ಅಥವಾ
(37) (14) (0) (3) (3) (2) (0) (0) (8) (1) (1) (4) (3) (0) ಅಂ (9) ಅಃ (9) (42) (0) (10) (1) (0) (0) (0) (10) (0) (0) (0) (0) (0) (0) (0) (13) (0) (3) (0) (16) (11) (0) (16) (8) (18) (0) (2) (0) (7) (9) (9) (0) (13) (12) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆವಾವ ತ್ರಿಗುಣಭೇದದಲ್ಲಿವಿಶ್ವಾಸವ ಮಾಡಿದಡೂ ಭಾವಶುದ್ಧವಾಗಿರಬೇಕು. ಯೋಗಿಯಾದಲ್ಲಿ ದೇಹಧರ್ಮವ ಮರೆದು, ಭೋಗಿಯಾದಲ್ಲಿ ಸಂಚಿತವ ಮರೆದು, ತ್ಯಾಗಿಯಾದಲ್ಲಿ ನೆನಹು ಹಿಂಚು ಕೊಡುವುದು ಮುಂಚಾಗಿರಬೇಕು. ಇಂತೀ ಯೋಗಿ ಭೋಗಿ ತ್ಯಾಗಿ, ಇಂತೀ ತ್ರಿವಿಧವನೊಳಕೊಂಡು ವಿರಕ್ತನಾದಲ್ಲಿ ಆತನ ಅಡಿಗೆರಗುವೆನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಆದಿಶಕ್ತಿವಿಡಿದಾಡುವರೆಲ್ಲರು ಜಂಗಮವಲ್ಲ, ಅನಾದಿಶಕ್ತಿವಿಡಿದಾಡುವರೆಲ್ಲರು ಜ್ಞಾನಿಗಳಲ್ಲ, ಆದಿ ಅನಾದಿಯೆಂಬೀ ಎರಡ ಭೇದಿಸಿ ದಾಂಟಿ, ಇಚ್ಛಾಶಕ್ತಿಯ ಇಚ್ಛೆಯ ಮರೆದು, ಕ್ರಿಯಾಶಕ್ತಿಯ ಭಾವವ ಬಿಟ್ಟು, ಜ್ಞಾನಶಕ್ತಿಯ ಠಾವವನೊಲ್ಲದೆ, ತಾನು ತಾನಾದವಂಗೆ ಏನೂ ಇದಿರಿಲ್ಲಾ, ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಆಳಾಪದ ಸೊಬಗು, ಘಂಟೆ ವಾದ್ಯದ ಕೂಗಿನ ಕೊರಚು, ಪರಿಚಾರಕರ ಎಡೆಯಾಟದಿಂದ ಸೊಬಗು ಮೆರೆದಿತ್ತು. ಎನಗೆ ಇನ್ನಾವುದು ಇಲ್ಲ, ಇನ್ನೇವೆನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಆದಿ ಅನಾದಿಯಿಂದತ್ತಣ ಶರಣನ ಷಡಾಧಾರಚಕ್ರದೊಳಗೆ ಷಡುಲಿಂಗವು, ಷಡುಮಂತ್ರವು, ಷಡುಭಕ್ತರು, ಷಡುಶಕ್ತಿಗಳು ಇದ್ದುವಯ್ಯ. ಆ ಶರಣನ ಜ್ಞಾನಕ್ರೀ ಅರವತ್ತುನಾಲ್ಕು ಭೇದವಾಯಿತ್ತಯ್ಯ, ಒಬ್ಬ ಶರಣನು ಅನಂತ ಶರಣರಾದುದ ಕಂಡೆನೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಆರೂಢಜ್ಞಾನಿಯಾದವಂಗೆ ಅನುಭಾವವೇಕಯ್ಯಾ ? ಮೀರಿದ ಸ್ಥಲದಲ್ಲಿ ನಿಂದವಂಗೆ ನೀರೇನು, ನೆಲವೇನು? ಎಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಆರು ಲಿಂಗ ಮೂರು ಲಿಂಗವೆಂಬರು, ನಮಗುಳ್ಳುದೊಂದೆ ಲಿಂಗ, ಒಂದು ಲಿಂಗದಲ್ಲಿ ಒಂದು ಮನ ಸಿಕ್ಕಿದಡೆ ಮರಳಿ ಒಂದು ಲಿಂಗವ ನೆನೆಯಲಿಲ್ಲವೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಆರೂ ಇಲ್ಲದಂದು ತಾನಹ ದೆವಸ, ತನಗೆ [ಆ]ನಾಧಾರವಾದೆ ನೋಡಾ. ಭೂಮಿಯಾಕಾಶ ಐದನೆಯ ಭೂತ ಒಳಗಾಗಿ [ಆಂ] ಬೇರೆ ತಾ ಬೇರೆ ಬಳಿಕಾದ ದೆವಸ, ತಾ ತೋರಿದಂದಹ ಆ ನೂಲ ಹಿಡಿದೆನು. ತೀವಿದ ಒಂಬತ್ತು ದ್ವೀಪಕ್ಕೆ ಭಾವವಿರಹಿತನಾಗಿ ತಾ ಹೊರಗಾದಡೆ [ಅಂ] ಹಿಡಿದೊಳಗುಮಾಡಿದನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಆವ ಪದಾರ್ಥವ ಮೋಹಿಸಿ ಲವಲವಿಸಬೇಡ. ಬಪ್ಪುದು ಬಪ್ಪುದಲ್ಲದೆ ಬಾರದ್ದು ಬಪ್ಪುದೆರಿ ಬಪ್ಪುದು ತಪ್ಪದು, ಬಾರದುದು ಬಾರದು, ಅಹದಹದಾಗದ್ದಾಗದು. ಬಹುದುಃಖಂಗೊಳಲೇಕೆರಿ ಬಪ್ಪುದು ತಪ್ಪದು, ಸಹಜವೆಂತಾಗುವದಲ್ಲದೆ. ವಿಹಿತವ ತಾ ಬರವುತಿಹನು ಪಣೆಯೊಳು ಶಿವನು. ಇಂತಿದು ನಿನ್ನ ಭೋಗವೆಲ್ಲಿದ್ದಡೂ ಬಿಡದೆಂದಾತ ನಮ್ಮಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಆಶೆಯುಳ್ಳಾತನೊಬ್ಬರಾಧೀನದಲ್ಲಿಪ್ಪನು. ಆಶೆಯ ಮನದ ಕೊನೆಯನರಿದಾತ ಕೈಲಾಸದಾಚೆಯಲ್ಲಿಪ್ಪನೆಂದಾತ ನಮ್ಮ ಅಂಬಿಗ ಚೌಡಯ್ಯ!
--------------
ಅಂಬಿಗರ ಚೌಡಯ್ಯ
ಆರಿಕೆ ಬಿತ್ತಿದ ಗಿಡುವಿನ ಹೂವ ಕೊಯಿದು, ಊರೆಲ್ಲರೂ ಕಟ್ಟಿಸಿದ ಕೆರೆಯ ನೀರ ತಂದು, ನಾಡೆಲ್ಲರೂ ನೋಡಿಯೆಂದು ಪೂಜಿಸುತ್ತ, ಪೂಜಿಸಿದ ಪುಣ್ಯ ಹೂವಿಗೋ ? ನೀರಿಗೋ? ನಾಡೆಲ್ಲಕ್ಕೊರಿ ಪೂಜಿಸಿದಾತಗೊ? ಇದ ನಾನರಿಯೆ, ನೀ ಹೇಳೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಆಶೆಯಲಿದ್ದವನ ತಲೆಯನರಿದು, ಆಶೆಯ ಹರಿಯಲೊದ್ದವನನೊಂದೆ ಹುಟ್ಟಿನಲ್ಲಿ ಒಯ್ದು ಕೈಲಾಸಕ್ಕೆ ಹೋದಾತ ಅಂಬಿಗ Zõ್ಞಡಯ್ಯ.
--------------
ಅಂಬಿಗರ ಚೌಡಯ್ಯ
ಆನೆಂಬುದೇನುರಿ ಇದಿರಿಟ್ಟು ತೋರೂದಿದೇನು ? ಇದೆಲ್ಲಿಂದಲೊದಗಿತ್ತು ? ಇದರ ಲಯವು ತಾನೆಲ್ಲಿ ಎಂದು ಅನುಮಾನಿಸಿ, ಶ್ರೀಗುರುಚರಣವಂ ನಂಬಿ, ಅಂತರ್ಮುಖದಲ್ಲಿ ವಿಚಾರಿಸಿ, ಅಲ್ಲೊಂದು ಮಾರ್ಗವ ಕಂಡು, ಆ ಮಾರ್ಗವ ಬಳಿವಿಡಿದು ತಲೆ ಹೊಲಕ್ಕೆ ಹೋಗಿ ಹಿಂದು ಮುಂದ ಮರದು, ಮಹಾಬೆಳಗಿನ ಬೆಳಗಿನಲ್ಲಿ ನಿಂದು, ಪರಮಾನಂದಸಾಗರದೊಳಗೆ ಸಮರಸನಾದವಂಗೆ ಇಹಪರವಿಲ್ಲೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಆಯತಲಿಂಗದಲ್ಲಿ ಅನುಭಾವ ಸಾಹಿತ್ಯವಾಗದು,
--------------
ಅಂಬಿಗರ ಚೌಡಯ್ಯ
ಆತ್ಮಂಗೆ ದಶವಾಯು ಉಂಟೆಂಬರು. ಊಧ್ರ್ವನಾಳವೈದು, ಅಧೋನಾಳವೊಂದು, ವಾಯುವೊಂದು ಭೇದ, ಆತ್ಮವೊಂದರಲ್ಲಿ ಒಡೆಯದಿದೆ, ಇದೇ ನಿರಂತರ ಸುಖ, ಎಚ್ಚರಿಕೆಯ ಕೂಟ. ಮಿಕ್ಕಾದ ನಾಲ್ಕರಲ್ಲಿ ತಿರುಗಿ ಜೀವರುಗಳ ವಾಯು ನಾಲ್ಕು ಮುಚ್ಚಿ ಅಧೋಮುಖಕ್ಕಿಳಿದಲ್ಲಿ ಕೀಳುಜೀವವೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ