ಅಥವಾ
(8) (4) (5) (0) (3) (0) (0) (0) (4) (1) (0) (0) (0) (0) ಅಂ (2) ಅಃ (2) (16) (0) (7) (1) (0) (2) (0) (5) (0) (0) (0) (0) (0) (0) (0) (14) (0) (7) (0) (15) (8) (1) (7) (2) (9) (1) (0) (0) (2) (7) (4) (0) (13) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆತ್ಮನೆಂತಪ್ಪಡೆ, ನಿರವಯ ನಿರ್ಗುಣ ನಿರ್ವಿಕಾರ! ನೋಡುವಡೆ, ಕರ್ಮವ ಮಾಡುವವರಾರೊ? ಅಲ್ಲಿ ಸಂಸಾರವಾರಿಗೆ ತೋರಿತ್ತೊ? ಬಂಧ ಮೋಕ್ಷಗಳಾರಿಗೆ, ಎಲೆ ಅಯ್ಯಾ? ನಿನ್ನ ನಿನ್ನಿಂದ ತಿಳಿದು ನೋಡಲು ತಥ್ಯಮಿಥ್ಯಗಳೊಂದಕ್ಕೊಂದು ತಟ್ಟಲರಿವವೆ? ಪುಸಿಮಾಯೆ ತೋರಿತ್ತು; ಸೋಜಿಗ, ಭ್ರಮೆ! ದಿಟ ನೀನೆ, ಸಿಮ್ಮಲಿಗೆಯ ಚೆನ್ನರಾಮಾ!
--------------
ಚಂದಿಮರಸ
ಆರತವಡಗಿತ್ತು, ಸಾರತ ಸವೆಯಿತ್ತು. ಸಂಭ್ರಮ ಸೈವೆರಗಾಯಿತ್ತು. ನಚ್ಚಿಕೆ ನಾಚಿತ್ತು, ಮಚ್ಚಿಕೆ ಮರೆಯಿತ್ತು. ನಿಷೆ* ನಿರ್ಭಾವಿಸಿ ನಿಸ್ಸಂದೇಹಕ್ಕೊಳಗಾಯಿತ್ತು. ನಮ್ಮ ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ ಖಂಡಿತಪೂಜೆ ಭಂಡಾಯಿತ್ತು.
--------------
ಚಂದಿಮರಸ
ಆವ ಕಾಲದೊಳಾದಡೂ ಆವ ದೇಶದೊಳಾದಡೂ ತನ್ನ ಲಲಾಟಲಿಖಿತ ಪ್ರಾರಂಬ್ಧಕರ್ಮ ಉಂಡಲ್ಲದೆ ತೀರದು; ದೈವತಾಪ್ರಾರಬ್ಧ ಭೋಗಿಸಿದಲ್ಲದೆ ಕ್ಷಯವಾಗದು; ದೇವ ದಾನವ ಮಾನವರಿಗಾದಡೂ ನಿವಾರಿಸಬಾರದು. ತನು ತಾನಲ್ಲ, ತನ್ನದಲ್ಲ. ಇದು ಮಾಯೆಯೆಂದರಿದು ಸುಖಿಯಾದಾತ ನೀನೆ, ಸಿಮ್ಮಲಿಗೆಯ ಚೆನ್ನರಾಮಾ!
--------------
ಚಂದಿಮರಸ
ಆನೆಂಬುದಿಲ್ಲ, ತಾನು ತಾನೆಂಬುದಿಲ್ಲ. ವಿಜ್ಞಾನಮಾನಂದ ಬ್ರಹ್ಮವೆಂಬುದಿಲ್ಲ, ಇಲ್ಲವೆಂಬುದಿಲ್ಲ. ಸಿಮ್ಮಲಿಗೆಯ ಚೆನ್ನರಾಮನೆಂಬುದು ಮುನ್ನಿಲ್ಲ.
--------------
ಚಂದಿಮರಸ