ ಪರಿಗಳ ನೀವೆತ್ತ ಬಲ್ಲಿರೊ! ಗಣಿತದ ಗುಣತವ ನಾಲ್ಕು ಬಂದಡೆ ಖಳ ಐದು ಬಂದಡೆ ನಂದಿ, ಆರಾದಡೆ ಜಾಗರ, ಏಳರಲ್ಲಿ ತಿಗ, ಇದು ಜಾಣರೆಂಬವರಿಗೆ ಕನ್ನಡ, ಸಿಮ್ಮಲಿಗೆಯ ಚೆನ್ನರಾಮನೆಂಬ ಅಂಗದಲ್ಲಿ ಜೂಜುಕೊಳ್ಳದು.
--------------
ಚಂದಿಮರಸ
ಹೇಳಿದ್ದ ಕೇಳಲೊಂದು ಶಬುದವಾಯಿತ್ತಯ್ಯ. ತೋರಿದ್ದ ಹಿಡಿಯಲೊಂದು ರೂಪಾಯಿತ್ತಯ್ಯ. ನೆಚ್ಚಿನ ಮಚ್ಚಿಕೆ ಅದು ನಿಶ್ಚಿಂತವೆಂತಪ್ಪುದು? ಸಿಮ್ಮಲಿಗೆಯ ಚೆನ್ನರಾಮಲಿಂಗನೆಂಬನ್ನಕ್ಕ.
--------------
ಚಂದಿಮರಸ
ಹೆರದ ಮುನ್ನವೆ ಹುಟ್ಟಿ ಹೆತ್ತಲ್ಲಿಯೆ ಸತ್ತುದು ನೋಡಾ! ಅದು ಮಾಯದ ಕೃತಕದ ಗರ್ಭದ ನೆಳಲಿನ ಸುಳುಹು. ಆದಲ್ಲಿ ಆಯಿತ್ತು, ಹೋದಲ್ಲಿ ಹೋಯಿತ್ತು. ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗೈಕ್ಯವು.
--------------
ಚಂದಿಮರಸ
ಹೊತ್ತುದ ಹುಸಿಮಾಡಲರಿಯದೆ ದುಃಖ ದುರ್ಮತಿ ಬಿಡದು. ಮತ್ತೆ ಸಂಸಾರಿಯಲರಸಲದೇನುಂಟು? ಜೀವನವೇನವನ ಜೀವನವೇನು? ಪ್ರಾರಬ್ಧಕ್ಕೆ ಪರಿಯಾಯವ ಮಾಡಿ ಬಿಟ್ಟಿಯ ನಡೆವನ ಜೀವನವೇನವನ ಜೀವನವೇನು? ಆಗಮ ನಿಗಮವನರಿಯದೆ ನಿರ್ಬುದ್ಧಿ ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದ ಬಾಧೆಗೆ ಭಾಜನವಾದವನ ಜೀವನವೇನು?
--------------
ಚಂದಿಮರಸ