ಅಥವಾ
(8) (4) (5) (0) (3) (0) (0) (0) (4) (1) (0) (0) (0) (0) ಅಂ (2) ಅಃ (2) (16) (0) (7) (1) (0) (2) (0) (5) (0) (0) (0) (0) (0) (0) (0) (14) (0) (7) (0) (15) (8) (1) (7) (2) (9) (1) (0) (0) (2) (7) (4) (0) (13) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶಿರವ ಸೀರೆಯ ಕರವ ಕಂಗಳ ಶಿಶುವನಿಕ್ಕಿಯೆರದರು. ಭಾಷೆ ಬಳಸಿ ಹಂಗು ಹಳಸಿಹೋಯಿತ್ತು. ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗಜಂಗಮಕ್ಕೆ ಕೊಟ್ಟಿಹೆನೆಂಬ ಶಬ್ದ ಅಳಿದರುಳಿಯಿತು.
--------------
ಚಂದಿಮರಸ
ಶಿವಗಣಂಗಳ ಬರವ ಕಂಡು ಕೈಮುಗಿದು ಅಂಜಲೇಬೇಕು. ಶರಣೆನ್ನಲೊಲ್ಲದೀ ಮನವು; ಆಗಿನ ಭಕ್ತಿಯನರಿಯದು, ಬಾಗಿ ಶರಣೆನ್ನಲೊಲ್ಲದೀ ಮನವು. ಆಳ್ದನೆಂದು ನಂಬಿಯೂ ನಂಬದಾಗಿ, ಸಿಮ್ಮಲಿಗೆಯ ಚೆನ್ನರಾಮನೆನ್ನ ಕೇಡ ನೋಡಿ ನಗುತೈದಾನೆ.
--------------
ಚಂದಿಮರಸ
ಶಬ್ದಾದಿ ಸಕಲ ವಿಷಯಗುಣಂಗಳ ನೀ ರಾಗ ವಿರಾಗಕಾರಣವಾಗಿ ಮನಸಾದಿ ಕರಣೇಂದ್ರಿಯಂಗಳೊಳಗಾದ ಜೀವನ ನಿವಾರಣೆಯ ಮಾಡಯ್ಯಾ. `ನಿಜಾನಂದಾನುಭಾವಸ್ಯ ಸರ್ವಸಾಕ್ಷಿಯಾನ್ ಯೋಗನಾಂ'ಎಂದುದಾಗಿ, ಇಂತು ಶಬ್ದಾದಿ ಸಕಲ ವಿಷಯಂಗಳೊಳಗಾದ ಜೀವನ ಮನವೆ ಸರ್ವಸಾಕ್ಷಿಯಾಗಿ ನಿಲ್ಲಬಲ್ಲಾತನೆ ಸಿಮ್ಮಲಿಗೆಯ ಚೆನ್ನರಾಮ ತಾನೆ.
--------------
ಚಂದಿಮರಸ
ಶಾಂತಸುಖವಿರಲೊಲ್ಲದೆ ನೀನೇಕೆ ಭ್ರಮಿಸುವೆಯೊ? ದೇಹಧರ್ಮ ಆರ ವಶವೂ ಅಲ್ಲ. ದೇಹದಿಚ್ಛೆ ಪ್ರಾರಬ್ಧ ಉಂಡಲ್ಲದೆ ಹೋಗದು. ತನುಧರ್ಮವಿಲ್ಲದಚಲ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ