ಅಥವಾ
(8) (4) (5) (0) (3) (0) (0) (0) (4) (1) (0) (0) (0) (0) ಅಂ (2) ಅಃ (2) (16) (0) (7) (1) (0) (2) (0) (5) (0) (0) (0) (0) (0) (0) (0) (14) (0) (7) (0) (15) (8) (1) (7) (2) (9) (1) (0) (0) (2) (7) (4) (0) (13) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮನರಥದ ಮೇಲೆ ನಿಂದುದ ಭೇದಿಸಬಾರದಯ್ಯ, ಸರಶಬ್ದವಾದಿಗಳು ಹರಿಯಿತನರಿಯರಾಗಿ. ಹರಿವಿರಂಚಿಗಳಿಗೆ ತುರ್ಯವೆಲ್ಲಿಯದೊ? ತನುಮುಖದ ತನುಭಾವಿಗಳಿವರು. ಸಿಮ್ಮಲಿಗೆಯ ಚೆನ್ನರಾಮಲಿಂಗದಲ್ಲಿ ವಾಗದ್ವೈತವ ನುಡಿವರಲ್ಲದೆ ನಿಜವೆಲ್ಲಿಯದು?
--------------
ಚಂದಿಮರಸ
ಮುಟ್ಟದ ಮುನ್ನವೆ ಹುಟ್ಟಿ ಹೆತ್ತಲ್ಲಿ ಸತ್ತುದು ನೋಡಾ! ಅದು ಮಾಯದ ಕೃತಕದ ಗರ್ಭದ ನೆಳಲಿನ ಸುಳುಹು. ಆದಲ್ಲಿ ಹೋಯಿತ್ತು ನೋಡಾ! ಹೋದಾದಲ್ಲಿ ನಿಂದಿತ್ತು ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವುಲಿಂಗೈಕ್ಯರಲ್ಲಿ.
--------------
ಚಂದಿಮರಸ
ಮುನ್ನವೆ ಮೂರರ ಹಂಬಲ ಹರಿದು ಗುರು ಚರ ವಿರಕ್ತನಾದ ಬಳಿಕ ಇನ್ನೂ ಮೂರರ ಜಿಹ್ವೆಯ ಹಂಬಲೇಕೆ? ಆವಾವ ಜೀವಂಗಳು ತಮ್ಮವಲ್ಲದೆ ಮುಟ್ಟವಾಗಿ ತೊಂಡ ಮಚ್ಚಿದ ಜೀವದನದಂತೆ, ಊರೂರ ತಪ್ಪದೆ ಹರಿದು ಜೋಗಿಯ ಕೈಯ ಕೋಡಗದಂತೆ. ಅನ್ಯರಿಗೆ ಹಲುಗಿರಿದು ವಿರಕ್ತನೆನಿಸಿಕೊಂಬ ಯುಕ್ತಹೀನರ ಕಂಡಡೆ ಎನ್ನ ಮನ ನಾಚಿತ್ತು ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಮಣ್ಣ ಕಳೆದು ಮಡಕೆಯಿಲ್ಲ. ಹೊನ್ನ ಕಳೆದು ತೊಡಿಗೆಯಿಲ್ಲಿ. ತನ್ನ ಕಳೆದು ಜಗವಿಲ್ಲ; ತಾನೇ ತನ್ನಿಂದನ್ಯವಿಲ್ಲ. ಸುಖ ದುಃಖ ಬಂಧಮೋಕ್ಷಗಳಿಲ್ಲದ ನಾಹಂ ಎಂದೆನಲಿಲ್ಲ, ಕೋಹಂ ಎಂದೆನಲಿಲ್ಲ, ಸೋಹಂ ಎಂದೆನಲಿಲ್ಲ. ನುಡಿಗೆ ಎಡೆಯೆನಿಸಿ, ಏನೂ ಇಲ್ಲದ ಸಚ್ಚಿದಾನಂದ ನಿತ್ಯಪರಿಪೂರ್ಣ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಮನದ ಬೆಸನ ಕಂಗಳಲ್ಲಿ ಗರ್ಭವಾಗಿ ಕೈ ಪ್ರಸೂತೆಯಾದ ಪ್ರಪಂಚನೇನೆಂಬೆ? ಮಾಡಿದಡಾಯಿತ್ತು, ಮಾಡದಿರ್ದಲ್ಲಿ ಹೋಯಿತ್ತು. ನಚ್ಚದಿರು ನಿಶ್ಚಯವಲ್ಲ, ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗಸಂಸಾರಿ ನೀ ಕೇಳಾ!
--------------
ಚಂದಿಮರಸ
ಮೂದಲೆಯ ಮಾತು ಕೂದಲ ಕೀಲಿನಂತಲ್ಲದರಿಯಬಾರದು. ಹೆಡತಲೆಯ ಮಾತು ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ ಲಿಂಗಾನುಭಾವಿಗಲ್ಲದರಿಯಬಾರದು.
--------------
ಚಂದಿಮರಸ
ಮನದಿಂದ ಸಂಸಾರ ಸುಖದುಃಖ ಮಾಯಾಮಯ ಈ ಮನದ ವಿಷಯದಲ್ಲಿ ಕೂಡಲೀಯದೆ ನಿಮ್ಮಲ್ಲಿ ನಿಲಿಸಿ ಆ ಮನ ತಾನು ತನ್ನ ನಿಜದಲ್ಲಿ ನಿಂದು ನೋಡೆ ಆ ನೋಡುವ ನೋಟ ಉಳಿದಂದು ಉಳಿದ ಪರಮಾನಂದ ನೀನೇ, ತಿಳಿದು ನೋಡಾ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಮುನ್ನಿನ ಜನ್ಮದ ಭಕ್ತಿ ಹೋಯಿತ್ತಾಗಿ ಬಾರದು. ಇನ್ನಹ ಜನ್ಮದ ಭಕ್ತಿ ಇಲ್ಲವಾಗಿ ಅದು ಬಾರದು. ಇಂತೆರಡಿಲ್ಲಾಗಿ ಬೋಧಿಸಲಿಲ್ಲ. ಈಗಲಿಷ್ಟಾಗಿಷ್ಟ ಮಿತ್ರ ಗುಣತ್ರಯ ಪ್ರಾರಬ್ಧಂಗಳು ಭೋಗಿಸಿದಲ್ಲದೆ ಕೆಡವಾಗಿ ಶ್ರುತ್ಯಾನುಭವ ಸಿದ್ಧವಯ್ಯ. ತ್ಯಾಗ ಸಮೇತ ಮಾಡಿ ಸಕಲ ಭೇದವನೇನನೂ ಹೇಳಲರಿಯ ನಿಜಗುಣಯೋಗಿ ತಾನಾಗಿ ಸಿಮ್ಮಲಿಗೆಯ ಚೆನ್ನರಾಮನಾಥ ಇವೆಲ್ಲವ ಕನಸೆಂದು ಹುಸಿ ಮಾಡಿದ.
--------------
ಚಂದಿಮರಸ
ಮನವೇನ ಬಯಸಿತ್ತು ಆ ಬಯಕೆಗಳನೇನು ಮನಕ್ಕೆ ಕುಡದೆ ಅರಿವು ತಾನಾಗಿ ಸಂದೇಹವಳಿದು ನಿಂದ ಸಕಲ ವಿಷಯಂಗಳ ಒಡಗೂಡದಾತ ಸಿಮ್ಮಲಿಗೆಯ ಚೆನ್ನರಾಮ ತಾನೆ.
--------------
ಚಂದಿಮರಸ