ಅಥವಾ
(37) (14) (0) (3) (3) (2) (0) (0) (8) (1) (1) (4) (3) (0) ಅಂ (9) ಅಃ (9) (42) (0) (10) (1) (0) (0) (0) (10) (0) (0) (0) (0) (0) (0) (0) (13) (0) (3) (0) (16) (11) (0) (16) (8) (18) (0) (2) (0) (7) (9) (9) (0) (13) (12) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಿಂಗವನರಿದೆಹೆನೆಂದಡೆ ಗುರುವಿಗೆ ಹಂಗು, ಗುರುವನರಿದೆಹೆನೆಂದಡೆ ಲಿಂಗದ ಹಂಗು, ಉಭಯವ ಮೀರಿ ಕಂಡೆಹೆನೆಂದಡೆ ಬೇರೊಂದೊಡಲುಂಟು. ಒಡಲು ಒಡೆದಲ್ಲದೆ ಬೇರೊಂದೆಡೆಯಿಲ್ಲ ಎಂದನಂಬಿಗ Zõ್ಞಡಯ್ಯ.
--------------
ಅಂಬಿಗರ ಚೌಡಯ್ಯ
ಲಿಂಗ ಬಿತ್ತು ಎತ್ತು ಎಂಬಿರಿ, ಆ ಲಿಂಗ ಬಿದ್ದರೆ ಈ ಭೂಮಿ ತಾಳಬಲ್ಲುದೆ ? ಲಿಂಗವಿರುವುದು ಹರಗುರು ಪಾರಾಯಣ, ಲಿಂಗವಿರುವುದು ತೆಂಗಿನ ಮರದಲ್ಲಿ, ಲಿಂಗವಿರುವುದು ಜಂಗಮನ ಅಂಗುಷ*ದಲ್ಲಿ, ಲಿಂ ಗವಿರುವುದು ಊರ ಹಿರೇ ಬಾಗಿಲಲ್ಲಿ. ಇಂತಿಪ್ಪ ಲಿಂಗ ಬಿಟ್ಟು, ಸಂತೆಗೆ ಹೋಗಿ ಮೂರು ಪಾಕಿ ಲಿಂಗವ, ಆರು ಪಾಕಿ ವಸ್ತ್ರವ ತಂದುದೋದಕವಿಲ್ಲ,ಪ್ರಸಾದವಿಲ್ಲ,ಮಂತ್ರವಿಲ್ಲ,ವಿಭೂತಿಯಿಲ್ಲ,ರುದ್ರಾಕ್ಷಿಯಿಲ್ಲ. ಇಂತಪ್ಪ ಲಿಂಗ ಕಟ್ಟಿದವನೊಬ್ಬ ಕಳ್ಳನಾಯಿ, ಕಟ್ಟಿಸಿಕೊಂಡವನೊಬ್ಬ ಕಳ್ಳನಾಯಿ. ಇಂತಪ್ಪ ನಾಯಿಗಳನು ಹಿಡಿತಂದು ಮೂಗನೆ ಕೊಯ್ದು, ನಮ್ಮ ಕುಂಬಾರ ಗುಂಡಯ್ಯನ ಮನೆಯ ಕರಿ ಕತ್ತೆಯನು ತಂದು ಊರಲ್ಲೆಲ್ಲ ಮೆರೆಯಿಸಿ ನಮ್ಮ ಮಾದಾರ ಹರಳಯ್ಯನ ಮನೆಯ ಹನ್ನೆರಡು ಜೋಡು ಹಳೆಯ ಪಾದರಕ್ಷೆಗಳನು ತಂದು ಮುದ್ದುಮುಖದ ಮೇಲೆ ಶುದ್ಧವಾಗಿ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಲಿಂಗತನುವಿಂಗೆ ಶೃಂಗಾರವಪ್ಪ ತೆರನಾವುದೆಂದಡೆ: ಕಾಮ ಕ್ರೋಧ ಲೋಭ ಮೋಹಾದಿಗಳಲ್ಲಿ ತೆರಪುಗೊಡದಿಪ್ಪುದು. ಲಿಂಗವೆ ಅಂಗವಾಗಿ, ಧ್ಯಾನ ಧಾರಣ ನಿಜವಾಸನಿವಾಸವಾಗಿ, ನಿಶ್ಚಯ ನಿಜತತ್ವವಾಗಿ ನಿಂದುದೆ ಆಭರಣವೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಲೋಹ ಗುಂಡಾದಲ್ಲಿ ಇರಿಯಬಲ್ಲುದೆರಿ ಮುದ್ರೆಯ ಪಶು ದಿಟ ಪ್ರಾಣಲಿಂಗಿಯಾಗಬಲ್ಲನೆರಿ ಡಾಗಿನ ಪಶುಗಳೆಲ್ಲರೂ ಭೇದವನರಿಯಬಲ್ಲರೆರಿ ಎಂದನಂಬಿಗ Zõ್ಞಡಯ್ಯ.
--------------
ಅಂಬಿಗರ ಚೌಡಯ್ಯ
ಲಿಂಗದೊಳಗೆ ಜಂಗಮ ಸಲೆ ಸಂದಿರಬೇಕು, ಜಂಗಮದೊಳಗೆ ಲಿಂಗವು ಸಲೆ ಸಂದಿರಬೇಕು. ಅಂಗ-ಪ್ರಾಣಂಗಳಲ್ಲಿ ಲಿಂಗವ ಹಿಂಗಿರ್ದ ಜಂಗಮವು ಮುಂದೆ ಚರ-ಪರವಲ್ಲ. ಹಿಂದೆ ಗುರುಕರುಣಕ[ನ]ಲ್ಲವೆಂದನಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಲಿಂಗವೆಂಬುದು ಕಾಯದ ತೊಡಕು, ಗುರುವೆಂಬುದು ಭಾವದ ತೊಡಕು, ಜಂಗಮವೆಂಬುದು ಮೂರರ ತೊಡಕು, ಜ್ಞಾನಮಯವೆಂಬುದು ಸರ್ವಮಯವೆಲ್ಲರ ತೊಡಕು. ಒಂದ ಮೆಟ್ಟಿ, ಒಂದ ಕಂಡು, ಒಂದಕ್ಕೆ ಸಂದೇಹವಿಲ್ಲದೆ ನಿಂದುದು. ಹಿಂದಳ ಮುಂದಳ ದುಂದುಗವಿಲ್ಲ ಎಂದನಂಬಿಗ Zõ್ಞಡಯ್ಯ.
--------------
ಅಂಬಿಗರ ಚೌಡಯ್ಯ
ಲಿಂಗತನುವಿಗೆ ಆತ್ಮತೇಜದ ಅಹಂಕಾರವುಂಟೆ ? ಸದ್ಭಕ್ತಂಗೆ ಹುಸಿ, ಕುಹಕ, ಕ್ಷಣಿಕತ್ವ ಅಸಿಘಾತಕದ ದೆಸೆವುಂಟೆ ? ಇಂತಿವರ ದೆಸೆಯ ಹೊದ್ದನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ