ಅಥವಾ
(37) (14) (0) (3) (3) (2) (0) (0) (8) (1) (1) (4) (3) (0) ಅಂ (9) ಅಃ (9) (42) (0) (10) (1) (0) (0) (0) (10) (0) (0) (0) (0) (0) (0) (0) (13) (0) (3) (0) (16) (11) (0) (16) (8) (18) (0) (2) (0) (7) (9) (9) (0) (13) (12) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸರ್ವಾಂಗಲಿಂಗವಾದ ಶರಣನ ಕಾಯ ಆವ ದೇಶದಲ್ಲಿ ಆಳಿದಡೇನು? ಎಲ್ಲಿ ಆಳಿದಡೇನುರಿ ಉಳಿದಡೇನು? ಕಾಯ ಉಳಿಯದೆ ಬಯಲಾದಡೇನು? ಅದೇತರಲ್ಲಿ ಹೋದಡು ಲಿಂಗೈಕ್ಯಪದಕ್ಕೆ [ಕುತ್ತ] ಕೊಡಲಿಲ್ಲವೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಸಪ್ತಸಾಗರಗಳ ನಿಲ್ಲೆಂದು ನಿಲ್ಲಿಸಿ ಭೂಮಿಗೆ ಕೆಸರುಗಲ್ಲನಿಕ್ಕುವ ದೆವಸ, ಏಳು ಭೂಮಂಡಲವ ಜೋಳಿಗೆಗೊಳಿಸಿ ಗಾಳಿಯನಾಹಾರಗೊಂಬ ದೆವಸ, ಒಂಭತ್ತು ದ್ವೀಪಕ್ಕೆ ನೂಲ ಹಿಡಿದಂದು, ಅಂಬಿಗ ಚೌಡಯ್ಯನ ಕೆಳೆಗೊಂಡನುಮೇಶ್ವರ.
--------------
ಅಂಬಿಗರ ಚೌಡಯ್ಯ
ಸಕಲಭೋಗ ವಿಲಾಸಿತ ಲಿಂಗಕ್ಕೆಂದಲ್ಲಿ ತನ್ನಂಗಕ್ಕೆ ಶೃಂಗಾರವುಂಟೆ ? ಶ್ರೀರುದ್ರಾಕ್ಷಿ ವಿಭೂತಿಯ ಸ್ವಸ್ಥಾನದಲ್ಲಿ ತನ್ನಂಗಕ್ಕೆ ಶೃಂಗಾರವೆಂದು ಮಾಡಿದಡೆ, ಆ ನಿಜಪದದಂಗವೊಂದು ಇಲ್ಲ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಸೋಮವಾರ, ಹುಣ್ಣಿಮೆ, ಅಮವಾಸ್ಯೆ ಎಂದು ಉಪವಾಸವಿರ್ದು ಶಿವನಿಗೆ ಅರ್ಪಿತ ಎಂದು ನುಡಿವರು. ಕಾಮ ಕ್ರೋಧ [ಲೋಭ] ಮೋಹ ಮದ ಮತ್ಸರವನಳಿಯರು. ಶಿವನ ನೆಲೆಯನರಿಯದೆ, ಎನಗೆ ಗತಿಕೊಡುವ ಲಿಂಗವಿದೇ ಎಂದು ತಿಳಿಯದೆ, ಗ್ರಾಮದ ಹೊರತಾಯದಲ್ಲಿರುವ ದೇವರುಗಳು ಅದ್ಥಿಕವೆಂದು ಪೂಜಿಸಿ, ಅವಕಿಕ್ಕಿದ ಕೂಳ ತಾ ತಿಂಬುವನು. ಇನ್ನು ಸೋಮಧರಗರ್ಪಿತವೆಂದು ಭುಂಜಿಸುವವರ ತೆರನಂತೆ ದೊಡ್ಡ ಗ್ರಾಮದ ಸೂಕರನು ಗಂಗೆಯಲ್ಲಿ ಮಿಂದು ಬಂದು ಅಮೇಧ್ಯವ ಭುಂಜಿಸಿದ ತೆರನಾಯಿತೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಸಮಯವ ಮಾಡಿ ಹಣವ ತೆಗೆಯಲೇತಕ್ಕೆ ? ಆಚಾರಕ್ಕೂ ಹಣದಾಸೆಗೂ ಸರಿಯೆ ? ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಸತ್ತರೆ ಸಂಗಾತ ಹೂಳಿಸಿಕೊಂಬ ಇಷ್ಟಲಿಂಗವ ಸಟೆಮಾಡಿ, ಮತ್ತೆ ಅನ್ಯದೈವಕ್ಕೆರಗುವ ಕತ್ತೆ ಹೊಲೆಯರು ನೀವು ಕೇಳಿರೊ, ತನ್ನ ಪುರುಷನಿರಲು ಅನ್ಯಪುರುಷನ ಕೂಡಿಹ ಸ್ತ್ರೀಗೆ ನರಕವಲ್ಲವೆ ? ಮೋಕ್ಷಾ[ರ್ಥ] ಎಂದು ಗುರುವು ಕೊಟ್ಟ ಇಷ್ಟಲಿಂಗವು ಅಂಗಕ್ಕೆ ಸಂಬಂಧಿಸಿದ ಬಳಿಕ ಹಲವು ದೇವರೆಂದು ಭಾವಿಸಿ ಪೂಜೆಯ ಮಾಡುವ ಭ್ರಷ್ಟರು ನೀವು ಕೇಳಿರೊ. ನೀವು ಮಾಡಿದ ಪೂಜೆಯು ಹಾದರಿಯ ಸ್ತ್ರೀಯಳಂತೆ ಕಾಣಿರೊ. ಕಡೆಗೆ ಅದೇ ಲಿಂಗವೆ ಮುಂದೆ ಮಾರಿಯಾಗಿ ಮೋಕ್ಷಕ್ಕೆ ದೂರಮಾಡುವದೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಸೃಷ್ಟಿಯ ಕಲ್ಪಿಸುವ ಕರ್ತ ಬ್ರಹ್ಮಂಗೆ ಶತಾಯುಗನೆಂಬ ಗಣಿತವಿದೇನು? ಸಕಲಜೀವಿಗಳ ರಕ್ಷಿಸುವ ವಿಷ್ಣುವಿಂಗೆ ದಶಾವತಾರವೆಂಬ ಗಣಿತವಿದೇನು? ಕೋಪಾಗ್ನಿರುದ್ರನೆಂಬ ಜಮದಗ್ನಿಯ ತಲೆಯನರಿದವರಾರುರಿ ಮೂವತ್ತುಮೂರು ಕೋಟಿ ದೇವರ್ಕಳನಾಳಿದ ರಾವಣಂಗೆ ಅಳಿವೆಂಬುದೇನುರಿ ಹರಸಿ ಲಕ್ಷವಿಪ್ರರು ನಿಚ್ಚ ಮಂತ್ರಾಕ್ಷತೆಯನಿಡುತ್ತಿರಲು ದುರ್ಯೋಧನಂಗೆ ಸಾವೆಂಬುದೇನು ? ಹರನೆ ನೀ ಹರಸಿ ಪಟ್ಟವ ಕಟ್ಟಿಕೊಟ್ಟಂತಲ್ಲದೆ ಇಲ್ಲ. ಎಲ್ಲರಿಗೆಯೂ ಮೂರು ಲೋಕದೊಳಗೆ ನೀನೊಬ್ಬನೆ ಒಡೆಯನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಸಸಿಗೆ ನೀರೆರೆದಡೆ ಹಸುರಾದಂತೆ, ಬೇರಿನ ಬಾಯಿ ತುಂಬಿ, ಸಸಿಯ ಒಡಲು ತುಂಬಿ, ಆ ಎಸಕದ ತೆರದಂತೆ ಇಷ್ಟಪ್ರಾಣಯೋಗವೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಸ್ವಲ್ಪ ಅಮೃತಾನ್ನವನೊಯ್ದು ಹುತ್ತವೆಂದು ಬಿಲದ್ವಾರದಲ್ಲಿ ಹೊಯ್ವ ತೊತ್ತಿಂಗೆಲ್ಲಿಯದೊ ಶಿವಾಚಾರ! ಅದೆಂತೆಂದಡೆ- ಕಲ್ಲನಾಗರ ಕಂಡಡೆ ಹಾಲು ಹೊಯ್ಯೆಂಬಳು, ಬದುಕಿದ ನಾಗರ ಕಂಡಡೆ ಕೊಲ್ಲು ಕೊಲ್ಲೆಂಬಳು. ಉಂಬ ದೇವರು ಬಂದಡೆ ಇಲ್ಲವೆಂದಟ್ಟುವಳು, ಉಣ್ಣದ ಕಲ್ಲುಪ್ರತಿಮೆಯ ಮುಂದಿಟ್ಟು ಉಣ್ಣೆಂಬಳು. ಇಂತಹ ವೇಷದ [ಡ]ಂಬ ತೊತ್ತಿಂಗೆ ವಿಚಾರಿಸದೆ ಲಿಂಗವ ಕೊಡಲಾಗದೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಸ್ಥಲಂಗಳ ನೋಡಿ ಕಂಡೆಹೆನೆಂದಡೆ, ಅಡಗಿದ ಮಡಕೆಯಲ್ಲ ಆಚಾರದಲ್ಲಿ ನೋಡಿ ಕಂಡೆಹೆನೆಂದಡೆ, ಸಂಕಲ್ಪದೇಹಿಯಲ್ಲ. ಸಕಲ ಆಗಮಂಗಳಲ್ಲಿ ನೋಡಿ ಕಂಡೆಹೆನೆಂದಡೆ, ಮಾತಿನ ಮಾಲೆಯವನಲ್ಲ. ತನುವ ದಂಡಿಸಿ ಕಂಡೆಹೆನೆಂದಡೆ ಬಂಧನದವನಲ್ಲ. ಏತರಲ್ಲಿಯೂ ತೊಡಕಿಲ್ಲದೆ ಸರ್ವವ ನೇತಿಗಳೆಯದೆ ಅಜಾತನಾಗಿ ನಿಂದವಂಗೆ ಆತನೇತರಲ್ಲಿಯೂ ಸುಖಿಯೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಸತ್ತಡೆ ಸಂಗಡ ಹೊಳಿಸಿಕೊಂಬ ಲಿಂಗವು ತನ್ನ ಕೊರಳಲ್ಲಿ ಹತ್ತೆಯಾಗಿ ಕಟ್ಟಿರಲು, ನಾನು ಸತ್ಯಶುದ್ಧಶಿವಭಕ್ತನೆಂದರಿಯದೆ ಮತ್ತೆ ಅನ್ಯದೈವಕ್ಕೆರಗುವ ಕತ್ತೆಮೂಳರು ನೀವು ಕೇಳಿರೊ! ಗಂಡನ ಕೂಡೆ ಸಮಾಧಿಯ ಕೊಂಬ ಹೆಂಡತಿ ಅಪೂರ್ವ! ಹೆಂಡಿರ ಕೂಡೆ ಸಮಾಧಿಯ ಕೊಂಬ ಗಂಡರುಂಟೆ ಲೋಕದೊಳು ? ಛೀ ಛೀ ಹಂದಿಮೂಳರಿರ! ಈ ದೃಷ್ಟವ ಕಂಡಾದರೂ ನಾಚಲಿಲ್ಲವೆ ? ಭವಬಂಧನಂಗಳನಳಿಯಬೇಕೆಂದು ಬಹುದೈವಕ್ಕೆರಗಿದಡೆ, ಅವು ನಿಮ್ಮ ಸಂಗಡ ಒಂದಾದಡೂ ಹೂಳಿಸಿಕೊಂಬವೆ ? ನೀವು ಗಳಿಸಿದ ಅರ್ಥವನುಂಡುಂಡು, ನಿಮ್ಮ ಭವದೊಳಗೆ ನೂಂಕಿದ ಪಿಶಾಚಿಗಳ ನೋಡಿಕೊಂಡು ಪ್ರಮಾಣಿಸಿ, ಮರಳಿ ಲಿಂಗಭಕ್ತಿಯನರಿಯದೆ, ಬರಿದೆ ಶಿವಭಕ್ತರೆಂದು ಬೊಗಳುವ ಕುನ್ನಿಗಳು ಪರಿಭವಕ್ಕೆ ಒಳಗಾಗುವರೆಂದಾತನಂಬಿಗರ ಚೌಡಯ್ಯನು.
--------------
ಅಂಬಿಗರ ಚೌಡಯ್ಯ
ಸಹಜವಯ್ಯ ಶಿವಗಣಂಗಳ ನುಡಿ ಸತ್ಯವು. ಪಾಷಂಡಿ ಪ್ರಪಂಚಿಗಳ, ದಾಸಿ, ವೇಶಿಯರ, ಕಾಸಿಗಾಸೆಮಾಡುವ ಮೂಷಕರ, ಪಶುಭಕ್ಷಕರನೆಂತು ಮಹಂತಿನ ದೇವರೆನಬಹುದಯ್ಯ ? ವೇಶಿಯಂತೆ ವೇಷವ ಹಲ್ಲಣಿಸಿಕೊಂಡು, ಸರ್ವರಿಗೆ ಸುಮತ ಸುವಚನವ ನುಡಿದು, ಶಿವಭಕ್ತರ[ನ]ಣ್ಣಿಸಿ ಬಣ್ಣಿಸಿ, ಕಾಸುವೀಸಗಳನಿಸಿದುಕೊಂಡು ಪಾಶಬದ್ಧರಾಗಿ ಹೇಸಿಕೆಯ ಕಿಸುಕುಳದ ಮೂತ್ರದ ಕುಳಿಯಲ್ಲಿ ಹೊರಳುವ ಧೂರ್ತ ಲಾಂಛನಿಗಳು ಯಮಪುರದಲ್ಲಿ ಲೋಲರಾಗಿಪ್ಪರೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಸಂದೇಹ ಮಾಡುವಲ್ಲಿ ಮಾತೇ ಸೂತಕವಾಗಿ ಅದೇತರಿಂದೊದಗಿದ ಶಿಲೆಯ ಪ್ರತಿಷೆ*ಯ ಮಾಡಿ, ತನ್ನ ಒಲವರ ವಿಶ್ವಾಸದಿಂದ ಕುಱುಹ ಅಱôವುದು ಶಿಲೆಯೊರಿ ಮನವೊರಿ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ