ಅಥವಾ
(8) (4) (5) (0) (3) (0) (0) (0) (4) (1) (0) (0) (0) (0) ಅಂ (2) ಅಃ (2) (16) (0) (7) (1) (0) (2) (0) (5) (0) (0) (0) (0) (0) (0) (0) (14) (0) (7) (0) (15) (8) (1) (7) (2) (9) (1) (0) (0) (2) (7) (4) (0) (13) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪ್ರಾಣ ಪ್ರಾರಂಭ ಪ್ರಾರಬ್ಧವಿಲ್ಲಾಗಿ ಪರಚಿಂತೆ ಪರಬೋಧೆಯ ಪರಿಚಿತನಲ್ಲ. ಉಸಿರ ಬೀಜದ ಹಸಿಯ ಬಣ್ಣದ ವಶವಿದನಾಗಿ, ವಶಗತನಲ್ಲ. ನಿರಂತರ ಸ್ವತಂತ್ರ ಶರಣನು, ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗ ಶಬ್ದಮುಗ್ಧವಾಗಿ.
--------------
ಚಂದಿಮರಸ
ಪಡುವಣ ಹೆಣ್ಣ ಮೂಡಣ ಮಣ್ಣ ತೆಂಕ ಬಡಗಲ ಹೊನ್ನ ಆಳುವ ಚಾಂಚೆಳಸಂಚೂರ ಪಂಚಾನನನ ಸಂಚಿಗವ... ಸಿಮ್ಮಲಿಗೆಯ ಚೆನ್ನರಾಮನೊಲ್ಲ.
--------------
ಚಂದಿಮರಸ
ಪರಮಾತ್ಮನ ಪ್ರತಿಲಹರಿಯಿಂದ ಅಂತರಾತ್ಮನುತ್ಪತ್ಯ. ಅಂತರಾತ್ಮನ ಪ್ರತಿಲಹರಿಯಿಂದ ಜೀವಾತ್ಮನುತ್ಪತ್ತ. ಅಂತಪ್ಪ ಜೀವಾಂತರಾತ್ಮಾದಿಗಳು ಅಂಗ ಪ್ರಾಣವಾದಲ್ಲಿಒಂದೆಯೆನಿಸಿದರು. ಆ ಒಂದೆಯೆಂಬ ತಾಮಸ ಜೀವನು ಅಂಗನೆಯರ ಸಂಗ ಮೊದಲಾದ ನಾನಾ ದುಃಖಗಳಲ್ಲಿ ನೋವುತ್ತ, ನಾನಾಯೋನಿಗಳಲ್ಲಿ ಜನಿಸುತ್ತ, ರೌರವ ನರಕ ಆಳುತ್ತಮುಳುಗುತ್ತಲಿಹನು. ಆ ಪರಮಾತ್ಮನು ಜೀವಾತ್ಮನ ಶಿರೋಮಧ್ಯದಲ್ಲಿರ್ದು ನಾಹಂಎನ್ನದೆಸೋಹಂಎನ್ನುತ್ತ ಸಿಮ್ಮಲಿಗೆಯಚನ್ನರಾಮನೆಂಬ ಅಖಂಡ ಲಿಂಗದೊಳಗೆ ನಿತ್ಯತ್ವವನೆಯ್ದಿ ಎಡೆಬಿಡುವಿಲ್ಲದೆ ಪರಮಸಂತೋಷದೊಳಿದ್ದಿತ್ತು.
--------------
ಚಂದಿಮರಸ
ಪಂಚಭೂತದ ಸೂತಕದ ಬಳಿವಿಡಿದು ಪ್ರಜ್ವಲಿಸುವ ಆತ್ಮಜ್ಯೋತಿಯೆಂಬ ಮಾತಿನೊಳಗಲ್ಲ. ನಾದ ಬಿಂದು ಕಳಾತೀತನೆಂದು ನುಡಿವರು. ಹೆಸರಿಲ್ಲದ ಬಯಲ ತಮ್ಮ ತಮ್ಮ ಮುಖಕ್ಕೆ ಹೆಸರಿಟ್ಟು ತಮ ತಮಗೆ ಕರತಳಾಮಳಕವೆಂಬರು. ಅದರಾದಿಯಂತ್ಯವನರಿಯರು ಎಂತು ಬಲ್ಲರು ಸಿಮ್ಮಲಿಗೆಯ ಚೆನ್ನರಾಮನೆಂಬ ಶಬ್ದ ಉದ್ದೇಶಿಗಳು?
--------------
ಚಂದಿಮರಸ
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬಿವು ಪಂಚ ಮಹಾಭೂತಂಗಳು. ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬಿವು ಪಂಚಪ್ರಾಣವಾಯುಗಳು. ವಾಕ್ಕು ಪಾಣಿ ಪಾದ ಪಾಯು ಗುಹ್ಯವೆಂಬಿವು ಪಂಚಕರ್ಮೇಂದ್ರಿಯಂಗಳು. ಶೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬಿವು ಪಂಚಜ್ಞಾನೇಂದ್ರಿಯಂಗಳು. ಮನ ಬುದ್ಧಿ ಚಿತ್ತ ಅಹಂಕಾರವೆಂಬಿವು ಅಂತಃಕರಣ ಚತುಷ್ಟಯಂಗಳು. ಇಂತು ಇಪ್ಪತ್ತು ನಾಲ್ಕು ತತ್ವಂಗಳು ಕೂಡಿ ದೇಹವಾಯಿತ್ತು. ಭೂತೈಶ್ಚ ಪಂಚಭಿಃ ಪ್ರಾಣೈಶ್ಚ ಚತುರ್ದಶಭಿರಿಂದ್ರಿಯೈಃ| ಚತುರ್ವಿಂಶತಿದೇಹಾನಿ ಸಾಂಖ್ಯಶಾಸ್ತ್ರವಿದೋ ವಿದುಃ|| ಎಂದುದಾಗಿ, ಇಂತೀ ಇಪ್ಪತ್ತನಾಲ್ಕು ತತ್ತ್ವಂಗಳು ಕೂಡಿ ಚೇಷ್ಟಿಸುವಾತನೇ ಜೀವಾತ್ಮನು. ಅದೆಂತೆಂದಡೆ: ಮನಶ್ಚತುರ್ವಿಂಶಕಂ ಚ ಜ್ಞಾತೃತ್ವಂ ಪಂಚವಿಂಶಕಂ| ಆತ್ಮಾ ಷಡ್ವಿಂಶಕಶ್ಚೈವ ಪರಾತ್ಮಾ ಸಪ್ತವಿಂಶಕಃ|| ಚತುರ್ವಿಧಂತು ಮಾಯಾಂಶಂ ನಿರ್ಗುಣಃ ಪರಮೇಶ್ವರಃ| ಪಂಚವಿಂಶತಿ ತತ್ತ್ವಾನಿ ಮಾಯಾಕರ್ಮ ಗುಣಾಯತೇ ವಿಷಯಾ ಇತಿ ಕಥ್ಯಂತೇ ಪಾಶಜೀವ ನಿಬಂಧನಾತ್ ಇಂತೆಂದುದಾಗಿ ಇಂತೀ ಪಂಚವಿಂಶತಿ ತತ್ತ್ವಂಗಳುತ್ಪತ್ತಿಯು ನಿಮ್ಮ ನೆನಹುಮಾತ್ರದಿಂದಾದವಾಗಿ ಇವರ ಗುಣಧರ್ಮಕರ್ಮಂಗಳು ನಿಮಗಿಲ್ಲ ನೋಡಾ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಪರಮಂಗೆ ಪ್ರಕೃತಿಯ ಸಂಗದಿಂದ ಜೀವಭಾವ. ಆ ಜೀವಂಗೆ ಅಂಗನೆಯರ ಸಂಗದಿಂದ ರೌರವ ನರಕದಿಂದ ದುಃಖ ಹೇತು. ದುಃಖಹೇತುವಿನಿಂದ ನಾನಾ ಯೋನಿಯ ಜನನ. ಇದು ಕಾರಣ ನಾನಾ ಯೋನಿಯಲ್ಲಿ ಜನಿಸುವ ಪ್ರಕೃತಿಯ ಸಂಗ ಬಿಡದವಂಗೆ ಮುಕ್ತಿಯೆಲ್ಲಿಯದು ಸಿಮ್ಮಲಿಗೆಯ ಚೆನ್ನರಾಮಾ?
--------------
ಚಂದಿಮರಸ
ಪಂಚೇಂದ್ರಿಯವೆಂಬ ಪಾಪಿಯ ಕೂಸು ಸಂತವಿಡೆ ಸಂತವಿರದು ನೋಡಾ! ಮುದ್ದಾಗಿ ಮರೆಸಿ ಬುದ್ಧಿಯ ನುಂಗಿತ್ತು. ಹುಸಿಯ ನೇವರಿಸಿ ಮಸಿಮಣ್ಣ ಮಾಡಿತ್ತು. ಸಿಮ್ಮಲಿಗೆಯ ಚನ್ನರಾಮನಲ್ಲಿ ಲಿಂಗಸಂಗಿಗಳಲ್ಲದವರ.
--------------
ಚಂದಿಮರಸ
ಪಂಚಾಶತ್‍ಕೋಟಿ ವಿಸ್ತೀರ್ಣ ಭೂಮಂಡಲ ಅಷ್ಟದಿಕ್ಕುಗಳೆಂಬವರೊಳಗಿಲ್ಲವಣ್ಣಾ. ಗಗನಮಂಡಲದೊಳಗೆ ಬೆಳಗುವ ರವಿಶಶಿಗಳುದಯದ ಬಳಿವಿಡಿದು ಸುಳಿವವರೊಳಗಲ್ಲ. ಅಂತಿಂತಾಗದ ಮುನ್ನ ಇನ್ನೇನೂ ಇಲ್ಲ. ಬೆಸಗೊಂಬಡೆ ಹೇಳುವೆ. ನಿನ್ನ ವಶಕ್ಕೆ ಬಾರದು ಕೇಳು, ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿಲ್ಲ, ಬರಿಮಾತೇನು?
--------------
ಚಂದಿಮರಸ