ಅಥವಾ
(8) (4) (5) (0) (3) (0) (0) (0) (4) (1) (0) (0) (0) (0) ಅಂ (2) ಅಃ (2) (16) (0) (7) (1) (0) (2) (0) (5) (0) (0) (0) (0) (0) (0) (0) (14) (0) (7) (0) (15) (8) (1) (7) (2) (9) (1) (0) (0) (2) (7) (4) (0) (13) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಣ್ಣೆಯ್ದಿದ ಭಾವ ಕಾಲೆಯ್ದಿದ ಬಲ್ಲವೆ ಮರುಳೆ! ಮನವೆಯ್ದಿದ ಘನವು ತನುವಿಂಗೆ ಸಿಲುಕುವುದೆ? ಇದೆತ್ತಣ ಮಾತೊ? ...ಡನೆಂದರಿದ ಬಳಿಕ ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು ಹೊರಗರಸಲಿಲ್ಲ ನಿಲ್ಲು.
--------------
ಚಂದಿಮರಸ
ಕಾಳಕೂಟ ಹಾಳಾಹಳ ವಿಷಂಗಳು ಕುಡಿದವರಲ್ಲನಲ್ಲದೆ ಮಿಕ್ಕವರನೇನನೂ ಮಾಡಲಮ್ಮವು ಸ್ತ್ರೀಯೆಂಬ ಕಡುನಂಜು ನೋಡಿದವರ, ನುಡಿಸಿದವರ, ಕೇಳಿದವರ, ಕೂಡಿದವರ, ಗಡಣ ಸಂಗಮಾತ್ರದಿಂ ಮಡುಹಿ ನರಕದಲ್ಲಿ ಕೆಡಹದೆ ಮಾಡಳು. ದೇವ ದಾನವ ಮಾನವರನಾದಡು ಉಳಿಯಲೀಯಳು! ಆವಂಗೆಯೂ ಗೆಲಬಾರದೀ ಮಾಯೆಯ! ಗೆಲಿದಾತ ನೀನೆ ಸಿಮ್ಮಲಿಗೆಯ ದಾತ ನೀನೆ, ಸಿಮ್ಮಲಿಗೆಯ ಚೆನ್ನರಾಮಾ!
--------------
ಚಂದಿಮರಸ
ಕೋಕ ಪಿಂಗಳ ತಾರಾಗ್ರೀವ ಚಕ್ರಪಾಣಿ ಧನುರ್ಧಾರಕರೆಂಬ ಅತಿರಮಣರು ಬಡಿದಾಡಿದರೈ. ಉಸಿರಳಿದು ಉಸಿಕನೆ ಹೋದರು, ಸಿಮ್ಮಲಿಗೆಯ ಚೆನ್ನರಾಮನೆಂಬ ಶಬುದವಿತ್ತು ಗಳಿಗೆ.
--------------
ಚಂದಿಮರಸ
ಕನಸಿನ ಸಹಸ್ರಾಕ್ಷನೆಚ್ಚತ್ತು ನೋಡಿ ತನ್ನ ನಿಜವನರಿವಾಗ ಕೇಳೆಲೆ ಮರುಳೆ ದ್ವ ್ಯಕ್ಷನಾಗಿ ಅರಿಯದೆ ಮೇಣು ಸಹಸ್ರಾಕ್ಷದಲ್ಲಿ ಅರಿದನೆ ಹೇಳಯ್ಯಾ? ನಿರವಯ ನಿರವದ್ಯ ನಿರ್ವಿಕಾರ ನಿರಂಜನ ಘನಾನಂದಾದ್ವಯ ಪರಿಪೂರ್ಣನಾಗಿ ತನ್ನನರಿವವನಲ್ಲದೆ ಮತ್ತೊಂದು ಪರಿಯಲ್ಲಿ ಅರಿಯಬಲ್ಲನೆ ಹೇಳಾ? ಮುನ್ನಿನ ಪರಿಯಲ್ಲಲ್ಲದೆ, ಕೋಹಮ್ಮಿನೆಚ್ಚರಿಂದ ಸೋಹಂ ಭಾವಾದಿಯಲ್ಲದೆ ಜ್ಞಾತೃ ಜ್ಞಾನ ಜ್ಞೇಯ ವಿಹೀನನಾಗಿ ತನ್ನನರಿದಡೆ ಅರಿದ, ಅಲ್ಲದಿದ್ದಡೆ ಅರಿಯದಾತನು. ಇದು ತಪ್ಪದು ಸಿಮ್ಮಲಿಗೆಯ ಚೆನ್ನರಾಮನ ವಚನ.
--------------
ಚಂದಿಮರಸ
ಕುರುಡ ಕಾಣನೆಂದು, ಕಿವುಡ ಕೇಳನೆಂದು ಹೆಳವ ಹರಿಯನೆಂದು, ಮರುಳ ಬಯ್ದನೆಂದು, ಪಿಶಾಚಿ ಹೊಯ್ದನೆಂದು ಮನಕತಬಡುವರೆ ಹೇಳಾ? ತಾನರಿವುಳ್ಳಾತ ತತ್ವವನರಿಯದವರಲ್ಲಿ ಗುಣದೋಷವನರಿಸುವರೆ ಹೇಳಾ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಕೂರ್ಮನ ಗತಿಯ ಕುವಾಡ ಯೋಗವು ಕುಹಕವಾದಿಗಳಿಗಳವಡದು. ಉತ್ತಮಾಂಗವನು ಉರಸ್ಥಲದಲ್ಲಿ ಬೈಚಿಡುವ ಬಯಕೆಯನಾರೈದು ನೋಡಾ! ಅದನು ಆರಯ್ಯಲಚಲ ನೀನೇ, ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು ಎಂದೂ ಎನಲಿಲ್ಲ!
--------------
ಚಂದಿಮರಸ
ಕಂಗಳ ಮುಂದೆ ತೋರಿದ ಮಿಂಚು ಮನದ ಮೇಲೆ ತಿಳಿಯಿತ್ತಿದೇನೊ! ಕಳೆಯಬಾರದು ಕೊಳಬಾರದು ಕಂಗಳ ಕತ್ತಲೆಯ, ಮನದ ಮಿಂಚುವ. ಇದ ಬಲ್ಲವರನಲ್ಲೆನಿಸಿತ್ತು ಸಿಮ್ಮಲಿಗೆಯ ಚೆನ್ನರಾಮನೆಂಬ ನಾಮದೊಡಕು.
--------------
ಚಂದಿಮರಸ
ಕವಿ ಗಮಕಿ ವಾದಿ ವಾಗ್ಮಿಯೆಂಬವರ ಮಾತಿಂಗಿಲ್ಲ. ಶಾಸ್ತ್ರಿಕರ ಶಾಸ್ತ್ರಕ್ಕಿಲ್ಲ. ತರ್ಕಿಗಳ ತರ್ಕಕ್ಕಿಲ್ಲ. ಶಬ್ದಿಕರ ಶಬ್ದ ನೆರೆಯವ ತೋರುವಡೆ ವಿಷಯವಾಗಿರದು. ಅರಿವೊಡೆ ಅತಕ್ರ್ಯ, ಅದು ನಿನ್ನಲ್ಲಿಯೆ ಅದೆ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಕನಸಿನಲ್ಲಿ ಹುಟ್ಟಿದ ಕಂದಂಗೆ ನೆನಸಿನಲ್ಲಿ ಜಾತಕರ್ಮವ ಮಾಡುವರೆ? ಭ್ರಮೆಯಿಂದ ತೋರುವಹಂ ಮಮತೆಯ ಚಿಃಯೆಂದು ತನ್ನನರಿದಂಗೆ ಕ್ರೀಯೆನಿಸಿ ಏನೂ ಇಲ್ಲ ನಿನ್ನಲ್ಲಿ ನೋಡುವಡೆ. ನಿಜಗುಣ ಸಕಲ ಕರ್ಮರಹಿತ ಚಿನ್ಮಯ ಪರಿಪೂರ್ಣ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಕೋಹಮೆಂಬುದು ಪ್ರಸನ್ನಭಾವ. ತನ್ನನರಿಸುವ ಕತದಿಂದ ನಿರಹಂಕಾರ, ಪರಮ ವಿರಹಿತ, ವಿಷರಹಿತ. ಏನೂ ಹೊರಹೊದ್ದದ ಸನ್ಮಾತ್ರ ಚಿನ್ಮಯ ಪರಮಾನಂದ ತಿಳಿದು ನೋಡುವಡೆ, ನಿಜಗುಣ ತಾನೇ, ಸಿಮ್ಮಲಿಗೆಯ ಚೆನ್ನರಾಮಾ
--------------
ಚಂದಿಮರಸ
ಕರ್ಮಿಭಕ್ತ ಜ್ಞಾನಿ ಲೌಕಿಕವೆಂಬ ಚತುರಾಶ್ರಮಿಗಳಿಗೆ ತ್ರಿಜಗದೊಳಗೆ ಶ್ರುತ್ಯಾನುಭಾವ ಸಿದ್ಧವಾಗಿಹುದು. ಹಿಡಿದು ಸುಖವಿಲ್ಲ. ಬಿಟ್ಟು ದುಃಖವಿಲ್ಲ. ನೆರೆಯರಿದು ವಿಷಯಂಗಳ ಬಿಟ್ಟಡೆ ಪರಮಾನಂದವೆಂದೆಂದಿಗೂ ಸೋಹಂಭಾವವಹುದು. ಈ ಸೋಹಂಭಾವದಲ್ಲಿ ನಿಂದಂದು ಈ ದೇಹದ ಅಹಂಮಮತೆಯೆಂಬ ಜಡಮಾಯೆ ಉಳಿವುದೆ, ಸಿಮ್ಮಲಿಗೆಯ ಚೆನ್ನರಾಮನಾಥನ ಭಾವಿಸಿ ನೋಡಿದಲ್ಲಿ!
--------------
ಚಂದಿಮರಸ
ಕಿಚ್ಚು ದೈವವೆಂದು ಹವಿಯ ಬೇಳುವರು. ಕಿಚ್ಚು ಹಾರುವರ ಮನೆಯ ಸುಡುವಾಗ ಬಚ್ಚಲ ಕೆಸರ ಬೀದಿಯ ಧೂಳ ಚೆಲ್ಲಿ ಬೊಬ್ಬಿರಿದೆಲ್ಲರ ಕರೆವರು. ಸಿಮ್ಮಲಿಗೆಯ ಚೆನ್ನರಾಮನ ಮಂತ್ರ ತಪ್ಪಿದ ಬಳಿಕ ವಂದಿಸುವುದ ಬಿಟ್ಟು ನಂದಿಸುತ್ತಿದ್ದರು.
--------------
ಚಂದಿಮರಸ
ಕನ್ನಡಿಯಲ್ಲಿ ತೋರುವ ಕಣ್ಣು ನೋಡುವ ಕಣ್ಣು ಕಾಬುದು ಹುಸಿ. ಇದು ದಿಟದಂತೆ ತೋರಿದ ಬುದ್ಧಿ ದರ್ಪಣದಲ್ಲಿ ತೋರುವ ಹುಸಿಯಂತೆರಡು ಜೀವನು. ಈ ಜೀವನು ಶುದ್ಧ ಚಿದ್ರೂಪವ ಕಾಬ ಕೂಡುವ ನಾನೀನೆಂಬುದು ಮಿಥ್ಯೆ, ಜೀವಭಾವಮಿಂತುಟು. ನಾ ನಿರ್ವಾದವೆಂದು ತಿಳಿದ ಬುದ್ಧಿಯ ಭಾವ ಸದಾನಂದಸ್ವರೂಪನಪ್ಪ ನಿಜಗುಣ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಕಂಗಳ ಮೊಲೆ ಕೂರ್ಮನ ಆಪ್ಯಾಯನ ಉಂಬ ಭೇದವ ಬಲ್ಲವರಾರೊ? ಅರಿಯಬಾರದು. ಘನವನರಿತ ಅಗಮ್ಯನ ನಿಲವನರಿಯಬಾರುದು. ಇದರನುವನವಗವಿಸಿ ತೆರಹಿಲ್ಲದಾತ ನಮ್ಮ ಸಿಮ್ಮಲಿಗೆಯ ಚೆನ್ನರಾಮನೆಂಬ ಮಹಾಮಹಿಮನು.
--------------
ಚಂದಿಮರಸ
ಕವಿ ಗಮಕಿ ವಾದಿ ವಾಗ್ಮಿಯೆಂಬ ಮಾಯಾವೇಷ ಮತಕ್ಕೆ ದೂರ. ಸಾಮುದ್ರಿಕರ ಶಬುದವು ನೆರೆಯವು. ತಾರ್ಕಿಕರ ತರ್ಕಕ್ಕಿಲ್ಲ ಮತಿ ಮನುಗಳೆಂಬ ಹಿರಿಯರರಿವಿನಲ್ಲಿ ನಿಲ್ಲು ನಿಲ್ಲು ಮಾಣು, ಸಿಮ್ಮಲಿಗೆಯ ಚೆನ್ನರಾಮನೆಂಬ ಶಬುದವಿತ್ತು ಗಳಿಗೆ.
--------------
ಚಂದಿಮರಸ
ಕಂಡುದ ಕೇಳಿದುದ ತಾಗಿತ ಸೋಂಕಿತ್ತ ಕಾಯದ ಕೈಯಲ್ಲಿ ಲಿಂಗಾರ್ಪಿತವಾಯಿತ್ತೆಂದಡೆ ತಪ್ಪಿತ್ತು ನೋಡಾ! ತಾನರಿವುತ್ತ ಕೊಡಲುಂಟೆ ಲಿಂಗಕ್ಕೆ? ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ ಶರಣನಲ್ಲ ಆತ! ಸಂದೇಹಿ!
--------------
ಚಂದಿಮರಸ