ಅಥವಾ
(8) (4) (5) (0) (3) (0) (0) (0) (4) (1) (0) (0) (0) (0) ಅಂ (2) ಅಃ (2) (16) (0) (7) (1) (0) (2) (0) (5) (0) (0) (0) (0) (0) (0) (0) (14) (0) (7) (0) (15) (8) (1) (7) (2) (9) (1) (0) (0) (2) (7) (4) (0) (13) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಂದ್ರಿಯಂಗಳೊಡಗೂಡಿ ಬಹಿರ್ಮುಖನಾಗಿ ವಿಷಯಂಗಳಲ್ಲಿ ಆಸಕ್ತಿಯುಳ್ಳವನು ಅಂತರ್ಮುಖ ರೂಪನಪ್ಪ, ಪ್ರತ್ಯಗಾತ್ಮನನೆಂತೂ ಕಾಣಲರಿಯೆನು. ಮೇರುಗಿರಿಯ ಕಂಡೆಹೆನೆಂದು ತೆಂಕಮುಖನಾಗಿ ನಡೆದು ಮೇರುಗಿರಿಯ ಕಾಣಲರಿಯನೆಂತಂತೆ, ಸಕಲ ವಿಷಯಾಸಕ್ತಿಯ ಬಿಟ್ಟು ನಿರ್ವಿಷಯಿಯಾಗಿ ನಿಜದಲ್ಲಿ ನಿಂದ ನಿಲವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಇಲ್ಲದ ತನುವಿಲ್ಲೆಂಬುದಕ್ಕೆ ಉಳ್ಳಾತನನುಂಟೆಂಬುದಕ್ಕೆ ಶಾಸ್ತ್ರಪುರಾಣಾಗಮಂಗಳನೋದಿ ಕೇಳಿ ತಲ್ಲಣಗೊಂಬುದಕ್ಕೆ ಕಾರಣವೇನೂ ಇಲ್ಲದುದಿಲ್ಲ, ಉಂಟಾದುದುಂಟು. ಇಲ್ಲ ಉಂಟೆಂಬುದಕ್ಕೆ ತೆರಹಿಲ್ಲದ ಸಚ್ಚಿದಾನಂದಮಪ್ಪ ನಿಜವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಇಹಪರವೆಂಬ ಇದ್ದೆಸೆಯಾಗಿರ್ದನ ಪರಿ ಹೊಸತು! ನೆಯಿ ಹತ್ತದ ನಾಲಗೆಯಂತೆ, ಹುಡಿ ಹತ್ತದ ಗಾಳಿಯಂತೆ, ಕಾಡಿಗೆ ಹತ್ತದ ಆಲಿಯಂತೆ ಇರ್ದೆನಯ್ಯಾ! ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ ಆಚರಿಸುತ್ತ ಆಚರಿಸುತ್ತ ಆಚರಿಸದಂತಿರ್ದೆ ನೋಡಯ್ಯಾ
--------------
ಚಂದಿಮರಸ
ಇಂದುವಿನ ಬೆಳಗಿಂದ ಇಂದುವ ಭಾನುವಿನ ಬೆಳಗಿಂದ ಭಾನುವ ದೀಪದ ಬೆಳಗಿಂದ ದೀಪವ ಕಾಬಂತೆ ತನ್ನ ಬೆಳಗಿಂದ ತನ್ನನೆ ಕಂಡಡೆ ನಿನ್ನ ನಿಲವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಇಂದ್ರಜಾಲ ಗಾಂಧರ್ವನಗರಾದಿಗಳ ಭ್ರಮೆಯ ಹುಸಿಯೆಂದು ಕಾಣಬಹುದಲ್ಲದೆ ಪ್ರಮಾಣಿಸಬಾರದು. ಸ್ತ್ರೀಯಲ್ಲ ಪುರುಷನಲ್ಲ ನಪುಂಸಕನಲ್ಲ ಆತ್ಮನೆಂದು ಅರಿಯಬಹುದಲ್ಲದೆ ಕಾಣಿಸಬಾರದು. ದೇಹಾದಿ ಗುಣಧರ್ಮ ಕರ್ಮಂಗಳು ತಾನಲ್ಲ, ಇವು ತನ್ನವಲ್ಲವೆಂದು ತಿಳಿಯಬಹುದು. ಅದು ಮಾಯಾಮಯ ಪ್ರಾರಂಭ ಕೆಡೆಕೆಡುಗು. ನೀತಿ ಕ್ರಮದಿಂದ ಬೋದ್ಯದೀಪ್ತಿ ತಾನೆಂದು ಅರಿದರಿವು ನೀನೇ, ಸಿಮ್ಮಲಿಗೆಯ ಚೆನ್ನರಾಮಂಗಾವ ದುಃಖವೂ ಇಲ್ಲ.
--------------
ಚಂದಿಮರಸ