ಅಥವಾ
(8) (4) (5) (0) (3) (0) (0) (0) (4) (1) (0) (0) (0) (0) ಅಂ (2) ಅಃ (2) (16) (0) (7) (1) (0) (2) (0) (5) (0) (0) (0) (0) (0) (0) (0) (14) (0) (7) (0) (15) (8) (1) (7) (2) (9) (1) (0) (0) (2) (7) (4) (0) (13) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಮುದ್ರದಿಂದಾದ ತೆರೆಗಳು ಸಮುದ್ರದೊಳಗಡಗುತ್ತ ಆ ಸಮುದ್ರದೊಳಗೇ ಇಹವು. ತೆರೆಗಳು ಬೇರೊಂದುದಕವೆ? ನಿಮ್ಮಿಂದಲಾದ ಜಗವು ನಿಮ್ಮಲ್ಲಿಯೆ ಇದ್ದು ನಿಮ್ಮಲ್ಲಿಯೆ ಅಡಗುವುದು. ಬೇರೆ ಬೇರೆ ಕುಲವುಂಟೆ ಈ ಜಗಕ್ಕೆ? ಅದೆಂತೆಂದಡೆ: ಬ್ರಹ್ಮಬೀಜಂ ಜಗತ್‍ಸರ್ವಂ ಬ್ರಹ್ಮಣೈವ ವಿವರ್ಧತೇ| ಬ್ರಹ್ಮಣ್ಯೇವ ಲಯಂ ಯಾತಿ ಜಾತಿಭೇದಃ ಕಥಂ ಭವೇತ್|| ಇಂತೆಂದುದಾಗಿ, ಕುಲವೂ ಇಲ್ಲ ಛಲವೂ ಇಲ್ಲ. ಮರೆಯ ನುಡಿಯನೊಪ್ಪುವನೆ? ಸಿಮ್ಮಲಿಗೆಯ ಚೆನ್ನರಾಮ, ಬಿಡು ಜಡನೇ.
--------------
ಚಂದಿಮರಸ
ಸನ್ಮಣಿ ಎಂತು ಹೊದ್ಧಿದಂತೆ ತೋರುತಿಪ್ಪುದು? ನಿಜ ತನ್ನಂತೆ. ಅನುಭವಿ ಅವರವರಂತೆ ತೋರುವ. ತಾ ತನ್ನಂತೆ ಮತ್ತಾರಂತೆಯೂ ಆಗ. ಸನ್ಮಾತ್ರ ಚಿನ್ಮಯ ಪರಮಾನಂದ ತಿಳಿದು ನೋಡುವಡೆ ನಿಜಗುಣ ತಾನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಸಾವು ತಡವಲ್ಲ, ನರಕ ದೂರವಲ್ಲ, ಕೆಮ್ಮನೆ ಕೆಡಬೇಡ. ವಿಷಯವ ಬಿಡು, ಗುರುಭಕ್ತಿಯ ನಂಬು ಸುಖಿಯಪ್ಪೆ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಸಂಸಾರ ಮಾಯೆ ಅತಿದುಃಖ ಹೊಲ್ಲೆಂದು, ಅತ್ಮಜ್ಞಾನದಿಂದ ನಿತ್ಯಸುಖಿಯಪ್ಪುದೆ ಲೇಸೆಂದು, ಅರಿದವಂಗಾದ ಹೊಲ್ಲೆಹವೇನು? ಇದನೊಲ್ಲದವಂಗಾದ ಲೇಸೇನು ಹೇಳಾ! ಈ ದೇಹದಲುಣಬೇಡಿದ ಇಷ್ಟ ಕರ್ಮ ಇದಾವ ದೇಹಿಗೆ ಮಾದುದೊ? ನಿನ್ನ ನೀನೇ ಭಾವಿಸಿ ತಿಳಿದು ನೋಡಾ, ಸಿಮ್ಮಲಿಗೆಯ ಚೆನ್ನರಾಮನಿಕ್ಕಿದ ಸಂಸಾರದ ತೊಡಕು ಬಿಡಸಬಾರದು!
--------------
ಚಂದಿಮರಸ
ಸತ್ಯ ಜ್ಞಾನ ಪರಿಪೂರ್ಣಾನಂದ ಪರಮವಿದ್ಯೆಯದೇಕೊ? ಜಡ ದುಃಖ ದೇಶಿಕ ಕಲ್ಪಿತ ಅಕಲ್ಪಿತ ಅಲ್ಲಿ ಕಲ್ಪಿತ ಪರಮನ ಕಟ್ಟಿದ ನೋಡಾ, ಪರಮ ಕಲ್ಪಿತನ ಕಟ್ಟಿದನೊ ಹೇಳಯ್ಯಾ. ಅಲ್ಲಿ ಬಂಧವಾರಿಗೆ ಮೋಕ್ಷವಾರಿಗೆ ಹೇಳಯ್ಯಾ. ನಿನ್ನಿಂದ ನಿನ್ನ ತಿಳಿದು ನೋಡು. ತಥ್ಯಮಿಥ್ಯಗಳೊಂದನೊಂದು ಕಟ್ಟಲರಿದವೆ ಹೇಳು? ಹುಸಿ ತೋರಿಕೆ ದಿಟತಾನೆ? ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಸಂಸಾರವೆಂಬ ಹೇರಡವಿಯ ಅಂಧಕಾರದ, ಜನ್ಮಪಥದ ಆಧಿವ್ಯಾದಿಗಳೆಂಬ ಗಿರಿದುರ್ಗ ಜಲದುರ್ಗಂಗಳ, ಧನ ವನಿತೆ ವಿಷಯ ಮೃಗತೃಪ್ಣೆಯ ಬಳಿವಿಡಿದ ರಾಗದ್ವೇಷದ ಕೊಳ್ಳೆದರಿಲುಗಳ, ಖಗಮೃಗದ ಭಯದ, ತಾಪತ್ರಯದ ಕಾಳುಗಿಚ್ಚಿನಲ್ಲಿ ಬೇವ ನರಗುರಿಗಳಾದ ಸಾವ ಕೆಡುವ ಅಹಂಮಮತೆಯ ಹೊತ್ತು ನಡೆವ ಜೀವರಿಗೆ ಭವಬಂಧನ ಹರಿದು ಗುರುಪದವಪ್ಪುದು ನಿಜಗುಣನ ಶ್ರೀಪದವ ಶರಣುಗತಿ ಒಕ್ಕಡೆ, ನಿತ್ಯ ಸುಖಪೂರಿತ ಸಿಮ್ಮಲಿಗೆಯ ಚೆನ್ನರಾಮ ತಾನಹ ನೆರೆ ನಂಬಿದಡೆ.
--------------
ಚಂದಿಮರಸ
ಸಂಸಾರವೆಂಬ ಅತ್ತೆಗೆ ನಿರ್ಬುದ್ಧಿ ಸೊಸೆಯೊಬ್ಬಳು, ಅಟ್ಟುಂಡೆಹೆನೆಂದು ಒಲೆಯ ಬೂದಿಯ ತೋಡುವನ್ನಕ್ಕ ಒಳಗೊಂದು ಕಿಡಿಯಿದ್ದು ಕೈಬೆಂದು ಮರಗುವಂತಾಯಿತ್ತಲ್ಲಾ ಎನಗೆ! ನಿಸ್ಸಂಸಾರಿಯ ಒಡಲೊಲೆಯ ಬೂದಿಯ ಕೆಣಕುವನ್ನಕ್ಕ ಒಳಗೊಂದು ಸುಜ್ಞಾನವೆಂಬ ಕಿಡಿಯಿದ್ದು ಎನ್ನ ಮನದ ಕೈ ಬೆಂದು ಹೃದಯ ಮರಗುತ್ತಿದ್ದೇನೆ. ಇದಕ್ಕೆ ಶೀತಾಳಮಂತ್ರವುಂಟೆ ಅಯ್ಯಾ! ಎನ್ನ ಸಿಮ್ಮಲಿಗೆಯ ಚೆನ್ನರಾಮಲಿಂಗದಲ್ಲಿ ನಿಜಗುಣ ಶರಣೆಂಬುದೆ ಇದಕ್ಕೆ ಶೀತಾಳಮಂತ್ರ
--------------
ಚಂದಿಮರಸ
ಸ್ಥಾಣು ಚೋರರಜ್ಜುಸರ್ಪ ಮೃಗ ತೃಷ್ಣೆಕನಸು, ಇಂದ್ರಜಾಲ ಗಂಧರ್ವನಗರವೆಂಬ ಭ್ರಮೆಗಳ ಹುಸಿಯೆಂದರಿದವನು ಪ್ರಪಂಚ ಹೇಳಲರಿಯದಿರ್ದಡೆ ದಿಟವಪ್ಪುದೆ? ವಿಚಾರಿಸಿ ನೋಡಲು ಜಗ ಹುಸಿ, ದಿಟ ತಾನೆಂದರಿದಾತನ ಅರಿವು ಕೆಡಲರಿವುದೆ ಹೇಳಾ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಸಕಲ ಸಂಸಾರದ ಆಸುರತೆಯನರಿದು, ಅಹಂಮಮತೆಯನಳಿದು, ಲೇಸಿದು ಹೊಲ್ಲೆಹವಿದು, ತತ್ತ್ವವಿದು ಅತತ್ತ್ವವಿದೆಂದರಿದು ಏನುವನು ಸಂಪಾದಿಸದೆ ನಿಜಸುಖ ನೀನೇ ನಿಜಗುಣರೂಪಾಗಿರ್ದ ಸುಖಮುಖದ ಪಿಕದಂತೆ ಮೌನಿಯಾಗಿ ನಿಂದ ನಿಲುವು ನೀನೆ ನಿಜಗುಣ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಸಂಕಲ್ಪವೆಂಬ ಸಂಕಲೆ ಹರಿಯಿತ್ತಲ್ಲಾ! ಕಾಮವೆಂಬ ಕಂಭವ ಕಿತ್ತೀಡಾಡಿತ್ತಲ್ಲಾ! ಮಾಯವೆಂಬ ಮಾವತಿಗನ ಮೀರಿತ್ತು ಆಸೆಯೆಂಬ ಅಂಕುಶಕ್ಕೆ ನಿಲ್ಲದು. ಮಾಯಾಪಾಶವೆಂಬ ಪಾಯದಳ ಅಂಜಿ ಓಡಿತ್ತು. ಮದಗಜವೆಂಬ ಅನೆ ಅಳಿದ ಬಳಿಕ, ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ ಆನೆ ಆನೆ ಎಂಬುದೇನೂ ಇಲ್ಲದೆ ಹೋಯಿತ್ತು.
--------------
ಚಂದಿಮರಸ
ಸಮವೇದ್ಯನು ಮನವೇನ ಬಯಸಿತ್ತು? ಆ ಬಯಕೆಯನೇನುವನು ಮನಕ್ಕೆ ಕೊಡದೆ ಅರಿವು ತಾನಾಗಿ ನಿಮ್ಮ ಸಂದೇಹವಳಿದು ನಿಂದ ಪರಮಾನಂದರೂಪು, ಸಕಲ ವಿಷಯಂಗಳ ಒಡಗೂಡದಾತ ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಸುರರಿಗೆ ನಿರಂತರ ಜಾಗ್ರ, ಮರುಳುಗಳಿಗೆ ನಿರಂತರ ಸ್ವಪ್ನ, ಅಚರಜೀವಿಗಳಿಗೆ ನಿರಂತರ ಸುಷುಪ್ತಿ, ವರ ಯೋಗಿಗಳಿಗೆ ನಿರಂತರ ತುರ್ಯ. ಸ್ಥೂಲ ಸೂಕ್ಷ ್ಮ ಕಾರಣವ ಪ್ರಾಪ್ತಿಸುವ ತನು ತನ್ನ ಮಾಯಾತನುವಾಗಿ ಮಾಯೆ ತೋರುತ್ತಿಪ್ಪುದು. ಸಕಲ ತನುರಹಿತ ನೀನೆಂದು ಸಕಲ ಮಾಯೆ ಹುಸಿಯೆಂದು ತನ್ನ ತನ್ನಿಂದರಿದ ಪರಮಾರೂಢ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಸಾಕಾರಸ್ವರೂಪಿ ಸಂಗನಬಸವಣ್ಣ ನೋಡಾ. ನಿರಾಕಾರಸ್ವರೂಪಿ ಚನ್ನಬಸವಣ್ಣ ನೋಡಾ. ನಿರ್ವಯಲ ಪರವಸ್ತುಸ್ವರೂಪಿ ಪ್ರಭುದೇವರು ನೋಡಾ. ಇಂತೀ ಮೂವರ ಕಾರುಣ್ಯಪ್ರಸಾದವ ಕೊಂಡು ಮೀರಿದ ಘನವಾದೆನು ಸಿಮ್ಮಲಿಗೆಯಚೆನ್ನರಾಮನಲ್ಲಿ.
--------------
ಚಂದಿಮರಸ