ಅಥವಾ
(8) (4) (5) (0) (3) (0) (0) (0) (4) (1) (0) (0) (0) (0) ಅಂ (2) ಅಃ (2) (16) (0) (7) (1) (0) (2) (0) (5) (0) (0) (0) (0) (0) (0) (0) (14) (0) (7) (0) (15) (8) (1) (7) (2) (9) (1) (0) (0) (2) (7) (4) (0) (13) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತಾಮಸ ಸಂಬಂಧ ಕನಿಷ್ಠಂಗೆ ಹುಸಿ ಜಾಗ್ರದಿಟದಂತೆ ತೋರುಗು. ರಾಜನ ಸಂಬಂಧ ಮಧ್ಯಮಂಗೆ ಹುಸಿ ತೂರ್ಯ ದಿಟದಂತೆ ತೋರುಗು. ಸಾತ್ವಿಕ ಸಂಬಂಧ ಉತ್ತಮಂಗೆ ದಿಟ ತಾನೆ ತಾನಾಗಿ ನಿಜ ನಿತ್ಯವಾಗಿರ್ದುದು, ಸಂದೇಹವಿಲ್ಲ. ಇದು ಸಚ್ಚಿದಾನಂದ ನಿತ್ಯ ಪರಿಪೂರ್ಣ ತೂರ್ಯಾತೀತವಪ್ಪ ತತ್ತ್ವ ಇಂತುಂಟೆಂದು ತಿಳಿದ ತಿಳಿವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ತೋರುವಡೆ ವಿಷಯವಾಗಿರದು, ಅದು ಅರಿಯಬಾರದಾಗಿ ಅರಿಯಬಾರದು, ಅರಿಯಬಾರದಾಗಿ ಹೇಳಬಾರದ, ಹೇಳಬಾರದಾಗಿ ಕಾಣಬಾರದು. ಅದು ಅತಕ್ರ್ಯ, ಅದು ನಿನ್ನಲ್ಲಿಯೆ ಇದೆ. ಅದ ಹೇಳಲಿಲ್ಲ ಕೇಳಲಿಲ್ಲ ಅರಿಯಲಿಲ್ಲ. ಅದನೇನೆಂಬೆ ಹೇಳಾ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ತನು ಕಿಂಕರನಾಗದೆ, ಮನಕಿಂಕರನಾಗದೆ, ಇಂದ್ರಿಯ ಕಿಂಕರನಾಗದೆ, ಆತ್ಮ ಕಿಂಕರನಾಗದೆ, ಶ್ರುತಿ ಕಿಂಕರನಾಗದೆ ಇವೆಲ್ಲವ ನೆರೆ ತೊರೆದು ಏನು ಎನ್ನದೆ ಮರ್ಯಾದೆ ತಪ್ಪದೆ ಸದ್ಗುರು ಕಿಂಕರನಾಗಿ ಭವಗೆಟ್ಟು ಹೋದವರನೇನೆಂಬೆ ಹೇಳಾ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ತನ್ನ ತನ್ನಿಂದವೆ ತಿಳಿದು ನೋಡೆಲವೊ! ತನ್ನ ತನ್ನಿಂದವೆ ಆನೆನ್ನದೆ, ಎನ್ನದೆನ್ನದೆ ಅನ್ಯ ವಿಷಯಕ್ಕೆರಗದೆ ತನ್ನ ನಿಜಸುಖದಲ್ಲಿ ನಿಂದಂದು ತಾನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ತೃಷ್ಣೆಯ ಜೀವವೆಂಬ ಬೆಸುಗೆ ಬಿಡುವಲ್ಲಿ ವಶವಲ್ಲ ಅಸಾಧ್ಯ ಬ್ರಹ್ಮಾದಿಗಳಿಗೆ ಆಳಿಗೊಂಡುದು ವಾಯು. ವಾಯು ಕೇಳಿ ಅರಿವರನರಿವ ಮರಸಿತ್ತು ಸಿಮ್ಮಲಿಗೆಯ ಚೆನ್ನರಾಮನೆಂಬ ಅವಧಾನ ಜನಿಸಿತ್ತಾಗಿ.
--------------
ಚಂದಿಮರಸ
ತನ್ನದಾದಡೇನೋ ಕನ್ನಡಿ ಅನ್ಯರದಾದಡೇನೋ ಕನ್ನಡಿ? ತನ್ನ ರೂಪ ಕಂಡಡೆ ಸಾಲದೆ? ಸದ್ಗುರು ಆವನಾದಡೇನೋ? ತನ್ನನರುಹಿಸಿದಡೆ ಸಾಲದೆ? ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ತನ್ನ ಮರೆವಂದವ ಶ್ರೀ ಗುರುವಿನ ವಚನದಿಂ ತಿಳಿದು ನೋಡಯ್ಯಾ, ಪರಬ್ರಹ್ಮತಾನಾದಂದು ತನ್ನ ತಾ ಮರೆವೆ ನೋಡಯ್ಯಾ. ಇದನರಿದು ಸುಖಿಯಾದಾತ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ತಾ ಸನ್ಮಾತ್ರನಾಗಿ ಅಸನ್ಮಾತ್ರನೆನಲುಂಟೆ? ತಾ ಚಿನ್ಮಾತ್ರನಾಗಿ ಅಚಿನ್ಮಾತ್ರನೆನಲುಂಟೆ; ತಾ ಸುಖರೂಪನಾಗಿ ಅಸುಖರೂಪನೆನಲುಂಟೆ? ತಾ ನಿತ್ಯನಾಗಿ ಅನಿತ್ಯನೆನಲುಂಟೆ? ತಾ ಪರಿಪೂರ್ಣನಾಗಿ ಅಪರಿಪೂರ್ಣನೆನಲುಂಟೆ? ಏನೆಂಬೆನಂii್ಞ್ಯ, ತತ್ವವನರಿಯದ ಮರುಳುಗಳ! ತಿಳಿದು ನೋಡಿ ತಾನೆಂದು ಇದಿರೆಂದು ಏನೆಂದು ತೋರದ ಸಚ್ಚಿದಾನಂದ ನಿತ್ಯ ಪರಿಪೂರ್ಣನು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ತನಗೆ ಜ್ಞಾತೃವಿಲ್ಲ ಜ್ಞೇಯವಿಲ್ಲೆನಲು ಆರಿಗೆ ತೋರುವುದೊ? ಜಗವಿನ್ನಾರಿಗೆ ತೋರುವುದೋ? ನಿನ್ನ ಮರುತನ ಜಗದ ಡಂಗುರ ನೋಡಾ! ಇನ್ನಾರಿಗೆಯು ದೃಶ್ಯವಿಲ್ಲ. ಐಕ್ಯಂತು ಭಾವ ದೃಷ್ಟಿ. ಸಿಮ್ಮಲಿಗೆಯ ಚೆನ್ನರಾಮ ಸರ್ವವೈದ್ಯನು.
--------------
ಚಂದಿಮರಸ
ತಮ ತಮಗೆ ಜ್ಞಾತೃವಿಲ್ಲ ಜ್ಞಾನವಿಲ್ಲ ಜ್ಞೇಯವಿಲ್ಲೆನಲು ಆರಿಗೆ ತೋರೂದೊ? ಜಗವಿನ್ನಾರಿಗೆ ತೋರೂದೊ ನಿನ್ನ? `ನಿಜಾನಂದಾನುಭಾವಸ್ಯ ಸರ್ವಸಾಕ್ಷಿಕ ಯೋಗಿನಃ' ಎಂದುದಾಗಿ ಇಂತು ಶಬ್ದಾದಿ ಸಕಲ ವಿಷಯಂಗಳೊಳಗಾದ ಜೀವನ್ಮನವೆ ಸರ್ವಸಾಕ್ಷಿಯಾಗಿ ನಿಲಬಲ್ಲಾತನೆ ಸಿಮ್ಮಲಿಗೆಯ ಚೆನ್ನರಾಮ ತಾನೆ!
--------------
ಚಂದಿಮರಸ
ತನುವೆಂಬುದು ನಿಮ್ಮ ನಿಜವ ಕಾಣಲೀಯದು. ಮನವೆಂಬುದು ನಿಮ್ಮ ದಿಟವ ಕಾಣಲೀಯದು. ಹಮ್ಮು ಬಿಮ್ಮು ಅನೃತ ಆಸತ್ಯ ಅವಿದ್ಯ ಈ ಪಂಚವಿಷಯ ಅಜ್ಞಾನಭಾವಕ್ಕೆ ಮೂಲವಯ್ಯಾ. ಅರಿವು ನಿನ್ನೊಡಲಾಗಿ ಮರವೆಯ ಮರೆದೆನೆಂಬುದು ಮಿಥ್ಯ ತಿಳಿದಳಿದುಳಿದ ಬಚ್ಚಬರಿಯರಿವು ಸಚ್ಚಿದಾನಂದ ಸ್ವರೂಪ ನೀನೆ, ಸಿಮ್ಮಲಿಗೆಯ ಚೆನ್ನರಾಮ.
--------------
ಚಂದಿಮರಸ
ತಾನೆ ದೇವನೆಂಬ, ತಾನೆಲ್ಲ ಬಲ್ಲೆನೆಂಬ ತಾನೇ ಅಹಂಬ್ರಹ್ಮನೆಂಬ ಏನುವನೂ ಸಲಿಸದಿಹನಯ್ಯಾ. ಎನುವಲ್ಲದ ಹುಸಿಯನೆ ನುಡಿವ(ನ) ಜ್ಞಾನಿಯೆಂತೆಂಬೆ ಹೇಳಾ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ತಾನಿದಿರೆಂಬುದೊಂದು ಮಾಯೆ ತೋರಿತ್ತಾಗಿ ತಾನಲ್ಲ. ಈ ತೋರುವುದು ಉಳುಮೆ. ಜ್ಞಾನಾನಂದ ತಾನೆಂಬುದನಾರೂ ಅರಿಯರಲ್ಲಾ! ನೋಡಲೇನೂ ಇಲ್ಲವಾಗಿ ನಿಜಸಿದ್ಧ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ತೋರುವುದೆಲ್ಲವ ಕಾಬಾತ ತಾನೆಂದು ನೋಡೆ ತೋರುವುದ ಕಾಬವನು ಈ ತೋರಿಕೆಯೆ ಹುಸಿಯಾಗಿ ಏನುವನೂ ಕಾಣದೆ ನಿಂದ ನಿಲುವು. ಸಚ್ಚಿದಾನಂದಸ್ವರೂಪು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ