ಅಥವಾ
(8) (4) (5) (0) (3) (0) (0) (0) (4) (1) (0) (0) (0) (0) ಅಂ (2) ಅಃ (2) (16) (0) (7) (1) (0) (2) (0) (5) (0) (0) (0) (0) (0) (0) (0) (14) (0) (7) (0) (15) (8) (1) (7) (2) (9) (1) (0) (0) (2) (7) (4) (0) (13) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವಸುಧೆಯೊಳಗುಬ್ಬಸವಾದ ಪ್ರಾಣಿಗಳನೆಲ್ಲ ವಶಕ್ಕೆ ತಂದು ಕಾವ ಗೋವ ಹೇಮ ಹೇಮಿಗಳೆಲ್ಲರು ನಾಮ ಡಾವಣಿಗಳಾದರು; ವಿದ್ಥಿಗೆ ಬಲಿಯನು ತೆತ್ತಾಡುತಿರ್ಪರು ಸಿಮ್ಮಲಿಗೆಯ ಚೆನ್ನಾರಾಮನೆಂಬ ಲಿಂಗದ ಸೀಮೆಯೊಳಗೆಲ್ಲರು.
--------------
ಚಂದಿಮರಸ
ವಿಷಮದಶ ಪದನವನು ವಶಕ್ಕೆ ತಂದು ನಿಲಿಸಿ ಸುಷುಮ್ನ ಸುಸರದ ಊದ್ರ್ವಪಥವನರಿದೆವೆಂದು ರವಿಯ ನಾಲಗೆಯನಲನ ಕೊನೆಯ ಲಂಬಿಕಾಸ್ಥಾನವಾಗಿ ಶಶಿಯಮೃತವನುಂಡು ಸುಖಿಯಾದೆನೆಂಬರು. ಇವರೆಲ್ಲರು ಉಪಾಧಿಯನರಿಯದೆ ಹೋದರು. ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ ಬಯಲದ್ವೈತವ ನುಡಿವರು.
--------------
ಚಂದಿಮರಸ
ವಿಧಿ ನಿಷೇಧ ಜನನಿ ಜನಕ ಕುಲಗೋತ್ರ ಜಾತಿ ಭೇದಾಭೇದ ಸ್ವರ್ಗನರಕಾದಿ ಭಯವೇನೂ ಇಲ್ಲ, ಜಗವೇನೂ ಇಲ್ಲ. ``ಅತ್ರ ಪಿತಾ ಪಿತಾ ಭವತಿ ಮಾತಾ ಮಾತಾ ಲೋಕಾ ಲೋಕಾ ದೇವೋದೇವ ವೇದೋವೇದ ಬ್ರಾಹ್ಮಣೋ ಬ್ರಾಹ್ಮಣಶ್ಚಾಂಡಾಲೋ ಚಾಂಡಾಲಃ||' ಎಂದುದು ವೇದ. ಅದು ತಾನೆ ತನ್ನಿಂದನ್ಯವಿಲ್ಲ. ತೋರುವ ತೋರಿಕೆಯೆಲ್ಲ ಮಾಯೆಯೆಂದರಿದು ಜ್ಞಾನಾನಂದ ಪರಿಪೂರ್ಣ ತಾನೆಂದರಿದು ನೀನಾಗಿ ನಿಂದ ನಿಜಗುಣ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ವಿಷಯ ವಿರಕ್ತನಾಗಿ ದೃಢ ಭಕ್ತಿಯಿಂದ ಸದ್ಗುರು ಚರಣಕ್ಕೆ ಶರಣಾಗತಿ ಹೊಕ್ಕು ನಿರ್ಮಲನಾಗಿ ತತ್ಸನ್ನಿಧಿಯಲ್ಲಿ ನಿಂದು ತನ್ನನರಿಯಲೆಂದು ಬಂದು, ತಾನಾ ಅರಿವೆ ಮೈಯಾಗಿ, ಅರಿಯೆ ನಾನೆನ್ನದೆಂಬ ಮರವೆಯನರಿವುದು. ಸನ್ಮಾತ್ರ ತನು ತಾನಲ್ಲೆಂಬರಿವು ತಾನಲ್ಲವೆ? ಚಿನ್ಮಯ ಚೋದ್ಯ ರೂಪನಲ್ಲವೆ? ನಿರವಯ ನಿರ್ಗುಣ ತಾನೇತರಿಂದ ನೋವವನಲ್ಲೆಂದನಲಾನಂದಮಯ. ಮಿಥ್ಯೆಯಿಂ ಕೆಡುವುದು ಸಕಲ ಜಗವು. ಸತ್ಯವೆನಗೆ ಕೇಡಿಲ್ಲೆಂದರಿಯಲು ನಿತ್ಯಪದ. ಸರ್ವಭಾವ ಹುಸಿ ತೋರದೆ ನಿಂದ ನಿಲವದು ಪರಿಪೂರ್ಣಸತ್ಯ, ನಂಬು, ನಿನ್ನ ನೀ ತಿಳಿದು ನೋಡೆ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ವ್ಯಾಸ ವಾಲ್ಮೀಕಿ ಶುಕನು ಸುತಾಯ ದೇಹಭಾವವೆಂಬವರಿಗೆ ಜಾರಿಕೆ. ಧಾರುಣಿಯ ಮೇಲಾದ ಪಾದವು ನಿಲ್ಲದು. ಜಾರಿಕೆ ಅಳವುಗೆಟ್ಟಳವೆಯ ಆಳವೆಯು ಸಿಮ್ಮಲಿಗೆಯ ಚೆನ್ನರಾಮನೆಂಬ ಶಬುದವಿತ್ತುಗಳಿಗೆ.
--------------
ಚಂದಿಮರಸ
ವೇದವಾವುದು, ವೇದ್ಯವಾವುದು? ವೇದವಿಧಾನವಾವುದೆಂದರಿವವರು ನೀವು ಕೇಳಿರೆ! ವೇದವೆಂಬುದು ಬರಿಯರಿವು. ಮಹಾಲಿಂಗವನರಿದಾತನೆ ವೇದ್ಯನೆಂದು ಶಬ್ದಾದಿ ಸಕಲವಯ್ಯಾ. ವೇದ ವೇದ್ಯರೂಪ ವೇದವಿದನು ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ವಿಧಿಯ ಮೀರಿ ಮೈದೋರುವ ಮಂತ್ರ ತಂತ್ರ ಸಿದ್ಧರ ಕಾಣೆ. ಕಾಲವಶ ಕರ್ಮವಶ ನಿಮ್ಮ ಮಂತ್ರ ತಂತ್ರ ಕಾವುದೆ? ಸಿಮ್ಮಲಿಗೆಯ ಚೆನ್ನರಾಮಲಿಂಗದಲ್ಲಿ ವಿಧಿ ಮುಟ್ಟುವನ್ನಕ್ಕ ವಿಜಯರಾಗಿ ಬದುಕಿರೊ.
--------------
ಚಂದಿಮರಸ