ಅಥವಾ
(8) (4) (5) (0) (3) (0) (0) (0) (4) (1) (0) (0) (0) (0) ಅಂ (2) ಅಃ (2) (16) (0) (7) (1) (0) (2) (0) (5) (0) (0) (0) (0) (0) (0) (0) (14) (0) (7) (0) (15) (8) (1) (7) (2) (9) (1) (0) (0) (2) (7) (4) (0) (13) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎಕ್ಕಸಿಕ್ಕಗೆಡದವನೆ ಅದ್ವೈತಿ, ಆನೇನೆಂಬೆನಯ್ಯಾ. ತಾನಲ್ಲದನ್ಯವಿಲ್ಲೆಂದರಿದ ನಿಜಗುಣ ಶಿವಯೋಗಿ ಏನುವನು ತಾನರಿಯಬಲ್ಲನೆ ಹೇಳಾ. ಇನ್ನು ಸ್ತುತಿ ನಿಂದೆಗೆಡೆಯುಂಟೆ? ನಿಜಗುಣನಲ್ಲಿ ತಿಳಿದ ತಿಳಿವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಎಲುವು ತೊಗಲು ನರ ಮಾಂಸ ಪುರೀಷ ಶ್ಲೇಷ್ಮ ರಕ್ತ ಶುಕ್ಲ ಕ್ರಿಮಿ ಕೊಕ್ಕರೆ ಜರೆ ಮರಣ ಜಂತು ಹಲವು ರೋಗಂಗಳ ತವರ್ಮನೆ ನೋಡುವಡೆ ಪಾಪದ ಪುಂಜ -ಇಂತೀ ಹೇಸಿಕೆಯೊಳಗೆ ಏತರ ಸುಖವನರಸುವೆ? ಈ ಸುಖದಾಸೆಯ ವಿಚಾರಿಸಿ ನೋಡಿದಡೆ ಸಕಲ ದುಃಖದಾಗರ, ನರಕದ ಪಾಕುಳ. ಅಂಗನೆಯರಿಂತೆಂದು ತಿಳಿದು ವಿರಕ್ತನಾದ ಪರಮ ಸೌಖ್ಯಾಂಗ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಎಂತು ಬಣ್ಣಿಸುವರಯ್ಯಾ ಲೋಕ ಸದುಹೃದಯರಲ್ಲದವರ! ಇಂತಪ್ಪವರನಲ್ಲದೆ ಲೋಕ ಹೊಗಳಬಲ್ಲುದೆ? ಹೇಳಾ! ತಮ್ಮತಮ್ಮ ಪರಿಗಳಲು ಇರದವರ ಮೆಚ್ಚುವರಾರೊ ಈ ಲೋಕದೊಳಗೆ? ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಎಲುವಿನ ಹಂಜರ ಕರುಳಿನ ಜಾಳಿಗೆ ಅಮೇಧ್ಯದ ಹುತ್ತ ಮೂತ್ರದ ಬಾವಿ ಶ್ಲೇಷ್ಮದ ಕೆಸರು ಕೀವಿನ ಸೋನೆ ನೆತ್ತರ ಮಡು ನಾಡಿಗಳ ಸುತ್ತುವಳ್ಳಿ ನರವಿನ ನೇಣ ಜಂತ್ರ ಮಾಂಸದ ಘಟ್ಟಿ ತೆಪ್ಪ ಕಿಸುಕುಳದ ಹೇಸಿಕೆ ಅತಿಹೇಯ ಮಲಿನ ಆಸ್ಥಿ ರೋಮ ತೊಗಲ ಪಾಕುಳ ಕ್ರಿಮಿಯ ಸಂಕುಳ ಬಲಿದಪರ ರೇತೋ ರಜಸ್ಸಿನಲ್ಲಿ ಜನಿತ ಉತ್ಪತ್ತಿ ಸ್ಥಿತಿ ಲಯದ ಬೀಜ ಆಧಿ ವ್ಯಾಧಿಯ ತವರುಮನೆ ವಿಷಯದ ಭವ ದುಃಖದಾಗರ ಮೋಹದ ಬಲೆ ತೋರಿ ಕೊಡುವ ತನು. ಇದ ನೀನೆಂದು ನಿನ್ನದೆಂದು ಮಾಡಬಾರದ ಪಾಪಂಗಳ ಮಾಡಿ, ಬಾರದ ಭವಂಗಳಲ್ಲಿ ಬಂದು, ದೇಹದಿಚ್ಚೆಗೆ ಸಂದು, ಹೂಸಿ ಮೆತ್ತಿ ಹೊದಿಸಿದ ದೇಹದಂತುವ ಕಂಡು ಮರುಗುವೆ ಮರುಳಮಾನವಾ! ಅಘೋರ ನರಕದಲ್ಲಿಕ್ಕುವಾಗ ಅಡ್ಡಬಪ್ಪವರಾರು ಹೇಳಾ? ಅಹಂಮಮತೆಯ ಮರದು, ದೇಹದಿಚ್ಛೆಯ ಬಿಟ್ಟು ಸೋಹಂ ಬ್ರಹ್ಮಾಸ್ಮಿ ಎಂದು ಕೇಡಿಲ್ಲದ ಸುಖವ ಮಾಡಿಕೊ ಮರುಳೇ. ಮೋಹ ಬೇಡ! ಕೆಡುವೆ! ನಿನ್ನಲ್ಲಿ ನೀನೇ ತಿಳಿದು ನೋಡಾ ಸಿಮ್ಮಲ್ಲಿಗೆಯ ಚೆನ್ನರಾಮಾ.
--------------
ಚಂದಿಮರಸ