ಅಥವಾ
(8) (4) (5) (0) (3) (0) (0) (0) (4) (1) (0) (0) (0) (0) ಅಂ (2) ಅಃ (2) (16) (0) (7) (1) (0) (2) (0) (5) (0) (0) (0) (0) (0) (0) (0) (14) (0) (7) (0) (15) (8) (1) (7) (2) (9) (1) (0) (0) (2) (7) (4) (0) (13) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಲುಹಾಗಿ ತತ್ವವಡಸಿದಾತ ಸತ್ತನೆ? ಕರಗುವ ತತ್ಪುಂಜನೆಯ ಕರಣವ ತಪ್ಪಿಸಿ ಪ್ರವೇಶಿಸುವಾತ ಸಂಚರಿಸುವ ತದ್ಬ ್ರಮೆಯಿಂದ ಬಯಲ ಕರಣಂಗಳಿಗೆಡೆಗೊಡುವ ಕತದಿಂ ಪಂಚಮಹಾರೂಪನ ಅಹಂಭಾವದ ಜೀವನಿಂದ ರಾಗಾದಿ ಮಲತ್ಯಾಗದಿಂದ, ಸಕಲ ಕರಣ ವ್ಯಾಪಾರದಿಂದ, ಉತ್ತುಂಗ ಪದೋನ್ನತಿಯಿಂದ ಸಮವೆನೆ, ಕರಣದೊಳಿಪ್ಪರಿವಿಂದೆ ಚೇಷ್ಟಿಸುವನಾಗಿ ಪ್ರಾಣಾದಿರೂಪನು. ತಾ ನುಡಿದುದ ತಾನೆ ಕೇಳುವ, ಲೇಸೆಂಬುದ ಹಿಡಿವ, ಮುಂದೆ ನೇತಿಗತಿಯ ಕರಣಂಗಳ ಕಾಬ, ಹೊಲ್ಲಹದವ ಬಿಡುತ್ತ ಸೇವಿಸುವ, ಸ್ವಚ್ಛಾಂಗ ಸುಖವಾಸನೆಗೆರಗುವ, ಕರ್ಮೇಂದ್ರಿಯದ ಬುದ್ಧೀಂದ್ರಿಯಾನಂದ ತಾನೆಂಬುದನಾರೂ ಅರಿಯರಯ್ಯಾ! ನೋಡಲೇನದ ನಿಶ್ಚಯಿಸಿ ನಾ ಬಲ್ಲೆನೆಂಬ ಆರಿದು ಮರೆಯದಂತೆ ರೂಪನಪ್ಪಿ ಸೋಹಮೆಂಬುದು ಜೀವ. ಇಂತಪ್ಪ ಸರ್ವದೃಷ್ಟವನೊಳಕೊಂಡು. ಪಂಚವಿಂಶತಿಯಾಗಿ ತೋರುವ ತೋರಿಕೆಯೆಲ್ಲಾ ಹುಸಿಯೆಂದರಿದರಿವು ನಿಜತತ್ವ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಬೆಣ್ಣೆಯ ಬೆನಕಂಗೆ ಕೆಂಡದುಂಡಲಿಗೆಯ ಉಪಹಾರ. ಉಬ್ಬಸ ಉರಿಸುವುದೆ ಮೈಯಕ್ಕುವುದೆ? ಅದೆಲ್ಲಿಯ ಮಾತು, ಹುಸಿ. ಅದಲ್ಲ, ನಿಲ್ಲು ಎಲೆ ಜಡನೆ! ಬೇರೆ ವಚಿಸಲಿಲ್ಲ, ಸಿಮ್ಮಲಿಗೆಯ ಚೆನ್ನರಾಮನೆಂಬ ಶಬ್ದವಿತ್ತುಗಳಿಗೆ.
--------------
ಚಂದಿಮರಸ
ಬೆಳಗಿನ ಬೀಜ ಮಹಾಬೆಳಗು ಕತ್ತಲೆಯನೊಳಕೊಂಡು ಕಣ್ಣಿರೆವ ಪರಿಯ ನೋಡಾ! ತಿಳಿವಡೆ ಬೆಳಗಲ್ಲ, ಒಳಗೊಳಗೆ ಹೊಳೆವ ಕಳೆ ಇದೇನೊ! ಇದೆಲ್ಲಿಂದ ಹುಟ್ಟಿ, ಇದೆಲ್ಲಿಂದ ತೋರಿತ್ತು! ಅಲ್ಲಿಯೆ ಆಗಾಗಿ ಅಲ್ಲಿಯೇ ಬೆಳೆಯಿತ್ತು. ಸಿಮ್ಮಲಿಗೆಯ ಚೆನ್ನರಾಮನೆಂಬ ಮಹಾಘನಲಿಂಗದಲ್ಲಿಯೆ ಕಾಲೂರಿ ನಿಂದ ಪರಿಯನೇನೆಂಬೆ!
--------------
ಚಂದಿಮರಸ
ಬಟ್ಟೆಗೊಂಡು ಹೋಗುತಿಪ್ಪ ಮನುಜನೊಬ್ಬ ಹುಲಿ ಕಾಡುಗಿಚ್ಚು ರಕ್ಕಸಿ ಕಾಡಾನೆಗಳು ನಾಲ್ಕೂ ದೆಸೆಯಲಟ್ಟುತ ಬರೆ ಕಂಡು ಭಯದಿಂದ ಹೋಗ ದೆಸೆಯಿಲ್ಲದೆ ಬಾವಿಯ ಕಂಡು ತಲೆಯನೂರಿ ಬೀಳುವಲ್ಲಿ ಹಾವ ಕಂಡು ಇಲಿಗಡಿದ ಬಳ್ಳಿಯ ಹಿಡಿದು ನಿಲೆ ಜೇನುಹುಳು ಮೈಯನೂರುವಾಗ ಮೂಗಿನ ತುದಿಯಲೊಂದು ಹನಿ ಮಧು ಬಂದು ಬೀಳೆ ಆ ಮಧುವ ಕಂಡು ಹಿರಿದಪ್ಪ ದುಃಖವೆಲ್ಲವೆಲ್ಲವ ಸೈರಿಸಿ ನಾಲಗೆಯ ತುದಿಯಲ್ಲಿ ಆ ಮಧುವ ಸೇವಿಸುವಂತೆ ಈ ಸಂಸಾರಸುಖ ವಿಚಾರಿಸಿ ನೋಡಿದಡೆ ದುಃಖದಾಗರ ಇದನರಿದು ಸಕಲ ವಿಷಯಂಗಳಲ್ಲಿ ಸುಖವಿಂತುಟೆಂದು ನಿರ್ವಿಷಯನಾಗಿ ನಿಂದ ನಿಲವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಬಲ್ಲೆವು ಬಲ್ಲೆವೆಂದೆಂಬರು, ಬಯಲು ಭ್ರಮೆಗೆ ಬಳಲುತ್ತಿರ್ಪರು. ಹಗಲುಗತ್ತಲೆ ಹಗಲುಗತ್ತಲೆ ಹದಿರ ನುಡಿವ ಚದುರರಿಗೆಲ್ಲಾ ಹಗಲುಗತ್ತಲೆ. ಬಲ್ಲವರನಲ್ಲೆನಿಸಿತ್ತು ಸಿಮ್ಮಲಿಗೆಯ ಚೆನ್ನರಾಮನೆಂಬ ನಾಮದೊಡಕು.
--------------
ಚಂದಿಮರಸ
ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಮನುಷ್ಯ ಸ್ತ್ರೀ ಪುನ್ನಕಾದಿ ಜಾತಿಪ್ರತ್ಯಯಂಗಳು ಬಾಲಭಾವದೊಳೆಂತಂತೆ. ತನ್ನ ನಿಜವನರಿಯದವನು ಕೋಹಂಭಾವ ನಾಹಂಭಾವ ಸೋಹಂಭಾವಾದಿ ಸಕಲ ಹಂಕ್ರಿಯಾಗದುಃಖವಿಲ್ಲದ ಅಜನ ಪ್ರಮೇಯಜ್ಞಾನ ಚಿನ್ಮಾತ್ರಯೆಂಬ ಸುಖಸ್ವರೂಪ ತಾನೇ. ಪರಮನೆಂಬ ನಿಜವನರಿದಾತ, ಮರೆಯನೆಂತಿರ್ದದಂ ಎಂತು ನಡೆದಡಂತೆ ಸಂತ, ಸಿಮ್ಮಲಿಗೆಯ ಚೆನ್ನರಾಮನಾಶ್ರಯದಲ್ಲಿರ್ದ ಪರಮಾರೂಢ. ಆತನ ಸದ್ಬೋಧೆ ಅವನ ಮಂತ್ರದಿಂದ ಕೇಳಿ ಶುದ್ಧರಾಗಿ ಬದುಕಿ.
--------------
ಚಂದಿಮರಸ
ಬೆಳಗಿನ ಬೀಜವಿಡಿದು ಬೆಳೆದ ಕತ್ತಲೆ, ಆ ಕತ್ತಲೆವಿಡಿದು ಬೆಳೆದ ಮೂವರು, ದೃಷ್ಟದ ನಷ್ಟವ ವಿತ್ತವೆಂದು ಹಿಡಿದುಕೊಂಡೈದಾರೆ ಆದಿವಾಸದೊಳಗಣ ಹಿರಿಯರೆಲ್ಲರು ಸಾಧಾರಣ ಸಾರತರಾಗಿಯೆ ಹೋದರು, ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದ ನಿಜವನರಿಯದೆ.
--------------
ಚಂದಿಮರಸ