ಅಥವಾ
(37) (14) (0) (3) (3) (2) (0) (0) (8) (1) (1) (4) (3) (0) ಅಂ (9) ಅಃ (9) (42) (0) (10) (1) (0) (0) (0) (10) (0) (0) (0) (0) (0) (0) (0) (13) (0) (3) (0) (16) (11) (0) (16) (8) (18) (0) (2) (0) (7) (9) (9) (0) (13) (12) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಕ್ಕಳು ಮರಿಗಳು ಸತ್ತು ನಷ್ಟವಾಗಿ, ಕಷ್ಟ ದುಃಖ ನೆಲೆಗೊಂಡಿತ್ತೆಂದು ತನ್ನಿಷ್ಟಲಿಂಗಪೂಜೆಯನಗಲಿಸಿ, ಬಿಟ್ಟಿಯ ಮಾಡಬಹುದೇನಯ್ಯಾ? ಜಂಗಮವು ಬಂದು ತನ್ನ ವ್ರತ ನೇಮಕ್ಕೆ ಬೇಡಿದಡೆ ನಿಮ್ಮ ಉಪದ್ರವೇನೆಂದು ಭಕ್ತಿಯ ಮಾಡಬಹುದೇನಯ್ಯಾ? ಸಕಲದುಃಖಂಗಳು ತಮ್ಮಿಂದ ತಾವೇ ಬರಲರಿಯವು. ಭಕ್ತಿಯನ್ನು ಮರೆದು, ಮರವೆಯಲ್ಲಿ ಬೆರೆದು, ಭವಭವದಲ್ಲಿ ಬರುವುದು ಅದೇ ದುಃಖವು, ನಿಶ್ಚಯವೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಮೊಟ್ಟೆ ಮೊಟ್ಟೆ ಪತ್ರೆಯ ತಂದು ಒಟ್ಟಿ, ಪೂಜಿಸಿದ[ಡೇ]ನು ಮನಶುದ್ಧವಿಲ್ಲದನ್ನಕ್ಕರ ? ಮನಮಗ್ನವಾಗಿ ಶಿವಧ್ಯಾನದಲ್ಲಿ ಕೂಡಿ, ಒಂದೇ ದಳವ ಧರಿಸಿದರೆ ಶಿವನು ಒಲಿಯನೆ? ಇಂತು ಪೂಜೆಯ ಮಾಡುವುದಕ್ಕಿಂತಲು ಅದೇ ತೊಪ್ಪಲನು ಕುದಿಸಿ ಪಾಕವ ಮಾಡಿದಲ್ಲಿ ಆ ಲಿಂಗವು ತೃಪ್ತಿಯಾಯಿತ್ತು. ಬರಿದೆ ಲಿಂಗವ ಪೂಜಿಸಿ ಜಂಗಮಕ್ಕೆ ಅನ್ನವ ಕೊಡದೆ, ಲಿಂಗದ ಮುಖವು ಜಂಗಮವು ಎಂದು ತಿಳಿಯದೆ, ತನು-ಮನ-ಧನವನು ಗುರು-ಲಿಂಗ-ಜಂಗಮಕ್ಕೆ ಸವೆಸದೆ, ಬಾಗಿಲಿಗೆ ಕಾವಲಿಕ್ಕಿ, ಹೆಂಡಿರು ಮಕ್ಕಳು ಕೂಡಿಕೊಂಡು, ತನ್ನ ತಾನೇ ತಿಂಬುವಂಥ ನೀಚ ಹೊಲೆಯರ ಮೂಗ ಸವರಿ ಮೆಣಸಿನ ಹಿಟ್ಟು ತುಪ್ಪವ ತುಂಬಿ, ಪಡಿಹಾರಿ ಉತ್ತಣ್ಣಗಳ ಪಾದುಕೆಯಿಂದ ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಮದ್ದ ತಿನ್ನಬೇಕಾದರೆ ವೈದ್ಯನಿದ್ದೆಡೆಗೆ ಹೋಗಿ, ಹಣ ಹೊನ್ನು ಕೊಟ್ಟು, ದೈನ್ಯಂಬಟ್ಟು, ಮದ್ದ ತಿಂಬರು ನೋಡಯ್ಯ. ಇದು ಶುದ್ಧಸಿದ್ಧಪ್ರಸಿದ್ಧಪ್ರಸಾದಕ್ಕೆ ಎಂದು ಬಿನ್ನಹವ ಮಾಡದೆ, ಅಹಂಕಾರದಲ್ಲಿ ತರಿಸಿಕೊಂಡುಂಬ ಗೊಡ್ಡಮೂಳನ ಕಂಡಡೆ ಒದ್ದೊದ್ದು ಕೊಲ್ಲೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಮಾತೆ ಸೂತಕವಾಗಿ ಸಂದೇಹವ ಮಾಡುವಲ್ಲಿ ಅದೇತರಿಂದ ಒದಗಿದ ಕುರುಹು ? ಶಿಲೆಯ ಪ್ರತಿಷೆ*ಯ ಮಾಡಿ ತನ್ನ ಒಲವರ ವಿಶ್ವಾಸದಿಂದ ಬಲಿಕೆಯನರಿವುದು ಶಿಲೆಯೊರಿ ಮನವೊರಿ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಮಳಲ ಮರೆಯ ನೀರ ಒಲವರವಿಲ್ಲದೆ ತೋಡಿ, ಚಿಲುಮೆಯ ಶೀಲವಂತರೆಂದು ಹಲುಬುತ್ತಿರಲೇತಕ್ಕೆ ? ಸಲೆ ವಸ್ತುವನರಿತು ತ್ರಿವಿಧದ ಹೊಲಬಿನಾಸೆಯ ಬಿಟ್ಟು ಸಲೆ ಗೆದ್ದಡೆ, ಬೇರೊಂದು ಹೊಲಬ ತೋರಿಹೆನೆಂದನಂಬಿಗ ಚವಡಯ್ಯ.
--------------
ಅಂಬಿಗರ ಚೌಡಯ್ಯ
ಮಸ್ತಕದಲ್ಲಿ ರುದ್ರಾಕ್ಷಿಯಂ ಧರಿಸಿ ಅನ್ಯದೈವದ ಗುಡಿಯ ಹೊಗಲಾಗದು ಶರಣ. ಕರಣಂಗಗಳಲ್ಲಿ ರುದ್ರಾಕ್ಷಿಯಂ ಧರಿಸಿ ಹರನಿಂದೆ ಗುರುನಿಂದೆಯ ಕೇಳಲಾಗದು ಶರಣ. ತೋಳುಗಳಲ್ಲಿ ರುದ್ರಾಕ್ಷಿಯಂ ಧರಿಸಿ ಪರಸತಿಯನಪ್ಪಲಾಗದು ಶರಣ. ಮುಂಗೈಯಲ್ಲಿ ರುದ್ರಾಕ್ಷಿಯಂ ಧರಿಸಿ ಅನ್ಯರಿಗೆ ಕೈಮುಗಿಯಲಾಗದು ಶರಣ. ಇದನರಿದು ಧರಿಸಿದಡೆ ಶ್ರೀರುದ್ರಾಕ್ಷಿಯಹುದು. ಅಂತಲ್ಲದಿರ್ದಡೆ, [ಡ]ಂಬ ಹಗರಣವ ಹೊತ್ತು ಬಂದಂತೆ ಎಂದಾತನಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಮೂರು ಸ್ಥಲದ ಮೂಲವನರಿಯರು, ಪುಣ್ಯಪಾಪವೆಂಬ ವಿವರವನರಿಯರು. ಇಹಪರವನರಿಯದೆ ಚರ್ಮದ ಬೊಂಬೆಯ ಮೆಚ್ಚಿ ಉಚ್ಚೆಯ ಬಚ್ಚಲಲ್ಲಿ ಬಿದ್ದಿರ್ಪ ಕರ್ಮದ ಸುನಿಗಳನೆಂತು ದೇವರೆಂಬೆನಯ್ಯಾ ? ಹೊನ್ನು ವಸ್ತ್ರವ ಕೊಡುವವ[ನ] ಬಾಗಿಲ ಕಾಯ್ವ ಪಶುಪ್ರಾಣಿಗಳಿಗೆ ದೇವರೆನ್ನಬಹುದೇನಯ್ಯಾ ? ಜಗದ ಕರ್ತನಂತೆ ವೇಷವ ಧರಿಸಿಕೊಂಡು ಸರ್ವವನು ಬೇಡಲಿಕೆ ಕೊಟ್ಟರೆ ಒಳ್ಳಿದನು, ಕೊಡದೆ ಇದ್ದರೆ ಪಾಪಿ, ಚಾಂಡಾಲ, ಅನಾಚಾರಿ ಎಂದು ದೂಷಿಸಿ ಒಳಹೊರಗೆಂದು ಬೊಗಳುವ ಮೂಳಮಾನವರಿಗೆ ಮಹಾಂತಿನ ಆಚರಣೆ ಎಲ್ಲಿಯದೊ ? ಇಲ್ಲವೆಂದಾತ ನಮ್ಮಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಮಹಾಘನಲಿಂಗದ ನಿಜಘನವೆಂಬ ಚಿದ್ಘನಾತ್ಮಕ ಶರಣನ ಲೀಲೆಯಿಂದ ಮಹಾಜ್ಯೋತಿ ಹುಟ್ಟಿತ್ತು, ಆ ಜ್ಯೋತಿಯ ಬೆಳಗಿನಲ್ಲಿ ಅರಿವು ಮರವೆಂಬ ಭೂತಾತ್ಮ ಮಹಾತ್ಮಂಗಳು ಹುಟ್ಟಿದವು. ಆತ್ಮಂಗಳಿಂದ ಜ್ಞಾನಾತ್ಮಕ, ಶುದ್ಧಾತ್ಮಕ, ನಿರ್ಮಲಾತ್ಮಕ, ಪರಮಾತ್ಮ, ಅಂತರಾತ್ಮ, ಜೀವಾತ್ಮಂಗಳು ಹುಟ್ಟಿದವು. ಆ ಜ್ಞಾನಾತ್ಮಕನಲ್ಲಿ ಮಹಾನುಭಾವಜ್ಞಾನಂಗಳು ಹುಟ್ಟಿ ತ್ರಿಯಕ್ಷರಾದವು. ಆ ತ್ರಿಯಕ್ಷರಂಗಳಲ್ಲಿ ಓಂಕಾರ ಹುಟ್ಟಿತ್ತು. ಆ ಓಂಕಾರದಲ್ಲಿ ಪಂಚಾಕ್ಷರಂಗಳು ಹುಟ್ಟಿದವು. ಆ ಪಂಚಾಕ್ಷರಂಗಳಲ್ಲಿ ಅಯಿವತ್ತೆರಡು ಅಕ್ಷರಂಗಳು ಹುಟ್ಟಿದವು. ಇಂತೀ ಅಕ್ಷರಂಗಳೆಲ್ಲವನು ಷಡಾತ್ಮಕರ ಪ್ರಾಣವೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಮರುಳ ಕಂಡ ಕನಸಿನಂತೆ, ಆಕಾಶದಲ್ಲಿ ತೋರುವ ಲಿಪಿಯಂತೆ, ಕಂಡುದಕ್ಕೆ ರೂಪಾಗಿ, ಹಿಡಿವುದಕ್ಕೆ ಒಡಲಿಲ್ಲದೆ ನಿಂದ ಭಾವ ನಿರಂತರ ಸುಖಿಯೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಮನ ಮಗ್ನವಾಗಿ, ಅರಿವನು ಘನಪ್ರಾಣಲಿಂಗದಲ್ಲಿ ಸವೆದು, ತನುವನು ಕ್ರಿಯಾಚಾರವಿಡಿದು, ಇಷ್ಟಲಿಂಗದಲ್ಲಿ ಸವೆದು, ಮಹಾನುಭಾವವನರಿತಂತಹ ವೀರಶೈವಸಂಪನ್ನರಾದ ಶಿವಶರಣರಿಗೆ ಸಂಸಾರಿಗಳೆನ್ನಬಹುದೆ ಅಯ್ಯ? ಹೊನ್ನು-ಹೆಣ್ಣು-ಮಣ್ಣೆಂಬ ತ್ರಿವಿಧಪದಾರ್ಥಂಗಳ ವಿವರಿಸಿ, ಇಷ್ಟ-ಪ್ರಾಣ-ಭಾವವೆಂಬ ಮೂರು ಲಿಂಗದ ಮುಖವನರಿದರ್ಪಿಸಿ, ಆರು ಲಿಂಗದನುವಿನಲ್ಲಿ ಕೈಕೊಂಡು, ಬಂದ ಬಂದ ಸಕಲಪದಾರ್ಥವನು ಅದರ ಪೂರ್ವಾಶ್ರಯವಳಿದು, ಶಿವಪ್ರಸಾದವೆಂದು ಅನುಭವಿಸುತಿರ್ಪರು. ಅಂತಪ್ಪ ನಿರುಪಮ, ನಿರ್ಭೇದ್ಯ, ನಿರಾಳ, ನಿಃಶೂನ್ಯ ಪರಮಪ್ರಸಾದಿಗಳಿಗೆ ಸಂಸಾರಿಗಳೆಂದು ನುಡಿವ ಅಜ್ಞಾನಿಸಂದೇಹಿಗಳು ಅಘೋರನರಕದಲ್ಲಿ ಮುಳುಗುವರೆಂದಾತನಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಮೃಡನನೊಲಿಸಿ[ಹೆ]ನೆಂದು ನುಡಿವ ನಾಲಗೆಯೆಡಹಿತೆಯಲ್ಲಿ ಕಲ್ಲು ಕೊರಡೆ? ಒಡಲಿಂಗೆ ಹೆಣ್ಣು ಹೊನ್ನು ಮಣ್ಣು ಅಡ್ಡಬಿದ್ದು ಕೊಲುವಾಗ, ನಡೆವ ಗಂಡರುಂಟೇ ಶಿವಪಥಕ್ಕೆ? ತನ್ನೊಡಲೊಳಗಣನ್ನವು ಮರಳಿದೆಡೆಗೆ ಹೇಸುವಂತೆ ಹೇಸಿ ಬಿಟ್ಟಡೆ, ನಡೆದು ಶಿವನ ಕೂಡು[ವ]ನೆಂದಾತನಂಬಿಗ Zõ್ಞಡಯ್ಯ.
--------------
ಅಂಬಿಗರ ಚೌಡಯ್ಯ
ಮಾಯೆಯ ಬಸುರಲ್ಲಿ ಬಂದಾತ ಮಹೇಶ, ದೇವಕಿಯ ಬಸುರಲ್ಲಿ ಬಂದಾತ ವಿಷ್ಣು, ಹೂವಿನ ಬಸುರಲ್ಲಿ ಬಂದಾತ ಬ್ರಹ್ಮ, ಮರುತದೇವಿಯ ಬಸುರಲ್ಲಿ ಬಂದಾತ ನಅರುಹಫ. ಇವರು ದೇವರೆಂದು ನಂಬಿ ಪೂಜಿಸಿದಡೆ ಭವ ಅಳಿಯದು, ಮುಕ್ತಿಯಾಗದೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಮರ ಬೇರು ಸಾರದಿಂದ ನಾನಾ ಶಾಖೆಗಳು ಪ[ಲ್ಲವಿ]ಸುವ ತೆರನಂತೆ, ಜೀವಭಾವಮೂಲದಿಂದ ಸಕಲೇಂದ್ರಿಯ ಹೆಚ್ಚುಗೆ ಅಹಂತೆ, ಮರಕ್ಕೆ ಬೇರು ನಷ್ಟದಿಂದ ಶಾಖೆ ನಷ್ಟ, ಜೀವಕ್ಕೆ ಪ್ರಕೃತಿ ನಷ್ಟದಿಂದ ಇಂದ್ರಿಯ ನಷ್ಟ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಮಾತಿನ ವೇದ, ನೀತಿಯ ಶಾಸ್ತ್ರ, ಘಾತಕದ ಕಥೆ ಕಲಿವುದಕ್ಕೆ ಎಷ್ಟಾದಡೂ ಉಂಟು. ಅಜಾತನ ಒಲುಮೆ, ನಿಶ್ಚಯವಾದ ವಾಸನೆಯ ಬುದ್ಧಿ, ತ್ರಿವಿಧದ ಆಸೆಯಿಲ್ಲದ ಚಿತ್ತ, ಸರ್ವರಿಗೆ ಹೇಸಿಕೆಯಿಲ್ಲದ ನಡೆನುಡಿ ಇಷ್ಟಿರಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಮಾಡುವ ಭಕ್ತಂಗೆ ಮನವೆ ಸಾಕ್ಷಿ, ಹೊರಹೊಮ್ಮಿ ಬಯಲ ಹರಹಲೇನು? ಹಮ್ಮಿಲ್ಲದೆ ಮಾಡಿ, ಮನದಲ್ಲಿ ಮರುಗದಿದ್ದಡೆ, ಅಲ್ಲಿ ತಾ ತೆರಹಿಲ್ಲದಿಪ್ಪನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಮಾತುಗಂಟಿತನದಿಂದ ಎಷ್ಟು ಮಾತನಾಡಿದಡೇನು ? ಕಾಮಿನಿಯರ ಕಾಲದೆಸೆ ಸಿಕ್ಕಿ, ಕ್ರೋಧದ ದಳ್ಳುರಿಯಲ್ಲಿ ಬೆಂದು, ಆಸೆಯೆಂಬ ಪಾಶ ಕೊರಳಲ್ಲಿ ಸುತ್ತಿ ಅದೇಕೊ, ಅದೇತರ ಮಾತೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಮಡುವಿನಲ್ಲಿ ಮೊಗೆತಹೆನೆ? ಅಗ್ಗವಣಿ ಶುದ್ಧವಲ್ಲ. ಗಿಡುವಿನ ಪುಷ್ಪವ ತಹೆನೆ? ಹೂ ನಿರ್ಮಾಲ್ಯ. ಅಟ್ಟ ಆಡಿಗೆಯನಾದಡೆ ಮನ ಮುನ್ನವೆ ಉಂಡಿತ್ತು. ನುಡಿವ ಶಬ್ದ ಎಂಜಲಾಯಿತ್ತು. ಹಿಡಿಯೊಳಯಿಂಕೆ ಒಂದ ಕೊಂಡುಬಂದು ಲಿಂಗವೆಂದು ಸಂಕಲ್ಪವ ಮಾಡಿದಡೆ ಅದಕ್ಕೆ ಬೋನವ ಕೊಡಲೊಲ್ಲೆನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಮೂರುವ ಮುಟ್ಟಿದೆ, ನಾಲ್ಕುವನಂಟಿದೆ, ಅಯ್ದವನೆಯ್ದಲುಬೇಡ ಕಂಡಾ. ಆರುವ ಜಾಳಿಸಿ, ಏಳುವ ಹಿಡಿಯದೆ, ಎಂಟುವ ಗಂಟಿಕ್ಕಬೇಡ ಕಂಡಾ. ಒಂಬತ್ತು ಬಾಗಿಲ ಹಿಂದಿಕ್ಕಿ ಹೋದಡೆ ಅಂಬಿಗ ಚೌಡಯ್ಯನ ಉಪದೇಶವಯ್ಯಾ.
--------------
ಅಂಬಿಗರ ಚೌಡಯ್ಯ