ಅಥವಾ
(37) (14) (0) (3) (3) (2) (0) (0) (8) (1) (1) (4) (3) (0) ಅಂ (9) ಅಃ (9) (42) (0) (10) (1) (0) (0) (0) (10) (0) (0) (0) (0) (0) (0) (0) (13) (0) (3) (0) (16) (11) (0) (16) (8) (18) (0) (2) (0) (7) (9) (9) (0) (13) (12) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಂಗಮವೆಂದಡೆ ನಡೆನುಡಿ ಸಿದ್ಧಿಯಾಗಿರಬೇಕು. ಮೂರು ಮಲಕ್ಕೆ ಸಿಕ್ಕದೆ, ಆರರಡಿಗೆ ಅ[ಡಿ]ಮೆಯಾಗದೆ, ಆ ಗುಣ ತೋರುವುದಕ್ಕೆ ಮೊದಲೆ ಮೀರಿ ಇರಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಜಂಗಮವ ಕರತಂದು ಮನೆಯಲ್ಲಿ ಕುಳ್ಳಿರಿಸಿ, ಅಂಗದ ಮೇಲಣ ಜಪವನೆಣಿಸುವ ಭಕ್ತನ ಜಪದ ಬಾಯಲ್ಲಿ ಕೆರಹನಿಕ್ಕಲಿ! ಅವನ ಲಿಂಗಾರ್ಚನೆಯ ಬಾಯಲ್ಲಿ ಹುಡಿಯ ಹೊಯ್ಯಲಿ! ಜಂಗಮದ ತೃಪ್ತಿಯನರಿಯದೆ ಲಿಂಗವಂತನೆಂತಾದನೊ ? ಮರುಳೆ! ಅವ ಪಿಸುಣ, ಹೊಲೆಯನೆಂದಾತನಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಜ್ಯೋತಿ ನಾಲ್ಕರೊಳಗೆ ಆತ್ಮನೈದಾನೆ. ಆತ್ಮನೊಳಗೆ ಸಾಕಾರನೈದಾನೆ. ಸಾಕಾರನೊಳಗೆ ಸೂಕ್ಷ್ಮನೈದಾನೆ. ಈಸುವನರಿದಾತಂಗೆ ಆ ಕಾಯ ಕೆಡದೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಜಾತಿಭ್ರಮೆ, ನೀತಿಭ್ರಮೆ ಎಂಬ ಕರ್ಮಂಗಳನು ಘಾತಿಸಿ ಕಳೆಯಬಲ್ಲಡಾತ ಯೋಗಿ. ಕ್ಷೇತ್ರಮೆ, ತೀರ್ಥಭ್ರಮೆ, ಪಾಷಾಣಭ್ರಮೆ ಎಂಬ ಕರ್ಮಂಗಳನು ನೀಕರಿಸಿ ಕಳೆಯಬಲ್ಲಡಾತ ಯೋಗಿ. ಲೋಕಕ್ಕಂಜಿ ಲೌಕಿಕವ ಮರೆಗೊಂಡು ನಡೆವಾತ ತೂತಯೋಗಿ ಎಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಜಂಗಮದ ಪಾದತೀರ್ಥ ಎನ್ನಂಗದೋಷವ ಕಳೆಯಿತ್ತಯ್ಯ, ಜಂಗಮದ ಪಾದತೀರ್ಥ ಎನ್ನ ಲಿಂಗಕೆ ಪ್ರಾಣಪ್ರತಿಷೆ*ಯಾಯಿತ್ತಯ್ಯ, ಜಂಗಮದ ಪಾದತೀರ್ಥ ಸಂಗನ ಶರಣರಿಗೆ ಮುಕ್ತಿಯ ಪಥವ ತೋರಿತ್ತಯ್ಯ. ಇಂತಪ್ಪ ಜಂಗಮದ ಪಾದತೀರ್ಥಕ್ಕೆ ಎಂತಪ್ಪ ಹಿರಿಯರಾದರು ತಮ್ಮ ಗರುವಿಕೆಯ ಬಿಟ್ಟು, ದೀರ್ಘದಂಡಪ್ರಣಾಮಂಗೆಯ್ದು ನಮಸ್ಕರಿಸಿ, ಸಾಕ್ಷಿ- ಉತ್ತಮಂ ದೀರ್ಘದಂಡಂ ಚ ಮಧ್ಯಮಂ ಶಿರೋ ವಂದನಂ ಕನಿಷ್ಟಂ ಕರ [ಮೇಲನಂ] ವಾಗ್ವಂದನಂ ಮಹಾ [ಧಮಂ] ಎಂಬುದಾಗಿ ಜಂಘೆಯಿಕ್ಕಿ ನಡದುಬಂದು ಕೊಂಡಡೆ ಕಂಗಳ ಮೂರುಳ್ಳ ದೇವನೆಂಬೆ, ಹಿರಿಯ ಮಹೇಶ್ವರನೆಂಬೆ. ಹಾಂಗಲ್ಲದೆ ಕಂಗಳು ಹೋದ ಅಂಧಕನಂತೆ, ಕಾಲಿಲ್ಲದ ಪಂಗುಳನಂತೆ, ತಾನಿದ್ದಲ್ಲಿಯೇ ಇದ್ದು ಅಯ್ಯಾ ಶರಣಾರ್ಥಿಯೆಂದು ಇದ್ದೆಡೆಗೆ ತರಿಸಿಕೊಂಡು, ಅಂಗಯ್ಯಾಂತುಕೊಂಬ ಚೆಂಗಿಮೂಳ ಹೊಲೆಯರ ಕಂಡಡೆ ನೆತ್ತಿಯ ಮೇಲೆ ಚೊಂಗ ಚೊಂಗನೆ ಹೊಡಿ, ಒದ್ದೊದ್ದು ತುಳಿಯೆಂದು [ಹೇಳಿ] ದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಜನನ ಸೂತಕ ಮರಣ ಸೂತಕಂಗಳ ಕಳೆದು ಶುದ್ಧವಾದೆನೆಂಬ ಅಜ್ಞಾನಿ ಜಡಜೀವಿಗಳು ನೀವು ಕೇಳಿರೋ! ಪೃಥ್ವಿ ಶುದ್ಧವೆಂಬಿರಿ, ಇಪ್ಪತ್ತೊಂದು ಲಕ್ಷ ಜೀವರಾಶಿಗಳು ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ಅಪ್ಪು ಶುದ್ಧವಲ್ಲ. ಅಗ್ನಿ ಶುದ್ಧವೆಂಬಿರಿ, ಇಪ್ಪತ್ತೊಂದು ಲಕ್ಷ ಜೀವರಾಶಿಗಳು ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ಅಗ್ನಿ ಶುದ್ಧವಲ್ಲ. ಅಪ್ಪು ಶುದ್ಧವೆಂಬಿರಿ, ಇಪ್ಪತ್ತೊಂದು ಲಕ್ಷ ಜೀವರಾಶಿಗಳು ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ಪೃಥ್ವಿ ಶುದ್ಧವಲ್ಲ. ಅಪ್ಪು ಶುದ್ಧವೆಂಬರಿ, ಇಪ್ಪತ್ತೊಂದು ಲಕ್ಷ ಜೀವರಾಶಿಗಳು ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ವಾಯು ಶುದ್ಧವಲ್ಲ. ಆಕಾಶ ಶುದ್ಧವೆಂಬಿರಿ, ಈ ಚತುರ್ವಿಧ ತತ್ವಂಗಳ ಒಳಗಿಟ್ಟುಕೊಂಡು ಈ ಪ್ರಕಾರವಾದ ಕಾರಣ ಆಕಾಶ ಶುದ್ಧವಲ್ಲ. ಇವು ಶುದ್ಧವಹ ಪರಿ ಎಂತೆಂದೊಡೆ: ಈ ಪಂಚತತ್ವಂಗಳು ಹುಟ್ಟಿದವು ನಮ್ಮ ಸದಾಶಿವನ ಸಿರಿಯಪ್ಪದೊಂದು ಇಷ್ಟಲಿಂಗದಲ್ಲಿ. ಆ ಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡಿ ಸರ್ವ ರುಚಿಪದಾರ್ಥವನು ತಂದು ಆ ಲಿಂಗಕ್ಕೆ ಕೊಟ್ಟಲ್ಲಿ, ಲಿಂಗಪ್ರಸಾದವದು ಅಂಗಕ್ಕೆ ಲೇಸಾಗಲೆಂದು, ಕೊಂಬಾತನ ಸರ್ವಾಂಗವೆಲ್ಲ ಶುದ್ಧವಯ್ಯಾ. ಆತನಿಪ್ಪ ಗೃಹವೇ ಪುಣ್ಯಕ್ಷೇತ್ರವು, ಅಂತಹವರ ಪಾದಕ್ಕೆ ಶರಣಾರ್ಥಿ. ಈ ವಿವರವನರಿಯದೆ ತನ್ನ ಕರದ ಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡದೆ, ಭೋಜನ ಪದಾರ್ಥ ನೀರು ರೊಟ್ಟಿ ಮುಟ್ಟಿಗೆ ಗುಗ್ಗರಿ ಸೀತೆನಿ ಬೆಳಸಿ ಕಾಯಿ ಕಸಿಕು ಹಣ್ಣು ಹಂಪಲ ಹಾಲು ಮೊಸರು ಮಜ್ಜಿಗೆ ತುಪ್ಪ ಸಕ್ಕರೆ ಹೋಳು ವೀಳೆಯ -ಇವನೆಲ್ಲವನು ತನ್ನ ಲಿಂಗಕ್ಕೆ ಕೊಡದೆ, ಅಂಗಕ್ಕೆ ಲೇಸಾಗಲೆಂದು ತಿಂಬುವನು ಅವನೀಗ ತಾನೇ ಶುದ್ಧ ಹೊಲೆಯನೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಜಾತಿವಿಚಾರ, ನೀತಿವಿಚಾರ, ಸಮಯವಿಚಾರವೆಂಬ ತ್ರಿವಿಧವ ಹಿಡಿದು, ಬಿಡದೆ ಉತ್ತಮ ಮಧ್ಯಮ ಕನಿಷ*ವೆಂಬವ ಕಾಲಿಗೆ ಮಾವವ ಕಟ್ಟಿ ಸಿಕ್ಕಿಸಿ, ಸರ್ವಸೂತಕದೊಳಗಿರ್ದಜಾತನಾದೆ ಕ....ಗವನೆಂದಡಾತ ಸಾಧ್ಯವಾದಾತನೆ ? ಸಿಕ್ಕನೆಂದ ಅಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಜ್ಞಾನಿಯಾದಲ್ಲಿ ಧ್ಯಾನ ಮೋನಂಗಳಲ್ಲಿರಲೇತಕ್ಕೆ? ಅರಿವು ಕರಿಗೊಂಡಲ್ಲಿ ಸುರುಳಿ ಸುರುಳಿ ಬಿಡಲೇತಕ್ಕೆ? ``ತಲೆಯೊಡೆಯಂಗೆ ಕಣ್ಣು ಹೊರತೆ ಎಂಬ ತುಡುಗುಣಿತನವೆ? ಆ ಗುಣ ಬಿಡುಮುಡಿಯಲ್ಲ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಜ್ಞಾನಾಜ್ಞಾನವೆಂಬ ಉಭಯವ ನಾನರಿಯದೆ, ಕಾಯ ಜೀವವೆಂಬ ಹೆಚ್ಚು ಕುಂದರಿಯದೆ, ನಾನು ನೀನು ಎಂದೆಂಬ ಭ್ರಮೆ ಇನ್ನಾರಿಗೆ ? ಹೇಳೆಂದಾತ ನಮ್ಮಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಜೇಡಂಗೆ ಬೇಡಂಗೆ ಡೋಹಾರಂಗೆ ಹೊಲೆಯಂಗೆ ರೂಢಿಗೀಶ್ವರನೊಲಿದ ಪರಿಯ ನೋಡಾ ಅಯ್ಯಾ! ಲೋಕದ ಮನುಜರು ಮಾಡುವ ಸಮಯಂಗಳ ಮಾಡಲೇಕೆ? ಅವರು ಸ್ವತಂತ್ರರು, ಇವರು ಹೋದಠಾವಿನಲ್ಲಿ ಕಲ್ಲು ಮುಳ್ಳು ಮೂಡವು. ಇವರ ಕೂಡ ಕೂರದಾತನಂಬಿಗ Zõ್ಞಡಯ್ಯ.
--------------
ಅಂಬಿಗರ ಚೌಡಯ್ಯ