ಅಥವಾ
(8) (4) (5) (0) (3) (0) (0) (0) (4) (1) (0) (0) (0) (0) ಅಂ (2) ಅಃ (2) (16) (0) (7) (1) (0) (2) (0) (5) (0) (0) (0) (0) (0) (0) (0) (14) (0) (7) (0) (15) (8) (1) (7) (2) (9) (1) (0) (0) (2) (7) (4) (0) (13) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉಳ್ಳ ರಜ್ಜುವಿನಲ್ಲಿ ತೋರಿತಿಲ್ಲದಹಿಯೆಂತಂತೆ ನೋಡಿ ಅರಿದಂದು ಕೆಟ್ಟುದಲ್ಲ. ನಾಮರೂಪು ಕ್ರಿಯಾಭೇದದಿಂ ತೋರುವ ಜಗವು ಪರಮನಲ್ಲಿ ಎಂದಡೆ ಕೇಡಿಂಗಿಮ್ಮೆ ಕೇಡುಂಟೆ ಹೇಳಾ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಉಪ ಜೀವೋಪಜೀವಕ ಶತ್ರು ಮಿತ್ರಾದಿ ಉದಾಸೀನ. ಸ್ತುತಿ ನಿಂದೆ ಮಾನಾಪಮಾನ ಪ್ರಾರಬ್ಧ ಸುಖದುಃಖ ಭೋಗೋಪಭೋಗಂಗಳನುಳ್ಳ ತನು ಉಳ್ಳನ್ನಕ್ಕ ಆರಿಗಾದಡೂ ರಾಗದ್ವೇಷವೆತ್ತ ಹೋದಡೊ ಬೆನ್ನಬಿಡವಾಗಿ ಇವ ಮಾಣಿಸಬಾರದು. `ದೃಷ್ಟತ್ವೇನ ಅಹಂ ಮಮ' ಎಂದುದಾಗಿ ಇಂತು ಕಾಮ ಕ್ರೋಧಾದಿಯೇ ಮಾಯೆ. ಈ ಮಾಯೆಯನುಳಿದು ಸೋಹಂಭಾವದೊಳಿರೆ ಆತ ನಿತ್ಯಮುಕ್ತನವ್ಯಕ್ತನಪ್ರಮೇಯ ಪರಮಾನಂದನಪ್ಪ ನಿರವಯನಹ ನಿಜಗುಣ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಉಪನಿಷದ್ವಾಕ್ಯಮಪ್ಪ ಗುರುವಚನವ ಹೃದಯದಲ್ಲಿ ನಂಬದೆ, ತಮ್ಮೊಳಿದ್ದ ಹಾಗೆ ಗಳಹುತಿಪ್ಪರಯ್ಯ. ಆರೇನೆಂದ ಮಾತ ನೀ ಕೇಳಿದಡೆ ಕೆಡುವೆ. ಎಲೆ ಮರುಳೆ `ಅಂದೆನೈವಾ ನಿಯಮನಾ' ಎಂದುದು ವೇದ. ಅನುಭವದಿಂದ ತಿಳಿದು ನೋಡಿ ನಂಬು. ಸದ್ಗುರು ನೀನೆ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ