ಅಥವಾ
(8) (4) (5) (0) (3) (0) (0) (0) (4) (1) (0) (0) (0) (0) ಅಂ (2) ಅಃ (2) (16) (0) (7) (1) (0) (2) (0) (5) (0) (0) (0) (0) (0) (0) (0) (14) (0) (7) (0) (15) (8) (1) (7) (2) (9) (1) (0) (0) (2) (7) (4) (0) (13) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುಣ ದೋಷ ಕರ್ಮಂಗಳನೇನೆಂದು ಅರಿಯ. ಈ ಜಗವೆಲ್ಲಾ ಮಾಯೆಯೆಂದು ಕಂಡನಭೇದ್ಯ. ಸುಖಸ್ವರೂಪ ನಿಜಗುಣ ನೀನೆ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಗಾಳಿ ಬೀಸುವಲ್ಲಿ ಕೇಳೆಲವೊ ಬೀಸಣಿಗೆಯ ಉಸುರೆಂತು ಮೆರೆವುದು ಹೇಳಾ ಮರುಳೆ! ನಿಸ್ಸಾಳ ಬಾರಿಸುವಲ್ಲಿ ಢವುಡೆ ತಂಬಟದ ದನಿ ಎಂತು ಮೆರೆವುದು ಹೇಳಾ ಮರುಳೆ! ಸಿಮ್ಮಲಿಗೆಯ ಚೆನ್ನರಾಮನೆಂಬ ಸೀಮೆಯಿಲ್ಲದ ನಿಸ್ಸೀಮಂಗೆ ಲಿಂಗ ಸಂಸಾರಿ ಸರಿಯಲ್ಲ ಹೇಳಾ ಮರುಳೆ!
--------------
ಚಂದಿಮರಸ
ಗೋವಾದಿಯಾದ ಸಾಕಾರಾದಿ ಭೌತಿಕಂಗಳನತಿಗಳೆದು ನಿರಾಕಾರ ಪ್ರಾಣಾದಿಯಾದ ಮನೇಂದ್ರಿಯಂಗಳ ನೆಲೆಗಳೆದು ಅರಿವಿನರಿವಿಂದವೇ ನೋಡಿ, ಅರಿವು ಮರವೆಗಳೆರಡನು ನೇತಿಗಳೆದು ಏನೂ ಇಲ್ಲದೆ ಶೂನ್ಯವಾಗಿ ನಿಂದ ನಿಜಸ್ವರೂಪ ನೀನೇ, ಸಿಮ್ಮಲಿಗೆಯ ಚೆನ್ನಾರಾಮಾ.
--------------
ಚಂದಿಮರಸ
ಗಗನಾದಿ ಸಾಕಾರದಜ್ಞಾನಭಾವವನತಿಗಳೆದು ಅರಿತ ಅರಿವಿಂದವೆ ನೋಡಿ, ಆ ಅರಿವನೆ ತಿಳಿದು, ಏನೂ ಅರಿಯೆನೆಂಬುದೆ ನಿಂದ ನಿಲವು. ಸಚ್ಚಿದಾನಂದ ನಿತ್ಯ ಪರಿಪೂರ್ಣ ನೀನೇ, ಸಿಮ್ಮಲಿಗೆಯ ಚಿನ್ನರಾಮಾ.
--------------
ಚಂದಿಮರಸ
ಗುಣ ಧರ್ಮ ಕರ್ಮಂಗಳನೇನೆಂದೂ ಅರಿಯೆ. ಸಾಕಾರಾದಿ ಭೌತಿಕಂಗಳನೇನೆಂದೂ ಅರಿಯೆ. ಅರಿವೆ ಮರವೆ ಎಂಬುದನರಿಯೆನೆಂದು ಅರಿಯದ ನಿಜವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಗಣಂಗಳ ಬರುವ ಕಂಡು ಕೈಮುಗಿದು ಅಂಜಲೇಬೇಕು. ಶರಣೆನ್ನಲೊಲ್ಲದೀ ಮನವು. ಆಳಿನ ಭಕ್ತಿಯನರಿಯರಾಗಿ ಶರಣೆನ್ನಲೊಲ್ಲದೀ ಮನವು. ಆಳ್ದನೆಂದು ನಂಬಿ ನಂಬಲೊಲ್ಲದಾಗಿ, ಸಿಮ್ಮಲಿಗೆಯ ಚೆನ್ನರಾಮನೆನ್ನಕಡೆ ನೋಡಿ ನಗುತಲಿದ್ದಾನೆ.
--------------
ಚಂದಿಮರಸ
ಗುರು ಹೇಳಿದುದನೆರಡಿಲ್ಲದೆ ನಂಬಿ ಶಿರದಲ್ಲಿ ಮನವಿರಿಸಿ ಪೆರತೇನುವ ನೆಮ್ಮದೆ ನಿಂದಲ್ಲಿ ನೀನೆ ಸಿಮ್ಮಲಿಗೆಯ ಚೆನ್ನರಾಮಾ!
--------------
ಚಂದಿಮರಸ